‘‘ನಾನು ಅಮಾಯಕ, ಎಳಸು, ಹೀಗೇ ಬದುಕ್ತೀನಿ.. ಹೀಗೇ ಸಾಯ್ತೀನಿ’’ ಬಂಡೆಗೆ ಡೈನಮೈಟ್..!!

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಹೋರಾಟ ವಿಚಾರದಲ್ಲಿ ಖಡಕ್ ಮಾತುಗಳನ್ನು ಆಡಿದ್ದ ಗೃಹ ಸಚಿವರು ಡಿ.ಕೆ ಶಿವಕುಮಾರ್ ಕೆಂಗಣ್ಣಿಗೆ ಗುರಿಯಾಗಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಎಳಸು, ಅಮಾಯಕ ಅವರಿಗೆ ಗೊತ್ತಾಗಲ್ಲ ಎನ್ನುವ ಮೂಲಕ ಅನುಭವ ಕೊರತೆ ಬಗ್ಗೆ ಸಚಿವರ ಕಾಲೆಳೆಯುವ ಕೆಲಸ ಮಾಡಿದ್ರು. ಆದ್ರೆ ಈ ಬಗ್ಗೆ ತಿರುಗೇಟು ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಹೌದು ನನ್ನನ್ನು ಡಿ.ಕೆ ಶಿವಕುಮಾರ್​ ಅಮಾಯಕ, ಎಳೆಸು ಎಂದಿದ್ದಾರೆ. ಅದು ನಿಜ ಕೂಡ ಹೌದು. ನಾನು ಅಮಾಯಕನಾಗಿಯೇ ಬದುಕಿ, ಅಮಾಯಕನಾಗಿಯೇ ಸಾಯಬೇಕು ಎಂದುಕೊಂಡಿದ್ದೇನೆ ಎನ್ನುವ ಮೂಲಕ ಕಾಂಗ್ರೆಸ್​​ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ತಿರುಗೇಟು ನೀಡಿದ್ದಾರೆ. ಇನ್ನೂ ಡಿ.ಕೆ ಶಿವಕುಮಾರ್​ ಜಾತಕ ಸಂಪೂರ್ಣ ನೋಡಿದ್ದೇನೆ ಎನ್ನುವ ಮೂಲಕ ಪರೊಕ್ಷವಾಗಿ ಡಿ.ಕೆ ಶಿವಕುಮಾರ್​ಗೆ ಚಾಟಿ ಬೀಸಿದ್ದಾರೆ.

ಡಿ.ಕೆ ಶಿವಕುಮಾರ್ ಜಾತಕ ಸಂಪೂರ್ಣ ಗೊತ್ತಿದೆ..!

ನನ್ನನ್ನು ಅಮಾಯಕ, ಎಳಸು ಎಂದಿದ್ದಾರೆ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​. ನಾನು ಅವರು ಹೇಳಿದ್ದೆಲ್ಲವನ್ನೂ ಎಲ್ಲವನ್ನೂ ಒಪ್ಪಿಕೊಳ್ತೇನೆ. ನಾನು ಗೃಹ ಸಚಿವನಾದ ನಂತರ‌ ಯಾರ ಯಾರ ಜಾತಕ‌ ಹೇಗಿದೆ ಎಂಬುದನ್ನು ನೋಡಿದ್ದೇನೆ. ಅದನ್ನು ನೋಡಿದಾಗ ನಾನು ಎಳೆಸಾಗಿ ಇರೋದಕ್ಕೆ ಸಂತೋಷ ಆಗುತ್ತದೆ. ನನ್ನ ಜೀವನದಲ್ಲಿ ನಾನು ಹೀಗೆ ಇದ್ದು ಹೀಗೆ ಸಾಯಬೇಕು ಎಂದುಕೊಂಡಿದ್ದೇನೆ. ಅನೇಕ ಸಂಗತಿಗಳ ಪ್ರಾವಿತ್ರ್ಯತೆ ಕಾಪಾಡಿಕೊಳ್ತೇನೆ. ಆದರೆ ಅವರಂತೆ ಬಲಿತು ಏನೇನೋ ಮಾಡೋಕೆ ಹೋಗೋದಿಲ್ಲ. ಒಬ್ಬ ಹೋಮ್ ಮಿನಿಸ್ಟರ್ ಆಗಿ ನಾಲ್ಕು ತಿಂಗಳಾಗಿದೆ. ಅವರ ಜಾತಕ ನನಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ತಿರುಗೇಟು ಕೊಟ್ಟಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ. ಕನಕಪುರಕ್ಕೆ ಪ್ರತ್ಯೇಕ ಆದೇಶ ಹೊರಡಿಸಿರುವ ವಿಚಾರದ ಬಗ್ಗೆ ಮಾತನಾಡಿರುವ ಆರಗ ಜ್ಞಾನೇಂದ್ರ ನಾನು ಯಾವ ಅಧಿಕಾರಿಗೂ ಸೂಚನೆ ಕೊಟ್ಟಿಲ್ಲ. ಯಾವುದೇ ಪ್ರತ್ಯೇಕ ಆದೇಶವನ್ನೂ ಹೊರಡಿಸಿಲ್ಲ ಎಂದಿದ್ದಾರೆ.

