ಮತ್ತೆ ಮುಳುವಾಗುತ್ತಾ ಲಿಂಗಾಯತ ಪ್ರತ್ಯೇಕ ಧರ್ಮ, 2A ಮೀಸಲಾತಿ ಹೋರಾಟ..?

ಸಿದ್ದರಾಮಯ್ಯ ಸರ್ಕಾರದ ಆಡಳಿತ ಜನಮೆಚ್ಚುವಂತಿತ್ತು. ರಾಜಕೀಯ ಅಸ್ತಿರತೆ ಇರಲಿಲ್ಲ, ಬಡವರಿಗೆ ಸಕಲ ಸೌಕರ್ಯಗಳನ್ನು ಕೊಟ್ಟಿದ್ದರು. ಆದ್ರೆ ಕಾಂಗ್ರೆಸ್​ ಪಕ್ಷ ಕಳೆದ ವಿಧಾನಸಭೆಯಲ್ಲಿ ಸೋಲನ್ನಪ್ಪುವ ಮೂಲಕ ಸಿದ್ದರಾಮಯ್ಯ ಅವರ ಜನಪ್ರಿಯ ಸರ್ಕಾರವನ್ನು ರಾಜ್ಯದ ಜನತೆ ತಿರಸ್ಕಾರ ಮಾಡಿದ್ದರು. ಇದಕ್ಕೆ ಪ್ರಮುಖ ಕಾರಣ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಕುಮ್ಮಕ್ಕು ಕೊಟ್ಟಿದ್ದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುನ್ನಲೆಗೆ ಬಂದಿದೆ. ಕಳೆದ ಬಾರಿ ಹೋರಾಟ ರೂಪಿಸಿದ್ದ ಮಾಜಿ ಸಚಿವ ಎಂಬಿ ಪಾಟೀಲ್​, ಈ ಬಾರಿ ಕೂಡ ಆ ಬಗ್ಗೆ ಮಾತನಾಡಿದ್ದರು. ಆದರೆ ಹೋರಾಟ ಈಗ ಮಾಡುವುದಿಲ್ಲ, ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣಕ್ಕೆ ಚುನಾವಣೆ ಮುಗಿದ ಬಳಿಕ ಹೋರಾಟ ಮಾಡುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಒಟ್ನಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡ್ತೇವೆ ಎನ್ನುವುದನ್ನ ಖಚಿತ ಮಾಡಿದ್ದಾರೆ.

ಧರ್ಮ ಒಡೆದು ರಾಜಕೀಯ, ಜನರ ಅಸಹನೆ..!

ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಹಾಗೂ ವೀರಶೈವ ಸಮುದಾಯಗಳನ್ನು ಇಬ್ಭಾಗ ಮಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎನ್ನುವುದೇ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಭಾಷಣದ ಹೈಲೇಟ್ಸ್​ ಆಗಿತ್ತು. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಲಿಂಗಾಯತ ಧರ್ಮ ಹುಟ್ಟುಹಾಕುತ್ತಿದ್ದಾರೆ ಎನ್ನುವುದನ್ನು ವೀರಶೈವ ಸಮುದಾಯ ಜನರು ಬಹಳ ಗಟ್ಟಿಯಾಗಿ ನಂಬಿದ್ರಿಂದಲೇ ಕಾಂಗ್ರೆಸ್​ ಹತ್ತು ಹಲವು ಕ್ಷೇತ್ರಗಳಲ್ಲಿ ಕಡಿಮೆ ಮತಗಳ ಹಂತರದಲ್ಲಿ ಸೋತಿತ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿತ್ತು. ಈ ಬಾರಿ ಕೂಡ ಕಾಂಗ್ರೆಸ್​ ತನ್ನ ಹಳೆಯ ತಪ್ಪನ್ನೇ ಮುಂದುವರಿಸುವ ಕಸರತ್ತು ಶುರು ಮಾಡಿದ್ಯಾ..? ಎನ್ನುವ ಆಲೋಚನೆ ಕೂಡ ಕಾರ್ಯಕರ್ತರ ಮನದಲ್ಲಿ ಗೊಂದಲ ಉಂಟು ಮಾಡುತ್ತಿದೆ. ಕಾಂಗ್ರೆಸ್​ ಕಾರ್ಯಕರ್ತರು ಕಟ್ಟಿಕೊಳ್ಳುತ್ತಿದ್ದ ಕನಸಿಗೆ ಕೊಳ್ಳಿ ಬೀಳುತ್ತಾ ಎನ್ನುವ ಭಯ ಆವರಿಸುತ್ತಿದೆ.

