ದುಡಿದು ತಿನ್ನುವ ಛಲಗಾತಿ, ಹೆತ್ತವರ ಮಾತು ಕೇಳದೆ ಹುಟ್ಟಿದ ದಿನವೇ ಹೆಣವಾದಳು..!!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಅದೆಷ್ಟೋ ಮಕ್ಕಳು ಬುದ್ಧಿ ಬೆಳೆದಂತೆ ದುಡಿಮೆ ಮಾಡಿಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಇದೇ ರೀತಿ ಹವ್ಯಾಸ ಬೆಳೆಸಿಕೊಂಡಿದ್ದ ಪದವಿ ವಿದ್ಯಾರ್ಥಿನಿ ಮಹಶ್ರೀ ಹುಟ್ಟುಹಬ್ಬದ ದಿನವಾದ ಶುಕ್ರವಾರ ತನ್ನ ಬಾಳ ಪಯಣ ಮುಗಿಸಿದ್ದಾಳೆ. ಬೆಂಗಳೂರಿನ ತಿಂಡ್ಲು​ ನಿವಾಸಿ ಆಗಿದ್ದ 19 ವರ್ಷದ ಮಹಶ್ರೀ, ಮಲ್ಲೇಶ್ವರಂ ಕಾಲೇಜಿನಲ್ಲಿ ಪದವಿ ಓದುತ್ತಿದ್ದಳು. ಜೊತೆಗೆ ಟೆಕ್ಸ್ಟ್​​ಟೈಲ್​​ ಅಂಗಡಿ ಒಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದಳು. ಆದರೆ ಕೊರೊನಾ ಕಾರಣದಿಂದ ಕಾಲೇಜು ಇರಲಿಲ್ಲ. ಹುಟ್ಟುಹಬ್ಬ ಇರೋದ್ರಿಂದ ಕೆಲಸಕ್ಕೂ ಹೋಗಬೇಡ ಎಂದು ಹೆತ್ತವರು ಹೇಳಿದ್ದರು. ಆದರೆ ತನ್ನ ಪ್ರಿಯಕರ ಕರೆಗೆ ಓಗೊಟ್ಟಿದ್ದ ಮಹಶ್ರೀ, ಹಠ ಮಾಡಿಕೊಂಡು ಮನೆಯಿಂದ ಹೊರಟು ಬಂದಿದ್ದಳು. ಹೆಬ್ಬಾಳದ ಭದ್ರಪ್ಪ ಲೇಔಟ್ ಫ್ಲೈಓವರ್​ ಮೇಲೆ ಬರುವಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಳು.

ಇದನ್ನೂ ಓದಿ: ಸರ್ಕಾರ ವೀಕೆಂಡ್​ ಕರ್ಫ್ಯೂ ವಾಪಸ್​ ಪಡೆದ ಹಿಂದಿನ ಪ್ರಮುಖ ಉದ್ದೇಶ ಏನು..?

ಬಸ್​ ನಿಲ್ದಾಣಕ್ಕೆ ಬಂದ ಪ್ರಿಯಕರನ ಬೈಕ್​ ಹತ್ತಿದ್ದಳು..!

ಕೆಲಸಕ್ಕೆ ರಜೆ ಹಾಕು ಹುಟ್ಟುಹಬ್ಬ ಸೆಲೆಬ್ರೇಷನ್​ ಮಾಡೋಣ ಎಂದರೂ ಕೇಳದ ಮಹಶ್ರೀ ಹಠ ಹಿಡಿದು ಮನೆಯಿಂದ ಹೊರಟಿದ್ದಳು. ಮನೆಯಿಂದ ಬಸ್​ ನಿಲ್ದಾಣದ ತನಕ ಸ್ವತಃ ಚಿಕ್ಕಪ್ಪನೇ ಡ್ರಾಪ್​ ಮಾಡಿ ಹೋಗಿದ್ದರು. ಮೊದಲೇ ಮಾತನಾಡಿಕೊಂಡಿದ್ದ ಹಾಗೆ ಮಹಶ್ರೀ ಪ್ರಿಯಕರ ಅಲ್ಲಿಗೆ ಬಂದು ಆಕೆಯನ್ನು ಪಿಕ್​ ಮಾಡಿಕೊಂಡಿದ್ದ. ಹುಟ್ಟು ಹಬ್ಬದ ಖುಷಿಯಲ್ಲಿದ್ದ ಮಹಶ್ರೀ ಪ್ರಿಯಕರ ಕೊಟ್ಟ ಅರ್ಧ ಹೆಲ್ಮೇಟ್​ ಧರಿಸಿ ಹಿಂಬದಿಯಲ್ಲಿ ಕುಳಿತಿದ್ದಳು. ಅದೇನಾಯ್ತೋ ಏನೋ ಭದ್ರಪ್ಪ ಲೇ ಔಟ್ ಫ್ಲೈಓವರ್ ಮೇಲೆ ಬರುತ್ತಿದ್ದ ಹಾಗೆ ಆಯತಪ್ಪಿ ಬೈಕ್​ನಿಂದ ಕೆಳಕ್ಕೆ ಬಿದ್ದಿದ್ದಳು. ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ಯಾಂಟರ್​ ಈಕೆಯ ತಲೆಯ ಮೇಲೆ ಹರಿದಿತ್ತು. ಕೆಲಸಕ್ಕೆ ಎಂದು ಹೆತ್ತವರಲ್ಲಿ ಸುಳ್ಳು ಹೇಳಿ ಪ್ರಿಯಕರನ ಜೊತೆಗೆ ಹೊರಟಿದ್ದ ಮಹಶ್ರೀ ಕ್ಷಣಾರ್ಧದಲ್ಲಿ ರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದಳು. ಹೆಬ್ಬಾಳ ಸಂಚಾರಿ ಪೊಲೀಸರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಏರ್​ಪೋರ್ಟ್​ ಕೋವಿಡ್​ ಟೆಸ್ಟ್​ ದಂಧೆ..! ರೊಚ್ಚಿಗೆದ್ದ ಯುವತಿ, ತನಿಖೆಗೆ ತಂಡ..!