ಪಾದ ಯಾತ್ರೆಗೂ ಮುನ್ನ ಹೊಸ ದಾಳ ಉರುಳಿಸಿದ ಬಂಡೆ..!

ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಹಠ ಹಿಡಿದಿರುವ ಕಾಂಗ್ರೆಸ್​ ನಾಯಕ ಡಿ.ಕೆ ಶಿವಕುಮಾರ್​​, ಕೊನೇ ಪಕ್ಷ ನಾನು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರೇ ಆದರೂ ಪಾದಯಾತ್ರೆ ಮಾಡಿಯೇ ಮಾಡ್ತೇವೆ ಎಂದಿದ್ದಾರೆ. ಸಾಮಾಜಿಕ ಅಂತರದೊಂದಿಗೆ ಪಾದಯಾತ್ರೆ ಮಾಡ್ತೇವೆ. ಅದನ್ನು ಯಾವ ಕಾನೂನು ಮೂಲಕ ತಡೆಯುತ್ತಾರೆ ನಾನು ನೋಡ್ತೇನೆ ಎಂದಿರುವ ಜನಕಪುರ ಬಂಡೆ, ಯಾರನ್ನೂ ಬಂಧಿಸಿದರೂ ನಮ್ಮ ಹೋರಾಟ ನಿಲ್ಲಲ್ಲ ಎಂದಿದ್ದರು. ಇನ್ನೂ ಮಾಸ್ಕ್​ ಇಲ್ಲದ, ಸಾಮಾಜಿಕ ಅಂತರ ಕಾಪಾಡದ ಎಲ್ಲಾ ಸಚಿವರು ಶಾಸಕರ ವಿರುದ್ಧವೂ ಪೊಲೀಸರು ಎಫ್​ಐಆರ್​ ದಾಖಲು ಮಾಡಬೇಕು ಎಂದು ಆಗ್ರಹಿಸಿದ್ದರು. ಇದರ ಜೊತೆಗೆ ‘ವಾಕ್​ ಫಾರ್​ ವಾಟರ್​’ ಪಕ್ಷಾತೀತವಾಗಿ ಆಯೋಜಿಸಿದ್ದೇವೆ ಎನ್ನುವುದನ್ನು ಸಾಬೀತು ಮಾಡಿಕೊಳ್ಳಲು ಮುಂದಾಗಿರುವ ಡಿ.ಕೆ ಶಿವಕುಮಾರ್​​ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೂ ಆಹ್ವಾನಿಸುವ ಮೂಲಕ ಜಾಣ ನಡೆ ಇರಿಸಿದ್ದಾರೆ.

Read this:

ಮೇಕೆದಾಟು ಯೋಜನೆ ಜಾರಿಯಾಗುತ್ತಾ..? ಬೆಂಬಲಿಸ್ತೇನೆ..!

