ಬೆಂಗಳೂರಲ್ಲಿ ಅಟ್ಟಾಡಿಸಿ ಕೊಂದರೂ ಖಾಕಿ ಪಡೆಗೆ ಕಾಣಿಸಲಿಲ್ಲ..! ಹೀಗಿದೆ ನಮ್ಮ ಭದ್ರತೆ..?

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದರೂ ಪೊಲೀಸರಿಗೆ ಗೊತ್ತೇ ಆಗಿಲ್ಲ‌ ಎನ್ನುವುದು ಅಚ್ಚರಿ ಆದರೂ ಸತ್ಯ. ಭಾರತದಲ್ಲಿ ಹೆಚ್ಚು ಗಮನ ಸೆಳೆಯುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆ. ಸಿಲಿಕಾನ್ ಸಿಟಿಯಲ್ಲಿ ವಿಶ್ವದ ಹಲವು ರಾಷ್ಟ್ರದ ಜನರು ವಾಸ ಮಾಡ್ತಾರೆ. ರಸ್ತೆ ರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ಕಾಣಸಿಗುತ್ತವೆ.‌ ಇನ್ನು ಕೇಂದ್ರ ಸರ್ಕಾರ ಕೊಡುವ ನಿರ್ಭಯಾ ಫಂಡ್ ಮೂಲಕ ಬೆಂಗಳೂರಿನಲ್ಲಿ ಹೊಯ್ಸಳ ವಾಹನಗಳ ಮೂಲಕ ಪ್ರತಿ ರಸ್ತೆಯಲ್ಲಿ ಗಸ್ತು ಮಾಡಲಾಗುತ್ತದೆ. ಆದರೂ ಒಂದು ಜನನಿಬಿಡ ರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಿರುವುದು ಖಾಕಿಪಡೆಗೆ ಗೊತ್ತೇ ಆಗಿಲ್ಲ ಎನ್ನುವುದು ನಮ್ಮ ಭದ್ರತೆಗೆ ಇರುವ ಖಾಕಿಪಡೆಯ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ.

ಕೊಲೆ ಆರೋಪಿ

ಕೊಂದು ಅಪಘಾತವೆಂದು ಬಿಂಬಿಸಲು ಮಾಸ್ಟರ್ ಪ್ಲ್ಯಾನ್..!!

ಬೆಂಗಳೂರಿನ ಜೀವನ್ ಭಿಮಾನಗರದ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಓರ್ವ ವ್ಯಕ್ತಿ ರಸ್ತೆ ಬದಿಯಲ್ಲಿ ಬಿದ್ದು ಸಾವನ್ನಪ್ಪಿದ್ದರು. ಬೆಳಗಿನ ಜಾವ 3 ಗಂಟೆ ವೇಳೆಗೆ ರಸ್ತೆ ಬದಿ ಶವ ಪತ್ತೆಯಾಗಿತ್ತು. ರಸ್ತೆಯಲ್ಲಿ ರಕ್ತ ಚೆಲ್ಲಿ ಅಪಘಾತ ಎಂದು ಬಿಂಬಿಸುವ ಯತ್ನವೂ ನಡೆದಿತ್ತು. ಮೊದಲಿಗೆ ಶವವನ್ನು ಆಸ್ಪತ್ರೆಗೆ ರವಾನಿಸಿದ ಪೊಲೀಸರು ಅಪಘಾತ ಪ್ರಕರಣ ಎಂದೇ ಭಾವಿಸಿದ್ದರು. ಆದರೂ ಪೊಲೀಸರು ಶವ ಬಿದ್ದಿದ್ದ ಪ್ರದೇಶದ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಹಾಗೂ ಕೇವಲ ಮುಖ ಮತ್ತು ತಲೆಗೆ ಮಾತ್ರ ಏಟು ಬಿದ್ದು ಸಾವನ್ನಪ್ಪಿದ್ದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಅಪಘಾತವಲ್ಲ ಕೊಲೆ ಎಂಬ ಸಣ್ಣ ಸುಳಿವು ಸಿಗುತ್ತಿದ್ದ ಹಾಗೆ ಕೊಲೆ ವಿಚಾರ ಬಯಲಿಗೆ ಬಂದಿತ್ತು. ಕೊಲೆಯಾದ ವ್ಯಕ್ತಿ ದೂಪನಹಳ್ಳಿ ನಿವಾಸಿ ಮಂಜು ಎಂಬ ಮಾಹಿತಿಯೂ ಸಿಕ್ಕಿತ್ತು. ಕಲ್ಲು , ಇಟ್ಟಿಗೆ , ಟ್ಯೂಬ್ ಲೈಟ್‌ನಿಂದ ಹೊಡೆದು ಕೊಂದಿದ್ದಾರೆ ಎನ್ನುವುದು ಖಚಿತವಾಗಿತ್ತು. ಕೊಲೆ ಮಾಡಿದ ಬಳಿಕ ಅಪಘಾತ ಎಂದು ಬಿಂಬಿಸಲು ಯತ್ನ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.

ಕೊಲೆ ಆರೋಪಿ

ಕೊಂದವರು ಖಾಕಿ ಹಾಕಿದ ಕೋಳದಲ್ಲಿ ಬಂಧಿ..!!

