ನ್ಯಾಷನಲ್​ ಕ್ರಷ್​ ನಟಿ ಸಾಯಿ ಪಲ್ಲವಿ ವಿವಾದ ಏನು..? ದೂರು ದಾಖಲು ಆಗಿದ್ಯಾಕೆ..?

ನಟಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ.. ರೌಡಿ ಬೇಬಿ ಸಾಂಗ್​ ಮೂಲಕ ಖ್ಯಾತಿ ಹೆಚ್ಚಸಿಕೊಂಡ ನಟಿ ಸಾಯಿ ಪಲ್ಲವಿ ಇಂದು ನ್ಯಾಷನಲ್​ ಕ್ರಷ್​ ಆಗಿದ್ದಾರೆ. ಮೇಕಪ್​ಗೆ ಆದ್ಯತೆ ಕೊಡದೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ಹಾಗೂ ಡ್ಯಾನ್ಸ್​ ಮೂಲಕ ದಕ್ಷಿಣ ಭಾರತದ ಮನೆ ಮಾತಾಗಿದ್ದಾರೆ. ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದ ಹೆಣ್ಣು ಮಗಳು ವೈದ್ಯಕೀಯ ವಿದ್ಯಭ್ಯಾಸ ಪೂರೈಸಿ , ಇದೀಗ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಡಬ್​ ಮಾಡುತ್ತಿದ್ದ ದೃಶ್ಯ ಸಾಕಷ್ಟು ವೈರಲ್​ ಆಗಿತ್ತು, ತಾನೇ ಸ್ವತಃ ಕನ್ನಡ ಕಲಿತು ಡಬ್​ ಮಾಡಿದ್ದಕ್ಕೆ ಕನ್ನಡಿಗರು ಬಹುಪರಾಕ್​ ಹೇಳಿದ್ದರು. ಇದೀಗ ನಟಿ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಾಗಲು ಕಾರಣ ಏನು ಅಂದ್ರೆ ಆಕೆ ನೀಡಿದ್ದ ಹೇಳಿಕೆ.

ನ್ಯಾಚುರಲ್​ ಬ್ಯೂಟಿ ಕೊಟ್ಟ ವಿವಾದಿತ ಹೇಳಿಕೆ ಏನು..?

80ರ ದಶಕದಲ್ಲಿ ಜುಮ್ಮು ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕಾಶ್ಮೀರಿ ಫೈಲ್​ ಬೆಳಕು ಚೆಲ್ಲುತ್ತದೆ. ಸರ್ಕಾರಿ ದಾಖಲೆಗಳ ಪ್ರಕಾರ 90 ಜನರ ಹತ್ಯೆ ಆಗಿದೆ ಎನ್ನುವ ಮಾಹಿತಿ ಇದ್ದರೂ ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿ ಸಾವಿರಾರು ಜನರ ಹತ್ಯೆ ಆಗಿದೆ ಎಂದು ಉಲ್ಲೇಖಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ. ರಕ್ತಪಾತವನ್ನೇ ಹಾಸು ಹೊಕ್ಕಿರುವ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ. ಈ ನಡುವೆ ಸಾಯಿ ಪಲ್ಲವಿ ಕಾಶ್ಮೀರಿ ಫೈಲ್ಸ್​ ಚಿತ್ರದಲ್ಲಿ ಅಮಾನವೀಯ ಕೃತ್ಯಗಳನ್ನು ತೋರಿಸಲಾಗಿದೆ. ಆದರೆ ದನದ ಮಾಂಸ ಸಾಗಾಟ ಮಾಡ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹೊಡೆದು ಸಾಯಿಸಿದ ಬಳಿಕ ಜೈ ಶ್ರೀರಾಮ್​ ಎಂದು ಘೋಷಣೆ ಕೂಗುವುದನ್ನು ಏನನ್ನಬೇಕು ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆ ಭಾರೀ ವೈರಲ್​ ಆಗಿದ್ದು, ಕರ್ನಾಟಕದ ಮಾಜಿ ಸಂಸದೆ, ನಟಿ ರಮ್ಯಾ (Divya Spandana) ಕೂಡ ಟ್ವೀಟ್​ ಮಾಡಿದ್ದಾರೆ. ಸಾಯಿ ಪಲ್ಲವಿ ಅವರಿಗೆ ಸತ್ಯ ಹೇಳುವ ಧೈರ್ಯವಿದೆ ಎಂದು ಚಪ್ಪಾಳೆ ಹೊಡೆದಿದ್ದಾರೆ. ಆದರೆ ಹೈದ್ರಾಬಾದ್​ನ ಸುಲ್ತಾನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಯುವಕಪಡೆ ದಂಗೆ ಯಾಕೆ..?

