ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇರಲು ನಾಲ್ಕು ಕಾರಣಗಳು.. ಇಲ್ಲಿವೆ ನೋಡಿ..!!

ಬಿಜೆಪಿ ದುರಾಡಳಿತ ವಿರೋಧಿಸಲು ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಳ್ತಾರೆ ಎನ್ನುವ ಮಾತಿದೆ. ಈ ಮಾತು ಸತ್ಯವಾಗುತ್ತದೆ ಎನ್ನುವುದು ಬಹುತೇಕ ರಾಜಕೀಯ ವಿಶ್ಲೇಷಣೆ ಮಾಡುವ ತಜ್ಞರ ಮಾತಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ತನ್ನದೇ ಕಾಲಿನ ಮೇಲೆ ಚಪ್ಪಡಿ ಎಳೆದುಕೊಳ್ಳುವುದನ್ನು ಚನ್ನಾಗಿ ಕಲಿತಿದೆ ಎನ್ನುವುದು ಜನರಿಗೆ ಈಗ ಅರ್ಥ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದನ್ನು ಖಚಿತವಾಗಿ ಹೇಳುವುದಕ್ಕೆ ಬಲವಾದ ನಾಲ್ಕು ಕಾರಣಗಳಿವೆ. ಆ ನಾಲ್ಕು ಕಾರಣಗಳಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕರಾಮತ್ತು ಅಡಗಿದೆ ಎನ್ನುವುದೇ ಅಚ್ಚರಿ. ರಾಜಕೀಯವಾಗಿ ಏನೂ ಗೊತ್ತಿಲ್ಲದ ನಾಯಕರು ಗಿಮಿಕ್ ಮಾಡುವುದು ಸಾಮಾನ್ಯ. ಆದರೆ ಮಾಜಿ ಮುಖ್ಯಮಂತ್ರಿ, ಬಜೆಟ್ ಮಂಡನೆಯಲ್ಲೇ ದಾಖಲೆ ಮಾಡಿರುವ ಸಿದ್ದರಾಮಯ್ಯ ಕೂಡ ಇದೇ ಹಾದಿ ತುಳಿದಿರುದು, ಸ್ವತಃ ಸಿದ್ದರಾಮಯ್ಯ ಅಭಿಮಾನಿಗಳಿಗೇ ಬೇಸರ ಹುಟ್ಟಿಸಿದೆ.‌

ಸಿದ್ದರಾಮಯ್ಯ ಮಾಡಿದ ಮೊದಲ ತಪ್ಪೇನು..? ಅದರಿಂದ ಆಗಿದ್ದೇನು..?

