ಕಾಲೇಜುಗಳ ಜೊತೆಗೆ ಸಿನಿಮಾ ಮಂದಿರ ತೆರೆಯಲು ಗ್ರೀನ್​ ಸಿಗ್ನಲ್​..!

ಸಿಎಂ ಬಿಎಸ್​ವೈ ಸಚಿವರ ಸಭೆ

ರಾಜ್ಯ ಸರ್ಕಾರ ಕೊರೊನಾ ಲಾಕ್​ಡೌನ್​ ತೆರವು ಮಾಡುವ ಕೆಲಸ ಮುಂದುವರಿಸಿದೆ. ಅನ್​ಲಾಕ್​ 4 ನೇ ಹಂತದಲ್ಲಿ ಸಾಕಷ್ಟು ಸಡಿಲಿಕೆಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಎರಡ್ಮೂರು ತಿಂಗಳುಗಳಿಂದ ಬಂದ್​ ಆಗಿದ್ದ ಸಿನಿಮಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಶೇಕಡ 50 ರಷ್ಟು ಮಾತ್ರ ಸೀಟ್ ಭರ್ತಿ ಮಾಡಬೇಕು ಎಂದು ಸಿನಿಮಾ ಮಂದಿರ ಮಾಲೀಕರಿಗೆ ಷರತ್ತುಯ ವಿಧಿಸಿ ಅನುಮತಿ ನೀಡಲಾಗಿದೆ.

ಕಾಲೇಜು ತೆರೆಯಲು ಒಪ್ಪಿಗೆ, ಲಸಿಕೆ ಕಡ್ಡಾಯ..!

ಪದವಿ ಮೇಲ್ಪಟ್ಟ ಕಾಲೇಜುಗಳನ್ನು ತೆರೆಯುವುದಕ್ಕೂ ಸರ್ಕಾರ ಅನುಮತಿ ನೀಡಿದೆ. ನೇರವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕೂ ಸರ್ಕಾರ ಒಪ್ಪಿಗೆ ನೀಡಿದ್ದು, ತರಗತಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಷರತ್ತು ವಿಧಿಸಿದೆ. ಸರ್ಕಾರದ ಮಾರ್ಗಸೂಚಿಯಲ್ಲಿ ಕಾಲೇಜುಗಳ ತೆರೆಯುವ ಕುರಿತ ಷರತ್ತುಗಳ ಪ್ರಕಟ ಮಾಡಲಿದೆ.

ನೈಟ್​ ಕರ್ಫ್ಯೂ ಅವಧಿ 1 ಗಂಟೆ ವಿಸ್ತರಣೆ..!

ನೈಟ್​ಕರ್ಫ್ಯೂ ಇನ್ಮುಂದೆ ರಾತ್ರಿ 9 ಗಂಟೆ ಬದಲು ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿದ್ದು ನೈಟ್ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ ಮಾಡಲಾಗಿದೆ. ಆದರೆ ಬೆಳಗ್ಗೆ 5 ಗಂಟೆ ತನಕ ಇದ್ದ ಅವಧಿಯನ್ನು ಯಥಾಸ್ಥಿತಿ ಮುಂದುವರಿಸಲಾಗಿದೆ. ಬಾರ್​ಗಳಲ್ಲಿ ಮದ್ಯ ಸೇವನೆಗೆ ಶೇಕಡ 50ರಷ್ಟು ವಿಧಿಸಿದ್ದ ಮಿತಿ ಹಾಗೆಯೇ ಮುಂದುವರಿಯಲಿದೆ.ಆದರೆ ಇದೀಗ ರಾತ್ರಿ 9 ಗಂಟೆಯಿಂದ 10 ಗಂಟೆಗೆ ತನಕ ನೈಟ್​ ಕರ್ಫ್ಯೂ ಅವಧಿ ಹೆಚ್ಚಳವಾಗಿರುವ ಕಾರಣ ಬಾರ್​ಗಳೂ ರಾತ್ರಿ 10 ರ ತನಕ ತೆರೆಯಬಹುದಾಗಿದೆ.

ದೇವಸ್ಥಾನಗಳಿಗೆ ಓಕೆ, ಮದುವೆಗಳಿಗೆ ತಡೆ ಯಾಕೆ..!?

ಪಬ್​ಗಳಲ್ಲಿ ಮದ್ಯ ಸೇವನೆ, ನೈಟ್ ಪಾರ್ಟಿಗಳಿಗೆ ಅವಕಾಶ ನೀಡಲು ಸರ್ಕಾರ ನಿರಾಕರಿಸಿದೆ. ಒಳಾಂಗಣ ಚಿತ್ರೀಕರಣ ಮತ್ತು ಕ್ರೀಡಾಂಗಣಗಳಿಗೂ ಅನುಮತಿ ನೀಡಿಲ್ಲ. ಮದುವೆ ಕಾರ್ಯಕ್ರಮಕ್ಕೆ 100 ಜನರ ಮಿತಿ, ಅಂತ್ಯಸಂಸ್ಕಾರಕ್ಕೆ 20 ಜನರ ಮಿತಿಯನ್ನು ಮುಂದುವರಿಸಲಾಗಿದೆ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಅನುಮತಿ ಕೊಡಲಾಗಿದೆ. ಈ ಮೂಲಕ ದೇವಸ್ಥಾನಗಳಿಗಿದ್ದ ನಿರ್ಬಂಧ ತೆರವು ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಸಿಎಂ ನೇತೃತ್ವದ ಸಭೆಯಲ್ಲಿ ಸ್ವಿಮ್ಮಿಂಗ್ ಪೂಲ್​ಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಕಂದಾಯ ಸಚಿವ ಆರ್​. ಅಶೋಕ್​ ತಿಳಿಸಿದ್ದಾರೆ. ಆದರೆ ದೇವಸ್ಥಾನಗಳಲ್ಲಿ 100ಕ್ಕಿಂತ ಹೆಚ್ಚು ಜನ ಸೇರುವುದಿಲ್ಲ ಎನ್ನುವದು ಸರ್ಕಾರದ ಊಹೆ ಆಗಿರಬಹುದು.

ಸಿಎಂ ಸಭೆಗೆ ಆರೋಗ್ಯ ಸಚಿವರೇ ಬರಲಿಲ್ಲ..!

ಕೊರೊನಾ ನಿಯಂತ್ರಣ ಹಾಗೂ ಮೂರನೆ ಅಲೆ ಎದುರಿಸಲು ಸಿದ್ಧತೆಗೆ ಸಿಎಂ ಸಭೆ ಕರೆದಿದ್ದರು. ಜೊತೆಗೆ ಕೆಲವೊಂದು ನಿರ್ಬಂದಗಳನ್ನು ತೆರವು ಮಾಡಲು ಸಿಎಂ ಯಡಿಯೂರಪ್ಪ ಕರೆದಿದ್ದ ಸಚಿವರ ಸಭೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೇ ಗೈರು ಹಾಜರಿ ಆಗಿದ್ದರು. ಬೆಂಗಳೂರಿನಲ್ಲಿ ಇದ್ದರೂ ಸಿಎಂ ಸಭೆಗೆ ಬಾರದೆ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್​. ಅಶೋಕ್​, ರಾಜಕೀಯ ಸಭೆ ಸಮಾರಂಭ, ಸಮಾವೇಶಗಳ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಆಗಲಿಲ್ಲ ಎಂದಿದ್ದಾರೆ.

Related Posts

Don't Miss it !