Read this also:

ಕಾಂಗ್ರೆಸ್​ನ ಕಚ್ಚಾಟವೇ ಬಿಜೆಪಿಗೆ ಲಾಭ..!

ಬಿಜೆಪಿ ಸರ್ಕಾರ ಸಾರ್ವಜನಿಕರಲ್ಲಿ ಸೃಷ್ಟಿಸುತ್ತಿರುವ ಅಸಹನೆಯ ಕಟ್ಟೆ ಬಿರುಕು ಬಿಟ್ಟಿದೆ. ಮುಂದಿನ ದಿನಗಳಲ್ಲಿಯೂ ಬಿಜೆಪಿ ಜನಮಾನಸದಲ್ಲಿ ಕಮಾಲ್​ ಮಾಡುವ ಸಾಧ್ಯತೆ ತೀರ ಕಡಿಮೆ. ಕಾಂಗ್ರೆಸ್​ ಪಕ್ಷ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ಮಾತುಗಳು ಈಗಾಗಲೇ ಕಾರ್ಯಕರ್ತದ ಆತ್ಮವಿಶ್ವಾಸದ ಮಾತುಗಳಾಗಿವೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕೆಣಕಿದ ಎಂಬಿ ಪಾಟೀಲ್​, ಆ ಬಳಿಕ ಹೈಕಮಾಂಡ್​ ನಾಯಕರ ಸೂಚನೆಯಂತೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಕಾಂಗ್ರೆಸ್​​ಗೂ ಲಿಂಗಾಯತ ಧರ್ಮ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳಿದ್ದಾರೆ. ಜೊತೆಯಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರುವ ಕಾರಣಕ್ಕೆ ವಿಧಾನಸಬೆ ಚುನಾವಣೆ ಮುಗಿದ ಬಳಿಕ ಲಿಂಗಾಯತ ಧರ್ಮ ಹೋರಾಟ ನಡೆಸುತ್ತೇವೆ ಎಂದೂ ಹೇಳಿದ್ದಾರೆ. ಅಂದರೆ ಲಿಂಗಾಯತ ಪ್ರತ್ಯೇಕ ಧರ್ಮ ನಿಶ್ಚಿತ, ಆದರೆ ಚುನಾವಣೆ ಮೇಲೆ ಪರಿಣಾಮ ಬೀರದಂತೆ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನುವುದು ಬರೆದಿಟ್ಟ ಪುಸ್ತಕ ಎನ್ನುವಂತಾಗಿದೆ. ಎಂಬಿ ಪಾಟೀಲ್​ಗೆ ತಿರುಗೇಟು ಕೊಟ್ಟಿರುವ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮೊದಲು ತನ್ನ ಕ್ಷೇತ್ರದಲ್ಲಿ ಗೆದ್ದು ಬರಲಿ ಎಂದು ಟಾಂಗ್​ ಕೊಟ್ಟಿದ್ದಾರೆ.

Read this also;

ಲಿಂಗಾಯತ ಧರ್ಮ ಸ್ಥಾಪನೆಯಿಂದ ಏನಾಗುತ್ತೆ..?

