ಅಪ್ಪು ಅಂತ್ಯಕ್ರಿಯೆ ಹಾಗೂ ಹತ್ತಾರು ಆಯಾಮ..! ನೀವು ಕೇಳಿರದ ಸಂಗತಿ

ನಟ ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆ ಶಾಂತ ರೀತಿಯಲ್ಲಿ ಮುಕ್ತಾಯವಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಜನರ ಎದುರು ಪುನೀತ್​ ಭೂತಾಯಿ ಒಡಲು ಸೇರಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಅಂತಿಮ ದರ್ಶನದ ಬಳಿಕ ವರನಟ ಡಾ. ರಾಜ್​ಕುಮಾರ್​ ಹಾಗೂ ಪಾರ್ವತಮ್ಮ ರಾಜ್​ಕುಮಾರ್​ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಜಾರಿದ್ದಾರೆ ದೊಡ್ಮನೆ ಹುಡುಗ ಅಪ್ಪು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಕ್ಷೇತ್ರದ ಸಾಕಷ್ಟು ನಾಯಕರು ಮತ್ತು ನಟ ಸುದೀಪ್​ ಸೇರಿದಂತೆ ಚಿತ್ರರಂಗ ಹಲವಾರು ಗಣ್ಯರು ಹಾಜರಿದ್ದು, ಪುನೀತ್​ಗೆ ಅಂತಿಮ ವಿದಾಯ ಕೊಟ್ಟಿದ್ದಾರೆ. ಕಂಠೀರವ ಸ್ಟುಡಿಯೋ ಹೊರಗೆ ಸಾವಿರಾರು ಜನ ಅಭಿಮಾನಿಗಳು ದೂರದಲ್ಲೇ ನಿಂತು ಅಭಿಮಾನದ ವಿದಾಯ ಕೊಟ್ಟಿದ್ದಾರೆ. ಈ ನಡುವೆ ಸಾಕಷ್ಟು ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆದಿದೆ.

ಸರ್ಕಾರ ಮಾಡಿದ ಎರಡು ನಿಪುಣ ತಂತ್ರಗಾರಿಕೆ..!

ರಾಜ್ಯ ಸರ್ಕಾರ ಪುನೀತ್​ ವಿದಾಯಕ್ಕೆ ಮಾಡಿದ ಸಕಲ ಕಾರ್ಯವೂ ಸತ್ಕಾರ್ಯವೇ ಆಗಿದೆ. ಅಭಿಮಾನಿಗಳನ್ನು ನಿರ್ವಹಿಸಿದ ರೀತಿ, ಪುನೀತ್​ಗೆ ಸಲ್ಲಬೇಕಿದ್ದ ಗೌರವದಲ್ಲಿ ಯಾವುದೇ ಅಪಚಾರವಾಗಿಲ್ಲ. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಎರಡು ತಂತ್ರಗಾರಿಕೆಯನ್ನು ಮಾಡಿ ಗೆಲುವು ಸಾಧಿಸಿದೆ. ಮೊದಲೆಯದ್ದು ವಿಕ್ರಮ್​ ಆಸ್ಪತ್ರೆ ಬಳಿ, ಮತ್ತೊಂದು ಕಂಠೀರವ ಸ್ಟೇಡಿಯಂ ಬಳಿ ನಡೆದಿದೆ. ಆಸ್ಪತ್ರೆಯಿಂದ ಪಾರ್ಥಿವ ಶರೀರ ನೇರವಾಗಿ ಕಂಠೀರವ ಸ್ಟೇಡಿಯಂಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ ಎಂದು ಹೇಳಿ ಆಸ್ಪತ್ರೆ ಬಳಿಯಿದ್ದ ಅಭಿಮಾನಿಗಳನ್ನು ತೆರವು ಮಾಡಲಾಯ್ತು. ಆ ಬಳಿಕ ಐದಾರು ಆಂಬ್ಯುಲೆನ್ಸ್​ ಹೊರಕ್ಕೆ ಬಂದ ಬಳಿಕ ಜನರು ಕಂಠೀರವ ಸ್ಟೇಡಿಯಂ ಕಡೆಗೆ ಹೊರಟರು. ಆ ಬಳಿಕ ಕೊನೆಯ ಆಂಬ್ಯುಲೆನ್ಸ್​ ಅಪ್ಪು ಪಾರ್ಥಿವ ಶರೀರ ಹೊತ್ತು ಸದಾಶಿವನಗರ ನಿವಾಸದ ಕಡೆಗೆ ಸಾಗಿತ್ತು. ಇದೇ ತಂತ್ರವನ್ನು ಮತ್ತೊಮ್ಮೆ ಬಳಸಿದ ರಾಜ್ಯ ಸರ್ಕಾರ, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಅಂತಿಮ ಯಾತ್ರೆ ಶುರುವಾಗಲಿದೆ ಎಂದಿದ್ದ ಸರ್ಕಾರ, ಬೆಳಗ್ಗೆ 4.30ಕ್ಕೆ ಅಪ್ಪು ದೇಹವನ್ನು ಹೊತ್ತ ಚಿರಶಾಂತಿ ವಾಹನ ಕಂಠೀರವ ಸ್ಟುಡಿಯೋ ಕಡೆಗೆ ಚಕ್ರ ಉರುಳಿಸಿತ್ತು. ಅಭಿಮಾನಿಗಳು ಏನಾಗ್ತಿದೆ ಎನ್ನುವುದನ್ನು ಊಹೆ ಮಾಡುವ ಮುನ್ನವೇ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಂಠೀರವ ಸ್ಟುಡಿಯೋ ತಲುಪಿತ್ತು.

