‘ಕೈ’ಗೆ ಬಂದ ತುತ್ತು ಬಾಯಿಗೆ ಬರಲ್ಲ ಯಾಕೆ ಗೊತ್ತಾ..!? ಒಡಕಿನ ಮಡಕೆಯ ಮೃಷ್ಟಾನ್ನ..

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತಕ್ಕೆ ಬೇಸತ್ತಿರುವ ಜನ ಮುಂದಿನ ಬಾರಿ ಕಾಂಗ್ರೆಸ್​ ಬೆಬಲಿಸುತ್ತಾರೆ. ಕನಿಷ್ಠ ಪಕ್ಷ ರಾಜ್ಯದಲ್ಲಿ ಕಾಂಗ್ರೆಸ್​ ಆಡಳಿತಕ್ಕೆ ಬರಲಿದೆ ಎನ್ನುವ ವಿಶ್ವಾಸ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಕಾಂಗ್ರೆಸ್​ ಎಂಬ ಒಡಕಿನ ಮಡಕೆಯಲ್ಲಿ ಮೃಷ್ಟಾನ್ನ ಭೋಜನ ಮಾಡಲು ಡಿ.ಕೆ ಶಿವಕುಮಾರ್​ ಸಿದ್ಧತೆ ಮಾಡುತ್ತಿದ್ದಾರೆ. ಇದೀಗ ಒಡಕಿನ ಮಡಕೆಯಲ್ಲಿ ಅನ್ನ ಮಾಡಿದ್ರೆ ಯಾರು ಊಟ ಮಾಡ್ತಾರೆ ಎನ್ನುವ ಜಿಜ್ಞಾಸೆ ಶಿವಕುಮಾರ್​ ಅವರನ್ನು ಕಾಡುತ್ತಿದ್ದು, ದೆಹಲಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಒಡಕಿನ ಮಡಕೆಯ ಅನ್ನ ಚೆನ್ನಾಗಿ ಬೆಂದ ಬಳಿಕ ಊಟ ಮಾಡಲು ಸಿದ್ದರಾಮಯ್ಯ ಬಾಳೆ ಎಲೆ ಹಾಕಿಕೊಂಡು ಕುಳಿತಿರುವ ಬಗ್ಗೆಯೂ ಹೈಕಮಾಂಡ್​ ಬಳಿ ದೂರು ನೀಡಿದ್ದಾರೆ ಎನ್ನಲಾಗಿದೆ.

ನಾನೇ ಮುಂದಿನ ಸಿಎಂ ಸ್ವಯಂ ಘೋಷಣೆ..!

ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಎಲ್ಲಾ ಕಡೆ ಒಂದೇ ಭಾಷಣ ಮಾಡುತ್ತಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತದೆ. ನಾನು ಮತ್ತೆ 10 ಕೆ.ಜಿ ಅಕ್ಕಿ ಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದು ಭಾಷಣ ಮಾಡುತ್ತಿದ್ದಾರೆ. ಅಂದರೆ ಮುಂದಿನ ಬಾರಿ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಆಗುವುದು ನಾನೇ ಎಂದು ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡಿಕೊಂಡಂತೆ ಆಗಿದೆ. ಈ ಬಾರಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದು ನಾನು ಮುಖ್ಯಮಂತ್ರಿ ಆಗಬೇಕು ಎನ್ನುವ ಕನಸು ಕಟ್ಟಿಕೊಂಡಿರುವ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್​ಗೆ ಇದರಿಂದ ಭಾರೀ ಮುಜಯಗರ ಉಂಟಾಗಿದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುವುದಾದರೆ ಹೈಕಮಾಂಡ್​ ನಾಯಕರು ಈಗಲೇ ಘೋಷಣೆ ಮಾಡಲಿ ಎಂದು ಹಿರಿಯ ನಾಯಕರ ಬಳಿ ಡಿ.ಕೆ ಶಿವಕುಮಾರ್​ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಮಾತಿಗೆ ಕಡಿವಾಣ ಹಾಕಿ ಎನ್ನುವುದು ಡಿ.ಕೆ ಶಿವಕುಮಾರ್​ ಒತ್ತಾಯ.

Read this also;

ಕಾಂಗ್ರೆಸ್​ ಒಡಕು, ಬಿಜೆಪಿ, ಜೆಡಿಎಸ್​ಗೆ ಸೊಗಸು..!

