Its Murder; ಸಂತೋಷ್ ಪಾಟೀಲ್‌ರದ್ದು ಆತ್ಮಹತ್ಯೆ ಅಲ್ಲ.. ಕೊಲೆ.. ಹೆಂಡತಿ ಸ್ಫೋಟಕ ಹೇಳಿಕೆ..

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 4 ಕೋಟಿ ವೆಚ್ಚದ ಕಾಮಗಾರಿ ಮಾಡಿಸಿ, ವರ್ಕ್ ಆರ್ಡರ್ ಬಿಡುಗಡೆ ಆಗದೆ, ಸಚಿವ ಈಶ್ವರಪ್ಪ ವಿರುದ್ಧ ಶೇಕಡಾ 40 Percent ಕಮಿಷನ್‌ ಪಡೆಯುತ್ತಿದ್ದಾರೆ. ವರ್ಕ್ ಆರ್ಡರ್ ರಿಲೀಸ್ ಮಾಡದೆ ಸಾಕಷ್ಟು ಹಿಂಸೆ ಕೊಡಲಾಗ್ತಿದೆ‌ ಎಂದು ಸಂತೋಷ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಕಾರ್ಯಕರ್ತನಾಗಿದ್ದ ಸಂತೋಷ್ ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಅದರಲ್ಲೂ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ನೇರವಾಗಿಯೇ ಆರೋಪ ಮಾಡಿದ್ದರು. ಆದರೆ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ‌. ಮೊದಲಿಗೆ ಆತ್ಮಹತ್ಯೆ ಎಂದು ಹೇಳಲಾಯಿತಾದರೂ ಈಗ ಕೊಲೆ ಎನ್ನುವ ವಿಚಾರ ಕರ್ನಾಟಕದ ಜನರನ್ನು ದಿಗ್ಬ್ರಮೆಗೆ ಒಳಗಾಗುವಂತೆ ಮಾಡಿದೆ.

ಮೃತ ಸಂತೋಷ್ ಪಾಟೀಲ್

ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಿದ್ದಾರೆ..!!

ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ‌ ಕಾಮಗಾರಿ ಮಾಡಿಸಿದರೂ ವರ್ಕ್ ಆರ್ಡರ್‌ ಬಾರದೆ ಸರದಕಾರದಿಂದ ಬಿಲ್ ಬರಲಿಲ್ಲ‌ ಎನ್ನುವ ಕಾರಣಕ್ಕೆ‌ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಸ್ವತಃ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಸ್ಫೋಟಕ ಮಾಹಿತಿ ನೀಡಿದ್ದು, ತನ್ನ ಗಂಡ ಪ್ರವಾಸಕ್ಕೆ ಎಂದು ಆ ಕಡೆಗೆ ಹೋಗಿದ್ದರು. ಆ ಬಳಿಕ ಸೋಮವಾರ ಸಂಜೆ ಸಾಕಷ್ಟು ಮಾತನಾಡಿದರು. ಸಾಯುವ ವ್ಯಕ್ತಿತ್ವದ ಮನುಷ್ಯನಲ್ಲ. ಇದು ಆತ್ಮಹತ್ಯೆ ಎನ್ನುವುದಕ್ಕೆ ಸಾಧ್ಯವಿಲ್ಲ. ನನ್ನ ಗಂಡನ ಕೊಲೆ ನಡೆದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತೋಷ್ ನಿವಾಸಕ್ಕೆ ಭೇಟಿ‌ ನೀಡಿ ಸಾಂತ್ವನ ಹೇಳುವ ಸಮಯದಲ್ಲಿ ಮೃತ ಸಂತೋಷ್ ಪತ್ನಿ ಜಯಶ್ರೀ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಲ್ ಬಾಕಿ ಇರುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಅವರು ಹಣದ ವಿಚಾರವಾಗಿ ಯಾವುದೇ ರೀತಿಯ ಮಾತನಾಡಿರಲಿಲ್ಲ. ಧೈರ್ಯವಾಗಿ ಇದ್ದರು. ನನ್ನ ಜೊತೆಗೆ ಸೋಮವಾರ ರಾತ್ರಿ ಕೂಡ ಚನ್ನಾಗಿ ಮಾತನಾಡಿದರು. ಯಾರೋ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

FIR ನಲ್ಲಿ ದಾಖಲಾಯ್ತು ಸಚಿವ ಈಶ್ವರಪ್ಪ ಹೆಸರು..!