ನಾನು ಯಾವುದೇ ಪಂಥಕ್ಕೆ ಸೇರಿದವಳು ಅಲ್ಲ – ಸ್ಪಷ್ಟನೆ

ಕಾಲಿವುಡ್​, ಟಾಲಿವುಡ್​​ನಲ್ಲಿ ಬಹುಬೇಡಿಕೆಯ ನಟಿ ಆಗಿರುವ ಸಾಯಿ ಪಲ್ಲವಿ, ನಾನು ಯಾವುದೇ ಪಂಥಕ್ಕೆ ಸೇರಿದವಳು ಅಲ್ಲ. ಆದರೆ ಮಾನವೀಯತೆ ಮನುಷ್ಯನಲ್ಲಿ ಇರಬೇಕು. ಮನುಷ್ಯ – ಮನುಷ್ಯರ ನಡುವೆ ಧರ್ಮ ಸಂಘರ್ಷ ಸೃಷ್ಟಿಯಾಗಬಾರದು ಎಂದಿದ್ದಾರೆ. ಆದರೆ ಜಮ್ಮು ಕಾಶ್ಮೀರದ ಪಂಡಿತರ ನರಮೇಧಕ್ಕೂ ಗೋಕಳ್ಳರನ್ನು ಹತ್ಯೆ ಮಾಡಿದ್ದಕ್ಕೂ ಹೋಲಿಕೆ ಸರಿಯಲ್ಲಿ ಎನ್ನುವುದು ಒಂದು ಪಂಗಡದ ವಾದವಾಗಿದೆ. ಸುಲ್ತಾನ್​ ಪೇಟೆ ಪೊಲೀಸರ ಮಾಹಿತಿ ಪ್ರಕಾರ, 27 ನಿಮಿಷದ ವೀಡಿಯೋ ತುಣುಕು ನೀಡಿರುವ ದೂರುದಾರರು ಸಾಯಿ ಪಲ್ಲವಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ದೂರಿನ ಪ್ರತಿ ಪಡೆದಿದ್ದು, ಕಾನೂನು ತಜ್ಞರ ಸಮಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ. ಆದರೆ ಸಾಯಿ ಪಲ್ಲವಿ ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ. ಇರುವುದನ್ನು ಇದ್ದ ಹಾಗೆ ಹೇಳಿದ್ರೆ ಕೆಲವೊಮ್ಮೆ ವಿರೋಧ ಎದುರಿಸಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಾಶ್ಮೀರಿ ಫೈಲ್ಸ್​ ಬಂದ ಬಳಿಕವೂ ಹತ್ಯೆ ನಿತಂತರ.. ಯಾಕೆ..?

ಅಂದು ಕಾಶ್ಮೀರಿ ಪಂಡಿತರ ಹತ್ಯೆಗೆ ಕಾಂಗ್ರೆಸ್​ ಕಾರಣ ಎಂದು ಬಿಂಬಿಸುವುದು ಬಿಜೆಪಿಯ ಪ್ರಯತ್ನ ಎನ್ನುವುದು ಕೆಲವರ ಆರೋಪ. ಅದೇ ಕಾರಣಕ್ಕೆ ಕಾಶ್ಮೀರಿ ಫೈಲ್ಸ್​ ಚಿತ್ರಕ್ಕೆ ಸಬ್ಸಿಡಿ ಕೊಟ್ಟು ದೇಶಾದ್ಯಂತ ಭಾರೀ ಪ್ರೋತ್ಸಾಹ ನೀಡಲಾಯ್ತು. ಆದರೆ ಕಾಶ್ಮೀರ್​ ಫೈಲ್ಸ್​ ಚಿತ್ರ ಬಿಡುಗಡೆ ಆದ ಬಳಿಕ ಸುಮಾರು 20 ಜನ ರನ್ನು ಕಾಶ್ಮೀರದಲ್ಲಿ ಹತ್ಯೆ ಮಾಡಲಾಯ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಕೇಂದ್ರ ಸರ್ಕಾರವಿದೆ. ಯಾಕೆ ಕ್ರಮ ಕೈಗೊಂಡಿಲ್ಲ..? ಕಾಶ್ಮೀರಿ ಪಂಡಿತರ ಹತ್ಯೆ ಈಗಲೂ ಮುಂದುವರಿದಿದೆ ಎನ್ನುವುದಾದರೆ ಕೇಂದ್ರ ಸರ್ಕಾರ ಯಾಕೆ ಸುಮ್ಮನಿದೆ..? ಎನ್ನುವ ಪ್ರಶ್ನೆಗಳು ಸೃಷ್ಟಿಯಾಗುತ್ತಿವೆ. ಇನ್ನೂ ಸಾಯಿ ಪಲ್ಲವಿ ನಕ್ಸಲ್​ ಆಗಿ ಅಭಿನಯ ಮಾಡಿರುವ ವಿರಾಟ ಪರ್ವಂ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಚಿತ್ರದ ಪ್ರಚಾರಕ್ಕಾಗಿ ವಿವಾದ ಸೃಷ್ಟಿಸಿದ್ದಾರೆ ಎನ್ನುವ ಮಾತುಗಳೂ ಅಲ್ಲಲ್ಲಿ ಹರಿದಾಡ್ತಿವೆ.

Related Posts

Don't Miss it !