ಕಾಂಗ್ರೆಸ್​ ಒಡೆದ ಮನೆಯಂತಿದ್ದು, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ತನ್ನ ವರಸೆ ಮುಂದುವರಿಸಿದ್ದಾರೆ. ಪಕ್ಷದ ಕೆಲಸ ನಿಮಿತ್ತ ದೆಹಲಿ ಪ್ರವಾಸ ಕೈಗೊಂಡಿದ್ದ ಡಿ.ಕೆ ಶಿವಕುಮಾರ್​ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ಹಾಗೂ ಜೆಡಿಎಸ್​ ಅಂಗಳದಲ್ಲಿ ಸಂಭ್ರಮ ಮನೆ ಮಾಡಲು ಕಾರಣವಾಗಿದೆ. ಸಿದ್ದರಾಮಯ್ಯ ಮುಂದೆ ನಮ್ಮದೇ ಆಡಳಿತ, ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡಿದ್ರೆ, ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತುತ್ತಿರುವ ಡಿ.ಕೆ ಶಿವಕುಮಾರ್​ ಕೊಂಚ ಬ್ರೇಕ್​ ಹಾಕುತ್ತಾರೆ. ಈ ಸಮಯವನ್ನು ಸದುಪಯೋಗ ಮಾಡಿಕೊಂಡು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಹಿಡಿತ ಸಾಧಿಸಬಹುದು ಎನ್ನುವ ಲೆಕ್ಕಚಾರಗಳು ಶುರುವಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಮಾತಿಗೆ ಬ್ರೇಕ್​ ಬೀಳದಿದ್ದರೆ ಖಂಡಿತವಾಗಿಯೂ ಕಾಂಗ್ರೆಸ್​ ಅಧ್ಯಕ್ಷರು ದಿಕ್ಕು ಬದಲಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುತ್ತಿದೆ ಆಪ್ತ ಮೂಲ.

Read this also;

ಇಬ್ಬರಲ್ಲೂ ಒಂದು ತಂತ್ರಗಾರಿಕೆ ಎದ್ದು ಕಾಣ್ತಿದೆ..!

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ಗ ಇಬ್ಬರೂ ಒಂದು ಯೋಜನೆಯನ್ನು ಯಶಸ್ವಿಯಾಗಿ ರೂಪಿಸುವ ಕೆಲಸ ಮಾಡ್ತಿದ್ದಾರೆ. ಅದೇನೆಂದರೆ ತನ್ನ ಆಪ್ತಬಣ ಅಥವಾ ತನ್ನ ಕಡೆಯಿಂದ ಗೆಲ್ಲಬಹುದಾದ ನಾಯಕರ ಗುಂಪು ಕಟ್ಟಿಕೊಳ್ಳುವ ಕೆಲಸ ಮಾಡುವ ಮುನ್ಸೂಚನೆ ಸಿಕ್ಕಿದೆ. ಈ ಯೋಜನೆ ಜಾರಿಗೆ ಬಂದರೆ ಕಾಂಗ್ರೆಸ್​ ನಾಯಕರಿಂದಲೇ ಎದುರಾಳಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೂ ಅಚ್ಚರಿಯಿಲ್ಲ. ಪಕ್ಷದ ಹೊರಗಿನ ನಾಯಕರನ್ನು ಮುಗಿಸುವ ಜೊತೆಗೆ ಪಕ್ಷದಲ್ಲೇ ಇರುವ ನಾಯಕರನ್ನು ಮುಗಿಸುವುದು ರಾಜಕೀಯ ತಂತ್ರಗಾರಿಕೆಯೆ ಪ್ರಮುಖ ಅಧ್ಯಾಯ. ಇದನ್ನು ಇಬ್ಬರೂ ನಾಯಕರು ತುಂಬಾ ಚೆನ್ನಾಗಿಯೇ ಬಲ್ಲರು. ಹೀಗಾಗಿ ಇಬ್ಬರೂ ತಮ್ಮ ತಮ್ಮನ್ನೇ ಮುಗಿಸುವ ವಂಚು ಹಾಕುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರಬಹುದು ಎಂದು ನಿರೀಕ್ಷೆ ಮಾಡಿದವರಿಗೆ ಮತ್ತೆ ನಿರಾಸೆ ಆಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಕಾಂಗ್ರೆಸ್​ ಹೈಕಮಾಂಡ್​ ಮಧ್ಯಪ್ರವೇಶ ಮಾಡಿ ಎರಡು ಶಕ್ತಿಗಳ ನಡುವೆ ಒಂದು ಸಂಧಾನ ಏರ್ಪಟ್ಟರೆ ಮಾತ್ರ ಕಾಂಗ್ರೆಸ್​ನ ಅಧಿಕಾರದ ಆಸೆ ಜೀವಂತ. ಇಲ್ಲದಿದ್ದರೆ ಗೋವಿಂದ. ಒಡದೆ ಮಡಕೆಯ ಅನ್ನ ಬೇಯುವ ಮುನ್ನವೇ ಛಿದ್ರವಾಗಿ ಇಬ್ಬರಿಗೂ ಇಲ್ಲದಂತೆ ಆಗುವುದು ಶತಸಿದ್ಧ.

Related Posts

Don't Miss it !