ಮಾಧ್ಯಮಗಳಿಗೆ ತಲುಪಿಸಬೇಕಿರುವ ವಿಚಾರಗಳನ್ನು ಗುಟ್ಟಾಗಿ ರಾಜಕಾರಣಿಗಳೇ ತಲುಪಿಸುವ ಕೆಲಸ ಮಾಡುತ್ತಿದ್ದರು, ಮಾಡುತ್ತಾರೆ ಕೂಡ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಮಾಧ್ಯಮಗೋಷ್ಟಿ ಕರೆಯುವುದು, ಮೈಕ್ ಜೋಡಿಸಿಟ್ಟ ಕೆಲವು ಸಮಯ ಗುಟ್ಟಾಗಿ ಮಾತನಾಡುವಂತೆ ಹೇಳಬೇಕಿರುವ ಸೀಕ್ರೆಟ್ ಹೇಳುವುದು. ಆ ಬಳಿಕ ಅದಕ್ಕೆ ತೇಪೆ‌ ಸಾರಿಸುವುದು. ಇದನ್ನು ಸಾಕಷ್ಟು ಸಣ್ಣ ಪುಟ್ಟವರು ಮಾಡುತ್ತಿದ್ದರು. ಇದೀಗ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತನಾಡಿ‌ ಡಿ.ಕೆ ಶಿವಕುಮಾರ್ ಬಗ್ಗೆ ಟೀಕಿಸಿದ್ದಾರೆ. ಇದು ಕಾಂಗ್ರೆಸ್ ಒಳಗಿನ ಕಿಡಿಯನ್ನು ಹೊರಕ್ಕೆ ಬಿಸಾಡಿದ ಹಾಗೆ ಆಗಿದೆ. ಶನಿವಾರ ಸುದ್ದಿಗೋಷ್ಟಿ ಕರೆದಿದ್ದ ಸಿದ್ದರಾಮಯ್ಯ ಮಾತು ಆರಂಭಕ್ಕೂ ಮುನ್ನ ಅಶೋಕ್ ಪಟ್ಟಣ್ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಡಿ.ಕೆ ಶಿವಕುಮಾರ್ ಹಾಗೂ ಸಂಪತ್ ರಾಜು ವಿರುದ್ಧ ಗರಂ‌ ಆಗಿದ್ದಾರೆ. ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸಂಪತ್ ರಾಜು ಕೆಲಸ ಮಾಡುತಿರುವ ಬಗ್ಗೆ ಮಾತನಾಡಿದ್ದಾರೆ. ಟಿಕೆಟ್ ಸಿಗುವ ಬಗ್ಗೆ ಚರ್ಚೆ ಮಾಡಿ, ಎಲ್ಲಾ ಹಾಳು ಮಾಡ್ತಾರೆ ಹೀಗೆ ಮಾಡಿ ಅಷ್ಟೆ ಎಂದಿದ್ದಾರೆ ಸಿದ್ದರಾಮಯ್ಯ. ಇನ್ನೂ ಅಶೋಕ್ ಪಟ್ಟಣ್ ಕೂಡ ಎಲ್ಲಾ ಕ್ಷೇತ್ರದಲ್ಲೂ ಡಿ.ಕೆ.ಶಿವಕುಮಾರ್ ಹೀಗೆ ಮಾಡ್ತಿದಾರೆ.‌ ಎಲ್ಲರೂ ಸರೆಂಡರ್ ಆಗಲಿ ನನಗೆ ಅಂತ ಹೀಗೆ ಮಾಡ್ತಿದಾರೆ ಎಂದಿದ್ದಾರೆ. ಆ ಬಳಿಕ ಪ್ರೆಸ್‌ನವರು ಇದ್ದಾರೆ ಎಂದು ಹೇಳಿ ಮಾತು ನಿಲ್ಲಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಎರಡನೇ ತಪ್ಪು..!!

ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲವನ್ನು ಬಹಳ ಲೆಕ್ಕಾಚಾರದಲ್ಲಿ ಮಾಡ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿರೋ ಸಂಗತಿ. ಆದರೆ ಸಾಕಷ್ಟು ಬಾರಿ‌ ಸಿದ್ದರಾಮಯ್ಯ ಲೆಕ್ಕ ತಪ್ಪಿದೆ. ಈ ಬಾರಿ ಕೂಡ. ಸಿ.ಎಂ ಇಬ್ರಾಹಿಂ ಅವರನ್ನು ಅಂಡರ್ ಎಸ್ಟಿಮೇಟ್ ಮಾಡಿದ ವಿಚಾರದಲ್ಲಿ ಕಾಂಗ್ರೆಸ್ ಭಾರೀ ಹೊಡೆತ ತಿನ್ನಲಿದೆ ಎನ್ನುತ್ತಿವೆ ಸ್ಪಷ್ಟ ಮೂಲಗಳು. ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನವನ್ನು ತಪ್ಪಿಸಿದ್ದು, ಮುಸ್ಲಿಂ ಸಮುದಾಯ ಕಣ್ಣು ಕೆಂಪಾಗುವಂತೆ ಮಾಡಿದೆ. ಬೇಕೆಂದಾಗ ಮಾತ್ರ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವುದು, ಆ ಬಳಿಕ ಅಧಿಕಾರವನ್ನು ಬೇಕಾದವರಿಗೆ ಕೊಡಿಸುತ್ತಾರೆ ಎಂದು ಮುಸ್ಲಿಂ ಧರ್ಮ ಗುರುಗಳು ಈಗಾಗಲೇ ಗುಪ್ತ್ ಗುಪ್ತ್ ಸಭೆ ನಡೆಸಿ ಚರ್ಚಿಸಿದ್ದಾರೆ. ಸಿ.ಎಂ ಇಬ್ರಾಹಿಂ ಮತ ಗಳಿಸಿ ಗೆಲ್ಲಿಸುವ ತಾಕತ್ ಇಲ್ಲದೆ ಇರಬಹುದು. ಆದರೆ ಸೋಲಿಸುವ ತಾಕತ್ ಇದೆ ಎನ್ನುವುದು ಮುಂದಿನ ಚುನಾವಣೆಯಲ್ಲಿ ಸಾಬೀತಾಗಲಿದೆ.

