ಕೊರೊನಾ ಬಂದಿದ್ರೆ ಡೇಂಜರ್.. ಸರ್ಕಾರದಿಂದ ಗುಡ್‌ ನ್ಯೂಸ್‌

Appu Hrudaya Jyothi

ಕೊರೊನಾ ಬಳಿಕ ದೇಶದಲ್ಲಿ ಹೃದಯಘಾತದಿಂದ ಸಾಯುವ ಜನರ ಸಂಖ್ಯೆ ಹೆಚ್ಚಾಗಿತ್ತು. ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೇ ಕಾರಣ ಅನ್ನೋ ಚರ್ಚೆ ಕೂಡ ನಡೆದಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೊನಾ ಸೋಂಕು ಬಂದಿದ್ದವರು ಹಾಗು ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರು ಎಚ್ಚರಿಕೆ ಇಂದ ಇರಬೇಕು ಎಂದು ಕೇಂದ್ರದ ಆರೋಗ್ಯ ಸಚಿವ ಮನ್ಸೂಖ್ ಮಾಡವೀಯ ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ ‘ಹೃದಯ ಜ್ಯೋತಿ’

ಕರ್ನಾಟಕದಲ್ಲೂ ಕೊರೊನಾ ನಂತರ ಹೃದಯಘಾತದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಅದರಲ್ಲೂ 40 ವರ್ಷ ವಯಸ್ಸಿನೊಳಗಿನ ಯುವಕರು, ಯುವತಿಯರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಹೀಗಾಗಿ ಜನರ ಜೀವ ಉಳಿಸಲು ಕರ್ನಾಟಕ ರಾಜ್ಯ ಸರ್ಕಾರ ‘ಪುನೀತ್ ರಾಜ್‌ಕುಮಾರ್ ‘ಹೃದಯ ಜ್ಯೋತಿ’ ಸೇವೆ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ದಿ. ಪುನೀತ್ ರಾಜಕುಮಾರ್ ಅವರ ಎರಡನೇ ಪುಣ್ಯ ಸ್ಮರಣಾರ್ಥ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

1 ರಿಂದ 2 ವರ್ಷ ಹೆಚ್ಚು ಶ್ರಮ ಸರಿಯಲ್ಲ..!

Indian Council of Medical Research (ICMR) ನೀಡಿರುವ ವರದಿಯ ಪ್ರಕಾರ, ಕೋವಿಡ್‌ ಬಳಿಕ ಹೃದಯಾಘಾತ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ಬಳಲಿದ್ದವರು ಎಚ್ಚರ ವಹಿಸಿ. ಕೋವಿಡ್‌ನಿಂದ ಬಳಲುತ್ತಿರುವವರೂ ಎಚ್ಚರ ವಹಿಸಿ. ಕೋವಿಡ್‌ ಈಗ ಹೋಗಿದ್ದರೂ ಸೈಡ್‌ ಎಫೆಕ್ಟ್‌ ಆಗಬಹುದು. ಶ್ರಮದ ಕೆಲಸಗಳಿಂದ ದೂರವಿರುವುದು ಒಳಿತು. 1 ರಿಂದ 2 ವರ್ಷಗಳ ಕಾಲ ಶ್ರಮದ ಕೆಲಸ ಬೇಡ. ಅತಿಯಾದ ಕೆಲಸ ಮಾಡುವುದೂ ಒಳ್ಳೆಯದಲ್ಲ, ವಿಪರೀತ ಓಟ, ಅತಿಯಾದ ವ್ಯಾಯಾಮ ಕೂಡ ಒಳ್ಳೆಯದಲ್ಲ ಎಂದು ವರದಿಯಲ್ಲಿ ಉಲ್ಲೇಖ ಆಗಿದೆ.

‘ಹೃದಯಜ್ಯೋತಿ ಯೋಜನೆ ಉದ್ದೇಶ ಏನು..?

ಪುನೀತ್‌ ರಾಜಕುಮಾರ್ ಕೂಡ ಹೃದಾಯಘಾತದಿಂದ ಸಾವನ್ನಪ್ಪಿದ್ದರು. ಇದೀಗ 2 ವರ್ಷದ ಅಪ್ಪು ಸ್ಮರಣಾರ್ಥ ಹೃದಯಜ್ಯೋತಿ ಯೋಜನೆ ಮಾರಿ ಮಾಡುತ್ತಿದೆ. ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಸೇವೆಯಲ್ಲಿ ರಾಜ್ಯದ ಒಟ್ಟು 85 ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಹೃದಯಜ್ಯೋತಿ ಯೋಜನೆ ಸೇವೆ 50 ಖಾಸಗಿ ಆಸ್ಪತ್ರೆಗಳಲ್ಲೂ ಸಿಗಲಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಒಟ್ಟು 16 ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಉಚಿತ ಸೇವೆ ಸಿಗಲಿದೆ. ಸಾಧಾರಣ ರೋಗಿಗಳಿಗೆ ECG ಸೇವೆ, ಗಂಭೀರ ಸ್ಥಿತಿತಯಲ್ಲಿದ್ದರೆ ವಿಶೇಷ ಇಂಜೆಕ್ಷನ್‌ ಹಾಗು ₹40 ಸಾವಿರ ಖರ್ಚಾಗುವ ಸೇವೆ ಉಚಿತವಾಗಿ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Related Posts

Don't Miss it !