ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರದ್ದು ‘ರಾತ್ರಿ ರಾಜಕೀಯ’ ಇದರ ಅರ್ಥವೇನು ..?

ಬೆಳಗಾವಿಯಲ್ಲಿ ರಸ್ತೆ ಗುಂಡಿ ರಾಜಕೀಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಸಮರ ಶುರುಮಾಡಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರೀಹಾಳ, ಬೆಳಗುಂದಿ ಸೇರಿ ಅನೇಕ ಕಡೆ ರಸ್ತೆ ಗುಂಡಿ ಇರುವ ಬಗ್ಗೆ ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್ ಹಾಕಲಾಗಿತ್ತು. ಬ್ಯಾನರ್​ನಲ್ಲಿ ಕುಕ್ಕರ್, ಕಮೀಷನ್ ವಿಚಾರ ಪ್ರಸ್ತಾಪ ಮಾಡಿದ್ದರು. ಕನ್ನಡ ಹಾಗೂ ‌ಮರಾಠಿ ಭಾಷೆಯಲ್ಲಿ ಬ್ಯಾನರ್ ಹಾಕಿದ್ದ ಬಗ್ಗೆ ಹಿರೇಬಾಗೇವಾಡಿ ಠಾಣೆಗೆ ಕಾಂಗ್ರೆಸ್ ದೂರು ಸಲ್ಲಿಸಿತ್ತು. ಶಾಸಕಿ ಬಗ್ಗೆ ಅವಹೇಳನವಾಗಿ ಬ್ಯಾನರ್ ಹಾಕಿದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿತ್ತು. ಇದರ ಜೊತೆಗೆ ಬಿಜೆಪಿ ಮುಖಂಡ ಧನಂಜಯ ಜಾಧವ್​​​ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ದುರಸ್ತಿ ಮಾಡುವ ಕೆಲಸ ಕೂಡ ಮಾಡಿದ್ದರು. ನಮ್ಮ ಕ್ಷೇತ್ರದ ಶಾಸಕಿ ಕೆಲಸ ಮಾಡುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಈ ಆಕ್ರೋಶ ಬ್ಯಾನರ್ ರೂಪದಲ್ಲಿ ಹೊರ ಬಂದಿದೆ. ಮತ ಹಾಕಿ ಗೆಲ್ಲಿಸಿದ ಜನರ ವಿರುದ್ಧ ದೂರು ನೀಡಲಾಗಿದೆ. ಪೊಲೀಸರಿಂದ ತನಿಖೆ ಮಾಡಿಸಲಿ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದರು.

ಕತ್ತಲು ರಾಜಕಾರಣ ಮಾಡಿದ ಬಿಜೆಪಿ ಎಂದು ಟೀಕೆ..!

ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್​ ಕಟ್ಟಿದ್ದಕ್ಕೆ ಶಾಸಕರ ಸಹೋದರ ಚನ್ನರಾಜ್ ಕಿಡಿಕಾರಿದ್ರು. ಬಿಜೆಪಿಯವರು ಕತ್ತಲು ರಾಜಕಾರಣ ಮಾಡಿ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ಅವಹೇಳನಕಾರಿ ಬ್ಯಾನರ್ ಕಟ್ಟಿದ್ದಾರೆ. ಬಿಜೆಪಿಯವರು ಕಳ್ಳರಂತೆ ಬಂದು ಕತ್ತಲಲ್ಲಿ ಬ್ಯಾನರ್ ಕಟ್ಟಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಡೆವಲಪ್ಮೆಂಟ್ ಕ್ವೀನ್ ಎಂದಿದ್ದರು. ಇದಕ್ಕೆ ಕೌಂಟರ್​ ಕೊಟ್ಟಿದ್ದ ಮಾಜಿ ಶಾಸಕ ಸಂಜಯ್​ ಪಾಟೀಲ್​, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ​ ವಾಗ್ದಾಳಿ ನಡೆಸಿದ್ದರು. ಈ ವೇಳೆ BJP ಅವರಿಗೆ ನೈಟ್ ಪೊಲಿಟಿಕ್ಸ್ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್​ನವರು ನೈಟ್ ಪೊಲಿಟಿಕ್ಸ್ ಮಾಡ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್​​​ಗೆ ನೈಟ್ ಪೊಲಿಟಿಕ್ಸ್ ಮಾಡಿ ಗೊತ್ತಿದೆ. ನೈಟ್ ಪೊಲಿಟಿಕ್ಸ್ ಮಾಡಿಕೊಂಡೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಜನರಿಗೆ ಸುಳ್ಳು ಭರವಸೆ ಕೊಟ್ಟು ಗೆದ್ದಿದ್ದಾರೆ. ಈಗ ಭಾವನಾತ್ಮಕ ಪೊಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಬಿಜೆಪಿ ನಾಯಕನ ಮಾತನ್ನು ಖಂಡಿಸಿದ ಕಾಂಗ್ರೆಸ್​ ಶಾಸಕಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.

