ಬೆಂಗಳೂರಲ್ಲಿ ನಡುರಾತ್ರಿ ಅತ್ಯಾಚಾರ..! ನಾನು ರೇಪ್ ಮಾಡಿಲ್ಲ ಎನ್ನುತ್ತಿರೋ ಚಾಲಕ..! ಇನ್ನೇನು..?

ಬೆಂಗಳೂರಿನ ಮುರುಗೇಶಪಾಳ್ಯದಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಜೀವನ್ ಭಿಮಾನಗರ ಠಾಣೆಗೆ ಸ್ವತಃ ಯುವತಿ ದೂರು ನೀಡಿರುವ ಘಟನೆ ನಡೆದಿದೆ. ಮಧ್ಯರಾತ್ರಿ ಊಬರ್​ ಕ್ಯಾಬ್​ನಲ್ಲಿ ತೆರಳಿದ್ದ ಆರೋಪಿ ಮಹಿಳೆ, ಕ್ಯಾಬ್​ ಚಾಲಕ ದೇವರಾಜ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376ರಡಿ ದೂರು ದಾಖಲು ಮಾಡಿಕೊಂಡಿರುವ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ. ಮಹಿಳೆ ಮನೆಯ ಬಳಿ ಬಂದಾಗ ಅತ್ಯಾಚಾರ ನಡೀತು ಎಂದು ಮಹಿಳೆ ಆರೋಪಿಸಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಇದೀಗ ಇದು ಅತ್ಯಾಚಾರವೇ ಎನ್ನುವ ಬಗ್ಗೆ ಖಾಕಿಪಡೆ ತನಿಖೆ ನಡೆಸುತ್ತಿದೆ.

ಅತ್ಯಾಚಾರದ ಬಗ್ಗೆ ದೂರು ಬಂದಿದೆ ಐಪಿಸಿ, ಸಿಆರ್​ಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತೆ. ತನಿಖೆ ಆದ ನಂತ್ರ ಕೆಲವು ವಿಷಯಗಳು ಗೊತ್ತಾಗಲಿದೆ. ತನಿಖೆ ನಡೆಸಿದ ನಂತ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹೇಳಿದ್ದಾರೆ. ನಸುಕಿನ ಜಾವ 3.30ರ ಸುಮಾರಿಗೆ ಯುವತಿ ಗೆಳತಿ ಮನೆಗೆ ಹೋಗಿ ವಾಪಸ್​ ಬರುವಾಗ ಘಟನೆ ನಡೆದಿದೆ. ಆಂಧ್ರ ಮೂಲದ ಆರೋಪಿ ದೇವರಾಜ್​ ಬಂಧನ ಮಾಡಿದ್ದೇವೆ. 2 ವರ್ಷ ಹಿಂದೆ ಬೆಂಗಳೂರಿಗೆ ಬಂದಿದ್ದ ಎಂದಿದ್ದಾರೆ.