ಲಿಂಗಾಯತ ಧರ್ಮ ಹಿಂದೂ ಧರ್ಮದ ಒಂದು ಭಾಗ ಎನ್ನುವುದನ್ನು ವೀರಶೈವ ಸಮುದಾಯದ ವಾದವಾಗಿದೆ. ಆದರೆ ಲಿಂಗಾಯತ ಧರ್ಮ ಎನ್ನುವುದು ಹಿಂದೂ ಧರ್ಮದಿಂದ ಹೊರ ಬಂದ ಬಸವಣ್ಣ ಸ್ಥಾಪನೆ ಮಾಡಿದ ಪ್ರತ್ಯೇಕ ಧರ್ಮ ಎನ್ನುವುದು ಲಿಂಗಾಯತ ಸಮುದಾಯ ವಾದ. ಲಿಂಗಾಯತ ಧರ್ಮ ಸ್ಥಾಪನೆಯೇ ಮೂರ್ತಿ ಪೂಜೆಯನ್ನು ವಿರೋಧಿಸುವುದಾಗಿತ್ತು. ಸಮಾಜದಲ್ಲಿದ್ದ ಅಸಹಿಷ್ಣುತೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ಬಸವಣ್ಣ ಸರ್ವ ಧರ್ಮದ ಜನರಿಗೂ ಲಿಂಗದೀಕ್ಷೆ ಕೊಟ್ಟು ಧರ್ಮ ಸ್ಥಾಪನೆ ಮಾಡಿದ್ದರು. ಆದರೆ ಕಾಲಕ್ರಮೇಣ ಮತ್ತೆ ಹಿಂದೂ ಧರ್ಮದ ಜೊತೆ ಜೊತೆಗೆ ಲಿಂಗಾಯತ ಧರ್ಮ ಕೂಡ ಸಮಾಗಮ ಆಗಿದೆ. ಆದರೆ ಬಸವಣ್ಣನ ಆಶಯ ಹಳ್ಳಹಿಡಿದಿದೆ. ಇದೇ ಕಾರಣದಿಂದ ಲಿಂಗಾಯತ ಧರ್ಮ ಪ್ರತ್ಯೇಕ ಆಗಬೇಕು. ಪ್ರತ್ಯೇಕ ಧರ್ಮದ ಮಾನ್ಯತೆ ಒಮ್ಮೆ ಸಿಕ್ಕರೆ 2A ಮೀಸಲಾತಿ ಕೇಳುವ ಪ್ರಮಯವೇ ಇರುವುದಿಲ್ಲ. ಅಲ್ಪಸಂಖ್ಯಾತ ಸ್ಥಾನಮಾನ ಬರುವುದರಿಂದ ಸಮುದಾಯಕ್ಕೆ ಸಾಕಷ್ಟು ಅನುಕೂಲಗಳು ಸಿಗುತ್ತವೆ ಎನ್ನುವುದು ಪ್ರತ್ಯೇಕ ಧರ್ಮ ಆಗ್ರಹ ಮಾಡುವ ನಾಯಕರ ಆಶಯ. ಆದರೆ ಹಿಂದೂ ಧರ್ಮದ ಭಾಗವೇ ಆಗಿದ್ದೇವೆ. ನಾವ್ಯಾಕೆ ಪ್ರತ್ಯೇಕ ಧರ್ಮದ ಬೇಡಿಕೆ ಇಡಬೇಕು ಎನ್ನುವುದು ವೀರಶೈವ ಸಮುದಾಯದ ವಾದ. ಲಿಂಗಾಯತರನ್ನೂ ಬಿಟ್ಟುಕೊಡಲೂ ವೀರಶೈವರು ಸಿದ್ಧರಿಲ್ಲ. ಒಟ್ಟಾರೆ, ಧರ್ಮ ವಿಭಜನೆ ಹಿಡಿದು ಕಾಂಗ್ರೆಸ್​ ಕಚ್ಚಾಡಿದ್ರೆ ತಮ್ಮ ಗುಂಡಿ ತಾವೇ ತೋಡಿಕೊಳ್ಳುವುದರಲ್ಲಿ ಅನುಮಾನವಿಲ್ಲ.

Related Posts

Don't Miss it !