ಕ್ಯಾಂಟರ್​ ಚಾಲಕ ವಶಕ್ಕೆ, ಪ್ರಿಯಕರನ ವಿಚಾರಣೆ..!

ಪೊಲೀಸರು ಕ್ಯಾಂಟರ್​ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೂ ದುಡಿದು ತಿನ್ನವ ಛಲ ಹೊಂದಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕ್ಕ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತನ್ನ ಪಯಣ ಬೆಳೆಸಿದ್ದಾಳೆ. ಒಂದು ವೇಳೆ ಆಕೆ ಉತ್ತಮ ಗುಣಮಟ್ಟದ ಹೆಲ್ಮೆಟ್​ ಹಾಕಿದ್ದರೆ ಆಕೆ ಬದುಕಿ ಉಳಿಯುವ ಸಾಧ್ಯತೆ ಇತ್ತು ಎನ್ನುತ್ತಾರೆ ಪೊಲೀಸರು. ಆದರೆ ಆಕೆಯ ಪ್ರಿಯಕರ ಬೈಕ್​ನಲ್ಲಿ ಇಟ್ಟುಕೊಂಡಿದ್ದ ಅರ್ಧ ಹೆಲ್ಮೆಟ್​ ಅಂದರೆ ಪೊಲೀಸರ ಫೈನ್​ ತಪ್ಪಿಸಲು ಮಾತ್ರ ಬಳಕೆಗೆ ಬರುವ ಹೆಲ್ಮೆಟ್​ ಹಾಕಿಕೊಂಡು ಪ್ರೇಮಿ ಸಿಕ್ಕ ಸಂಭ್ರಮದಲ್ಲಿ ಹೋಗುವಾಗ ಈ ದುರಂತ ಸಂಭವಿಸಿದೆ. ಮಹಶ್ರೀ ಸಾವಿನಿಂದ ಕಂಗಾಲಾದ ಯುವಕ ಕಣ್ಣೀರು ಹಾಕುತ್ತಾ ಪೊಲೀಸರಿಗೆ ಇರುವ ವಿಚಾರ ಹೇಳಿದ್ದಾರೆ. ಆದರೆ ಅತಿ ವೇಗವಾಗಿ ಹೋಗುತ್ತಿದ್ದನೋ..? ಅಥವಾ ವಾಹನ ಚಾಲನೆ ಮಾಡುವಾಗ ನಿರ್ಲಕ್ಷ್ಯ ವಹಿಸಿದ್ದರೋ..? ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಈಕೆಯ ಸಾವಿನಲ್ಲಿ ಸರ್ಕಾರದ ಪಾತ್ರವೂ ಇದೆ..!

ಸರ್ಕಾರದ ಆದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ISI ಮಾರ್ಕ್​ ಹೊಂದಿರುವ ಹೆಲ್ಮೆಟ್​ ಧರಿಸಬೇಕು ಎನ್ನುವುದು ನಿಯಮ. ಆದರೆ ಸರ್ಕಾರ ಕಳಪೆ ಗುಣಮಟ್ಟದ ಹೆಲ್ಮೆಟ್​ ಮಾರಾಟ ಹಾಗೂ ತಯಾರಿಗೆ ಅವಕಾಶ ಕೊಡುತ್ತದೆ. ಕಳಪೆ ಗುಣಮಟ್ಟದ ಹೆಲ್ಮೆಟ್​ ಧರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವುದು ಸರ್ಕಾರದ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಆ ಕಳಪೆ ಹೆಲ್ಮೆಟ್​ ಧರಿಸಲು ಅವಕಾಶ ಕೊಡುತ್ತಾರೆ. ನಿದ್ರೆಯಿಂದ ಎಂದಂತೆ ಕೆಲವು ಸಮಯ ಮಾತ್ರ ಅರ್ಧ ಹೆಲ್ಮೆಟ್​ ಧರಿಸಿದ್ದರೂ ದಂಡ ವಿಧಿಸುವ ಕೆಲಸ ಮಾಡುತ್ತಾರೆ. ಆ ಬಳಿಕ ಅರ್ಧ ಹೆಲ್ಮೆಟ್​ ತಯಾರಿಕರ ಒತ್ತಡವೋ ಅಥವಾ ಮಾರಾಟಗಾರರ ಒತ್ತಡವೋ ಗೊತ್ತಿಲ್ಲ, ಜನರು ಅರ್ಧ ಹೆಲ್ಮೆಟ್​ ಧರಿಸಿ ಓಡಾಡಿದರೂ ಪೊಲೀಸರ ಸುಮ್ಮನೆ ಇರುತ್ತಾರೆ. ಒಂದು ವೇಳೆ ಅರ್ಧ ಹೆಲ್ಮೆಟ್​ ನಿಷೇಧ ಆಗಿದ್ದರೆ ಖಂಡಿತ ಈ ಮಹಶ್ರೀ ಬದುಕಿ ಉಳಿಯುವ ಸಾಧ್ಯತೆ ಇತ್ತು.

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !