ಕಾಂಗ್ರೆಸ್ ಮಹಿಳಾ ಲೀಡರ್‌ಗೆ ಯುವ ಸಂಸದರ ಬೆದರಿಕೆ..!?

ಕಾಂಗ್ರೆಸ್​ ವಕ್ತಾರೆ ಭವ್ಯ ನರಸಿಂಹಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಾಂಗ್ರೆಸ್​ ಆರೋಪ ಮಾಡಿದೆ. 50ಕ್ಕೂ ಹೆಚ್ಚು ಬಾರಿ ತೇಜೋವಧೆ ಮಾಡುವ ಕರೆಗಳು ಬಂದಿವೆ. ಈ ಕರೆಗಳ ಬಗ್ಗೆ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ. ಇದು ಒಬ್ಬ ಮಹಿಳೆ ಪ್ರಶ್ನೆಯಲ್ಲ, ದೇಶದ ಮಹಿಳೆಯರ ಪ್ರಶ್ನೆ. ಇಂದು ರಾಜಕೀಯಕ್ಕೆ ಹೆಣ್ಣುಮಕ್ಕಳೇ ಬರುತ್ತಿಲ್ಲ. ಹೆಣ್ಣುಮಕ್ಕಳನ್ನ ಮನೆಯಿಂದ ಹೊರಗೆ ಕಳಿಸಲ್ಲ. ಇಂತಹ ಸನ್ನಿವೇಶದಲ್ಲಿ ಭವ್ಯ ನರಸಿಂಹಮೂರ್ತಿ ಎದುರಿಸಿ ನಿಲ್ಲುತ್ತಿದ್ದಾರೆ. ಸಮಾಜದಲ್ಲಿನ ತಪ್ಪನ್ನ ಎತ್ತಿ ಹಿಡಿಯುತ್ತಾರೆ. ಬಿಂದುಗೌಡ ವಿರುದ್ಧವೂ ತೇಜೋವಧೆ ಮಾಡ್ತಿದ್ದಾರೆ, ಸೋನಿಯಾ, ಪ್ರಿಯಾಂಕಗಾಂಧಿಯನ್ನೂ ಅವಹೇಳನ ಮಾಡ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಫೇಕ್ ಐಡಿಗಳ ಮೂಲಕ ತೇಜೋವಧೆ ಮಾಡ್ತಿದ್ದಾರೆ. ಇದರ ಹಿಂದಿರುವವರು ಯಾರು..? ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರ ಬದುಕಿದ್ದರೆ ತನಿಖೆ ಮಾಡಿ’