Read this also;

ಬಿಜೆಪಿ ನಾಯಕನ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ..!

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಂಜಯ ಪಾಟೀಲ್ ನೀಡಿದ್ದ ಹೇಳಿಕೆ ವಿರೋಧಿಸಿ ಬೆಳಗಾವಿಯ ಗೋಮಟೇಶ್ವರ ವಿದ್ಯಾಪೀಠದ ಮುಂಭಾಗ ಧರಣಿ ನಡೆಸಿದ್ರು. ಆಯಿಷಾ ಸನದಿ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ ನಡೆಸಿತ್ತು. ಕಾಲೇಜಿನ ಗೇಟ್ ಬಳಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತೆಯರು ಹಾಗೂ ಪೋಷಕಿ ನಿರ್ಮಲಾ ಎಂಬುವರ ನಡುವೆ ವಾಗ್ವಾದ ಕೂಡ ನಡೀತು. ಶಾಲೆ ಹೊರಗೆ ಧರಣಿ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿದೆ. ಸಂಜಯ ಪಾಟೀಲ್ ಮನೆ ಅಥವಾ ಕಚೇರಿ ಮುಂದೆ ಧರಣಿ ಮಾಡಿ ಎಂದು ಆಗ್ರಹ ಮಾಡಿದ್ರು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿ ಮಾಡಿದ್ರು. ಸಂಜೆ ಬಳಿಕ ಖಾಸಗಿ ಸುದ್ದಿವಾಹಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹಾಗೂ ಮಾಜಿ ಶಾಸಕ ಸಂಜಯ್​ ಪಾಟೀಲ್ ಇಬ್ಬರೂ ಮಾತಿನ ಸಮರ ನಡೆಸಿದ್ರು.

Read this also;

ರಾತ್ರಿ ರಾಜಕೀಯ’ ಶುರು ಮಾಡಿದ್ದೇ ಕಾಂಗ್ರೆಸ್​..!

‘ರಾತ್ರಿ ರಾಜಕೀಯ’ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಹೇಳಿದ್ದು ಹೌದು. ಆದರೆ ಅದರಲ್ಲಿ ಯಾವುದೇ ಕೆಟ್ಟ ಉದ್ದೇಶದಿಂದ ನಾನು ಹೇಳಿರುವುದಲ್ಲ. ಬಿಜೆಪಿ ಕತ್ತಲ ರಾಜಕೀಯ ಮಾಡಿದೆ ಎಂದು ಕಾಂಗ್ರೆಸ್​ ಮುಖಂಡರು ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರವಾಗಿ ನಾನು ಕಾಂಗ್ರೆಸ್​ ರಾತ್ರಿ ರಾಜಕೀಯ ಎಂದು ಹೇಳಿದ್ದೇನೆ. ಅದನ್ನು ಬಿಟ್ಟರೆ, ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸಂಜಯ್​ ಪಾಟೀಲ್​ ಸ್ಪಷ್ಟನೆ ನೀಡಿದ್ದಾರೆ. ಆದರೆ, ಓರ್ವ ಹೆಣ್ಣು ಮಗಳಿಗೆ ನೀವು ರಾತ್ರಿ ರಾಜಕೀಯ ಎಂದಿರುವ ಎಷ್ಟರ ಮಟ್ಟಿಗೆ ಸರಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಕಿಡಿ ಕಾರಿದ್ರು. ಅಂತಿಮವಾಗಿ ವಿಷಾದವನ್ನೂ ವ್ಯಕ್ತಪಡಿಸದ ಸಂಜಯ್​ ಪಾಟೀಲ್​, ನಾನು ಯಾವುದೇ ತಪ್ಪು ಮಾಡಿಲ್ಲ, ಕಾಂಗ್ರೆಸ್​ ಪಕ್ಷ ರಾಜಕೀಯ ಲಾಭಕ್ಕಾಗಿ ನನ್ನ ಹೇಳಿಕೆಯಲ್ಲಿ ಕೆಟ್ಟ ಅರ್ಥ ಹುಡುಕುತ್ತಿದೆ ಎಂದಷ್ಟೇ ಹೇಳಿ ಚರ್ಚೆಗೆ ಇತಿಶ್ರೀ ಹಾಡಲಾಯ್ತು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರಿ ರಾಜಕೀಯ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆದಿದೆ.

Related Posts

Don't Miss it !