Colors ಎದೆತುಂಬಿ ಹಾಡುವೆನು, Zee ಸರಿಗಮಪ ಚಾಂಪಿಯನ್​ಶಿಪ್ ಎರಡೂ ಭಿನ್ನ ಹೇಗೆ..?

ಕಲರ್ಸ್ ಕನ್ನಡದಲ್ಲಿ ಎದೆತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಒಂದೊಳ್ಳೆ ಸಂಗೀತ ಕಾರ್ಯಕ್ರಮ ಶುರುವಾಗಿದೆ. ಅದರಲ್ಲಿ ತೀರ್ಪುಗಾರನಾಗಿ ಗಾಯಕ ರಾಜೇಶ್ ಕೃಷ್ಣನ್ ಬಂದಿದ್ದು ಸರಿಗಮಪ ವೀಕ್ಷಕರಿಗೆ ಅಚ್ಚರಿಯ ವಿಷಯವಾಗಿತ್ತು. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರನಾಗಿ ಸಾಕಷ್ಟು ಸೀಸನ್​ಗಳನ್ನು ನಡೆಸಿಕೊಂಡು ಬಂದಿದ್ದ ಮಧುರ ದನಿಯ ಗಾಯಕ ರಾಜೇಶ್ ಕೃಷ್ಣನ್, ಕಲರ್ಸ್ ಕನ್ನಡ ಸಂಸ್ಥೆ ಸೇರಿಕೊಂಡಿದ್ದರು. ಜೀ ಕನ್ನಡ ಸೆಟ್ ಮೀರಿಸುವಂತೆ ಕಲರ್ಸ್ ಕನ್ನಡದಲ್ಲೂ ಕಾರ್ಯಕ್ರಮ ಮೂಡಿ ಬರುವುದಕ್ಕೆ ಶುರುವಾಗಿತ್ತು. ಕಲರ್ಸ್ ಕನ್ನಡದ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಕೌಂಟರ್ ಕೊಡಲೇ ಬೇಕು ಎಂದು ನಿರ್ಧರಿಸಿದ ಜೀ ಕನ್ನಡ ಸರಿಗಮಪ ಟೀಂ, ಸರಿಗಮಪ ಚಾಂಪಿಯನ್ಸ್​​ಶಿಪ್​ ಕಾರ್ಯಕ್ರಮ ಸೆಟ್ಟೇರುವಂತೆ ಮಾಡಿದೆ.

ಕಳೆದ 18 ಸೀಸನ್​ಗಳಲ್ಲಿ ಹಾಡಿ ಫೈನಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಗಳಿಸಿದ್ದ ಚಾಂಪಿಯನ್ಸ್​​ಗಳನ್ನು ಮತ್ತೆ ವೇದಿಕೆಗೆ ಕರೆತಂದಿದ್ದಾರೆ. 36 ಸ್ಪರ್ಧಿಗಳನ್ನು 6 ಟೀಂ ಮಾಡಿ ಸ್ಪರ್ಧಾ ಕಣಕ್ಕೆ ಅಣಿ ಮಾಡಲಾಗಿದೆ. ಮೊದಲ ದಿನ ಎರಡು ಜೋಡಿಗಳು ಮಾತ್ರವೇ ಹಾಡು ಹಾಡಿದ್ದು, ಮೈ ರೋಮಾಂಚನ ಮೂಡಿಸುವಂತಿದೆ. ಈಗಾಗಲೇ ಚಾಂಪಿಯನ್ಸ್ ಆಗಿದ್ದವರು ಮತ್ತೆ 6 ಮಂದಿ ಗಾಯಕರ ಮೆಂಟರ್ ಟೀಂ ಸೇರಲಿದ್ದು, ಮತ್ತಷ್ಟು ಮಿಂಚುವುದು ಖಚಿತವಾಗಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹಾಡು ಹಾಡಿದ್ದು, ಮಹಾಗುರು ಹಂಸಲೇಖ ಹಾಗೂ ಅರ್ಜುನ್ ಜನ್ಯಾ ಜೊತೆಗೆ ಕೆಲಸ ಮಾಡಿದ ಗಾಯಕರೇ ಈ ಕಾರ್ಯಕ್ರಮದಲ್ಲಿ ಹಾಡು ಹಾಡುವುದರಿಂದ ಇದೊಂದು ಸ್ಪರ್ಧೆ ಎನ್ನುವ ಬದಲು ಸಂಗೀತ ಕಾರ್ಯಕ್ರಮ ಎನ್ನಬಹುದು. ಒಬ್ಬೊರಿಗಿಂತ ಒಬ್ಬರು ಚೆನ್ನಾಗಿ ಹಾಡುವುದರಿಂದ ತೀರ್ಪುಗಾರರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

Read this also;

