‘ಚುನಾವಣೆ ಪ್ರಜಾಪ್ರಭುತ್ವದ ಹಬ್ಬ’ ಎನ್ನುವುದು ಮೂರ್ಖತನ ಆದೀತು..!

ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ಹೇಳುವುದೇ ಶುದ್ಧ ಸುಳ್ಳು. ಯಾಕೆಂದರೆ ಹಬ್ಬ ಎಂದರೆ ಸಂಭ್ರಮ, ಅನುಭವಿಸಿದ ಎಲ್ಲಾ ಕಷ್ಟ, ನೋವುಗಳನ್ನು ಮರೆತು ಸಂಭ್ರಮಿಸುವ ಕ್ಷಣ ಮಾತ್ರ. ಆದರೆ ಚುನಾವಣೆ ಎನ್ನುವುದನ್ನು ಹಬ್ಬ ಎನ್ನುವ ಮೂಲಕ ಜನರನ್ನು ಮರಳು ಮಾಡಿ ಮತ ಪಡೆಯುವ ಉದ್ದೇಶದಿಂದಲೇ ಹಬ್ಬ ಎನ್ನುವ ಮಾತುಗಳನ್ನು ಆಡುತ್ತಾರೆ. ಹಬ್ಬ ಎನ್ನುವ ಕಾರಣಕ್ಕೆ ರಾಜಕಾರಣಿಗಳು ಕೊಡುವ ಕಾಸಿನಿಂದ ಕುಡಿದು, ಮಜಾ ಮಾಡಿದರೆ, ಮುಂದಿನ ಐದು ವರ್ಷಗಳ ಕಾಲ ನಮ್ಮ ಬದುಕನ್ನೇ ನರಕಕ್ಕೆ ತಳ್ಳುವ ಕೆಲಸ ಆಗುತ್ತದೆ. ಯಾವುದೇ ಕಾರಣಕ್ಕೂ ಚುನಾವಣೆಯನ್ನು ಸಂಭ್ರಮಿಸಬಾರದು. ಮೈಮರೆಯಬಾರದು.

ಚುನಾವಣೆ ಎನ್ನುವುದು ಮತದಾರರಿಗೆ ಪರೀಕ್ಷೆ..!

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎನ್ನುವುದು ವಿದ್ಯಾರ್ಥಿಗಳಿಗರ ಪರೀಕ್ಷೆ ಇದ್ದಂತೆ. ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು, ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ. ಕೊಡುವ ಕಾಸಿಗೋ..? ತೋರಿಸುವ ಆಮೀಷಕ್ಕೋ ಬಲಿಯಾಗದೆ ಉತ್ತಮ ನಡತೆ ಉಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ವಿದ್ಯಾರ್ಥಿಗಳಾದ ಮತದಾರರ ಹಕ್ಕು. ಒಂದೊಮ್ಮೆ ಈ ಪರೀಕ್ಷೆಯಲ್ಲಿ ಸೋಲುಂಡರೆ ಮತ್ತೆ ಮುಂದಿನ ಚುನಾವಣೆ ತನಕ ಸಮಾಜ ವಿರೋಧಿ ಕೆಲಸಗಳನ್ನು ಅನುಭವಿಸಬೇಕಾಗುತ್ತದೆ.

Read this;

ನಿಜವಾಗಿ ಪರೀಕ್ಷೆ ಎದುರಿಸಬೇಕಿದ್ದದ್ದು ರಾಜಕಾರಣಿಗಳು..?

