ನಟ ದರ್ಶನ್​ ಪ್ರಶ್ನೆ ತುಂಬಾ​ ಸಿಂಪಲ್​..! ಇಂದ್ರಜಿತ್, ಉಮಾಪತಿ​ ಏನ್ಮಾಡ್ತಾರೆ..!?

ನಟ ದರ್ಶನ್​ಗೆ ವಂಚನೆ ಮಾಡುವ ಯತ್ನ ನಡೀತು ಎನ್ನುವ ವಿಚಾರದಿಂದ ಶುರುವಾದ ವಿಚಾರ ಇದೀಗ ಮೆಟ್ಟಿಲುಗಳನ್ನು ಏರಿ ಮಹಡಿ ಮೇಲೆ ಬಂದು ನಿಂತಿದೆ. ಇಷ್ಟು ದಿನ ಎಲ್ಲವನ್ನೂ ಆಲಿಸುತ್ತಾ ಸುಮ್ಮನಿದ್ದ ದರ್ಶನ್​ ಶನಿವಾರ ಮಾಧ್ಯಮಗಳ ಎದುರು ಅಬ್ಬರಿಸಿದ್ದಾರೆ. ದರ್ಶನ್​ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಇಂದ್ರಜಿತ್​ ಲಂಕೇಶ್​ ಹಾಗೂ ನಿರ್ಮಾಪಕ ಉಮಾಪತಿ ಅವರಿಗೆ ಎರಡು ಸರಳ ಪ್ರಶ್ನೆಗಳ ಸವಾಲು ಎಸೆದಿದ್ದಾರೆ. ಆ ಸವಾಲುಗಳಿಗೆ ಉತ್ತರ ಏನು ಎನ್ನುವುದೇ ಕುತೂಹಲಕಾರಿಯಾಗಿದೆ.

ಆಡಿಯೋ ಬಿಡುಗಡೆ ಮಾಡ್ತಾರಾ ಇಂದ್ರಜಿತ್​..?

ಇಂದ್ರಜಿತ್​ ಲಂಕೇಶ್​ ಈಗಾಗಲೇ ಒಂದು ಆಡಿಯೋದಲ್ಲಿ ಬಿಡುಗಡೆ ಮಾಡಿದ್ದು, ಆ ಆಡಿಯೋದಲ್ಲಿ ಮಾತನಾಡಿರುವುದು ತಾನೇ ಎಂದು ಹೇಳಿಕೊಂಡಿದ್ದಾರೆ. ಆದರೆ ಇನ್ನೊಂದು ಆಡಿಯೋ ಇಂದ್ರಜಿತ್​ ಅವರ ಬಳಿಯಲ್ಲೇ ಇದೆ. ಆ ಆಡಿಯೋನ ತಾಕತ್​ ಇದ್ದರೆ ಬಿಡುಗಡೆ ಮಾಡಲಿ ಎಂದು ದರ್ಶನ್​ ಸವಾಲು ಹಾಕಿದ್ದಾರೆ. ಆದರೆ ಈಗ ಆಡಿಯೋ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ತನಿಖಾಧಿಕಾರಿಗಳ ಎದುರು ಏನೇನು ಕೊಡಬೇಕು ಎಲ್ಲವನ್ನೂ ಕೊಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್​ ಪ್ರಶ್ನೆಗೆ ನೇರ ಉತ್ತರ ಕೊಡದ ಇಂದ್ರಜಿತ್​ ಲಂಕೇಶ್,​ ಹೋಟೆಲ್​ ಸಪ್ಲೈಯರ್​ ಮೇಲೆ ಹಲ್ಲೆ ಮಾಡಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡೋಣ ಎಂದು ಮರುಸವಾಲು ಹಾಕಿದ್ದಾರೆ.

2 ವರ್ಷ ಬಾಡಿಗೆ ಕೊಟ್ಟಿದ್ದು ಯಾಕೆ..?

