ಪದವಿ ಓದಿದ್ದ ಮಕ್ಕಳು ಮಾಡಿದ್ದು ಕಳ್ಳತನ..! ಇದಕ್ಕೆ ಹೊಣೆ ಯಾರು..?

ತಂದೆ ತಾಯಿ ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಭರವಸೆ ಇಟ್ಟಿರುತ್ತಾರೆ. ಅದೇ ಕಾರಣದಿಂದ ಮಕ್ಕಳನ್ನು ದೊಡ್ಡ ದೊಡ್ಡ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್​ ಕೊಟ್ಟು ಕಳುಹಿಸುತ್ತಾರೆ. ಆದರೆ ಮಕ್ಕಳು ಓದಿ ಮೇಲೆ ಕೆಲಸ ಸಿಗದೆ ಇದ್ದರೆ ಏನು ಮಾಡುತ್ತಾರೆ ಎನ್ನುವುದನ್ನೇ ಊಹೆ ಮಾಡದೆ, ಕೇವಲ ಶಿಕ್ಷಣದ ಹಿಂದೆ ಹೋಗುವಂತೆ ಸೂಚಿಸುತ್ತಾರೆ. ಆದರೆ ಇಂದು ಇಬ್ಬರು ಮಕ್ಕಳು ಸರಗಳ್ಳತನ ಮಾಡುವ ಕಾಯಕಕ್ಕೆ ಕೈ ಹಾಕಿದ್ದಾರೆ. ಅದರಲ್ಲೂ ಪದವೀಧರ ಯುವಕರು.

ಏನಿದು ಪಧವಿ ಯುವಕರಿಂದ ಕಳವು..?

ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧನ ಮಾಡಿದ್ರು. ಕಾಮಾಕ್ಷಿಪಾಳ್ಯ ನಿವಾಸಿಗಳಾದ ಇಬ್ಬರು ಯುವಕರು ಜುಲೈ 6ರಂದು ವಿದ್ಯಾರಣ್ಯಪುರದ ಎಂಪಿಎ ಲೇಔಟ್​ನಲ್ಲಿ ಸರಗಳ್ಳತನ‌ ಮಾಡಿದ್ದರು. 62 ವರ್ಷದ ವೃದ್ಧೆಯ ಸರಗಳ್ಳತನ ಮಾಡಿ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿದ ಬಳಿಕ 2 ಪ್ರಕರಣಗಳು ಬೆಳಕಿಗೆ ಬಂದಿವೆ. ಕೊಡಿಗೇಹಳ್ಳಿಯಲ್ಲಿಯೂ ಸಹ ಇದೇ ರೀತಿ ಸರಗಳ್ಳತನ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಇನ್ನೊಂದು ವಿಶೇಷ ಎಂದರೆ ಈ ಇಬ್ಬರೂ ಆರೋಪಿಗಳು ಅಣ್ಣತಮ್ಮ.

ತಂದೆಗಾಗಿ ಕಳ್ಳತನಕ್ಕೆ ಇಳಿದ ಮಕ್ಕಳು..!

ಬೀಕಾಂ, ಬಿಎಸ್ಸಿ ಓದಿದ್ದ ಅಣ್ಣ ತಮ್ಮ ಅನಾರೋಗ್ಯ ಪೀಡಿತ ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಸರಗಳ್ಳತನ ಮಾಡುವ ನಿರ್ಧಾರ ಮಾಡಿದ್ದರು. ಅಣ್ಣ-ತಮ್ಮ ಸುದೀಪ್ ಮತ್ತು ರಜತ್ ಎಂಬಾತರನ್ನು ಬಂಧಿಸಿದ್ದಾರೆ. ಸುದೀಪ್ ಬಿಎಸ್ಸಿ ಮುಗಿಸಿದ್ದರೆ, ರಜತ್ ಬಿಕಾಂ ಪದವಿಧರ. ಇಬ್ಬರು ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಸರಗಳ್ಳತನಕ್ಕೆ ಇಳಿದಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಬೇರೊಬ್ಬರಿಗೆ ಮಾರ್ಗದರ್ಶಕರಾಗಿ ಇರಬೇಕಾದರ ವಿದ್ಯಾವಂತ ಯುವಕರು ಸಮಾಜಘಾತುಕ ಕೆಲಸ ಮಾಡಲು ಮುಂದಾಗಿರುವುದಕ್ಕೆ ಆತಂಕಕಾರಿ ಬೆಳವಣಿಗೆ.

ದೇಶದ ಈ ದುರಾವಸ್ಥೆಗೆ ಯಾರು ಹೊಣೆ..?

ಅನಾರೋಗ್ಯ ಪೀಡಿತ ತಂದೆಗಾಗಿ ಹಣ ಹೊಂದಿಸಲು ಮುಂದಾಗಿರುವುದು ಮಾನವೀಯ ನೆಲೆಗಟ್ಟಿನಲ್ಲಿ ಉತ್ತಮ ಕೆಲಸ. ಆದರೆ ಹಣ ಸಂಪಾದನೆಗೆ ಆಯ್ಕೆ ಮಾಡಿಕೊಂಡಿರುವ ಮಾರ್ಗ ಮಾತ್ರ ಸರಿಯಾಗಿಲ್ಲ. ತಾಯಿ ಸಮನಾದ ಮಹಿಳೆಯರ ಕೊರಳಿಗೆ ಕೈಹಾಕಿ ಚಿನ್ಮನದ ಸರ ಕದಿವುದು ಕೆಟ್ಟ ಕೆಲಸ. ಇನ್ನು ಶಾಲೆ, ಕಾಲೇಜಿಗೆ ಕಳುಹಿಸಿ ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಮಕ್ಕಳಿಗೆ ಸರಿ ತಪ್ಪುಗಳ ಜ್ಞಾನವನ್ನು ಪೋಷಕರು ಅರಿವು ಮೂಡಿಸಬೇಕು. ಇನ್ನೂ ಈ ಹಿಂದೆ ದೇಶದಲ್ಲಿ ಉದ್ಯೋಗ ನಷ್ಟವಾಗುತ್ತಿದೆ. ಓದಿದ ಯುವಕರಿಗೆ ಕೆಲಸ ಇಲ್ಲದೆ ಅಲೆಯುತ್ತಿದ್ದಾರೆ ಎನ್ನುವ ಆರೋಪ ಬಂದಾಗ, ಎಲ್ಲರಿಗೂ ಸರ್ಕಾರ ಕೆಲಸ ಕೊಡುವುದಕ್ಕೆ ಸಾಧ್ಯವಿಲ್ಲ, ಪಕೋಡ ಮಾರಿಕೊಂಡೂ ಜೀವನ ಮಾಡಬಹುದು ಎನ್ನುವ ಹೇಳಿಕೆ ನೀಡಿದ್ದರು. ಆದರೆ ಪಕೋಡ ಮಾರುವುದಕ್ಕೂ ಸಂದರ್ಭ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಈ ರೀತಿಯ ಪ್ರಕರಣಗಳು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

Related Posts

Don't Miss it !