‘ಹಿಂದೂ ಪದದ ಅರ್ಥ ಕೇಳಿದ್ರೆ ನಾಚಿಕೆ ಆಗುತ್ತದೆ’ ಮೂಲ ಕೆಣಕಿದ ಸತೀಶ್​ ಜಾರಕಿಹೊಳಿ..!

ಕಾಂಗ್ರೆಸ್​ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ, ಸಮಾವೇಶ ಒಂದರಲ್ಲಿ ಮಾತನಾಡಿ, ಹಿಂದೂ ಧರ್ಮ ಅಂದ್ರೆ ಏನು..? ಹಿಂದೂ ಧರ್ಮದ ಮೂಲ ಯಾವುದು..? ಹಿಂದೂ ಧರ್ಮ ಅಂದ್ರೆ ಅದರ ಅರ್ಥ ಏನು..? ಅನ್ನೋ ವಿಚಾರದಲ್ಲಿ ಮಾತನಾಡಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಮಾತನಾಡಿರುವ ಸತೀಶ್​ ಜಾರಕಿಹೊಳಿ, ಹಿಂದೂ ಧರ್ಮ.. ಹಿಂದೂ ಶಬ್ಧ ಎಲ್ಲಿಂದ ಬಂತು..? ಹಿಂದೂ ಶಬ್ಧ ನಮ್ಮದಾ..? ಹಿಂದೂ ಅನ್ನೋದು ಪರ್ಷಿಯನ್ ಮೂಲದಿಂದ ಬಂದಿರುವ ಪದ. ಪರ್ಷಿಯನ್ ಎಲ್ಲಿದೆ..? ಇರಾನ್, ಇರಾಕ್​, ಕಜಕಿಸ್ತಾನ್, ಉಜ್ಬೇಕಿಸ್ತಾನ್​ ಮೂಲದ್ದು. ಹಿಂದೂ ಪದಕ್ಕೂ ಭಾರತಕ್ಕೂ ಏನ್ ಸಂಬಂಧ..? ನೀವು ಹೇಗೆ ಹಿಂದೂ ಆಗ್ತೀರಿ..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹಿಂದೂ ಪದದ ಮೂಲದ ಬಗ್ಗೆ ಚರ್ಚೆ ಆಗ್ಬೇಕು ಅಂತಾನೂ ಆಗ್ರಹ ಮಾಡಿದ್ದಾರೆ.

ಹಿಂದೂ ಅನ್ನೋ ಪದ ಬಳಕೆ ಬೇಕಾ..? ಈ ಬಗ್ಗೆ ಚಿಂತನೆ ನಡೆಸಿ..!

ನಾನು ಹೇಳಿದ್ದನ್ನೇ ಕೇಳಬೇಕು ಅಂತಿಲ್ಲ. ನೀವು ಇದರ ಬಗ್ಗೆ ಪರಿಶೀಲನೆ ಮಾಡಿ ನೋಡಿ. ಹಿಂದೂ ಪದ ನಮ್ಮದಲ್ಲ, ಪರ್ಷಿಯನ್​ ಭಾಷೆಯದ್ದು. ನಮ್ಮ ದೇಶದ್ದು ಅಲ್ಲದ ಹೊರಗಿನ ಪದವನ್ನು ಇಷ್ಟೊಂದು ವಿಜೃಂಭಣೆ ಮಾಡುವುದು ಏಕೆ..? ಹಿಂದೂ ಶಬ್ಧ ನಮ್ಮದಲ್ಲ. ಹಿಂದೂ ಪದದ ಅರ್ಥ ಗೊತ್ತಾದರೆ ನಾಚಿಕೆ ಆಗುತ್ತೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಈ ಅಶ್ಲೀಲ ಅಂತಾ ನಾನು ಹೇಳ್ತಿಲ್ಲ, ಎಲ್ಲಾ ವೆಬ್​ಸೈಡ್​ಗಳಲ್ಲೂ ಇದೆ. ಎಲ್ಲೋ ಇದ್ದ ಶಬ್ಧವನ್ನು ತಂದು, ನಮ್ಮ ಮೇಲೆ ಹೇರುವ ಕೆಲಸ ಆಗ್ತಿದೆ ಎಂದು ಸಮಾವೇಶದಲ್ಲಿ ಹೇಳಿದ್ದಾರೆ. ಆಗಿದ್ದರೆ ಹಿಂದೂ ಧರ್ಮದ ಮೂಲ ಯಾವುದು ಅಂತಾ ಕೆದಕಿ ನೋಡಿದ್ರೆ ಸತೀಶ್​ ಜಾರಕಿಹೊಳಿ ಮಾತಿನಲ್ಲಿ ಸತ್ಯವಿದೆ ಎಂದೆನಿಸುವುದು ಸುಳ್ಳಲ್ಲ.