ನಿರ್ಮಾಪಕ ಉಮಾಪತಿ ಬಳಿ ಆಸ್ತಿ ಖರೀದಿಗೆ ನಟ ದರ್ಶನ್​ ಮನಸ್ಸು ಮಾಡಿದ್ದರು. ಆದರೆ ನಾನು ಪುನೀತ್​ ರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಬಳಿ ಖರೀದಿ ಮಾಡಿರುವ ಕಾರಣ ಆಸ್ತಿ ಕೊಡುವುದಿಲ್ಲ ಎಂದಿದ್ದೆ ಎಂದಿದ್ದರು. ಇಂದ್ರಜಿತ್​ ಲಂಕೇಶ್​ ಪ್ರಿನ್ಸ್​ ಸಂದೇಶ್​ ಹೋಟೆಲ್​ ವಿವಾದ ಸೃಷ್ಟಿಸಿದ ಬಳಿಕ ನಿರ್ಮಾಪಕ ಉಮಾಪತಿ ದೊಡ್ಮನೆ ಆಸ್ತಿ ವಿಚಾರ ಎಳೆದು ತಂದು ಮತ್ತೊಂದು ಆಯಾಮ ಕೊಟ್ಟಿದ್ದರು. ಇದರಿಂದ ಕುಪಿತವಾಗಿದ್ದ ನಟ ದರ್ಶನ್​, ಎರಡು ವರ್ಷಗಳ ಕಾಲ ನನಗೆ ಬಾಡಿಗೆ ಹಣ ತಂದುಕೊಟ್ಟಿದ್ದು ಯಾಕೆ..? ಎಂದು ಉಮಾಪತಿ ಅವರನ್ನು ಪ್ರಶ್ನಿಸಿದ್ದಾರೆ.

ದರ್ಶನ್​ ಅವರಿಗೆ 25 ಕೋಟಿ ವಂಚನೆ ಯತ್ನ ಪ್ರಕರಣದಲ್ಲಿ ಮೈಸೂರಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ತನಿಖೆ ಮಾಡಲು ಬಿಡಿ ಎನ್ನುವುದು ದರ್ಶನ್​ ಆಗ್ರಹ. ಆದರೆ ಸಾಕ್ಷಿಗಳಿದ್ದರೆ ಮಾಧ್ಯಮಗಳ ಎದುರು ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ತನಿಖೆ ವೇಳೆ ಪೊಲೀಸರಿಗೆ ಕೊಡ್ತೇನೆ ಎನ್ನುವುದು ಸೂಕ್ತವೇ ಎನ್ನುವುದನ್ನು ಇಂದ್ರಜಿತ್​ ಅವರು ಅವಲೋಕನ ಮಾಡಬೇಕಿದೆ. ಆ ಕೇಸ್​ಗೂ ಇವರಿಗೂ ಸಂಬಂಧವಿಲ್ಲ ಎಂದ ಮೇಲೆ ತನಿಖಾಧಿಕಾರಿಗಳು ಇವರನ್ನು ಕರೆಯುತ್ತಾರೆ ಎಂದು ಹೇಳಲಾಗದು. ಹಾಗಾಗಿ ಯಾವುದೇ ಸಾಕ್ಷಿಯಿದ್ದರೆ ಬಹಿರಂಗ ಮಾಡುವುದು ಸೂಕ್ತ. ಇಲ್ಲದೆ ಇದ್ದರೆ ದರ್ಶನ್​ ಹಾಕಿರುವ ಸವಾಲಿನಲ್ಲಿ ಸೋತಂತೆಯೇ ಸರಿ. ಇನ್ನು ಉಮಾಪತಿ ಅವರು ಹೇಳಿರುವ ಮಾತಿಗೆ ದರ್ಶನ್​ ಪ್ರತ್ಯುತ್ತರ ನೀಡಿದ್ದಾರೆ. ಆದರೆ ಇದೀಗ ಉಮಾಪತಿ ಉತ್ತರ ಕೊಡಬೇಕಿದೆ.

Related Posts

Don't Miss it !