ದರ್ಶನ್​ ಗೂಂಡಾಗಿರಿ ಮಾಡಿದ್ದು ಸತ್ಯಾನಾ..? ಆಡಿಯೋ ದಾಖಲೆಯಲ್ಲಿ ಏನಿದೆ..?

ಮೈಸೂರಿನ ಪ್ರಿನ್ಸ್​ ಸಂದೇಶ್​ ಹೋಟೆಲ್​ನಲ್ಲಿ ನಡೆದಿದೆ ಎನ್ನಲಾದ ಗಲಾಟೆ ಬಗ್ಗೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಬೆಳಗ್ಗೆ ಅಷ್ಟೇ ಮಾಹಿತಿ ನೀಡಿದ್ದರು. ಆ ಬಳಿಕ ಗಲಾಟೆ ನಡೀತು, ಆದರೆ ಹಲ್ಲೆ ಮಾಡಲಿಲ್ಲ, ಕೇವಲ ಹಿಂದಿ ಹುಡುಗನಿಗೆ ಬೈಯ್ದಿದ್ದು ಮಾತ್ರ ಎಂದು ಸಂದೇಶ್​ ನಾಗರಾಜ್​ ಅರ್ಧ ಸತ್ಯ ಹೇಳಿದ್ದರು. ಆ ಬಳಿಕ ನಟ ದರ್ಶನ್​ ನನಗೂ ಸಂದೇಶ್​​ಗೂ ಸಾವಿರ ಗಲಾಟೆ ಆಗ್ತವೆ. ಅವನ್ನು ನಾವು ನೋಡ್ಕೊಳ್ತೀವಿ ಎಂದಿದ್ದರು. ಅಷ್ಟಕ್ಕೆ ಸುಮ್ಮನಾಗದ ನಿರ್ದೇಶಕ ಇಂದ್ರಜಿತ್​ ಲಂಕೇಶ್​, ಹಿಂದಿ ಹುಡುಗನಿಗೆ ಹಲ್ಲೆ ಮಾಡಿರೋದು ಅಲ್ಲ, ಓರ್ವ ದಲಿತ, ಬಡವನ ಮೇಲೆ ಹಲ್ಲೆ ಮಾಡಿದ್ದಾರೆ. ಕರ್ನಾಟಕದವನೇ ಹುಡುಗ, ಆತನ ಹೆಸರು ಗಂಗಾಧರ್ ಎಂದು ಬಹಿರಂಗ ಮಾಡಿದ್ದರು.

ಇಂದ್ರಜಿತ್​ ಹೇಳಿಕೆಗೆ ಸಿಕ್ಕಿದೆ ಆಡಿಯೋ ಸಾಕ್ಷಿ..!

ಪ್ರಿನ್ಸ್​ ಸಂದೇಶ್​ ಹೋಟೆಲ್​ನಲ್ಲಿ ಹಲ್ಲೆಗೆ ಒಳಗಾದ ಸಿಬ್ಬಂದಿ ಗಂಗಾಧರ್ ಕುಟುಂಬ ಘಟನೆಯಿಂದ ಭಯ ಬಿದ್ದಿದೆ. ನಟ ದರ್ಶನ್ ಹೊಡೆದಿದ್ದಾರೆ ಎನ್ನುವುದು ಖಚಿತ. ಸಂದೇಶ್ ನಾಗರಾಜ್ ಪುತ್ರ ಘಟನೆ ಬಳಿಕ ನೋಡೊದಕ್ಕೆ ಬಂದಿದ್ರು. ಆಗ ಎಲ್ಲಾ ಸಿಬ್ಬಂದಿಗಳು ಪ್ರತಿಭಟನೆ ಮಾಡಿದ್ರು. ಕೆಲಸ ಮಾಡಲು ಆಗಲ್ಲ ಅಂತ ಕುಳಿತಾಗ ದರ್ಶನ್ ಟೀಂ ಅನ್ನು ಹೊಟೇಲ್​ನಿಂದ ಹೊರಗೆ ಹಾಕಿದ್ದಾರೆ. ಸರ್ಕಾರದ ನಿಯಮದ ಪ್ರಕಾರ 60 ದಿನದ ಸಿಸಿಟಿವಿ ಹಾರ್ಡ್ ಡಿಸ್ಕ್ ಇಟ್ಟುಕೊಳ್ಳಬೇಕು. ಸಂದೇಶ್​ ನಾಗರಾಜ್​ ಅವರು 10 ದಿನಕ್ಕೆ ಡಿಲೀಟ್​ ಆಗುತ್ತೆ ಅಂದ್ರೆ ಜನ ಪೆದ್ದರಲ್ಲ. ನನಗೆ ಯಾರ ಮೇಲೂ ವೈಯಕ್ತಿಯ ದ್ವೇಶವಿಲ್ಲ. ತಪ್ಪನ್ನ ಒಪ್ಪಿಕೊಳ್ಳಿ ಎಂದು ಆಗ್ರಹಿಸಿದ್ರು. ಇನ್ನೂ ಹಲ್ಲೆಗೋಳಗಾದ ಗಂಗಾಧರ್​ನನ್ನು ಕೆಲಸದಿಂದ ಬಿಡಿಸಿದ್ದಾರೆ. ಇವೆರೆಲ್ಲಾ ಬಡವರು, ಹೀಗಾಗಿ ಒತ್ತಡ ಇರಬಹುದು. ಭಯವೂ ಇರಬಹುದು. ಆದ್ರೆ ತನಿಖೆ ಆಗಲೇ ಬೇಕು. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾತ್ರಿ 3 ಗಂಟೆಗೆ ಸಂದೇಶ್ ನಾಗರಾಜ್ ಬಂದು ದರ್ಶನ್ ಅಂಡ್ ಗ್ಯಾಂಗ್​ನನ್ನು ಹೊರ ದಬ್ಬಿದ್ದಾರೆ ಎಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ಆಡಿಯೋ ಸಾಕ್ಷಿ ಸಿಕ್ಕಿದೆ.