ಸಂತೋಷ್ ಸೋಮವಾರ ರಾತ್ರಿ ಶಾಂಭವಿ ಲಾಡ್ಜ್ ನಲ್ಲಿ ಸಾವನ್ನಪ್ಪಿದ್ದಾರೆ. ಸಮಯ ಸರಿಯಾಗಿ ಗೊತ್ತಿಲ್ಲ. ಆತ್ಮಹತ್ಯೆಯೋ ಕೊಲೆಯೋ ಎನ್ನುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಆದರೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಎನ್ನಲಾಗ್ತಿದೆ. ಇದೀಗ ಎಫ್‌ಐಆರ್‌ನಲ್ಲಿ ಅನುಮಾನಾಸ್ಪದ ಸಾವು ಎಂದು ಉಲ್ಲೇಖ ಮಾಡಲಾಗಿದ್ದು, ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿ ನಂಬರ್ 1 ಹಾಗೂ ಈಶ್ವರಪ್ಪ ಆಪ್ತರಾದ ಬಸವರಾಜ್ ಆರೋಪಿ ನಂಬರ್ 2, ಹಾಗೂ ರಮೇಶ್ ಆರೋಪಿ‌ ನಂಬರ್ 3 ಎಂದು ನಮೂದು ಮಾಡಲಾಗಿದೆ. ಈ ಮೂವರು ಆರೋಪಿಗಳನ್ನು ಬಂಧಿಸುವ ತನಕ ನಾವು ಸಂತೋಷ್ ಪಾಟೀಲ್ ಶವವನ್ನ ಸ್ವೀಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು‌ ಪಟ್ಟು ಹಿಡಿದಿದ್ದಾರೆ. ಈಶ್ವರಪ್ಪ ಶೇ.40 ಲಂಚಕ್ಕೆ ಒತ್ತಡ ಹಾಕಿದ್ದರು, ಬಿಲ್ ಪಾಸ್ ಆಗದೆ ಇರುವುದರಿಂದ ಮುಂದೆ ಎದುರಾಗುವ ಸಮಸ್ಯೆಗೆ ಈಶ್ವರಪ್ಪ ಕಾರಣ ಎಂದಿರುವ ಸಂತೋಷ್ ಮಾತುಗಳು ವೈರಲ್ ಆಗಿದೆ. ಪೊಲೀಸರು ಅನಿವಾರ್ಯವಾಗಿ ಬಂಧಿಸ್ತಾರಾ..? ಕಾದು ನೋಡ್ಬೇಕು.

ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರ, ಬಿಜೆಪಿ ಹಣಿಯಲು ಸಕಲ ತಯಾರಿ..!

ಈ ಹಿಂದೆ ಈಶ್ವರಪ್ಪ 40 Percent ಕಮಿಷನ್ ಕೇಳಿದ್ದಾರೆ ಎನ್ನುವ ಆರೋಪ ಮಾಡುವುದಕ್ಕೂ ಮೊದಲೂ ರಾಷ್ಟ್ರ ಧ್ವಜ ಕುರಿತ ಹೇಳಿಕೆ ಖಂಡಿಸಿ ಕಾಂಗ್ರೆಸ್ ರಾಜೀನಾಮೆಗೆ ಆಗ್ರಹ ಮಾಡಿತ್ತು. ಆ ಬಳಿಕ ಅಧಿವೇಶನದಲ್ಲಿ ಅಹೋರಾತ್ರಿ ಧರಣಿಯನ್ನೂ ಮಾಡಿತ್ತು. ಇದೀಗ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ವಜಾ ಮಾಡುವಂತೆ ಒತ್ತಡ ಹೇರಲಾಗುತ್ತದೆ. ಆ ಬಳಿಕ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯ ಹಾಗೂ ಕೇಂದ್ರ ನಾಯಕರೂ ಸಹ ಭಾಗಿಯಾಗುತ್ತಿದ್ದಾರೆ. ಈಶ್ವರಪ್ಪ ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದ್ದರೂ ಕಾಂಗ್ರೆಸ್‌ಗೆ ಈ ಪ್ರಕರಣದಲ್ಲಿ ಲಾಭ ಆಗಬಾರದು ಎನ್ನುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ರಾಜೀನಾಮೆ ಪಡೆಯಬಹುದು ಎಂದು ಹೇಳಲಾಗ್ತಿದೆ. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮಾಡುವುದರಿಂದ ಬಿಜೆಪಿಗೆ ಹೆಚ್ಚು ಡ್ಯಾಮೇಜ್ ಆಗುತ್ತದೆ. ಒಂದು ವೇಳೆ ರಾಜೀನಾಮೆ ತೆಗೆದುಕೊಂಡರೆ ಹೋರಾಟ ಮಾಡುವುದಕ್ಕೆ ಯಾವುದೇ ಸಕಾರಣ ಇರುವುದಿಲ್ಲ. ಉಳಿದಂತೆ ಸಂತೋಷ್ ಪಾಟೀಲ್ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತದೆ ಎನ್ನಬಹುದು ಎನ್ನುವುದು ಬಿಜೆಪಿ ನಾಯಕರ ಯೋಜನೆಯಾಗಿದೆ. ಆದರೆ ರಾಜೀನಾಮೆ ಪಡೆದರೆ ತಪ್ಪಿತಸ್ಥ ಎಂದು ಒಪ್ಪಿಕೊಂಡಂತೆ ಆಗಲಿದೆ ಎನ್ನುವುದು ಈಶ್ವರಪ್ಪ ವಾದ. ಇದ್ಯಾವುದಕ್ಕೂ ಕಿವಿಗೊಡದೆ ರಾಜೀನಾಮೆ ಪಡೆಯುತ್ತಾರೆ ಎನ್ನುವುದು The Public Spot ಗೆ ಸಿಕ್ಕಿರುವ ಮಾಹಿತಿ.

Related Posts

Don't Miss it !