ಹಿಂದೂ ಮುಖಂಡರ ಆಕ್ರೋಶ, ಅಂತರದಲ್ಲಿ ನಿಂತ ಕಾಂಗ್ರೆಸ್​..!

ಸತೀಶ್​ ಜಾರಕಿಹೊಳಿ ಮಾತಿಗೆ ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹಿಂದೂ ಸಂಘಟನೆಗಳ ಮುಖಂಡರಾದ ಪ್ರಮೋದ್​ ಮುತಾಲಿಕ್​ ಹಾಗು ಹಿಂದೂ ಜನಜಾಗೃತಿ ವೇದಿಕೆ ಅಧ್ಯಕ್ಷ ಮೋಹನ್​ ಗೌಡ ಮಾತನಾಡಿ, ಸತೀಶ್​ ಜಾರಕಿಹೊಳಿ ವಿರುದ್ಧ ಹೋರಾಟದ ಕಿಚ್ಚು ಹೊರ ಹಾಕಿದ್ದಾರೆ. ಕೂಡಲೇ ಬಹುಸಂಖ್ಯಾತ ಹಿಂದೂಗಳನ್ನು ಕ್ಷಮೆ ಕೇಳಬೇಕು ಎಂದು ಪ್ರಮೋದ್​ ಮುತಾಲಿಕ್​ ಆಗ್ರಹ ಮಾಡಿದ್ದಾರೆ. ಕಾಂಗ್ರೆಸ್​ ಕೂಡ ಸತೀಶ್​ ಜಾರಕಿಹೊಳಿ ಮಾತಿನಿಂದ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಿದ್ದು, ಸತೀಶ್​ ಜಾರಿಕಿಹೊಳಿ ಹೇಳಿಕೆ ಅವರ ವೈಯಕ್ತಿಕ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ಟ್ವೀಟ್​ ಮಾಡಿದ್ದಾರೆ.

ನಿಜವಾಗಲೂ ಹಿಂದೂ ಅನ್ನೋ ಪದದ ಅರ್ಥ ಏನು..?