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಪತ್ರದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ನಿಜವಾಗಿಯೂ ಪಾದಯಾತ್ರೆ ಮಾಡಿದ್ರೆ ಮೇಕೆದಾಟು ಯೋಜನೆ ಜಾರಿಯಾಗುತ್ತದೆ ಎನ್ನುವುದಾದರೆ ನಾನೂ ಕೂಡ ಬೆಂಬಲಿಸಿ ಪಾದಯಾತ್ರೆಯಲ್ಲಿ ಭಾಗಿಯಾಗ್ತೇನೆ. ಆದರೆ ಪಾದಯಾತ್ರೆಯಿಂದ ಅದು ಸಾಧ್ಯವಿಲ್ಲ ಎನ್ನುವ ಮೂಲಕ ಕಾಲೆಳೆದಿದ್ದಾರೆ. ಇನ್ನೂ ಕೊರೊನಾ ಸಮಯದಲ್ಲಿ ಪಾದಯಾತ್ರೆ ಮಾಡುತ್ತಿರುವುದು ಜನರಿಗೆ ಇವರೇ ವಿಷ ಕೊಟ್ಟಂತೆ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ. ನಾನು ಸತ್ತರೂ ಪಾದಯಾತ್ರೆ ಸಿಲ್ಲುವುದಿಲ್ಲ ಎಂದಿದ್ದ ಡಿ.ಕೆ ಶಿವಕುಮಾರ್​ಗೆ ಟಾಂಗ್​ ಕೊಟ್ಟಿರುವ ಕುಮಾರಸ್ವಾಮಿ, ನೀವ್ಯಾಕೆ ಸಾಯೋ ಮಾತನಾಡ್ತೀರಿ, ನಿಜವಾಗಲೂ ಸಮಸ್ಯೆ ಅನುಭವಿಸುವುದು ಸಾಮಾನ್ಯ ಜನರು ಮಾತ್ರ ಎಂದು ಕಟಕಿಯಾಗಿದ್ದಾರೆ.

ಮೇಕೆದಾಟು ಬಳಿ ಅದ್ಧೂರಿ ವೇದಿಕೆ ತಯಾರಿ..!

ಮೇಕೆದಾಟು ಯೋಜನೆಗೆ ಆಗ್ರಹಿಸಿ ಬೃಹತ್​ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್​ ವಿರುದ್ಧ ಸರ್ಕಾರ ವಾಗ್ದಾಳಿ ನಡೆಸುತ್ತಲೇ ಇದೆ. ಇನ್ನೂ ಪಾದಯಾತ್ರೆ ನಡೆಯಲು ಬಿಡುವುದಿಲ್ಲ, ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿರುವ ಕಾರಣ NDMA ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮಕೈಗೊಳ್ತೇವೆ ಎನ್ನುವ ಮಾತನ್ನ ಗೃಹ ಸಚಿವರು ಹೇಳಿದ್ದಾರೆ. ಇನ್ನೂ ರಾಜಕೀಯ ಸಭೆ, ಸಮಾರಂಭಗಳಿಗೂ ಅವಕಾಶವಿಲ್ಲ, ಜನರು ಒಂದೆಡೆ ಸೇರುವುದರಿಂದ ಕೊರೊನಾ ಸೋಂಕು ಉಲ್ಬಣ ಆಗಲಿದೆ ಎನ್ನುವ ಮಾತನ್ನು ರಾಜ್ಯದ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಮೇಕೆದಾಟು ಬಳಿ ಬೃಹತ್​ ಕಾರ್ಯಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗ್ತಿದೆ. ನದಿಗೆ ಹೊಂದಿಕೊಂಡಂತೆ ಬೃಹತ್​ ವೇದಿಕೆ ನಿರ್ಮಾಣ ಕಾರ್ಯ ಆಗ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಇಷ್ಟೆಲ್ಲಾ ಕಾರ್ಯಕ್ರಮ ನಡೆಸುತ್ತಿರುವ ಕಾಂಗ್ರೆಸ್​ ಪಕ್ಷ ಅನುಮತಿ ಪಡೆಯದೇ ಇಷ್ಟೊಂದು ಬೃಹತ್​ ಕಾರ್ಯಕ್ರಮ ಹಮ್ಮಿಕೊಂಡಿದ್ಯಾ..? ಅಥವಾ ಜಿಲ್ಲಾಡಳಿತ ಅನುಮತಿ ಕೊಟ್ಟಿದ್ದು, ರಾಜ್ಯ ಸರ್ಕಾರ ಡಬಲ್​ ಗೇಮ್​ ಆಡ್ತಿದ್ಯಾ ಎನ್ನುವುದು ಬಹಿರಂಗ ಆಗಲು ಇನ್ನೊಂದು ದಿನ ಮಾತ್ರ ಬಾಕಿ.

Related Posts

Don't Miss it !