ಚುನಾವಣೆ ಎನ್ನುವುದು ಅದೃಷ್ಟ ಪರೀಕ್ಷೆ ಎನ್ನುವುದು ರಾಜಕಾರಣಿಗಳ ಮಾತು. ಆದರೆ ಆ ಪರೀಕ್ಷೆಯಲ್ಲಿ ಉತ್ತೀರ್ಣ ಆದವರು ಹಣ ಮಾಡುವ ಉದ್ದೇಶದಿಂದ ದಂಧೆ ನಡೆಸುತ್ತಾರೆ. ಸಮಾಜಕ್ಕೆ ಮಾರಕವಾದ ಕೆಲಸಗಳನ್ನು ಮಾಡುತ್ತಾರೆ‌. ಜನರ ಸಮಸ್ಯೆಗಳ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡಿ, ಅಧಿಕಾರ ಸಿಕ್ಕ ಬಳಿಕ ಬಡವರನ್ನು ಕಾಲು ಕಸ ಮಾಡಿಕೊಳ್ತಾರೆ. ಯಾರೂ ಗೆದ್ದರೂ ಅದೇ ಸ್ಥಿತಿ ಎನ್ನಬಹುದು. ಅದೂ ಕೂಡ ನಿಜ. ಆದರೆ ಎಲ್ಲಾ ಕಳ್ಳರ ನಡುವೆ ಉತ್ತಮ ಕಳ್ಳನನ್ನು ಆಯ್ಕೆ ಮಾಡಬೇಕು ಎನ್ನುವ ಪರುಸ್ಥಿತಿ ರಾಜಕೀಯದಲ್ಲಿ ಎದುರಾಗಿದೆ. ಒಮ್ಮೆ ಆಯ್ಕೆಯಾದ ಜನಪ್ರತಿನಿಧಿ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಮುಂದಿನ ಬಾರಿ ಹೊಸಬರನ್ನು ಆಯ್ಕೆ ಮಾಡುವ ಚಾತಿ ಬೆಳೆಸಿಕೊಳ್ಳಬೇಕಿದೆ.

Also Read;

ಜಾತಿ, ಧರ್ಮ ಮೀರಿ ಮತ ಚಲಾಯಿಸಿದರೆ ಸಮಾಜಕ್ಕೆ ಉತ್ತಮ..!

ರಾಜಕಾರಣ ಎಂದರೆ ಕೆಲವು ಕುಟುಂಬದ ಸ್ವತ್ತು ಎನ್ನುವಂತಾಗಿದೆ. ಈ ಮಾತು ಕೇಳಿದ ತಕ್ಷಣ ದೇವೇಗೌಡರ ಕುಟುಂಬ ನಿಮ್ಮ ಕಣ್ಣ ಮುಂದೆ ಬಂದೆ ನಾನು ಜವಾಬ್ದಾರನಲ್ಲ. ಆದರೆ ಇದೀಗ ಎಲ್ಲಾ ಪಕ್ಷಗಳೂ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿವೆ ಎನ್ನುವುದು ಕಟು ಸತ್ಯ. ಆದರೆ ಜನರು ಧರ್ಮ, ಜಾತಿಯನ್ನು ಮೀರಿ ಉತ್ತಮ ವಿದ್ಯಾಭ್ಯಾಸ ಮಾಡಿರುವ ಜನರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ನಮ್ಮ ತನವನ್ನು ಕಾಪಾಡಬಲ್ಲ ಪ್ರಾದೇಶಿಕ ಪಕ್ಷ ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತಮ ಎನ್ನಬಹುದು. ಯಾವ ಪಕ್ಷದವರು ಹಣ ಕೊಟ್ಟರೂ ಒಲ್ಲೆ ಎನ್ನದೆ ಪಡೆದುಕೊಂಡು ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವ ದೊಡ್ಡತನ ತೋರಿಸಬೇಕು. ಕೊಟ್ಟ ಹಣಕ್ಕೆ ವಂಚನೆ ಮಾಡಬಾರದು ಎಂದು ಮತ ಚಲಾವಣೆ ಮಾಡದಿದ್ದರೆ ಭ್ರಷ್ಟರನ್ನು ಖಾಲಿ ಕೈ ಮಾಡಿ ಮುಗಿಸಬಹುದು. ಬಂಡವಾಳ ಹೂಡುವ ವ್ಯಾಪಾರಿ ಬಡ್ಡಿ ಸಮೇತ ಸಂಪಾದನೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಮತದಾರನಿಗೆ ಚುನಾವಣೆ ಒಂದು ಪರೀಕ್ಷೆ. ಉತ್ತಮರ ಆಯ್ಕೆ ನಿಮ್ಮದಾಗಲಿ.

Related Posts

Don't Miss it !