ಸಿದ್ದರಾಮಯ್ಯ ಪಂಚೆ ಹಿಡಿದು ಕಾಂಗ್ರೆಸ್​, ಬಿಜೆಪಿ ನೆಟ್ಟಿಗರ ಜಂಗೀಕುಸ್ತಿ..!

ಕಳೆದ ವಾರ ನಡೆದ ವಿಧಾನಸಭಾ ಅಧಿವೇಶದಲ್ಲಿ ಅತ್ಯಾಚಾರ ಸಂಬಂಧಿಸಿದ ವಿಚಾರಗಳು ಭಾರೀ ಚರ್ಚೆಗೆ ಬಂದಿದ್ದವು. ಈ ವೇಳೆ ಗಹನವಾದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರ ಪಂಚ ಸರಕ್ಕನೆ ಜಾರಿತ್ತು. ಮಾತಿನ ಭರದಲ್ಲಿ ಸಿದ್ದರಾಮಯ್ಯ ಪಂಚೆಯನ್ನೇ ನೋಡಿರಲಿಲ್ಲ. ಆ ಬಳಿಕ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ‘ನಿಮ್ಮ ಪಂಚೆ ಜಾರಿದೆ’ ಎಂದು ಕಿವಿಯಲ್ಲಿ ಉಸುರಿದ್ದರು. ಆದರೆ ಅದನ್ನೇ ಬಹಿರಂಗವಾಗಿ ಹೇಳಿದ್ದ ಸಿದ್ದರಾಮಯ್ಯ, ‘ನನ್ನ ಪಂಚೆ ಜಾರಿದೆಯಂತೆ, ಕಟ್ಟಿಕೊಂಡು ಮಾತನಾಡ್ತೇನೆ’ ‘ಕೊರೊನಾ ಹೆಚ್ಚಾದ ಬಳಿಕ ಸ್ವಲ್ಪ ಬೊಜ್ಜು ಬಂದಿದೆ, ಸೊಂಟದ ಮೇಲೆ ಪಂಚೆ ನಿಲ್ತಿಲ್ಲ’ ಎಂದು ತಮ್ಮದೇ ಶೈಲಿಯಲ್ಲಿ ಸದನಕ್ಕೆ ತಿಳಿಸಿದ್ದರು. ಸದನ ಕೂಡ ನಗೆಗಡಲಲ್ಲಿ ತೇಲಿತ್ತು. ಸ್ಪೀಕರ್​ ಸ್ಥಾನದಲ್ಲಿ ಕುಮಾರ್​ ಬಂಗಾರಪ್ಪ, ರೇಪ್​ ಸುದ್ದಿ ಮಾತನಾಡುವಾಗಲೇ ಜಾರಿದೆ ಎಂದು ಹಾಸ್ಯ ಮಾಡಿದ್ದರು. ಇದೀಗ ಮತ್ತೆ ಬಿಜೆಪಿ ಸಿದ್ದರಾಮಯ್ಯ ಪಂಚೆಗೆ ಬೆಂಕಿ ಹಚ್ಚಿದೆ.

ಪಂಚೆ ಅಷ್ಟೇ ಅಲ್ಲ ಜೊತೆಗೆ ತಾನೂ ನೇತಾಡುತ್ತಿದ್ದರು..!

