ಜಾತಿಗೆಟ್ಟ ಶ್ರೀನಿವಾಸಗೌಡ, ಶಿವಲಿಂಗೇಗೌಡ ಜಾಣನಡೆ.. ಅತಂತ್ರ ಸ್ಥಿತಿಯಲ್ಲಿ ಗುಬ್ಬಿ ವಾಸು..!

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಯಾವುದೇ ಕಾರಣಕ್ಕೂ ಗೆಲುವು ಸಾಧಿಸುವುದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಆದರೆ ಅಂತಿಮವಾಗಿ ಬಿಜೆಪಿ ಗೆದ್ದರೂ ಪರವಾಗಿಲ್ಲ, ಜೆಡಿಎಸ್​ ಗೆಲ್ಲಬಾರದು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೆಸ್​​ ಪಕ್ಷ ಮನ್ಸೂರ್​ ಅಲಿಖಾನ್​​ ಅವರನ್ನು ಹೆಚ್ಚುವರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಜೆಡಿಎಸ್​ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್​ ನಾಯಕರ ಬೆಂಬಲ ಕೋರುತ್ತಿರುವಾಗಲೇ ಕಾಂಗ್ರೆಸ್​ ಏಕಾಏಕಿ ಮನ್ಸೂರ್​ ಅಲಿಖಾನ್​ ಅವರನ್ನು ಅಖಾಡಕ್ಕೆ ಇಳಿಸಿತ್ತು. ಕಾಂಗ್ರೆಸ್​ ಹಾಗು ಜೆಡಿಎಸ್​​ ನಡುವಿನ ಕಚ್ಚಾಟ ಕಂಡ ಕೇಸರಿ ಪಡೆ ಮೂರನೇ ಅಭ್ಯರ್ಥಿ ಹಾಕುವ ನಿರ್ಧಾರ ಮಾಡಿತ್ತು. ಬಿ.ಎಸ್​ ಯಡಿಯೂರಪ್ಪ ಆಪ್ತ ಲೆಹರ್​ ಸಿಂಗ್​ ಅವರನ್ನು ಗೆಲ್ಲಿಸಿಕೊಳ್ಳಲು ಶಕ್ತವಾಯ್ತು. ಇನ್ನೂ ಜೆಡಿಎಸ್​ನಿಂದ ಕ್ರಾಸ್​ ವೋಟಿಂಗ್​ ಆಗಿದೆ ಎನ್ನುವ ಸುದ್ದಿ ನಡುವೆ ಕಾಂಗ್ರೆಸ್​ನಿಂದಲೂ ಕ್ರಾಸ್​ ವೋಟಿಂಗ್​ ಆಗಿರುವುದು ಫಲಿತಾಂಶದ ಬಳಿಕ ಬಯಲಾಗಿದೆ.

ಜೆಡಿಎಸ್​ನಲ್ಲಿ ನಿರೀಕ್ಷೆ ಮೀರಿ ಒಗ್ಗಟ್ಟು ಪ್ರದರ್ಶನ..!

ಜೆಡಿಎಸ್​ನಲ್ಲಿ ಒಟ್ಟು 32 ಶಾಸಕರ ಬಲವಿತ್ತು, ಮೂರೂ ಪಕ್ಷಗಳಿಗಿಂತ ಹೆಚ್ಚಿನ ಮತಗಳನ್ನು ಜೆಡಿಎಸ್​ ಹೊಂದಿತ್ತು. ಅದೇ ಕಾರಣದಿಂದ ಕಾಂಗ್ರೆಸ್​ ನಮ್ಮನ್ನು ಬೆಂಬಲಿಸಬೇಕು ಅನ್ನೋ ಪಟ್ಟುನ್ನೂ ಹಿಡಿದಿತ್ತು. ಆದರೆ ಕಾಂಗ್ರೆಸ್​ ಹೇಳಿದ್ದು, ಜೆಡಿಎಸ್​ನಲ್ಲಿ ಇರುವ ಅಸಮಾಧಾನಿತ ಶಾಸಕರು ನಮ್ಮ ಮನ್ಸೂರ್​ ಅಲಿಖಾನ್​ ಬೆಂಬಲಿಸಲಿದ್ದಾರೆ ಅಂತಾ. ಆದರೆ ಕಾಂಗ್ರೆಸ್​ಗೆ ಶ್ರೀನಿವಾಸ್​ಗೌಡ ನೇರವಾಗಿ ಕ್ರಾಸ್​ ವೋಟಿಂಗ್​ ಮಾಡಿದ್ದು ಬಿಟ್ಟರೆ, ಬೇರೆ ಯಾವುದೇ ಜೆಡಿಎಸ್​ ಶಾಸಕ ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕಲಿಲ್ಲ. ವಿಶೇಷ ಅಂದರೆ, ಕಾಂಗ್ರೆಸ್​​ನಿಂದಲೂ ಯಾರೋ ಒಂದಿಬ್ಬರು ಬಿಜೆಪಿಗೆ ಮತ ಹಾಕಿರುವುದು ಬೆಳಕಿಗೆ ಬಂದಿದೆ. ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ವೇಳೆ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್​ ಸಿಂಗ್​ಗೆ 2ನೇ ಪ್ರಾಶಸ್ತ್ಯದ ಎರಡು ಮತಗಳು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್​ ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಾದ ಮೇಲೂ ಹಠ ಸಾಧಿಸಿ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧವಾದಂತಿದೆ.

