6 ವರ್ಷದ ಕೊಡಗಿನ ಬಾಲೆ, ಧರಿಸಿದ್ದಾಳೆ ಸಾಧನೆಯ ಮಾಲೆ..!

ಕೊರೊನಾ ಲಾಕ್​ಡೌನ್​ ವೇಳೆ ಮಕ್ಕಳು ಶಾಲೆಗೆ ಹೋಗಲಾಗದೆ ಸಮಸ್ಯೆ ಅನುಭವಿಸಿದ್ರು. ಇನ್ನೂ ಶಾಲೆಗಳು ಆರಂಭವಾದರೂ ಭೌತಿಕ ತರಗತಿಗಳು ಇರಲಿಲ್ಲ. ಆನ್​ಲೈನ್​ ಪಾಠ ಕೇಳಿ ಸಾಕಷ್ಟು ಮಕ್ಕಳು ಖಿನ್ನತೆಗೆ ಹೋಗಿದ್ದರು ಎನ್ನುವ ಸುದ್ದಿ ತಜ್ಞರಿಂದಲೇ ಬಿಡುಗಡೆ ಆಗಿತ್ತು. ಇದೀಗ ಲಾಕ್​ಡೌನ್​ ಸಮಯದಲ್ಲಿ ಆನ್​ಲೈನ್​ ಪಾಠದ ಜೊತೆಗೆ ಮತ್ತಷ್ಟು ಪಠ್ಯೇತರ ಸಾಧನೆಯನ್ನೂ ಮಾಡಿದ್ದಾಳೆ. ಕೊರೊನಾ ಸಂಕಷ್ಟವನ್ನೇ ಸಾಧನೆಯ ಸಮಯವನ್ನಾಗಿ ಮಾಡಿಕೊಂಡ ಈಕೆಯ ಹೆಸರು ವೈಷ್ಣವಿ. ಆಕೆಗಿನ್ನೂ ಕೇವಲ 6 ವರ್ಷ ಮಾತ್ರ. ಕೊರೊನಾ ಎಂದು ಮನೆಯಿಂದ ಆಟಕ್ಕೆ ಬಿಡದಿದ್ದರೆ ಏನಂತೆ ನಾನು ಬೇರೊಂದು ರೀತಿಯಲ್ಲಿ ಸಾಧನೆ ಮಾಡ್ತೇನೆ ಎನ್ನುವ ಹಾಗೆ ಸಾಧಿಸಿ ತೋರಿಸಿದ್ದಾಳೆ ವೈಷ್ಣವಿ.

Read this;

2 ನಿಮಿಷದಲ್ಲಿ ಹೇಳ್ತಾರೆ 120 ಪ್ರಾಣಿಗಳ ಹೆಸರು..!

ಬಾಲಕಿ ವೈಷ್ಣವಿ ಸಾಧನೆ ಕೇವಲ 2 ನಿಮಿಷದಲ್ಲೇ ಗೊತ್ತಾಗುತ್ತದೆ. ಕೇವಲ 2 ನಿಮಿಷದಲ್ಲಿ ಪ್ರಾಣಿಗಳು ಮತ್ತು ಅವುಗಳ ಮರಿಗಳನ್ನು ಗುರುತಿಸಿ ಹೆಸರನ್ನು ಹೇಳುವುದರ ಮೂಲಕ ದಾಖಲೆ ಬರೆದಿದ್ದಾಳೆ. ಮಕ್ಕಳು ಸೇರಿದಂತೆ ದಾಖಲೆ ಮಾಡುವ ಜನರು ಸ್ವಿಮ್ಮಿಂಗ್​, ಸ್ಕೇಟಿಂಗ್​, ಪೇಂಟಿಂಗ್​, ಸೈಕಲಿಂಗ್​ ಮಾಡೋದು ಸಾಮಾನ್ಯ. ಆದ್ರೆ ವೈಷ್ಣವಿ ಮಾತ್ರ ಕಂಪ್ಯೂಟರ್​ ಪರದೆ ಮೇಲೆ ಬರುವ ಪ್ರಾಣಿಗಳು ಹಾಗೂ ಅವುಗಳ ಮರಿಗಳನ್ನು ಗುರುತಿಸುತ್ತಾಳೆ. ಕೇವಲ 2 ನಿಮಿಷ 18 ಸೆಕೆಂಡ್​ನಲ್ಲಿ 120 ಪ್ರಾಣಿಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಗಿಟ್ಟಿಸಿದ್ದಾಳೆ. ಈ ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಾಡಿದ್ದಾಳೆ.

Also read;

ಕೊಡಗಿನ ಈ ಪುಟ್ಟ ಪೋರಿ ಬಲೂ ಚೂಟಿ..!

6 ವರ್ಷದ ಪುಟ್ಟ ಬಾಲಕಿ ಸಾಧನೆಗೆ ಎಲ್ಲರೂ ತಲೆದೂಗಿದ್ದಾರೆ. ಕರ್ನಾಟಕದ ಮಡಿಕೇರಿ ಮೂಲಕ ವೈಷ್ಣವಿ, ಮಾರ್ಚ್ 25,2015ರಂದು ಕೂಡಕಂಡಿ ಶ್ರೀಮತಿ ಓಂಶ್ರೀ ಹಾಗೂ ತಂದೆ ಡಾ.ದಯಾನಂದ. ಕೆ.ಸಿ ಅವರಿಗೆ ಮಗಳಾಗಿದ್ದು, ಸಂತ ಜೋಸೆಫರ ಶಾಲೆಯ ಒಂದನೆ ತರಗತಿ ಓದುತ್ತಿದ್ದಾಳೆ. ಚೂಟಿಯ ಹುಡುಗಿ ಆಗಿರುವ ವೈಷ್ಣವಿ ತಂದೆ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಪ್ರತಿಭೆಯನ್ನು ಗುರುತಿಸಿ ಲಾಕ್​ಡೌನ್​ ಸಮಯದಲ್ಲಿ ಸಾಧನೆಗೆ ಸಹಕಾರ ನೀಡಿದ್ದಾರೆ. ಕಂಪ್ಯೂಟರ್​ ಪರದೆ ಮೇಲೆ ಮೂಡುವ ಚಿತ್ರಗಳನ್ನು ಏಕಾಗ್ರತೆ ಮೂಲಕ ಕ್ಷಣಮಾತ್ರದಲ್ಲಿ ಫಟಾಫಟ್​ ಎಂದು ಹೇಳುತ್ತಾ ಸಾಧನೆಯನ್ನು ಮುಡಿಗೇರಿಸಿದ್ದಾಳೆ. ಈಕೆಯ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎನ್ನುವುವುದು The Public sopt ಆಶಯ.

ಸಾಧಕಿ ವೈಷ್ಣವಿ

Related Posts

Don't Miss it !