ಕೊರೊನಾ 3ನೇ ಅಲೆ ಬರ್ತಿಲ್ಲ.. ಆದರೂ ಸರ್ಕಾರ ಬಿಡ್ತಿಲ್ಲ..!!

ಕೊರೊನಾ 3ನೇ ಬರುತ್ತೆ ಎನ್ನುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮುನ್ನೆಚ್ಚರಿಕೆ. ಇದಕ್ಕಾಗಿ ಸಾಕಷ್ಟು ಕೆಲಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಕರ್ನಾಟಕದಲ್ಲಿ ಕೊರೊನಾ 3ನೇ ಅಲೆಯ ಲಕ್ಷಗಳು ಕಾನಿಸುತ್ತಿಲ್ಲ. ಆದರೂ ಸರ್ಕಾರ ಮಾತ್ರ ಜನರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಲೇ ಇದೆ. ಇದೊಂದು ರೀತಿಯಲ್ಲಿ ಸರ್ಕಾರ ತೆಗೆದುಕೊಂಡಿರುವ ಉತ್ತಮ ನಿರ್ಧಾರವೆಂದೇ ಹೇಳಬಹುದು. ಸರ್ಕಾರ ಬಿಗಿ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದರೆ ಇಷ್ಟರ ವೇಳೆಗೆ ಕೊರೊನಾ 3ನೇ ಅಲೆ ರುದ್ರತಾಂಡವ ಆಡುತ್ತಲಿದ್ದರೂ ಅಚ್ಚರಿಯೇನಿಲ್ಲ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸೂಕ್ತ ಎನ್ನುತ್ತಾರೆ ಜನ. ಆದರೆ ಸರ್ಕಾರ ಮಾತ್ರ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪವೂ ಜೊತೆ ಜೊತೆಯಲ್ಲೇ ಇದೆ.

ಮದುವೆ ಕಾರ್ಯಕ್ರಮಗಳಿಗೆ ಸರ್ಕಾರ ಇಂತಿಷ್ಟೇ ಜನರು ಸೇರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ. ಬಹಿರಂಗ ಪ್ರದೇಶದಲ್ಲಿ 400 ಜನ ಹಾಗೂ ಸಣ್ಣ ಪುಟ್ಟ ಕಲ್ಯಾಣ ಮಂಟಪಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಜನರು ಇರಬಾರದು ಎನ್ನುವುದು ಸರ್ಕಾರದ ನಿಯಮ. ಆದರೆ ರಾಜಕಾರಣಿಗಳು ಹಾಗೂ ಶ್ರೀಮಂತ ಕುಟುಂಬಗಳಿಗೆ ಈ ನಿಯಮ ಅನ್ವಯ ಆಗುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ಯಾರ ಬಳಿಯಲ್ಲೂ ಉತ್ತರ ಸಿಗುವುದಿಲ್ಲ. ಬಡವರ ಮನೆಯ ಮದುವೆಗಳಿಗೆ ಮಾತ್ರ ಈ ಕಾನೂನು ಅನ್ವಯ ಆಗುತ್ತಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡದೆ ಇರದು. ಆದರೆ, ಕಾನೂನು ಜಾರಿಗೆ ಬರುವುದು ತುಂಬಾ ಅಪರೂಪ. ಮದುವೆ ಮನೆಯಲ್ಲಿ ಜನರ ತಲೆ ಎಣಿಕೆ ಮಾಡುವುದು ಸಾಧ್ಯವಿಲ್ಲ ಎನ್ನುವ ಸರ್ವತಾ ಸತ್ಯವನ್ನು ಎಲ್ಲರೂ ಒಪ್ಪಲೇ ಬೇಕು.

ಇದನ್ನೂ ಓದಿ;