ಜೀವನ್ ಭೀಮಾ ನಗರದಲ್ಲಿ ಕೊಲೆ ನಡೆದಿರುವುದು ಖಚಿತ ಆಗುತ್ತಿದ್ದ ಹಾಗೆ FIR ದಾಖಲು ಮಾಡಿದ ಪೊಲೀಸರು ಮೂರು ದಿನಗ ಒಳಗಾಗಿ ಆರೋಪಗಳನ್ನು ಬಂಧಿಸಿದ್ದಾರೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳಾದ ಮಧುಸೂದನ್ ಮತ್ತು ಯತೀಶ್ ಗೌಡ ಬಂಧಿತ ಆರೋಪಿಗಳು. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ್ದರು ಎನ್ನುವುದು ಮೇಲ್ನೋಟಕ್ಕೆ ಆರೋಪಿಗಳ ಮಾತಾಗಿದೆ. ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೀವ ಉಳಿಸಿಕೊಳ್ಳಲು ಓಡಿದ್ದ ಮಂಜುನಾಥ್, ಕೆಲವೇ ನಿಮಿಷಗಳಲ್ಲಿ ಸಾವು ಕಣ್ಣ ಮುಂದೆ ಬಂದಿತ್ತು. ಅಂತಿಮವಾಗಿ ಕೊಲೆಯಾಗುವುದು ತಿಳಿಯುತ್ತಿದ್ದಂತೆ ಮಂಜುನಾಥ್, ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಆದರೂ ಕ್ಷಮೆಯನ್ನೇ ನೀಡದ ಆರೋಪಿಗಳು ಹೊಡೆದು ಸಾಯಿಸಿದ್ದಾರೆ.

ಕ್ಷುಲ್ಲಕ ಕಾರಣ ಎನ್ನುವುದು ಸುಳ್ಳು..! ಹೆಣ್ಣಿನ ನೆರಳಿನ ವಾಸನೆ..!!

ಇಬ್ಬರೂ ಆರೋಪಿಗಳು 30 ವರ್ಷದ ಒಳಗಿನವರಾಗಿದ್ದಾರೆ. ಕೊಲೆ ಮಾಡುವ ಸಿಸಿಟಿವಿ ದೃಶ್ಯದಲ್ಲಿ ಇಬ್ಬರೂ ಆಟೋ ಚಾಲಕರಾಗಿ ಕಾಣಿಕೊಂಡಿದ್ದಾರೆ. ಇನ್ನೂ ಕೊಲೆ ಮಾಡುವಾಗ ಯಾವುದೇ ಕ್ಷಮೆ ನೀಡುವ ಮನಸ್ಥಿತಿ ಇಲ್ಲದೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕೋಪದಲ್ಲಿ ಕೊಂದು ಬಿಸಾಡಿ ಹೋಗಿಲ್ಲ. ಸಾವು ಸಂಭವಿಸಿದ ಸಂದರ್ಭದಲ್ಲಿ ಆರೋಪಿಗಳು ರಸ್ತೆ ಅಪಘಾತ ಎಂದು ಭಾವಿಸುವಂತೆ ಶವವನ್ನು ರಸ್ತೆ ಬದಿಯಲ್ಲಿ ಹಾಕಿದ್ದಾರೆ. ಇಷ್ಟೆಲ್ಲವನ್ನೂ ಮಾಡುವ ಉದ್ದೇಶ ಮೊದಲೇ ಇದ್ದಿದ್ದರಿಂದ ಎಲ್ಲವನ್ನೂ ಯೋಜನೆಯಂತೆ ಮಾಡಿ ಮುಗಿಸಿದ್ದಾರೆ. ಆದರೆ ಪೊಲೀಸರಿಗೆ ಸಿಕ್ಕ ಸಣ್ಣ ಅನುಮಾನದ ಹುಳ ಕೊಲೆಪಾತಕರನ್ನು ಕಂಬಿ ಹಿಂದೆ ಕಳುಹಿಸಿದೆ. ಕೊಂದಿದ್ದು ಪ್ರೀತಿ, ಪ್ರೇಮ, ಪ್ರಣಯದ ನಡುವೆ ಬೆಸೆದುಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಅಥವಾ ಅಕ್ರಮ ಸಂಭಂಧ ವಿಚಾರವಾಗಿ ಕೊಲೆ ನಡೆದಿರಬಹುದು ಎನ್ನುವ ಮಾಹಿತಿಗಳು ಲಭ್ಯವಾಗಿದ್ದು, ಹೆಚ್ಚಿನ ತನಿಖೆ ಬಳಿಕ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ. ಆದರೂ ಮಧ್ಯರಾತ್ರಿ ಜನ ಸುತ್ತಾಡುತ್ತಿದ್ದರೂ ಕೊಂದು ಬಿಸಾಕುವ ಕೊಲೆಪಾತಕರು, ಗಸ್ತು ವಾಹನದ ಭಯವೇ ಇರಲಿಲ್ಲ ಎನ್ನುವುದು ಸತ್ಯ.

Related Posts

Don't Miss it !