ಭವ್ಯ ನರಸಿಂಹಮೂರ್ತಿ ಅವರಿಗೆ ಫೋನ್ ಕರೆ ಮಾಡಿ ಧಮ್ಕಿ ಹಾಕ್ತಾರೆ, ಫೇಕ್ ಐಡಿಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಕೆಲಸ ಮಾಡುತ್ತಿದ್ದಾರೆ, ಆದರೂ ಅವರನ್ನ ಪತ್ತೆ ಹಚ್ಚೋಕೆ ಪೊಲೀಸರಿಗೆ ಸಾಧ್ಯವಾಗ್ತಿಲ್ವಾ? ಎಂದು ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಪ್ರಶ್ನಿಸಿದ್ದಾರೆ. ಮಹಿಳೆಯರ ಬೆಳವಣಿಗೆ ಸಹಿಸದವರು ಯಾರು? ಎನ್ನುವುದು ಬಹಿರಂಗವಾಗಬೇಕು. ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬನ್ನಿ, ನಿಮ್ಮ ಧ್ಯೇಯ ಸಿದ್ಧಾಂತಗಳ ಬಗ್ಗೆ ಚರ್ಚೆಗೆ ಬನ್ನಿ. ಅದನ್ನು ಬಿಟ್ಟು ಈ ರೀತಿ ತೇಜೋವಧೆ ಮಾಡಬೇಡಿ ಎಂದು ಗುಡುಗಿದ್ದಾರೆ. ನನಗೂ ಇಂತಹ ತೇಜೋವದೆ ಮಾಡಿದ್ದರು. ನಾನು‌ ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ್ದೆ, ಆಗ ಇದರ ಹಿಂದೆ ಯುವರಾಜಕಾರಣಿಗಳು ಇದ್ದಾರೆನ್ನುವುದು ಗೊತ್ತಾಯ್ತು. ನಿಮ್ಮಲ್ಲಿ ಯಾರು ಹೆಣ್ಣು ಮಕ್ಕಳು ರಾಜಕಾರಣದಲ್ಲಿ ಇಲ್ವಾ? ಶೋಭಕ್ಕ, ಶಶಿಕಲಾ ಜೊಲ್ಲೆ ಎಲ್ಲರೂ ಹೆಣ್ಣುಮಕ್ಕಳೇ ಅಲ್ವಾ ..? ಯಾಕೆ ಅವರ ಬಗ್ಗೆ ಮಾತನಾಡಲ್ಲ ಎಂದು ಕಿಡಿಕಾರಿದ್ದಾರೆ. ಸರ್ಕಾರ ಜೀವಂತವಿದ್ದರೆ ತನಿಖೆ ಮಾಡಬೇಕು, ಇದರ ಹಿಂದೆ ಇಬ್ಬರು ಯುವ ಸಂಸದರು ಇರುವ ಬಗ್ಗೆ ಅನುಮಾನವಿದೆ. ಅವರನ್ನು ಪತ್ತೆ ಹಚ್ಚಬೇಕು ಎಂದು ಪುಷ್ಪಾ ಅಮರನಾಥ್ ಆಗ್ರಹ ಮಾಡಿದ್ದಾರೆ.

ಬೇರೆ ರಾಜ್ಯದ ಸಿಮ್, ಕನ್ನಡದಲ್ಲೇ ಮಾತು..!

ನಿಂದನೆಗೆ ಒಳಗಾಗಿರುವ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಮಾತನಾಡಿ, ಹೆಣ್ಣುಮಕ್ಕಳನ್ನ ಹೆದರಿಸೋಕೆ ಹೀಗೆಲ್ಲಾ ಮಾಡ್ತಿದ್ದಾರೆ, ನಾನು ಕೆಪಿಸಿಸಿ ಮಿಡಿಯಾ ಫ್ಯಾನಲಿಸ್ಟ್ ಆಗಿದ್ದು, ಫೇಸ್​ಬುಕ್​ನಲ್ಲಿ ವಿವರಣೆ ಕೊಡ್ತೇನೆ. ಅದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಕಳೆದ ವಾರ ಫೇಸ್​ಬುಕ್ ಹ್ಯಾಕ್ ಮಾಡಿದ್ದರು. ದೂರು ಕೊಟ್ಟು ಅದನ್ನ ಸರಿಪಡಿಸಿಕೊಂಡೆ, ಆದರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಂದು ಡಿಬೇಟ್​​ಗೆ ಹೋಗಿ ಬಂದ ನಂತರ ಫೋನ್ ಕಾಲ್ ಬರುತ್ತೆ, ಹೀಗೆ ನಿರಂತರವಾಗಿ ನನಗೆ ಕಾಲ್ ಬರುತ್ತಲೇ ಇರುತ್ತದೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸೈಬರ್ ಕ್ರೈಂ ವಿಭಾಗಕ್ಕೂ ನಾನು ದೂರು ಕೊಟ್ಟಿದ್ದೇನೆ. ಪೊಲೀಸ್ ಆಯುಕ್ತರಿಗೂ ನಾನು ದೂರು ಸಲ್ಲಿಸಿದ್ದೇನೆ. ಡಿಸಿಪಿಯವರ ಬಳಿಗೂ ನಾನು ‌ಹೋಗಿದ್ದೆ, ನಮ್ಮ ವ್ಯಾಪ್ತಿಗೆ ನಿಮ್ಮ ಕೇಸ್ ಬರಲ್ಲ ಅಂತ ವಾಪಸ್ ಕಳಿಸಿದ್ರು. ನನಗೆ ಮತ್ತೆ ಎರಡು ದಿನಗಳಿಂದ ಕಾಲ್ ಬರುತ್ತಲೇ ಇವೆ. ಮತ್ತೆ ದೂರು ಕೊಡೋಕೆ ಹೋದ್ರೆ ನಮಗೇ ಪ್ರಶ್ನೆ ಕೇಳ್ತಾರೆ. ಬೇರೆ ಬೇರೆಯ 50 ನಂಬರ್​ಗಳಿಂದ ಕಾಲ್ ಬರ್ತಿದೆ, ಆದ್ರೆ ಬೆದರಿಕೆ ಕರೆಗಳಿಂದ ನನಗೇನು ಭಯವಿಲ್ಲ ಎಂದಿದ್ದಾರೆ.

