ಕರ್ನಾಟಕ, ತೆಲಂಗಾಣದಲ್ಲಿ ಭೂಕಂಪನ.. ಭಯಭೀತರಾದ ಜನತೆ..!

ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಮನೆಯಲ್ಲಿ ಜೋಡಿಸಿಟ್ಟ ಪಾತ್ರೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಜನರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಚಿಂಚೋಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಈ ಅನುಭವ ಆಗಿದ್ದು, ಭೂಮಿಯ ಒಳಗಿನಿಂದ ಶಬ್ಧ ಕೇಳಿಸಿದೆ. ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ, ರಾಯಖೋಡಿಯಲ್ಲಿ ಭೂಮಿ ಕಂಪನ ಆಗಿರುವುದು ಖಚಿತವಾಗಿದೆ. ಈ ಬಗ್ಗೆ ಮಾತನಾಡಿರುವ ಕಲಬುರಗಿ ಸಂಸದ ಉಮೇಶ್ ಜಾಧವ್ ಚಿಂಚೋಳಿ, ಕಾಳಗಿ ಸೇಡಂ ತಾಲೂಕಿನಲ್ಲೂ ಭೂಕಂಪನದ ಅನುಭವ ಆಗಿದೆ. 2016, 2017ರಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಕಲಬುರಗಿ ಡಿಸಿ ಹಾಗೂ ಗಣಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಭೂಕಂಪನ ತೀವ್ರತೆ ಕಡಿಮೆ ಇರುವ ಕಾರಣ ಭೂಕಂಪನ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಎಚ್ಚರಿಕೆ ವಹಿಸಲು ಗ್ರಾಮಗಳಲ್ಲಿ ಡಂಗೂರ..!

ತೆಲಂಗಾಣದ ಗಡಿ ಗ್ರಾಮಗಳಲ್ಲಿ ಸ್ಥಳೀಯ ಆಡಳಿತ ಮಂಡಳಿಯಿಂದ ಡಂಗೂರ ಸಾರಿಸಲಾಗಿದೆ. ಇವತ್ತು ರಾತ್ರಿ 7.29ಕ್ಕೆ ಭೂಮಿ ಕಂಪನ ಆಗಿದೆ. ತೆಲಂಗಾಣದ ಗಡಿ ಭಾಗದ ಹಲವೆಡೆ ಸುಮಾರು 20 ಸೆಕೆಂಡ್​ಗಳ ಕಾಲ ಭೂಕಂಪನ ಸಂಭವಿಸಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಅನೇಕ ಗ್ರಾಮಗಳಲ್ಲಿ ಭೂಕಂಪನದ ಅನುಭವ ಬಂದಿದೆ. ರಾತ್ರಿ ಸ್ವಲ್ಪ ಹುಷಾರಾಗಿ ಮಲಗಿ ಎಂದು ಆಂಧ್ರ ಗಡಿಗೆ ಹೊಂದಿಕೊಂಡಂತೆ ಇರುವ ಊರುಗಳಲ್ಲಿ ಘೋಷಣೆ ಕೂಗಿಸಿದ್ದಾರೆ.

ಇದನ್ನೂ ಓದಿ

ಕೇಂದ್ರದಿಂದಲೂ ಅಧಿಕಾರಿಗಳ ಕರೆಸಲು ನಿರ್ಧಾರ..!

2016ರಿಂದ ಪದೇ ಪದೇ ಈ ರೀತಿ ಭೂಮಿ ಕಂಪಿಸಿದ ಅನುಭ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದು, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳನ್ನು ಕರೆಸಿ ಭೂಮಿ ಕಂಪಿಸಲು ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚಲಾಗುವುದು ಎಂದು ಕಲಬುರಗಿ ಸಂಸದ ಉಮೇಶ್​​ ಜಾಧವ್​ ತಿಳಿಸಿದ್ದಾರೆ. ಭೂಗರ್ಭ ಶಾಸ್ತ್ರ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದು, ಈ ಬಾರಿ ಭೂಕಂಪನಕ್ಕೆ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚುತ್ತೇವೆ. ಜನರು ಯಾವುದೇ ಭೀತಿಗೆ ಒಳಗಾಗುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ

ಭೂಕಂಪನದಿಂದ ರಕ್ಷಣೆ ಪಡೆಯುವುದು ಹೇಗೆ..?

ಭೂಕಂಪನ ಎಂದರೆ ಭೂಮಿ ಬಾಯಿ ಬಿಟ್ಟುಕೊಂಡು ಎಲ್ಲರನ್ನು ಗುಳುಂ ಸ್ವಾಹಂ ಮಾಡುವುದಿಲ್ಲ. ಆದರೆ ಭೂಮಿ ಒಳಗೆ ನಡೆಯುವ ಪ್ರಕ್ರಿಯೆಗಳ ಪರಿಣಾಮ ಭೂಮಿ ತನ್ನ ಸ್ವರೂಪವನ್ನು ಬದಲು ಮಾಡಿಕೊಳ್ಳುತ್ತದೆ. ಅಂದರೆ ಭೂಮಿ ಒಳಗೆ ಲಾವರಸದ ಒತ್ತಡ ಹೆಚ್ಚಾದಾಗ ಬೆಟ್ಟದಂತೆ ಭೂಮಿ ಊದಿಕೊಳ್ಳಬಹುದು. ಅಥವಾ ಒತ್ತಡ ಏಕಾಏಕಿ ಕಡಿಮೆ ಆದಾಗ ಅಲ್ಲಲ್ಲಿ ಕುಳಿಗಳು ಬೀಳಬಹುದು. ಈ ಸಮಯದಲ್ಲಿ ಕಟ್ಟಗಳು ಬಿರುಕು ಬಿಡುವುದು. ಮೇಲ್ಛಾವಣಿ ಕುಸಿತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಬಹುತೇಕ ಭೂಕಂಪನಗಳಲ್ಲಿ ಗೋಡೆಗಳು ಬಿದ್ದು ಸಾವನ್ನಪ್ಪುವುದೇ ಅಧಿಕ. ಈ ರೀತಿಯ ಕಂಪನ ಕಂಡು ಬಂದ ಬಳಿಕ ಹೊರಾಂಗಣದಲ್ಲಿ ಅಂದರೆ ಬಯಲು ಪ್ರದೇಶದಲ್ಲಿ ನಿದ್ರಿಸುವುದು ಅಥವಾ ಮಂಚದ ಕೆಳಭಾಗದಲ್ಲಿ ನಿದ್ರಿಸುವುದು ಸೂಕ್ತ ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞರು.

Related Posts

Don't Miss it !