ಡಾ ರಾಜ್​ಕುಮಾರ್ ಕುಟುಂಬದ ಆಸ್ತಿ ಮೇಲೆ ಕಣ್ಣಿಟ್ಟಿದ್ರಾ ದರ್ಶನ್​..? ಮತ್ತೊಂದು ಆಯಾಮ..!!

ಉಮಾಪತಿ, ದರ್ಶನ್

ನಟ ದರ್ಶನ್​ ಆಸ್ತಿ ಫೋರ್ಜರಿ ಕೇಸ್​ನಿಂದ ಆರಂಭವಾದ ಪ್ರಕರಣ ಇದೀಗ ಹೊಸ ಹೊಸ ಮಜಲುಗಳನ್ನು ದಾಟಿಕೊಂಡು ಮುಂದೆ ಸಾಗುತ್ತಿದೆ. ಮೈಸೂರಿನ ಸಂದೇಶ್​ ಪ್ರಿನ್​ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಹೊರಗೆ ಬಂದಿತ್ತು. ಪೊಲೀಸರು ಈಗಾಗಲೇ ಆ ಕೇಸ್​ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದೀಗ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಸ್ನೇಹಿತರಿಂದಲೇ ನಟ ದರ್ಶನ್​ಗೆ ಸಂಕಷ್ಟ ಒದಗಿ ಬರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ತಿವೆ. ಮೈಸೂರಿನ ಸ್ನೇಹಿತ ಹರ್ಷ ಮೆಲಾಂಟಾ ಕೊಟ್ಟಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ನಿರ್ಮಾಪಕ ಉಮಾಪತಿ, ಡಾ ರಾಜ್​ಕುಮಾರ್ ಪುತ್ರರ ಆಸ್ತಿಯನ್ನು ನಟ ದರ್ಶನ್​ ಕೇಳಿದ್ದರು ಎನ್ನುವ ಸ್ಫೋಟಕ ವಿಚಾರ ಬಹಿರಂಗ ಮಾಡಿದ್ದಾರೆ.

ಉಮಾಪತಿ ಬಳಿಕ ನಟ ದರ್ಶನ್​ ಕೇಳಿದ್ರು ಆಸ್ತಿ..!

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ನಿರ್ಮಾಪಕ ಉಮಾಪತಿ, ದರ್ಶನ್ ಹಾಗೂ ಉಮಾಪತಿ ಮಧ್ಯೆ ಆಸ್ತಿ ಖರೀದಿ ವಿಚಾರ ಬಹಿರಂಗ ಮಾಡಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಆಸ್ತಿ ವಿಚಾರವಾಗಿ ನನ್ನ ಬಳಿ ದರ್ಶನ್ ಕೇಳಿದ್ರು. ಆದರೆ ಆ ಆಸ್ತಿಯನ್ನು ನಾನು ಕೊಡೋದಿಲ್ಲ ಎಂದಿದ್ದೆ. ಅಲ್ಲಿಗೆ ದರ್ಶನ್ ಸುಮ್ಮನಾಗಿದ್ರು. ಆ ಆಸ್ತಿ ಡಾ ರಾಜ್​ಕುಮಾರ್​ ಪುತ್ರರಾದ ನಟ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದ್ದು ಎಂದಿದ್ದಾರೆ. ನಮ್ಮ ದೊಡ್ಮನೆಯವರ ಆಸ್ತಿ ಕೊಡಲಿಲ್ಲ ಎಂದು ದರ್ಶನ್ ಸರ್ ಕೋಪ ಮಾಡಿಕೊಂಡಿಲ್ಲ ಎನಿಸುತ್ತದೆ ಎಂದಿದ್ದಾರೆ.

ದೊಡ್ಮನೆ ಆಸ್ತಿ ಮಾರಾಟ ಮಾಡಿದ್ರೆ ಸರೀನಾ..?

ನಮ್ಮಿಬ್ಬರ ಮಧ್ಯೆ ಆಸ್ತಿ‌‌ ವಿಚಾರ ಬಂದಿದ್ದು ನಿಜ, ನಾನು ಕೊಡಲ್ಲಾ ಎಂದಿರುವುದೂ ನಿಜ ಎಂದಿರುವ ನಿರ್ಮಾಪಕ ಉಮಾಪತಿ, ದರ್ಶನ್ ಸರ್ ಹಾಗೂ ನಮ್ಮ ನಡುವೆ ಬೇರೆ ಏನೇನೋ ನಡೆದಿರುತ್ತವೆ. ದೊಡ್ಮನೆಯವರ ಆಸ್ತಿಯನ್ನ ದರ್ಶನ್​ ಅವರಿಗೆ ಕೊಟ್ಟರೆ ಸರಿ ಹೋಗುತ್ತಾ ಎಂದು ನೀವೇ ಯೋಚನೆ ಮಾಡಿ ಎಂದಿದ್ದಾರೆ. ಆಸ್ತಿಯನ್ನ ದರ್ಶನ್ ಅವರಿಗೆ ಕೊಟ್ಟರೆ ಬೇರೆಯದ್ದೇ ಆಯಾಮ ಪಡೆಯುತ್ತವೆ ಎಂದು ನಾನು ಕೊಡಲಿಲ್ಲ. ಆ ವಿಚಾರಕ್ಕೆ ದರ್ಶನ್​ ಅವರು ಬೇಜಾರಾಗಿಲ್ಲ ಎಂದು ಅಂದುಕೊಂಡಿದ್ದೇನೆ ಎಂದಿದ್ದಾರೆ. ಒಟ್ಟಾರೆ ಡಾ ರಾಜ್​ ಕುಮಾರ್​ ಮಕ್ಕಳ ಆಸ್ತಿ ಮೇಲೆ ದರ್ಶನ್​ ಕಣ್ಣಿಟ್ಟಿದ್ದರು ಎನ್ನುವುದನ್ನ ಬಹಿರಂಗ ಮಾಡಿದ್ದಾರೆ.