ಇದು ಒಬ್ಬರಿಂದ ಬರುತ್ತಿರುವ ಕರೆಗಳಲ್ಲ, ಇದೊಂದು ನಿಯೋಜಿತ ಕೆಲಸ ಎಂದು ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ. ಜೂನ್ 9 ರಿಂದ ನನಗೆ ನಿರಂತರವಾಗಿ ಕರೆಗಳು ಬರ್ತಿವೆ. ಇವತ್ತಿಗೂ 50 ನಂಬರ್​ಗಳಿಂದ ಕರೆಗಳು ಬರುತ್ತಲೇ ಇವೆ. ಕ್ರೈಂ ಬ್ರಾಂಚ್​ಗೆ ದೂರು ಕೊಡಲು ಹೊರಟಿದ್ದೆ, ಆಗಲೂ ಕಾಲ್ ಬಂತು. ಪೊಲೀಸರಿಗೆ ನೀವೇ ಮಾತನಾಡಿ ಅಂತ ಕೊಟ್ಟೆ, ಸಿಮ್​​ಗಳು ಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಶನ್ ಆಗಿವೆ. ಆದರೂ ಅವರು ಕನ್ನಡದಲ್ಲೇ ಮಾತನಾಡಿ ಬೆದರಿಕೆ ಹಾಕ್ತಾರೆ ಎಂದು ಅವಲತ್ತುಕೊಂಡಿದ್ದಾರೆ.

ದೇಶದಲ್ಲಿ ಮಹಿಳೆಯರಿಗೆ ಇಲ್ಲ ರಕ್ಷಣೆ..!

