ಪಿಸುಮಾತಲ್ಲಿ ಇಂಗು ತಿಂದ ಮಂಗನಂತಾದ ಕಾಂಗ್ರೆಸ್​, ಡಿ.ಕೆ ಶಿವಕುಮಾರ್​..!

ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮುಖ್ಯಮಂತ್ರಿ ಆಗುವ ಉದ್ದೇಶದಿಂದಲೇ ಪಟ್ಟು ಹಿಡಿದು ಕಾಂಗ್ರೆಸ್​ ರಾಜ್ಯ ಅಧ್ಯಕ್ಷರಾಗಿದ್ದರು. ಈ ಬಾರಿ ಕಾಂಗ್ರೆಸ್​​ ಗೆಲುವಿಗೆ ಪೂರಕ ವಾತಾರವಣರವಿದೆ ಎನ್ನುವ ಹುಮ್ಮಸ್ಸಿನಲ್ಲಿ ಇಡೀ ರಾಜ್ಯವನ್ನು ಸುತ್ತುತ್ತಿದ್ದಾರೆ. ಡಿ.ಕೆ ಶಿವಕುಮಾರ್​ ವೇಗಕ್ಕೆ ಕಾಂಗ್ರೆಸ್​ ಪಕ್ಷದ ನಾಯಕರಿಂದಲೇ ಬ್ರೇಕ್​ ಹಾಕುವ ಕೆಲಸ ನಡೆದಿದೆ. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಾಂಗ್ರೆಸ್​ ನಾಯಕರು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಸಿದ್ದರಾಮಯ್ಯ ‘ಪುಟಗೋಸಿ’ ವಿರೋಧ ಪಕ್ಷದ ಸ್ಥಾನದ ನಾಯಕ ಸ್ಥಾನಕ್ಕಾಗಿ ಸರ್ಕಾರವನ್ನೇ ಬೀಳಿಸಿದ್ರು ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಕೌಂಟರ್​ ಕೊಡುವ ಮುನ್ನ ಡಿ.ಕೆ ಶಿವಕುಮಾರ್​​ ಮಾನ ಹರಾಜು ಹಾಕಿದ್ದಾರೆ. ಮಾಧ್ಯಮಗಳ ಮೈಕ್​ ಮೇಜಿನ ಮೇಲಿದ್ದರೂ ಡಿ.ಕೆ ಶಿವಕುಮಾರ್​ ಅವರ ಭ್ರಷ್ಟಾಚಾರದ ಬಗ್ಗೆ ಗುಸುಗುಸು ಮಾತನಾಡುವ ಮೂಲಕ ತಮ್ಮದೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾಗುತ್ತಿರುವ ಡಿ.ಕೆ ಶಿವಕುಮಾರ್​ ಕಟ್ಟಿ ಹಾಕುವ ಕೆಲಸ ಮಾಡಲಾಗಿದೆ.

ಡಿ.ಕೆ ಶಿವಕುಮಾರ್​ ಭ್ರಷ್ಟಾಚಾರ ಹೇಗಿತ್ತು ಗೊತ್ತಾ..?