ಸಿದ್ದರಾಮಯ್ಯ ಮಾಡಿದ ಮೂರನೇ ತಪ್ಪು..!? ಆಪ್ತರಿಗೆ ಮಣೆ..

ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿಗೆ ಹಲವು ನೇಮಕಾತಿಗಳು ನಡೆದಿದ್ದು, ಅದರಲ್ಲಿ‌ ಬಹುತೇಕ ಸಿದ್ದರಾಮಯ್ಯ ಆಪ್ತರೇ ನೇಮಕವಾಗಿರುವುದು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ರಹದಾರಿ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಉಳಿಸಿಕೊಂಡಿರೋ ನಾಯಕನಾದರೂ ಸಿದ್ದರಾಮಯ್ಯ ಹಿಂಬಾಲಕ ಎನ್ನುವುದು ಡಿ.ಕೆ ಶಿವಕುಮಾರ್ ಬಣಕ್ಕೆ‌ ನುಂಗಲಾರದ ತುತ್ತಾಗಿದೆ. ಇನ್ನೂ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ಬಿ.ಕೆ ಹರಿಪ್ರಸಾದ್‌ಗೆ ಕೊಟ್ಟಿದ್ದು, ಸಿದ್ದರಾಮಯ್ಯ ಆಪ್ತ ಎನಿಸಿಕೊಂಡಿದ್ದ ಸಿ.ಎಂ ಇಬ್ರಾಹಿಂ ಪಕ್ಷ ಬಿಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಆಗುವ ಹಿನ್ನಡೆ. ಸಿ..ಎಂ ಇಬ್ರಾಹಿಂ ಅವರಿಂದ ಆಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಯು.ಟಿ ಖಾದರ್ ಅವರನ್ನು ವಿಧಾಸಭೆ ವಿರೋಧ ಪಕ್ಷದ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ದೊಡ್ಡ ಮಟ್ಟದ ಲಾಭ ನಿರೀಕ್ಷೆ ಮಾಡುವುದು ಕಷ್ಟ.

ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಬಿಜೆಪಿ‌ ಖುಷ್..!!