ಜಯನಗರ ಕಾಂಗ್ರೆಸ್ ಶಾಸಕಿ ‌ಸೌಮ್ಯಾ ರೆಡ್ಡಿ‌ ಮಾತನಾಡಿ ಭವ್ಯಗೆ ಥ್ರೆಟ್ ಕಾಲ್ ಬಂದಿರುವುದು ಸತ್ಯ. ರಾಜಕೀಯದಲ್ಲಿ ಹಲವು ಹೆಣ್ಣುಮಕ್ಕಳಿದ್ದಾರೆ, ರಾಜ್ಯದಲ್ಲಿ 4% ಹೆಣ್ಣು ಮಕ್ಕಳು ಇದ್ದಾರೆ, ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದಿದ್ದಾರೆ. ಇತ್ತೀಚೆಗೆ ರಾಜ್ಯ ಹಾಗೂ ರಾಷ್ಟ್ರ ದಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ, ಹೆಣ್ಣು ಮಕ್ಕಳಿಗೆ ಬೆದರಿಕೆ ಹಾಕುವುದು, ಅವರನ್ನ ಭಯದಲ್ಲಿರಿಸುವ ಪ್ರಯತ್ನ ಮಾಡುವುದು ಆಗ್ತಿದೆ. ರೇಪ್ ಥ್ರೆಟ್ಸ್, ಡೆತ್ ಥ್ರೆಟ್ಸ್ ಮಾಡಿದರೆ ಹೇಗೆ..? ಪ್ರಶ್ನಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡ್ತಿದ್ದಾರೆ, ಮಹಿಳೆಯರನ್ನ ಲಕ್ಷ್ಮಿ,ಸರಸ್ವತಿ ಅಂತ ಪೂಜೆ ಮಾಡ್ತೇವೆ. ನಮಗೆ ಪೂಜೆ ಬೇಡ, ಮರ್ಯಾದೆ ಕೊಟ್ಟರೆ ಸಾಕು. ಸೋಶಿಯಲ್ ಮಿಡಿಯಾ ಸುರಕ್ಷಿತವಾಗಿಲ್ಲ, ಮಹಿಳೆಯರ ಬಗ್ಗೆ ಇಷ್ಟೊಂದು ಥ್ರೆಟ್ ಇದೆ ಅಂದರೆ ಹೇಗೆ..!? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ರು. ಸರ್ಕಾರ ಇದನ್ನ ಗಂಭೀರವಾಗಿ ಸರ್ಕಾರ ತೆಗೆದುಕೊಳ್ಳಬೇಕು. ಬಿಜೆಪಿಯಲ್ಲೂ ಬಹಳಷ್ಟು ಮಹಿಳೆಯರಿದ್ದಾರೆ, ಅವರ ಬಗ್ಗೆಯೂ ಈ ರೀತಿ ಥ್ರೆಟ್ ಬಂದರೆ ಹೇಗೆ..? ದಯವಿಟ್ಟು ಇದರ ಬಗ್ಗೆ ತನಿಖೆ ಮಾಡಿ. ಸದನದಲ್ಲೂ ಇದನ್ನ ನಾನು ಸರ್ಕಾರದ ಗಮನಕ್ಕೆ ತರ್ತೇನೆ ಎಂದು ತಿಳಿಸಿದ್ದಾರೆ.

ತನಿಖೆ ಮಾಡಿಸ್ತಾರ ಬಸವರಾಜ ಬೊಮ್ಮಾಯಿ..?

ಕೊರೊನಾ ಸಮಯದಲ್ಲಿ ಸರ್ಕಾರವನ್ನು ಟೀಕೆ ಮಾಡುವುದನ್ನು ಸಹಿಸದ ಯಾರೋ ಕಿಡಿಗೇಡಿಗಳು ಈ ರೀತಿಯ ಬೆದರಿಕೆ ಕರೆ ಮಾಡೋದು ಸಾಮಾಜಿಕ ಜಾಲ ತಾಣದಲ್ಲಿ ತೇಜೋವಧೆ ಮಾಡುವ ಕಾರ್ಯ ಮಾಡಿರಬಹುದು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ರೀತಿಯ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಾರೆ ಎಂದೆನಿಸುವುದಿಲ್ಲ. ಈ ಬಗ್ಗೆ ಕ್ರಮಕೈಗೊಂಡರೆ ಬಸವರಾ ಬೊಮ್ಮಾಯಿ ಅವರ ಮೇಲಿನ ಗೌರವ ಹೆಚ್ಚಾಗಲಿದೆ. ಇಬ್ಬರು ಯುವ ಸಂಸದರ ಮೇಲೆ ಅನುಮಾನವಿದೆ ಎಂದು ಕಾಂಗ್ರೆಸ್​ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ. ಈ ಮಾತು ಸತ್ಯವೇ ಆಗಿದ್ದರೆ ಆ ಸಂಸದರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಕಳೆದುಕೊಂಡಂತೆಯೇ ಸರಿ.

Related Posts

Don't Miss it !