ಗುತ್ತಿಗೆದಾರರಿಂದ ಕಮಿಷನ್​ ಪಡೆಯುವ ವ್ಯವಹಾರ ಡಿ.ಕೆ ಶಿವಕುಮಾರ್​ ಕಾಲದಲ್ಲೂ ನಡೆದಿತ್ತು. 6 ರಿಂದ 8 ಪರ್ಸೆಂಟ್ ಪಡೆಯಲಾಗ್ತಿತ್ತು. ಅದನ್ನು ಡಿ.ಕೆ ಶಿವಕುಮಾರ್​ 12 ಪರ್ಸೆಂಟ್ ಮಾಡಿದ್ರು. ಉಪ್ಪಾರ್​, ಜಿ ಶಂಕರ್​, ಹನುಮಂತಪ್ಪ ಅವ್ಯವಹಾರ ನಡೆಸುವಲ್ಲಿ ಡಿ.ಕೆ ಶಿವಕುಮಾರ್​ ಪಾತ್ರ ದೊಡ್ಡದಿದೆ. ಬರೀ ಕಲೆಕ್ಷನ್​ ಗಿರಾಕಿಯೇ 50 ರಿಂದ 100 ಕೋಟಿ ಆದಾಯ ಹೊಂದಿದ್ದಾನೆ. ಹಾಗಾದ್ರೆ ಡಿ.ಕೆ ಶಿವಕುಮಾರ್​ ಹತ್ರ ಇನ್ನೆಷ್ಟು ಇರಬೇಕು ಎಂದು ಕಾಂಗ್ರೆಸ್​ ನಾಯಕರಾದ ವಿ.ಎಸ್​ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಪಿಸುಮಾತಿನಲ್ಲಿ ಡಿ.ಕೆ ಶಿವಕುಮಾರ್​ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ. ಇನ್ನೂ ಡಿ.ಕೆ ಶಿವಕುಮಾರ್​ ಭ್ರಷ್ಟಾಚಾರಗಳಿಂದಲೇ ಮುಖ್ಯಮಂತ್ರಿ ತಕ್ಕಡಿ ಮೇಲೆ ಏಳುತ್ತಿಲ್ಲ, ಸಿದ್ದರಾಮಯ್ಯ ರೀತಿ ಖಡಕ್​ ಆಗಿ ಮಾತನಾಡಲು ಬರಲ್ಲ, ಕುಡಿಯದಿದ್ದರೂ ಎಮೋಷನಲ್​ ಆಗಿ ಮಾತನಾಡುತ್ತ ತೊದಲುತ್ತಾರೆ. ಮೊನ್ನೆ ಕುಡಿಯದಿದ್ದರೂ ಕುಡುಕರ ಹಾಗೆ ಮಾತನಾಡಿದ್ರು ಎಂದು ಗಹಗಹಿಸಿದ್ದಾರೆ.

ಯಾವ ಪ್ರಕರಣದ ಬಗ್ಗೆ ಪಿಸು ಮಾತಿನ ಸಾರ..!

ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ನಾವೆಲ್ಲಾ ಪಟ್ಟು ಹಿಡಿದಿದ್ದೆವು. ಆದ್ರು ನಮ್ಮ ಬುಡಕ್ಕೆ ಡಿ.ಕೆ ಶಿವಕುಮಾರ್​​ ಕೊಳ್ಳಿ ಇಟ್ರು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ. ಇದೆಲ್ಲಾ ಹೊರಗೆ ಬಂದ್ರೆ ಇದೊಂದು ದೊಡ್ಡ ಸ್ಕ್ಯಾಂಡಲ್ ಆಗುತ್ತೆ. ಇದೆಲ್ಲವನ್ನೂ ಕೆದಕಿದ್ರೆ ಡಿಕೆ ಶಿವಕುಮಾರ್​ ಸಿಕ್ಕಿ ಹಾಕಿಕೊಳ್ಳೋದು ಪಕ್ಕಾ ಎಂದಿದ್ದಾರೆ. ಅಂದರೆ ಬಿ.ಎಸ್​​ ಯಡಿಯೂರಪ್ಪ ಆಪ್ತ ಉಮೇಶ್​ ಮೇಲಿನ ಐಟಿ ದಾಳಿ ವಿಚಾರವನ್ನು ಕಾಂಗ್ರೆಸ್​ ಕೆದಕಿದ್ರೆ ಡಿ.ಕೆ ಶಿವಕುಮಾರ್​ಗೆ ಸುತ್ತಿಕೊಳ್ಳಲಿದೆ ಎನ್ನುವ ಭಾವನೆಯಲ್ಲಿ ಮಾತನಾಡಿದಂತಿದೆ. ಆದರೆ ಯಾವ ಕೇಸ್​ನಲ್ಲಿ ಎನ್ನುವುದನ್ನ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಐಟಿ ದಾಳಿಗೆ ಒಳಗಾಗಿರುವ ಗುತ್ತಿಗೆದಾರರಾದ ಉಪ್ಪಾರ್​ ಹಾಗೂ ಹನುಮಂತಪ್ಪ, ಜಿ ಶಂಕರ್​ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಅಂದರೆ ವಿಜಯೇಂದ್ರ ಹಾಗೂ ಬಿ.ಎಸ್​ ಯಡಿಯೂರಪ್ಪ ಅವರನ್ನು ಟಾರ್ಗೆಟ್​ ಮಾಡಿಕೊಂಡು ನಡೆಸಲಾದ ದಾಳಿ ಎನ್ನಲಾಗುತ್ತಿರುವ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್​ ಸಿಕ್ಕಿ ಬೀಳುವ ಭೀತಿಯೂ ಇದೆ ಎನ್ನುವುದನ್ನು ಹೇಳಿದ್ದಾರೆ ಎನ್ನಬಹುದು.