ಅತಂತ್ರ ಪರಿಸ್ಥಿತಿ ಎದುರಾದರೆ ಕಾಂಗ್ರೆಸ್​ ಪಾಡೇನು..?

ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಮೂರೂ ಪಕ್ಷಗಳು ನಾವು ಅಧಿಕಾರಕ್ಕೆ ಬರ್ತೇವೆ. ಸರಳ ಬಹುಮತವನ್ನು ಕರ್ನಾಟಕದ ಜನರು ನೀಡುತ್ತಾರೆ ಎನ್ನುವ ಹುಮ್ಮಸ್ಸಿನ ಮಾತುಗಳು ಹೇಳುತ್ತಿದ್ದಾರೆ. ಆದರೆ ಅಂತಿಮವಾಗಿ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಎಲ್ಲರ ಬಂಡವಾಳ ಬಯಲಾಗುವುದು. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್​ ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಂಡಿತೇ..? ಎನ್ನುವ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ ಹೆಚ್ಚೂಕಡಿಮೆ ಸಮಬಲ ಸಾಧಿಸಿ, ಬಿಜೆಪಿ ಅಧಿಕಾರ ಹಿಡಿಯುವಷ್ಟು ಸ್ಥಾನಗಳನ್ನು ಪಡೆಯದಿದ್ದರೆ, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತೆ ಎನ್ನುವ ಚರ್ಚೆ ಶುರುವಾಗುತ್ತಿತ್ತು. ಆದರೆ ಇನ್ಮುಂದೆ ಮೈತ್ರಿ ರಾಜಕಾರಣಕ್ಕೆ ಕಾಂಗ್ರೆಸ್​ ಕಲ್ಲು ಹಾಕಿಕೊಂಡಿದೆ. ಆದರೆ ಜೆಡಿಎಸ್​ ಬಿಜೆಪಿ ಜೊತೆಗೂ ಅಧಿಕಾರ ನಡೆಸುವುದಕ್ಕೆ ಸಿದ್ಧ ಇರುವ ಕಾರಣ ರಾಜಕಾರಣದ ಮಗ್ಗುಲು ಬದಲಾಗಿದೆ.

ಇದನ್ನು ನೋಡಿ:

ಮತದಾನದಲ್ಲಿ ಜೆಡಿಎಸ್​ ಶಾಸಕ ಸೋಲು-ಗೆಲುವಿನ ಆಟ..!

ಕೋಲಾರದ ಶ್ರೀನಿವಾಸಗೌಡ ಕಳೆದ ಕೆಲವು ದಿನಗಳಿಂದ ಜೆಡಿಎಸ್​ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇದ್ದರು. ಈಗಾಗಲೇ ಕಾಂಗ್ರೆಸ್​ ಜೊತೆಗೆ ಚರ್ಚೆ ನಡೆಸಿದ್ದು, ಮುಂದಿನ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನೂ ಅರಸೀಕೆರೆ ಶಿವಲಿಂಗೇಗೌಡ ಕೂಡ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗ್ತಿದೆ. ಆದರೂ ಜೆಡಿಎಸ್​ ಎದುರು ಹಾಕಿಕೊಂಡು ಸೋಲುವ ಬದಲು ಮನವೊಲಿಸಿ ಕಾಂಗ್ರೆಸ್​ ಸೇರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಜೆಡಿಎಸ್​ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇನ್ನೂ ಜಿಟಿ ದೇವೇಗೌಡರ ಮನೆಗೆ ಸ್ವತಃ ಹೆಚ್​.ಡಿ ಕುಮಾರಸ್ವಾಮಿ ಭೇಟಿ ನೀಡಿ ಚರ್ಚೆ ನಡೆಸಿದ್ದ ಬಳಿಕ ಮನಸ್ತಾಪ ಕೊಂಚ ಕಡಿಮೆ ಆಗಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸಬೇಕಾ..? ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾರೆ. ಇನ್ನೂ ಗುಬ್ಬಿ ಶಾಸಕ ಶ್ರೀನಿವಾಸ್​ (ವಾಸು) ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುವ ಮನಸ್ಸು ಮಾಡಿದ್ರು. ಆದರೆ ಟಿಕೆಟ್​ ಸಿಗುವುದು ಖಚಿತ ಆಗದ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ, ಚುನಾವಣೆಯಲ್ಲಿ ಯಾರಿಗೆ ಮತ ಹಾಕ್ಬೇಕು ಎಂದು ಕೇಳಿದ್ದರು. ಅಂತಿಮವಾಗಿ ಬಿಜೆಪಿ ಮತ ಚಲಾವಣೆ ಮಾಡಿದ್ದಾರೆ. ಟಿಕೆಟ್​ ಸಿಗುತ್ತಾ..? ಪಕ್ಷೇತರ ಸ್ಪರ್ಧೆನಾ..? ಗೊತ್ತಿಲ್ಲ.

Related Posts

Don't Miss it !