ಕೇಂದ್ರದ ವಿರುದ್ಧ ಹೋರಾಟದ ಮನಸ್ಸಿದೆ.. ಗಂಭೀರತೆ ಕಳೆದು ಹೋಗಿದೆ..

the public spot

ಉತ್ತರ ಪ್ರದೇಶದ ಲಖೀಮ್​ಪುರದಲ್ಲಿ ನಾಲ್ವರು ರೈತರ ಭೀಕರ ಹತ್ಯೆ ನಡೆದಿದೆ. ಗಾಂಧಿ ಜಯಂತಿ ಮರುದಿದ ಅಂದರೆ ಭಾನುವಾರ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹತ್ತಿಸಿ ಪ್ರತಿಭಟನೆ ಹತ್ತಿಕ್ಕುವ ಯತ್ನ ನಡೆದಿತ್ತು. ಆದರೆ ಈ ವೇಳೆ ನಾಲ್ವರು ರೈತರು ಹುತಾತ್ಮರಾದರು. ಈ ಬಗ್ಗೆ ಕೇಂದ್ರ ಸರ್ಕಾರ ಅಥವಾ ಸಂಬಂಧಪಟ್ಟ ಹಿರಿಯ ನಾಯಕರು ತುಟಿಕ್ ಪಿಟಿಕ್​ ಎಂದಿಲ್ಲ. ಕಾಂಗ್ರೆಸ್​ ಪ್ರತಿಭಟನೆ ಹಮ್ಮಿಕೊಂಡಿದೆ. ಉತ್ತರ ಪ್ರದೇಶ 45 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ. ಆದರೆ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಅಜೇಯ್​ ಮಿಶ್ರಾ ಪುತ್ರನೇ ಕಾರನ್ನು ಉದ್ದೇಶಪೂರ್ವಕವಾಗಿ ರೈತರ ಮೇಲೆ ಹತ್ತಿಸಿದ್ದು ಎಂದು ನೂರಾರು ರೈತರು ಹೇಳುತ್ತಿದ್ದರೂ ಪೊಲೀಸರು ಮಾತ್ರ ಆರೋಪಿಯನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲ. ಎಲ್ಲಾ ವಿಚಾರಗಳ ಬಗ್ಗೆಯೂ ನಿಮಿಷ ಮಾತ್ರದಲ್ಲಿ ಟ್ವೀಟ್​ ಮಾಡುವ ಪ್ರಧಾನಿ ನರೇಂದ್ರ ಮೋದಿ ಮೌನ ಜನರನ್ನು ಮತ್ತಷ್ಟು ಆಕ್ರೋಶಕ್ಕೆ ಈಡಾಗುವಂತೆ ಮಾಡಿದೆ.

ರೈತರನ್ನು ಮುಗಿಸುವ ಕೆಲಸ ದೇಶದಲ್ಲಿ ಆಗ್ತಿದೆ..!

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್​ ಗಾಂಧಿ, ಕೇಂದ್ರ ಸರ್ಕಾರ ರೈತರನ್ನು ಹಂತಹಂತವಾಗಿ ವ್ಯವಸ್ಥಿತವಾಗಿ ಮುಗಿಸುತ್ತಿದೆ. ಮೊದಲಿಗೆ ಭೂಸ್ವಾಧೀನ ಕಾನೂನು ತಿದ್ದುಪಡಿ ಜಾರಿಗೆ ತಂದರು. ಆ ಬಳಿಕ ರೈತ ವಿರೋಧಿ ಆಗಿರುವ‌ 3 ಕೃಷಿ ಕಾಯಿದೆಗಳನ್ನು ತಂದರು. ಈಗ ರೈತರ ಮೇಲೆ ದಾಳಿ ಮಾಡಿ ಬಲಿ ಪಡೆಯಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಖೀಂಪುರ್ ಖೇರಿ ಹಿಂಸಾಚಾರ ನಡೆದ ಸ್ಥಳಕ್ಕೆ ತೆರಳಲು ಅವಕಾಶ ನಿರಾಕರಿಸಲಾಗಿದೆ. ನಿಷೇಧಾಜ್ಞೆ ಜಾರಿ ಆಗಿದ್ದಾಗ 4 ಜನಕ್ಕಿಂತ ಹೆಚ್ಚು ಹೋಗುವಂತಿಲ್ಲ, ಹಾಗಾಗಿ ನಾವು 3 ಜನ ಲಖೀಂಪುರ್​ಗೆ ಹೋಗುತ್ತಿದ್ದೇವೆ ಎಂದಿದ್ದಾರೆ. ಹಾತ್ರಸ್ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಲಾಗಿತ್ತು. ನಾವು ಅಲ್ಲಿಗೆ ಹೋಗಿದ್ದರಿಂದಲೇ ತನಿಖೆ ನಡೆಯುವಂತಾಯಿತು. ಈಗಲೂ ತನಿಖೆ ಆಗಲಿ ಎಂದು ಲಖೀಂಪುರ್​ಗೆ ಹೋಗುತ್ತಿದ್ದೇವೆ ಎಂದಿದ್ದಾರೆ.

Read this also;

ದೇಶದಲ್ಲಿ ಸರ್ವಾಧಿಕಾರಿ ನೀತಿ ಅನುಸರಿಸಲಾಗ್ತಿದೆ..!