ಹಿಂದೂ ಅನ್ನೋ ಪದದ ಅರ್ಥ, ಪರ್ಷಿಯನ್​ ಭಾಷೆಯಲ್ಲಿ ‘ಲಗೆಟ್​ ಇ ಕಿಶ್ವಾರಿ’ Lughet -e- Kishwari ಅನ್ನೋ ಪದದಿಂದ ಬಂದಿದೆ. ಈ ಪದವನ್ನು ಮೊದಲಿಗೆ ಬಳಸಿದ್ದು, ಖ್ಯಾತ ವಿದ್ವಾಂಸ ಅಬು ರೆಹಾನ್​ ಮೊಹಮದ್​ ಇಬ್ನ್​ ಅಹಮದ್​ ಅಲ್​ ಬಿರುನಿ ಎಂಬಾತ ಮೊದಲಿಗೆ ಬರೆದಿದ್ದಾನೆ. ಕ್ರಿ.ಶ. 10ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಹಿಂದೂ ಅನ್ನೋ ಪದ ಬಳಕೆ ಮಾಡಿದ್ದನು. ಆತ ಬರೆದಿದ್ದ ‘ಆಲ್​ ಬಿರುನಿ ಕಾ ಭಾರತ್’ ಅನ್ನೋ ಪುಸ್ತಕದಲ್ಲಿ ಮೊದಲಿಗೆ ಉಲ್ಲೇಖಿಸಿದ್ದಾನೆ. ಈ ಪದದ ಅರ್ಥ, ಕಳ್ಳರು, ಡಕಾಯಿತರು, ಗುಲಾಮರು (ಜೀತದಾಳು) ಎಂದಾಗುತ್ತದೆ. ಇದರ ಅರ್ಥವನ್ನು ಬಲ್ಲವರಾಗಿದ್ದ ಬ್ರಾಹ್ಮಣರು ಇದನ್ನು ಮೊದಲಿಗೆ ಒಪ್ಪಲಿಲ್ಲ. ಅವರು ಬ್ರಾಹ್ಮಣರನ್ನು ಹೊರತುಪಡಿಸಿದ ಹಿಂದುಳಿದ ವರ್ಗದ ಜನರು ಮಾತ್ರ ಈ ವರ್ಗಕ್ಕೆ ಸೇರುತ್ತಾರೆ ಎಂದಿದ್ದರು ಎನ್ನುವ ಮಾಹಿತಿ ಸಿಗುತ್ತದೆ.

‘ವಿವಾದ ಅಲ್ಲ ವಿಮರ್ಶೆ ಮಾಡಿ’ ನನ್ನ ಹೇಳಿಕೆಯಲ್ಲಿ ತಪ್ಪಿಲ್ಲ..!

ಹಿಂದೂ ಧರ್ಮದ ಮೂಲದ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಹಾಗೆ ಮಾಧ್ಯಮಗಳಲ್ಲಿ ಹಿಂದೂಗಳ ಬಗ್ಗೆ ಸತೀಶ್​ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸುವ ರೀತಿ ಸತೀಶ್​ ಅವರ ಬಗ್ಗೆ ಲಘುವಾದ ಮಾತುಗಳು ಕೇಳಿ ಬಂದಿದ್ರಿಂದ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್​ನ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ, ನನ್ನ ಮಾತಿಗೆ ದಾಖಲೆಗಳು ಇವೆ. ಈ ಬಗ್ಗೆ ಚರ್ಚೆ ಆಗಲಿ. ಮಾಧ್ಯಮಗಳು ರಷ್ಯಾ-ಉಕ್ರೇನ್​ ಯುದ್ಧದ ರೀತಿಯಲ್ಲಿ ಚರ್ಚೆ ನಡೆಸುತ್ತಿವೆ. ನಾನು ಜಾತಿ ಧರ್ಮದಿಂದ ದೂರ ಇರುವ ವ್ಯಕ್ತಿ, ನಾನು ಯಾವುದೇ ಧರ್ಮವನ್ನು ಆಚರಣೆ ಮಾಡುವುದಿಲ್ಲ. ಹಾಗಂತ ಯಾರನ್ನು ನೋಯಿಸುವ ಕೆಲಸವನ್ನೂ ನಾನು ಮಾಡುವುದಿಲ್ಲ. ಯಾರನ್ನೂ ಅಪಮಾನಿಸುವ ಉದ್ದೇಶದಿಂದ ನಾನು ಈ ಹೇಳಿಕೆ ನೀಡಿಲ್ಲ. ಚರ್ಚೆ ಆಗಲಿ. ಸತ್ಯಾಂಶ ಜನರಿಗೆ ಗೊತ್ತಾಗಲಿ ಎನ್ನುವ ಮೂಲಕ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

Related Posts

Don't Miss it !