ಡಿ.ಕೆ ಶಿವಕುಮಾರ್‌ಗೆ ಹಿನ್ನಡೆ ಆಗುತ್ತಿರುವುದು ಕಾಂಗ್ರೆಸ್ ವೇಗಕ್ಕೆ ಸ್ವತಃ ಬ್ರೇಕ್ ಹಾಕಿದಂತೆಯೇ ಸರಿ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ಡಿ.ಕೆ ಶಿವಕುಮಾರ್ ಅಬ್ಬರ ಕಂಡು ಸ್ವತಃ ಬಿಜೆಪಿ‌ ನಾಯಕರು ಕಂಗಾಲಾಗಿದ್ದರು. ಡಿ.ಕೆ ಶಿವಕುಮಾರ್ ವೇಗಕ್ಕೆ ಕಡಿವಾಣ ಹಾಕುವ ಬಗ್ಗೆಯೂ ಮಾತನಾಡಿದ್ದರು. ಇದೀಗ ಬಿಜೆಪಿ ನಾಯಕರ ಆತಂಕವನ್ನು ಕಾಂಗ್ರೆಸ್ ಹೈಕಮಾಂಡ್ ದೂರ ಮಾಡಿದೆ. ಈ ಬೆಳವಣಿಗೆ ಬಿಜೆಪಿ‌ ವಲಯಕ್ಕೆ ಸಂತಸ ಉಂಟು‌ಮಾಡಿದೆ. ಸಿದ್ದರಾಮಯ್ಯ ಹಾಗೂ ಅಶೋಕ್ ಪಟ್ಟಣ್ ನಡುವಿನ ಗುಸುಗುಸು ಸದ್ದನ್ನು ಬಿಜೆಪಿ ಸದ್ಬಳಕೆ ಮಾಡಿಕೊಳ್ಳುವ ಯತ್ನದಲ್ಲಿದೆ. ಈ ಬಗ್ಗೆ ಮಾತನಾಡಿರುವ ಆರ್ ಸಚಿವ ಅಶೋಕ್, ಬೀದಿ ಜಗಳ ಬಯಲಿಗೆ ಬಂದಿದೆ. ಪಾದಯಾತ್ರೆ ಒಗ್ಗಟ್ಟು ಈಗ ಗೊತ್ತಾಯ್ತು ಎಂದು ಅಣಕಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅವರ ಕಿತ್ತಾಟ ಇದೊಂದೇ ಪ್ರಸಂಗ ಅಲ್ಲ. ಕಾಂಗ್ರೆಸ್ ಯಾವಾಗಲೂ ಜನ ಹಿತಕ್ಕಾಗಿ ಕೆಲಸ ಮಾಡಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸೋದು ಮಾಡ್ತಾರೆ, ಅಭಿವೃದ್ಧಿಗಾಗಿ ಬಳಕೆ ಮಾಡಿಲ್ಲ ಎಂದು ಚಾಟಿ ಬೀಸಿದ್ದಾರೆ.

ಕಾಸಿದ್ದರೆ‌ ಕಚ್ಚಾಯ.. ಬರಿ ಮಾತಿಗೆ ಬೆಲೆ ಇಲ್ಲ..!!

ಡಿ.ಕೆ ಶಿವಕುಮಾರ್ ವೇಗಕ್ಕೆ ಕತ್ತರಿ‌ ಹಾಕುವಲ್ಲಿ ಸಿದ್ದರಾಮಯ್ಯ ಯಶಸ್ಸು ಸಾಧಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಯಶಸ್ಸು ಸಿಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಕಾಂಗ್ರೆಸ್ ಕಾರ್ಯಕರ್ತರೂ ಕೂಡ ತಳ್ಳಿ ಹಾಕಲಾರರು. ಸಿದ್ದರಾಮಯ್ಯ ಕೇವಲ‌ ಭಾಷಣ ಮಾಡಬಹುದು. ಜನರು ಚಪ್ಪಾಳೆಯನ್ನೂ ತಟ್ಟಬಹುದು. ಹೌದ ಹುಲಿಯಾ ಎಂದು ಕೂಗಬಹುದು. ಆದರೆ ಮತಗಳಾಗುವುದು ಮಧ್ಯರಾತ್ರಿ. ಅದಕ್ಕೆ ಡಿ.ಕೆ ಶಿವಕುಮಾರ್ ಮುಂದೆ ಇರಬೇಕು. ಕಾಂಗ್ರೆಸ್ ರಥದ ಸಾರಥಿ‌ ಕನಕಪುರದ ಬಂಡೆ ಆದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ, ಇದ್ದೇ ಇದೆ ಜೆಡಿಎಸ್ ನಾಯಕರ ಮನೆ ಬಾಗಿಲು ತಟ್ಟುವುದು.

Related Posts

Don't Miss it !