ಗಾಯಕ ರಾಜೇಶ್ ಕೃಷ್ಣನ್ ಅವರ ಗೈರು ಹಾಜರಿಯನ್ನು ಹಂಸಲೇಖ ಸೇರಿದಂತೆ ಗಾಯಕ ವಿಜಯ್ ಪ್ರಕಾಶ್ ನೆನಪು ಮಾಡಿಕೊಂಡರು. ರಾಜೇಶ್ ಗೈರು ಹಾಜರಿಯನ್ನು ತುಂಬುವ ಉದ್ದೇಶದಿಂದಲೇ 6 ಮಂದಿ ಖ್ಯಾತ ಗಾಯಕರನ್ನು ಕರೆತರಲಾಗಿದೆ. ಗಾಯಕರಾದ ಹೇಮಂತ್, ಅನುರಾಧ ಭಟ್, ನಂದಿತಾ, ಲಕ್ಷ್ಮೀ ನಾಗರಾಜ್, ಇಂಧು ನಾಗರಾಜ್, ಸುಚೇತನ್ ರಂಗಸ್ವಾಮಿ ಅವರನ್ನು ಕರೆತರಲಾಗಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ಗಾಯಕ ಹರ್ಷ ಹಾಗೂ ಅಂಕಿತಾ ಕುಂಡು ಹಾಡಿದ ‘ನನ್ನ ನೀನು ಗೆಲ್ಲಲಾರೆ’ ಹಾಡು ನೋಡುಗರು ವಾವ್ಹ್ ವಾವ್ಹ್ ಎನ್ನುವಂತಿತ್ತು. ಇವರಿಬ್ಬರೂ ಅನುರಾಧ ಭಟ್ ಟೀಂ ಸೇರಿಕೊಂಡಿದ್ದಾರೆ. ಇನ್ನೂ ಎರಡನೇ ಜೋಡಿಯಾಗಿ ಹಾಡಿದ ರಜತ್ ಹೆಗಡೆ ಹಾಗೂ ಪೃಥ್ವಿ ಭಟ್ ‘ಒಂದು ಮಳೆಬಿಲ್ಲು’ ಹಾಡು ಹಾಡುವ ಮೂಲಕ ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡಿದ್ರು. ಇವರಿಬ್ಬರೂ ಗಾಯಕಿ ನಂದಿತಾ ಟೀಂ ಸೇರಿಕೊಂಡಿದ್ದಾರೆ. ಇದೇ ರೀತಿ ಇನ್ನುಳಿದ 16 ಜೋಡಿಗಳೂ ಕೂಡ ತಲಾ 6 ಜನರಂತೆ 6 ಗಾಯಕರ ಟೀಂ ಸೇರಿಕೊಳ್ಳಲಿದ್ದಾರೆ.

Read this also;

ಇದೇ ಮೊದಲ ಬಾರಿಗೆ 40 ಜನರ ವಾದ್ಯಗೋಷ್ಠಿ..!

ಸರಿಗಮಪ ವೇದಿಕೆ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗುತ್ತದೆ. ಆದರೆ ಈ ಬಾರಿ 40 ಜನ ವಾದ್ಯಗೋಷ್ಠಿ ಸರಿಗಮಪ ಚಾಂಪಿಯನ್ಸ್​ಗೆ ಸಂಗೀತ ನುಡಿಸುತ್ತಿರುವುದು ಈ ಬಾರಿಯ ವಿಶೇಷ. ಕಲರ್ಸ್​ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಗಾಯಕ, ಗಾಯಕಿಯರು ನೋಡುಗರ ಮನ ಸೆಳೆದಿದ್ದಾರೆ. ಅದನ್ನು ತಪ್ಪದೆ ನೋಡುವುದೂ ಕೂಡ ಖಚಿತ. ಆದರೆ ಜೀ ಕನ್ನಡದ ಸರಿಗಮಪ ಚಾಂಪಿಯನ್ಸ್​ ಕಾರ್ಯಕ್ರಮ ಸ್ಪರ್ಧೆಯಾಗಿ ನೋಡುವುದಕ್ಕೆ ಸಾಧ್ಯವೇ ಇಲ್ಲ. ಒಂದು ಹಬ್ಬದ ರೀತಿ ಕಣ್ಮನಗಳಿಗೆ ಸಹಿಯನ್ನು ಉಣಬಡಿಸುವ ಜಾತ್ರೆ. ಬಂದವರೆಲ್ಲಾ ಸಿಕ್ಸರ್​ ಬಾರಿಸುತ್ತಾರೆ ನೋಡುವುದು ಸುಮ್ಮನಾಗುವುದು. ಇನ್ನು ಕಲರ್ಸ್​ ಕನ್ನಡ ಸ್ಪರ್ಧೆಯಾಗಿ ಜನರಿಗೆ ಮನರಂಜನೆ ಜೊತೆಗೆ ಸ್ಪರ್ಧಾ ರೋಚಕತೆಯೂ ಇರಲಿದೆ. ಸಮಯ ಮಾಡಿಕೊಂಡು ಎರಡನ್ನೂ ನೋಡುವುದು ಸಂತಸದ ವಿಚಾರ. ಸಂಗೀತದಲ್ಲಿ ಮತ್ಸರವೇಕೆ..? ಅಲ್ಲವೇ..?

Related Posts

Don't Miss it !