ಬೆಳಗ್ಗೆಯಷ್ಟೇ ಉಮಾಪತಿ ಕೆಣಕಿದ್ದ ಹರ್ಷ..!

ಮೈಸೂರಿನ ಪ್ರಿನ್ಸ್​ ಸಂದೇಶ್​ ಹೋಟೆಲ್​ನ ಪಾರ್ಟಿಗೆ ಹೋಗಿದ್ದು ನಿಜ. ಆದ್ರೆ ಅಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದು ದರ್ಶನ್​ ಸ್ನೇಹಿತ ಹರ್ಷ ಮೆಲಾಂಟ ಸ್ಪಷ್ಟನೆ ನೀಡಿದ್ದರು. ಇನ್ನೂ ಇಂದ್ರಜಿತ್ ಲಂಕೇಶ್​ ಬಿಡುಗಡೆ ಮಾಡಿರುವ ಆಡಿಯೋ ಮೇಲೆ ನನಗೆ ನಂಬಿಕೆ ಇಲ್ಲ. ಸಂದೇಶ್ ಸ್ವಾಮಿ ನನ್ನ ಜೊತೆ ಬ್ಯುಸಿನೆಸ್ ಮಾಡುವ ಉತ್ಸಾಹ ತೋರಿದ್ದರು. ಹೀಗಿರುವಾಗ ಸಂದೇಶ್ ಸ್ವಾಮಿ ಹಾಗೆ ಮಾತನಾಡಲು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದ್ದರು. ಅರುಣ್ ಕುಮಾರಿ ವಿಚಾರದಲ್ಲಿ ದೂರು ನೀಡಿರೋದು ನಾನು, ಹೀಗಿರುವಾಗ ನಾವ್ಯಾಕೆ ಷಡ್ಯಂತರ ಮಾಡ್ತಿವಿ ಎಂದಿರುವ ಹರ್ಷ ಮೆಲಾಂಟ, ಅರುಣ್ ಕುಮಾರಿ ವಿಚಾರದಲ್ಲಿ ಉಮಾಪತಿಯವರೇ ಕ್ಲಾರಿಟಿ ನೀಡಬೇಕಿದೆ. ಅರುಣ ಕುಮಾರಿಯನ್ನ ದರ್ಶನ್ ಅವರ ಹತ್ರ ಕರೆದುಕೊಂಡು ಬಂದಿದ್ದೇ ನಿರ್ಮಾಪಕ ಉಮಾಪತಿ. ಹೀಗಾಗಿ ಉಮಾಪತಿ ಅವರೇ ಕ್ಲಾರಿಟಿ ನೀಡಲಿ ಎಂದಿದ್ದರು.

ಅರುಣಕುಮಾರಿಯನ್ನ ದರ್ಶನ್ ಫಾರ್ಮ್​ ಹೌಸ್​ಗೆ ಕಳುಹಿಸಿದ್ದು ನಿರ್ಮಾಪಕ ಉಮಾಪತಿ. ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ಗಲಾಟೆ ಆದ ದಿನ ನಮ್ಮ ಜೊತೆಗೆ ಪವಿತ್ರ ಗೌಡ ಕೂಡ ಇದ್ದರು. ಆದರೆ ರಾಕೇಶ್ ಪಾಪಣ್ಣ ಇರಲಿಲ್ಲ ಎಂದಿದ್ದಾರೆ. ಹಲ್ಲೆಯನ್ನೆ ಮಾಡಿಲ್ಲ ಹಿಗಾಗಿ ಆತನಿಗೆ ಸೆಟಲ್‌ಮೆಂಟ್ ಮಾಡಿ ಪ್ರಕರಣ ಮುಚ್ಚಿ ಹಾಕುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಈ ನಡುವೆ ಮೊದಲಿಗೆ ಗಲಾಟೆ ನಡೆದಿಲ್ಲ ಎಂದಿದ್ದ ಹರ್ಷ ಮೆಲಾಂಟ ಆ ಬಳಿಕ ಗಲಾಟೆ ನಡೆದಾಗ ರಾಕೇಶ್​ ಪಾಪಣ್ಣ ಇಲ್ಲ ಎಂದಿದ್ದಾರೆ. ಈ ಮೂಲಕ ಗಲಾಟೆ ಆಗಿದ್ದನ್ನು ತನ್ನ ಅರಿವಿಗೆ ಬಾರದೆ ಒಪ್ಪಿಕೊಂಡಂತೆ ಆಗಿದೆ. ಇನ್ನೂ ನಿರ್ಮಾಪಕ ಉಮಾಪತಿ ಡಾ ರಾಜ್​ ಕುಮಾರ್​ ಪುತ್ರರಿಂದ ಖರೀದಿಸಿದ್ದ ಆಸ್ತಿ ಮೇಲೆ ದರ್ಶನ್​ ಕಟ್ಟಿಟ್ಟಿದ್ದರು ಎನ್ನುವುದನ್ನ ಬಹಿರಂಗ ಮಾಡಿದ್ದಾರೆ. ಈ ಪ್ರಕರಣ ಇನ್ಯಾವ ರೂಪ ಪಡೆಯುತ್ತದೆ ಎನ್ನುವ ಕೌತುಕದ ಜೊತೆಗೆ ಮುಚ್ಚಿಡುತ್ತಿರುವ ವಿಚಾರ ಆದಷ್ಟು ಶೀಘ್ರ ಬಹಿರಂಗ ಆಗಬೇಕಿದೆ.

Related Posts

Don't Miss it !