ರಾಜಕಾರಣಿಗಳು ಕಾನೂನು ಮೀರಿದವರು ಎನ್ನುವ ಆಲೋಚನೆ ಎಲ್ಲರ ತಲೆಯಲ್ಲೂ ಗಟ್ಟಿಯಾಗಿ ಬೇರೂರಿದೆ ಎನಿಸುತ್ತದೆ. ಮದ್ವೆ ಕಾರ್ಯಕ್ರಮಗಳಿಗೆ ನಿಯಮ ಮಾಡುವ ಸರ್ಕಾರ ರಾಜಕಾರಣಿಗಳ ಸಭೆ ಸಮಾರಂಭಗಳ ಬಗ್ಗೆ ಸಣ್ಣ ಚಕಾರವನ್ನೂ ಎತ್ತುವುದಿಲ್ಲ. ಚುನಾವಣೆ ಪ್ರಯುಕ್ತ ಸಾವಿರಾರು ಜನರನ್ನು ಒಟ್ಟಿಗೆ ಸೇರಿಸಿ ಪ್ರಚಾರ ಮಾಡುತ್ತಾರೆ. ಜನಾಶೀರ್ವಾದ ಯಾತ್ರೆ ಹೆಸರಲ್ಲಿ ಸಾವಿರಾರು ಜನ್ನರನ್ನು ಒಟ್ಟಿಗೆ ಸೇರಿಸಿದರೂ ಕೊರೊನಾ ನಿಯಮ ನೆನಪಿಗೆ ಬರುವುದಿಲ್ಲ. ರಾಜ್ಯ ಸಚಿವ ಮುರುಗೇಶ್​ ನಿರಾಣಿ ಮಾಸ್ಕ್​ ಹಾಕದೆ ಸಾವಿರಾರು ಜನರ ನಡುವೆ ಹಾರ ಹಾಕಿಸಿಕೊಂಡು ಕೇಕ್​ ಕತ್ತರಿಸಿದರೂ ಕೊರೊನಾ ಸೋಂಕು ಬರುವುದಿಲ್ಲ. ಕೇವಲ ಬಡವರ ಮನೆಯ ಕೆಲಸಗಳಿಂದ ಮಾತ್ರ ಕೊರೊನಾ ಬರುತ್ತಾ ಎನ್ನುವ ಪ್ರಶ್ನೆಗೆ ಸರ್ಕಾರವೇ ಉತ್ತರ ಕೊಡಬೇಕಿದೆ.

ಇದನ್ನೂ ಓದಿ;

ಪ್ರಚಾರ ಪ್ರಿಯ ಸಚಿವರು ಹೋದ ಕಡೆಗಳಲ್ಲಿ ಬೃಹತ್​ ಜನಸಾಗರವನ್ನೇ ಸೇರಿಸುತ್ತಿದ್ದಾರೆ. ಆದರೆ ಜನರು ಜಾಗ್ರತೆಯಿಂದ ಇರಬೇಕು ಎನ್ನುವ ಮಾತನ್ನೂ ಹೇಳುತ್ತಾರೆ. ಒಟ್ಟಾರೆ, ರಾಜಕಾರಣಿಗಳ ಊಹೆ ತಪ್ಪಾಗಿದ್ದು, ಕೊರೊನಾ 3ನೇ ಅಲೆ ಬರುತ್ತಿಲ್ಲ. ಇದೇ ಕಾರಣಕ್ಕೆ ಜನರನ್ನು ಒಟ್ಟಿಗೆ ಸೇರಿಸಿ ಕೊರೊನಾ 3 ನೇ ಅಲೆ ಪ್ರಾರಂಭ ಮಾಡುವ ಚಿಂತನೆ ರಾಜಕಾರಣಿಗಳ ಹಿಡೆನ್​ ಅಜೆಂಡಾ ಆಗಿದ್ಯಾ ಎನ್ನುವ ಅನುಮಾನವೂ ಕಾಡುತ್ತಿದೆ. ಒಂದು ವೇಳೆ ಸರ್ಕಾರ ಉದ್ದೇಶ ಜನರ ರಕ್ಷಣೆಯೇ ಆಗಿದ್ದರೆ ಕೂಡಲೇ ಆದೇಶ ಹೊರಡಿಸಿ, ರಾಜಕಾರಣಿಗಳು ಬೃಹತ್​ ಸಭೆ, ಸಮಾರಂಭ ಮಾಡುವಂತಿಲ್ಲ. ಚುನಾವಣೆಗೆ ಮತ ಕೇಳುವುದು ಕೇವಲ ಮನೆ ಮನೆ ಪ್ರಚಾರ ಎಂದು ಆದೇಶ ಹೊರಡಿಸಬಹುದಲ್ಲವೇ..? ಇಲ್ಲದಿದ್ರೆ ಸರ್ಕಾರವೇ ಮುಂದೆ ನಿಂತು ಕೊರೊನಾ 3ನೇ ಅಲೆಯನ್ನು ಸ್ವಾಗತಿಸುತ್ತಿದೆ ಎನ್ನುವುದು ಧಾರಾಳವಾಗಿ ಹೇಳಬಹುದು.

Related Posts

Don't Miss it !