ಕರ್ನಾಟಕಕ್ಕೆ ಕಾದಿದೆ ಮಳೆಯ ಶಾಕ್​.. ಮೂರು ದಿನ ಬೀ ಕೇರ್​ ಫುಲ್​..

ಭಾನುವಾರದಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ರಾಮನಗರ ಸುತ್ತಮುತ್ತ ಭಾರೀ ಮಳೆಯಾಗುವ ಎಚ್ಚರಿಕೆ ಸಂದೇಶ ಜಿಲ್ಲಾಡಳಿತವನ್ನು ತಲುಪಿದ್ದು, ಬೆಂಗಳೂರಿನಿಂದ ರಾಮನಗರ, ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಸಂಚಾರ ಮಾಡುವ ಪ್ರಯಾಣಿಕರು ಎಚ್ಚರಿಕೆಯಿಂದ ಬದಲಿ ಮಾರ್ಗ ಬಳಸುವುದು ಸೂಕ್ತ ಎಂದು ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಬಾಬು ಮಾಹಿತಿ ನೀಡಿದ್ದಾರೆ. ಕಳೆದ ವಾರ ಸುರಿದ ಭಾರೀ ಮಳೆಯಿಂದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಆ ಬಳಿಕ ರಾಮನಗರ, ಚನ್ನಪಟ್ಟಣ ಸೇರಿದಂತೆ ಬಹುತೇಕ ಪ್ರದೇಶಗಳು ನೀರಿನಿಂದ ಮುಳಗಡೆ ಆಗಿದ್ದವು, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಆಹ್ವಾನಿಸಿ ಮಳೆಯಿಂದ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದರು. ಇದೀಗ ಮತ್ತದೇ ರೀತಿಯ ಸಂಕಷ್ಟ ಎದುರಾಗುವ ಭೀತಿ ಸೃಷ್ಟಿಯಾಗಿದೆ.

ಮುಂದಿನ ಮೂರು ದಿನಗಳಲ್ಲಿ 5 ದಿನದ ಸಂಕಷ್ಟ ರಿಪೀಟ್​..!

ಇಂದಿನಿಂದ ಮೈಸೂರು ಕಡೆ ಹೋಗುವ ಪ್ರಯಾಣಿಕರು ಮುಂದಿನ ಬುಧವಾರದ ತನಕ ಬದಲಿ ಮಾರ್ಗ ಬಳಸುವುದು ಸೂಕ್ತ ಎಂದು rಆಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಚ್ಚರಿಕೆ ರವಾನೆ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಹೆದ್ದಾರಿ ಸಂಪರ್ಕ ಬಂದ್​ ಆಗುವ ಸಾಧ್ಯತೆಯಿದೆ. ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವ ಕಾರಣ ಪ್ರಯಾಣಿಕರು ಯಾವುದೇ ಸಂಕಷ್ಟಕ್ಕೆ ಒಳಗಾಗದೆ ಇರಲು ಬದಲಿ ಮಾರ್ಗ ಬಳಸಿ ಎನ್ನುವುದು ಪೊಲೀಸರ ಮನವಿ. ಬೆಂಗಳೂರಿನಿಂದ ಮೈಸೂರಿಗೆ tಎರಲುವವರು ಕನಕಪುರದ ಮೂಲಕ ಮೈಸೂರು ತಲುಪಬಹುದು. ಇನ್ನೂ ಕುಣಿಗಲ್ ಮೂಲಕ ಮದ್ದೂರು ತಲುಪಿ ಅಲ್ಲಿಂದ ಮೈಸೂರಿಗೆ ಸಂಚರಿಸಬಹುದು. ಮೈಸೂರು ಕಡೆಯಿಂದ ಬರುವ ಪ್ರಯಾಣಿಕರು ಕೂಡ ಇದೇ ರೀತಿ ಮಾರ್ಗ ಬದಲಾಯಿಸಿದರೆ ವರುಣಾರ್ಭಟಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾಗುವುದು ತಪ್ಪಲಿದೆ.

ಇದನ್ನು ಓದಿ: IAS ಅಧಿಕಾರಿ ರಕ್ಷಣೆಗೆ ರಾಜ್ಯ ಸರ್ಕಾರದ ಸಾಥ್​, ಅರೆಸ್ಟ್​ ಆಗಿದ್ದ ಡಿಸಿಗೆ ಜಾಮೀನು..!

ಬೆಂಗಳೂರಿನ ಜನರಿಗೆ ಎದುರಾಗಲಿದೆ ಜೀವಕ್ಕೇ ಆಪತ್ತು..!

ಬೆಂಗಳೂರು ಹೊರತುಪಡಿಸಿ ಬೇರೆ ಯಾವುದೇ ಜಿಲ್ಲೆಗಳಲ್ಲಿ ಭಾರೀ ಮಳೆಯಾದಾಗ ಹೆದ್ದಾರಿ ಬಂದ್​ ಆಗಬಹುದು ಅಥವಾ ಕೆಲವು ಸಮಯ ಜಲಾವೃತ ಆಗಿ ನೀರು ಕಡಿಮೆ ಆಗಬಹುದು. ಇನ್ನು ರೈತರು ಬೆಳೆದ ಬೆಳೆ ಮಳೆಯ ಹೊಡೆತಕ್ಕೆ ಸಿಲುಕಿ ಹಾನಿಯಾಗಬಹುದು. ಆದರೆ ಬೆಂಗಳೂರಿನಲ್ಲಿ ಮಳೆ ಬಂದರೆ ಸೊಂಟದ ಮಟ್ಟಕ್ಕೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಮ್ಯಾನ್​ ಹೋಲ್​ಗಳು ಬಾಯ್ಬಿಟ್ಟು ಸವಾರರನ್ನು ಆಹುತಿ ಪಡೆಯಲು ಕಾಯುತ್ತವೆ. ರಾಜಕಾಲುವೆ ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗುವುದರಿಂದ ಕೆಳ ಮಹಡಿಯ ಮನೆಯಲ್ಲಿರುವ ಪದಾರ್ಥಗಳು ನೀರು ಪಾಲಾಗುತ್ತದೆ. ಅಷ್ಟೇ ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗಟ್ಟಿಯಿಲ್ಲದ ಮರಗಳನ್ನು ಬೆಳೆಸುವುದರಿಂದ ಯಾವ ಮರ ಯಾವ ರಸ್ತೆಯಲ್ಲಿ ಯಾರ ಮೇಲೆ ಬಿದ್ದು ಜೀವಬಲಿ ಪಡೆಯುತ್ತದೆಯೋ ಎನ್ನುವ ಆತಂಕವೂ ಇದೆ. ಒಟ್ಟಿನಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯನ್ನು ಎದುರಿಸಲು ಜನರು ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ.

Related Posts

Don't Miss it !