Read this;

ಅಪ್ಪು ಅಂತ್ಯಕ್ರಿಯೆ ಜಾಗದ ವಿಚಾರವೂ ಭಾರೀ ಚರ್ಚೆ..!

ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡುವುದಕ್ಕೆ ಸ್ವತಃ ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ಇಷ್ಟವಿರಲಿಲ್ಲ ಎನ್ನಲಾಗಿದೆ. ತಮ್ಮ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವೂ ಇತ್ತು. ಪುನೀತ್​ ರಾಜ್​ಕುಮಾರ್​ ನಟ ಎನ್ನುವ ಕಾರಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡಿರಬಹುದು. ಆದರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಕಾಲವಾದ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಅವಕಾಶ ಸಿಗುವುದಿಲ್ಲ. ತೋಟದ ಮನೆಯಲ್ಲಿ ಆದರೆ ಕುಟುಂಬದ ಆಸ್ತಿ ಹಾಗೂ ಯಾವುದೇ ಸಾರ್ವಜನಿಕರ ಕಿರಿಕಿರಿಯೂ ಆಗದು ಎನ್ನುವುದು ಅವರ ಮನದಾಳ. ತನ್ನ ನೆಚ್ಚಿನ ತೋಟದಲ್ಲಿ ಮಣ್ಣಾಗುವ ಕನಸು ಕಂಡಿದ್ದರು ಎನ್ನಲಾಗಿದೆ. ಆದರೆ ಸರ್ಕಾರ ಹಾಗೂ ಸಹೋದರರ ಒತ್ತಡದ ಬಳಿಕ ಕಂಠೀರವ ಸ್ಟುಡಿಯೋದಲ್ಲೇ ಅಂತ್ಯಕ್ರಿಯೆ ನೆರವೇರಿದೆ ಎನ್ನಲಾಗ್ತಿದೆ.

ಅಭಿಮಾನದ ಹೊಳೆಯಲ್ಲಿ ಪ್ರಾಣ ತೆತ್ತ ಕೆಲವರು..!

ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೂ ಮುನ್ನ 18 ಲಕ್ಷಕ್ಕೂ ಹೆಚ್ಚು ಪುನೀತ್​ ಅಭಿಮಾನಿಗಳು ಅಂತಿಮ ದರ್ಶನ ಪಡೆದ್ರು. ಪೊಲೀಸ್ರ ಲಾಠಿ ಏಟಿನ ನಡುವೆ ಪ್ರೀತಿಯಿಂದ ಅಂತಿಮ ನಮನ ಸಲ್ಲಿಸಿದ್ರು. ಚಾಮರಾಜನಗರ ಪುನೀತ್​ ಸಾವಿನ ಸುದ್ದಿ ಕೇಳಿದ ಕೂಡಲೇ ಕುಸಿದು ಬಿದ್ದ 29 ವರ್ಷದ ಮುನಿಯಪ್ಪ ಎಂಬ ಅಭಿಮಾನಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರಿನ ರಾಂಪುರದಲ್ಲಿ 30 ವರ್ಷದ ಶರತ್​ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಜಯನಗರದಲ್ಲಿ ಸಾದಪ್ಪ ಎಂಬ ಅಭಿಮಾನಿ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಉಡುಪಿಯಲ್ಲಿ ಆಟೋ ಡ್ರೈವರ್ ಆಗಿರುವ ಸತೀಶ್ ಎಂಬ ಅಭಿಮಾನಿ ತನ್ನ ಕೈ ತಾನೇ ಜಜ್ಜಿಕೊಂಡಿದ್ದಾನೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗಣೇಶ್​ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಯಚೂರಿನ ಸಿಂಧನೂರಿನ ಹಾರಾಪುರ ಗ್ರಾಮದ ಬಸನಗೌಡ ಹಾಗೂ ಯಾಪಲಪರ್ವಿ ಗ್ರಾಮದ ಮೊಹಮದ್ ರಫಿ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Read this;

ಜನರನ್ನು ಪ್ರೀತಿಸಿದರೆ ಸಾವಿನಲ್ಲಿ ಆ ಪ್ರೀತಿ ಜೊತೆಯಾಗುತ್ತೆ..!

ಇನ್ನುಳಿದಂತೆ ಸಾಕಷ್ಟು ಸಿನಿಮಾ ಮಂದಿ ಅಪ್ಪು ಅಂತಿಮ ದರ್ಶನಕ್ಕೆ ಬರಲೇ ಇಲ್ಲ. ಇನ್ನೂ ಕೆಲವರು ಬಂದರು ಎನ್ನುವುದನ್ನು ತೋರಿಸುವುದಲ್ಲೆ ಒಮ್ಮೆ ಬಂದು ಕಣ್ಮರೆಯಾದರು. ಆದರೆ ಅಭಿಮಾನಿಗಳು ಮಾತ್ರ ನಿರೀಕ್ಷೆಗೂ ಮೀರಿ ಅಂತಿಮ ನಮನ ಸಲ್ಲಿಸಿದ್ರು. ಇನ್ನೂ ವಿಶ್ವ ಮಟ್ಟದ ಬಿಬಿಸಿ ಸಂಸ್ಥೆಯಲ್ಲೂ ಪುನೀತ್​ ಸಾವಿನ ವಿಚಾರ ಸದ್ದು ಮಾಡಿತು. ಪ್ರಧಾನಿ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಕಂಬನಿ ಮಿಡಿದರು. ಅಪ್ಪು ನಾಯಕ ನಟನಾಗಿ ಮಾತ್ರ ಮನಸ್ಸು ಗೆದ್ದಿರಲಿಲ್ಲ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು ಎನ್ನುವುದು ಸಾವಿನಲ್ಲಿ ಬಹಿರಂಗವಾಯ್ತು. ನಾಯಕನಾಗಿ ಮಿಂಚಿದ ಮಾತ್ರಕ್ಕೆ ಜನರು ಇಷ್ಟೊಂದು ಗೌರವ ಸಲ್ಲಿಸುವುದಿಲ್ಲ ಎನ್ನುವುದನ್ನ ಮೆರೆದಾಡುವ ಜನರು ಅರ್ಥ ಮಾಡಿಕೊಳ್ಳಬೇಕಿದೆ.

Related Posts

Don't Miss it !