ಆರ್​ಎಸ್​ಎಸ್​ ಹಾಗೂ ತಾಲಿಬಾನಿಗಳು ಒಂದೇ ಎಂದು ಸಿದ್ದರಾಮಯ್ಯ ಭಾಷಣವೊಂದರಲ್ಲಿ ಹೇಳಿದ್ದರು. ಈ ಮಾತಿಗೆ ಉತ್ತರ ಕೊಟ್ಟಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ. ತಾಲಿಬಾನಿಗಳು ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ..? ಎಂದು ಪ್ರಶ್ನಿಸಿದ್ದರು. ಜೊತೆಗೆ ಅಕಸ್ಮಾತ್​ ತಾಲಿಬಾನಿ ಸ್ಥಿತಿ ಇದ್ದಿದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ, ಅವರೂ ನೇತಾಡುವ ಸ್ಥಿತಿ ಎದುರಾಗುತ್ತಿತ್ತು ಎಂದು ಲೇವಡಿ ಮಾಡಿದ್ದರು. ಇದನ್ನೇ ಟ್ವೀಟ್​ ಮಾಡಿದ್ದ ಬಿಜೆಪಿ ಕರ್ನಾಟಕಕ್ಕೆ ಕಾಂಗ್ರೆಸ್​ ಇವತ್ತು ತಿರುಗೇಟು ನೀಡಿದೆ. ಆದರೆ ಪಂಚೆ ವಿಚಾರವನ್ನು ಮಾತ್ರ ಮುಂದುವರಿಸಿದ್ದು, ತಾಲಿಬಾನಿ ಹೇಳಿಕೆಯಿಂದ ನುಣುಚಿಕೊಳ್ಳುವ ಯತ್ನ ಮಾಡಿದೆ.

Read this also:


ಸಿ.ಡಿ, ವೀಡಿಯೋ, ತಡೆಯಾಜ್ಞೆ ಪ್ರಸ್ತಾಪ..!

ಸದನದಲ್ಲಿ ಸಿದ್ದರಾಮಯ್ಯ ಪಂಚೆ ಕಳಚಿದ ವಿಚಾರಕ್ಕೆ ಟ್ವೀಟ್ ಮೂಲಕ ಗೇಲಿ ಮಾಡಿದ ಬಿಜೆಪಿಗೆ ಕಾಂಗ್ರೆಸ್ ಪ್ರತ್ಯುತ್ತರ ನೀಡಿದ್ದು, ಪಂಚೆ ಆಕಸ್ಮಿಕವಾಗಿ ಕಳಚಿ ಬೀಳುವುದು ಸಹಜ. ಆದ್ರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟನ್ನ ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ. ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ಕರ್ನಾಟಕ ನಾಯಕರಿಗೆ ಕಳಚಲಾಗದ ಪ್ಯಾಂಟ್ ಭಾಗ್ಯ ನೀಡುವೆವು ಎಂದು ಛೇಡಿಸಿದೆ. ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ. ಅದು ಈ ನಾಡಿನ ಗತ್ತು ಎಂದಿದೆ. ಕಂಡ ಕಂಡಲ್ಲಿ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ, ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪಂಚೆ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಜೊತೆಗೆ ಬಿಜೆಪಿಯವರು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಿ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

Read this also;

ರಾಜಕಾರಣದ ಟೀಕೆಗೆ ಕಾರ್ಯಕರ್ತರ ಕಚ್ಚಾಟ..!

ರಾಜಕಾರಣದಲ್ಲಿ ಟೀಕೆಗಳು ಸಾಮಾನ್ಯ. ಟೀಕೆಗಳಿಂದ ಯಾರಿಗೆ ಎಷ್ಟು ಲಾಭ, ಯಾರಿಗೆ ಎಷ್ಟು ನಷ್ಟ ಎನ್ನುವುದೇ ನಾಯಕರ ಲೆಕ್ಕಾಚಾರ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಮಾತಿನ ಚಕಮಕಿ ಮಾಡಿದ್ದಾರೆ. ಈ ನಡುವೆ ಮಾಜಿ ಕೇಂದ್ರ ಸಚಿವ ಸದಾನಂದಗೌಡ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಸದಾನಂದಗೌಡರು, ತಾಲಿಬಾನಿ ಆಗಿದ್ದರೆ ಸಿದ್ದರಾಮಯ್ಯ ಕಾರಲ್ಲಿ ಓಡಾಡಲು ಸಾಧ್ಯವಿರಲಿಲ್ಲ. ಕಾಲಿಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗ್ತಿದ್ರು ಎಂದು ಟಾಂಗ್ ಕೊಟ್ಟಿದ್ದಾರೆ. ಇದೀಗ ದಾಳಿ ಪ್ರತಿದಾಳಿ ವಿಚಾರ ಮತ್ತೊಂದು ರೂಪ ಪಡೆಯುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

Related Posts

Don't Miss it !