ಬಿಜೆಪಿ ಹಾಗೂ RSS ರೈತರನ್ನು ನಿಯಂತ್ರಿಸಲು ಯತ್ನಿಸುತ್ತಿವೆ. ರೈತರನ್ನು ಮಾತ್ರವಲ್ಲದೆ ಎಲ್ಲರನ್ನೂ ‌ನಿಯಂತ್ರಿಸಲು ಯತ್ನಿಸುತ್ತಿದ್ದು, ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆ. ದೇಶಗಳಲ್ಲಿ ಭಯಂಕರ ಲೂಟಿ ಆಗುತ್ತಿದೆ. ಜನರ ಹಣ, ರೈತರ ಭೂಮಿಯನ್ನು ಲೂಟಿ ಮಾಡಲಾಗುತ್ತಿದೆ. ಈ ಅನ್ಯಾಯವನ್ನು ಯಾರೂ ಕೇಳಬಾರದೆಂದು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಒಂದು ವಿರೋಧ ಪಕ್ಷವಾಗಿ ಹೇಗೆ ನಡೆದುಕೊಳ್ಳಬೇಕು ಅದೇ ರೀತಿಯಲ್ಲಿ ರಾಹುಲ್​ ಗಾಂಧಿ ನಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ನಾಯಕರು ಲಖೀಂಪುರ ಹತ್ಯಾಕಾಂಡದ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾಗಿರುವುದು ಸತ್ಯವೇ ಆಗಿದೆ. ಆದರೆ ಕಾಂಗ್ರೆಸ್​ ಹೋರಾಟ ಗಂಭೀರತೆ ಕಳೆದುಕೊಳ್ಳುವ ಹಾಗೆ ಆ ಪಕ್ಷದ ನಾಯಕರೇ ಮಾಡಿಕೊಳ್ಳುತ್ತಿದ್ದಾರೆಯೇ..? ಎನ್ನುವ ಅನುಮಾವನ್ನು ಮೂಡಿಸುತ್ತಿದೆ.

Read this also;

ಹೋರಾಟದಲ್ಲಿ ಕಾಂಗ್ರೆಸ್​ಗೆ ಬೇಕು ಗಂಭೀರತೆ..!

ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಲಖೀಂಪುರ್​ ಖೇರಿ ಹಿಂಸಾಚಾರ ನಡೆದ ಸ್ಥಳಕ್ಕೆ ತೆರಳಿದ್ದರು. ಅಂದಿನಿಂದ ಪ್ರಿಯಾಂಕಾ ಗಾಂಧಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಪ್ರಿಯಾಂಕಾ ಗಾಂಧಿಯೇ ರೈತರ ಮೇಲೆ ಕಾರು ಹತ್ತಿಸಿದ್ದ ವಿಡಿಯೋ ರಿಲೀಸ್​ ಮಾಡಿದ್ದರು. ಅದರ ಜೊತೆಗೆ ಪ್ರಿಯಾಂಕಾ ಗಾಂಧಿ ಕಸ ಗುಡಿಸುವ ವಿಡಿಯೋ ಕೂಡ ರಿಲೀಸ್​ ಆಗಿತ್ತು. ಆದರೆ ಪೊಲೀಸರು ಗೆಸ್ಟ್​ಹೌಸ್​ಗೆ ಕರೆದುಕೊಂಡು ಬಂದಾಗ ಕ್ಲೀನ್​ ಮಾಡದೆ ಇರುವ ರೂಮಿಗೆ ಕರೆದುಕೊಂಡು ಬಿಟ್ಟುಬಿಟ್ಟರೇ..? ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದೆ. ವಿಡಿಯೋ ಮಾಡುವ ಉದ್ದೇಶದಿಂದಲೇ ಕಸ ಗುಡಿಸಿದ್ದಾರೆ ಎನ್ನುವುದು ಕಾಂಗ್ರೆಸ್​ ಪಕ್ಷದ ವಿರೋಧಿಗಳ ಆರೋಪ. ಅದೇ ರೀತಿ ಕಾಂಗ್ರೆಸ್​ ನಾಯಕ ಡಿ.ಕೆ ಶಿವಕುಮಾರ್​​ ಮಾಧ್ಯಮಗಳ ಎದುರು ಮಾತನಾಡುವಾಗ ಜಲಿಯನ್​ ವಾಲಾಬಾಗ್​ ಎನ್ನುವ ಉಚ್ಛಾರಣೆ ತೊದಲಿರುವುದು ಎಲ್ಲಾ ಕಡೆಗಳಲ್ಲೂ ಸಾಕಷ್ಟು ವೈರಲ್​ ಆಗಿದೆ. ಮದ್ಯಪಾನ ಮಾಡಿ ಮಾತನಾಡಿರುವುದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಲಖೀಂಪುರದ ಅನ್ಯಾಯ ಗಂಭೀರತೆ ಇಲ್ಲದ ಕಾಂಗ್ರೆಸ್ ಎಡವಟ್ಟುಗಳ ನಡುವೆ ಕಳೆದುಹೋಗುತ್ತಿದೆ.

Related Posts

Don't Miss it !