ಹಲ್ಲೆ ಗಲಾಟೆ ನಡೆದಾಗ ಪ್ರತ್ಯಕ್ಷವಾಗಿದ್ದವರ ಮಾತು..?

ಮಧ್ಯರಾತ್ರಿ 1.30ರ ವೇಳೆಗೆ ನಟ ದರ್ಶನ್​ ಮತ್ತು ಆತನ ಸ್ನೇಹಿತರು ಹೋಟೆಲ್​ನಲ್ಲಿದ್ರು. ಆದರೆ ಊಟ ಬರುವುದು ತಡವಾಯ್ತು ಅನ್ನೋ ಕಾರಣಕ್ಕೆ ಇಬ್ಬರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ರು. ಸುಮಾರು 45 ರಿಂದ 50 ವರ್ಷದ ಸಿಬ್ಬಂದಿಗಳು ಎಂದಿದ್ದಾರೆ. ನಾನು ಪುಕ್ಕಸಟ್ಟೆ (ಬಿಟ್ಟಿ) ಬರ್ತೀವಿ ಅಂತಾ ಹೀಗೆ ಲೇಟ್​ ಮಾಡ್ತೀರಾ ಎಂದು 50 ಸಾವಿರ ನೋಟಿನ ಕಂತೆ ತೆಗೆದು ಎಸೆದರು. ಮ್ಯಾನೇಜರ್​ ನೋಟನ್ನು ಆಯ್ದುಕೊಳ್ಳಲು ಮುಂದಾಗಿದ್ದಕ್ಕೆ ಮತ್ತೆ ಮತ್ತೆ ಹಲ್ಲೆ ಮಾಡಿದ್ರು. ಬೆಳಗ್ಗೆ ಬಂದು ದೊಡ್ಡೋರು 340 ಜನ ಸ್ಟಾಪ್​ ಇದ್ದಾರೆ, ಅವರ ಯೂನಿಯನ್​ನಿಂದ ಪ್ರತಿಭಟನೆ ಮಾಡಿದ್ರೆ ತೊಂದರೆಯಾಗುತ್ತೆ, ನಾವು ಹೋಟೆಲ್​ ನಡೆಸ್ಬೇಕಪ್ಪ, ಇಷ್ಟ ಬಂದ್ರೆ ಬಾ ಇಲ್ಲದಿದ್ರೆ ಹೋಗು ಎಂದು ಕಳುಹಿಸಿದ್ರು ಎನ್ನುವುದು ಆಡಿಯೋದಲ್ಲಿದೆ.

ಸಂದೇಶ್ ಮೇಲೆ ದರ್ಶನ್​ಗೆ ಇನ್ನೂ ಕೋಪ ಹೋಗಿಲ್ಲ..!?

ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಳಿಕ ಸಂದೇಶ್​ ನಾಗರಾಜು ಯಾವುದೇ ಕೇಸ್​ ಆಗದಂತೆ ಎಲ್ಲವನ್ನು ಮುಚ್ಚಿ ಹಾಕಿದ್ದಾರೆ. ಆದರೂ ನಟ ದರ್ಶನ್​, ಇಲ್ಲೀವರೆಗೂ ಪ್ರಿನ್ಸ್​ ಸಂದೇಶ್​ ಹೋಡೆಲ್​ಗೆ ಹೋಗಿಲ್ಲ ಎನ್ನುವುದು ಬಹಿರಂಗ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅರುಣಾಕುಮಾರಿ ವಂಚನೆ ಯತ್ನ ಕೇಸ್​ ಬಗ್ಗೆ ಸುದ್ದಿಗೋಷ್ಠಿಯನ್ನು ನಟ ದರ್ಶನ್​ ಬೇರೆ ಹೋಟೆಲ್​ನಲ್ಲಿ ಮಾಡಿದ್ದರು. ಮೈಸೂರಿಗೆ ಬಂದಾಗ ಪ್ರತಿಭಾರಿಯೂ ಸಂದೇಶ್​ ಹೋಟೆಲ್​ನಲ್ಲೇ ಉಳಿದುಕೊಳ್ತಿದ್ದ ನಟ ದರ್ಶನ್​ ಘಟನೆ ಬಳಿಕ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಹಲ್ಲೆಗೊಳಗಾದ ಗಂಗಾಧರ್ ದೂರು ಕೊಡಲಿಲ್ಲ ಎಂದರೂ ಪೊಲೀಸರು ಸುಮೋಟೋ ಕೇಸ್ ಮಾಡಬೇಕಾಗುತ್ತೆ. ಆಡಿಯೋದಲ್ಲಿ ಘಟನೆಯ ಪಿನ್​ ಟು ಪಿನ್​ ಮಾಹಿತಿ ಕೊಟ್ಟಿದ್ದಾರೆ. ಯಾರು ಆವ್ಯಕ್ತಿ ಎನ್ನುವುದನ್ನು ಪತ್ತೆ ಮಾಡಿ ಪೊಲೀಸರು ಎಫ್​ಐಆರ್​ ದಾಖಲಿಸಬೇಕಾಗುತ್ತದೆ.

Related Posts

Don't Miss it !