ಇದೇ ಪ್ರಕರಣದ ಬಗ್ಗೆ ಮಾತು;

ಡಿ.ಕೆ ಶಿವಕುಮಾರ್​ ಕೆಂಡಾ ಮಂಡಲ..! ಇಕ್ಕಟ್ಟಿನಲ್ಲಿ ಕಾಂಗ್ರೆಸ್​..!

ಡಿ.ಕೆ ಶಿವಕುಮಾರ್​ ಬಗ್ಗೆ ಸ್ವತಃ ಕಾಂಗ್ರೆಸ್​ ನಾಯಕರೇ ಮಾತನಾಡಿರುವ ವಿಡಿಯೋ ವೈರಲ್​ ಆಗ್ತಿದ್ದ ಹಾಗೆ ಬಿಜೆಪಿ ಟ್ವಿಟರ್​ ಮೂಲಕ ತಿರುಗಿ ಬಿದ್ದಿದೆ. ಕಾಂಗ್ರೆಸ್​ ಹಾಗೂ ಡಿ.ಕೆ ಶಿವಕುಮಾರ್​ ಭ್ರಷ್ಟಾಚಾರದ ತವರು ಮನೆ ಎಂದು ಟೀಕಿಸಿದೆ. ಪಿಸುಪಿಸು ಮಾತನಾಡಿದ್ದ ಇಬ್ಬರ ಮೇಲೂ ಶಿವಕುಮಾರ್​​ ಕೆಂಡಾಮಂಡಲ ಆಗಿದ್ದಾರೆ. ಸಲೀಂ ಅವರನ್ನು ಮಾಧ್ಯಮ ಸಂಯೋಜಕ ಹುದ್ದೆಯಿಂದ ವಜಾ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ವಿ.ಎಸ್​ ಉಗ್ರಪ್ಪಗೆ ಕರೆ ಮಾಡಿ ಲೆಫ್​​ ರೈಟ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ವಿ.ಎಸ್​ ಉಗ್ರಪ್ಪ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ. ಆದರೆ ಭ್ರಷ್ಟಾಚಾರ ಮಾಡಿದ್ದನ್ನು ಒಪ್ಪಿಕೊಂಡು ಆಗಿದೆ. ಇದಕ್ಕೆ ಏನೇ ಸಮರ್ಥನೆ ನೀಡಿದರೂ ಪ್ರಯೋಜನವಿಲ್ಲ. ಡಿ.ಕೆ ಶಿವಕುಮಾರ್​ ಭ್ರಷ್ಟಾಚಾರ ಮಾಡಿದ್ದಾರೆ ಎಂದಾದ ಮೇಲೆ ತನಿಖೆ ನಡೆಯಲೇಬೇಕು. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿ ಕೋರ್ಟ್​ ಕಟಕಟೆಗೆ ಎಳೆದು ತಂದು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಸೂಲು ಮಾಡಬೇಕಿದೆ.

Related Posts

Don't Miss it !