ಜಾರ್ಖಂಡ್ ಮೂಲದ ಯುವತಿ ಮೇಲೆ ಅತ್ಯಾಚಾರದ ಬಳಿಕ ಯುವತಿ ಜೊತೆಗೆ ಚಾಲಕ ಜಗಳವಾಡಿದ್ದ ಎನ್ನಲಾಗಿದೆ. ಜಗಳದ ವೇಳೆ ಮೊಬೈಲ್ ಕಿತ್ತುಕೊಂಡಿದ್ದ ಯುವತಿ ಬೆಳಗ್ಗೆ ಠಾಣೆಗೆ ಹೋಗಿ ದೂರು ನೀಡಿದ್ದಳು. ಯುವತಿ ದೂರು ನೀಡಿದ ಬಳಿಕ ಮನೆಯಲ್ಲಿದ್ದ ಆರೋಪಿ ದೇವರಾಜ್​ನನ್ನು ಅರೆಸ್ಟ್​ ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಚಾಲಕನ ವಿಚಾರಣೆ ಬಳಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಲಾಗಿದೆ. ಯುವತಿ ಹೊಟೇಲ್​ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿರಿಯ ಪೊಲೀಸ್​ ಅಧಿಕಾರಿಗಳು ಕ್ಯಾಬ್ ಚಾಲಕನ ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಚಾಲಕ ನಾನು ರೇಪ್​ ಮಾಡಿಲ್ಲ ಎಂದು ಪೊಲೀಸರ ಬಳಿ ಗೋಗರೆಯುತ್ತಿದ್ದಾನೆ ಎನ್ನಲಾಗಿದೆ. ಡಿಸಿಪಿ ಶರಣಪ್ಪ ಮತ್ತು ಹೆಚ್ಚುವರಿ ಆಯುಕ್ತ ಮುರುಗನ್ ವಿಚಾರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಸತ್ಯಾಂಶ ಏನು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅತ್ಯಾಚಾರ ನಡೆಯುವ ವೇಳೆ ಯುವತಿ ಯಾಕೆ ವಿರೋಧಿಸಲಿಲ್ಲ..? ಜೊತೆಗೆ 3.30ರ ಸಮಯದಲ್ಲಿ ಒಂಡಿಯಾಗಿ ಬಂದಿದ್ದು ಎಲ್ಲಿಂದ..? ಅತ್ಯಾಚಾರ ನಡೆದ ಬಳಿಕ ಜಗಳ ಆಡುವುದಕ್ಕೆ ಇಬ್ಬರಿಗೂ ಮೊದಲೇ ಪರಿಚಯವಿತ್ತಾ..? ಸಮ್ಮತಿ ಸೆಕ್ಸ್​ ನಡೆಸಿದ ಬಳಿಕ ಹಣಕಾಸಿನ ವಿಚಾರಕ್ಕೆ ಏನಾದರೂ ಗಲಾಟೆ ನಡೆಯಿತಾ..? ಈ ವೇಳೆ ಯುವತಿ ಮೊಬೈಲ್​ ಕಿತ್ತುಕೊಂಡಿದ್ದಕ್ಕೆ ಜಗಳ ನಡೀತಾ..? ಅತ್ಯಾಚಾರ ಮಾಡಿದ್ದರೆ ಯುವಕ ನೇರವಾಗಿ ಮನೆಗೆ ಹೋಗುವುದಕ್ಕೆ ಸಾಧ್ಯವಿತ್ತಾ..? ಈ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಲಾಗ್ತಿದೆ.

ಮೊದಲಿಗೆ ಅತ್ಯಾಚಾರ ಪ್ರಕರಣವನ್ನು ನಿರಾಕರಿಸಿದ ಚಾಲಕ ದೇವರಾಜ್​, ಅಂತಿಮವಾಗಿ ಅತ್ಯಚಾರವಲ್ಲ, ಲೈಂಗಿಕ ಕ್ರಿಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ಕಾನೂನು ಕಠಿಣ ಆಗಿರುವ ಸಮಯದಲ್ಲಿ ಯುವತಿ ದೂರು ಕೊಟ್ಟ ಬಳಿಕ ಪೊಲೀಸರು ಕಾನೂನು ರೀತ್ಯ ಕ್ರಮ ಕೈಗೊಂಡಿದ್ದಾರೆ. ಮುಂದಿನ ವಿಚಾರಣೆ ವೇಳೆ ಸಮ್ಮತಿ ಸೆಕ್ಸ್​ ಎನ್ನುವುದು ಖಚಿತವಾದರೆ ಕೋರ್ಟ್​ನಲ್ಲಿ ಯುವತಿ ಕೊಟ್ಟ ದೂರು ಬಿದ್ದು ಹೋಗಲಿದೆ. ಅಥವಾ ಅತ್ಯಾಚಾರ ಎನ್ನುವುದಕ್ಕೇ ಸಾಕ್ಷ್ಯಗಳು ಲಭ್ಯವಾದರೆ ಅತ್ಯಾಚಾರ ಆರೋಪಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

Related Posts

Don't Miss it !