Eshwarappa Resing: ಹಠ ಬಿಟ್ಟು ನಾಳೆ ಸಂಜೆ ರಾಜೀನಾಮೆ..! ಬಂಧನ ಯಾವಾಗ..?

ಗುತ್ತಿಗೆದಾರ ಸಂತೋಷ್​ ಪಾಟೀಲ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಆರೋಪಿ ಆಗಿರುವ ಸಚಿವ ಕೆ.ಎಸ್​ ಈಶ್ವರಪ್ಪ ಕೊನೆಗೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೊದಲಿಗೆ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ, ಇದೀಗ ಪಕ್ಷದ ಒಳಿತಿಗಾಗಿ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಏಕಾಏಕಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಕರೆದ ಕೆ.ಎಸ್​ ಈಶ್ವರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇಲ್ಲೀವರೆಗೂ ಕೆಲಸ ಮಾಡಿದ್ದೇನೆ. ನಾಳೆ ಸಂಜೆ ಬೆಂಗಳೂರಿನಲ್ಲಿ ರಾಜಿನಾಮೆ ನೀಡುತ್ತೇನೆ. ಈ ಬಗ್ಗೆ ನಾನು ತೀರ್ಮಾನ ಮಾಡಿದ್ದೇನೆ. ನಾನು ರಾಜೀನಾಮೆ ಕೊಡ್ತೇನೆ ಎಂದಿದ್ದಾರೆ. ನನ್ನನ್ನು ಇಲ್ಲೀವರೆಗೆ ಜನರು ಬೆಳೆಸಿದ್ದಾರೆ. ಅವರಿಗೆ ಇರಿಸು ಮುರಿಸು ಅಗಬಾರದು ಎನ್ನುವ ಒಂದೇ ಕಾರಣಕ್ಕೆ ನಾನು ರಾಜೀನಾಮೆ ಕೊಡ್ತಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್​​ ಹೋರಾಟದ ಬಿರುಸಿಗೆ ಬೆದರಿದ ಸರ್ಕಾರ..!

ಕಾಂಗ್ರೆಸ್​ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು. ಅಹೋರಾತ್ರಿ ಧರಣಿಯನ್ನೂ ನಡೆಸುತ್ತಿದೆ. ವಿಧಾನಸೌಧದಲ್ಲಿ ಶುರುವಾಗಿರುವ ಅಹೋರಾತ್ರಿ ಧರಣಿ ನಡೆಸಲಾಗ್ತಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು ಮಾಡಲಬೇಕು. ಕೂಡಲೇ ಈಶ್ವರಪ್ಪ ಅವರನ್ನು ಅರೆಸ್ಟ್​ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್​ ನಾಯಕರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್​​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಕೂಡ ಭಾಗಿಯಾಗಿದ್ದರು. ಈ ವೇಳೆ ಬ್ಯಾರಿಕೇಡ್​ ಮೇಲೆ ಹತ್ತಿ ಪೊಲೀಸರ ಕಡೆಗೆ ಡಿ.ಕೆ ಶಿವಕುಮಾರ್​ ಹಾರಿದ್ದು, ಇಡೀ ಕರ್ನಾಟಕದ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿತ್ತು. ಇನ್ನು ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ತೀವ್ರ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಇದಕ್ಕೆ ಬೆದರಿದ ಬಿಜೆಪಿ ರಾಜೀನಾಮೆ ಪಡೆಯುವ ತೀರ್ಮಾನ ಮಾಡಿದೆ.

ಸಿಎಂ ಕಾರ್ಯಕ್ರಮ ಕ್ಯಾನ್ಸಲ್​, ನಾಳೆ ಸಂಜೆ ಮುಹೂರ್ತ..!

ಹುಬ್ಬಳ್ಳಿ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಬೆಳಗ್ಗೆ ಗದಗ ಪ್ರವಾಸ ಮಾಡಿಕೊಂಡು ಮತ್ತೆ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡುವ ಕಾರ್ಯಕ್ರಮ ನಿಗದಿ ಆಗಿತ್ತು. ಆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕಾರ್ಯಕ್ರಮ ಶುಕ್ರವಾರ ಸಂಜೆಗೆ ನಿಗದಿ ಆದ ಕಾರಣ ಸಿಎಂ ಪ್ರವಾಸದ ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ನಾಳೆ ಗದಗ ಪ್ರವಾಸದ ಬಳಿಕ ಬೆಂಗಳೂರಿಗೆ ಆಗಮಿಸಲಿರುವ ಸಿಎಂ, ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಶನಿವಾರ ಬೆಳಗ್ಗೆ ಹೊಸಪೇಟೆ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಬೆಳವಣಿಗೆ ಈಶ್ವರಪ್ಪ ಬೆಂಬಲಿಗರಿಗೆ ನುಂಗಲಾರದ ತುಪ್ಪದಂತಾಗಿದ್ದು, ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಂದಲೇ ಈಶ್ವರಪ್ಪ ರಾಜೀನಾಮೆ ನೀಡುವಂತಾಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ನಡೆದಿದೆ. ಆದರೆ ಈ ಬೆಳವಣಿಗೆ ಮೃತ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಕುಟುಂಬಸ್ಥರಿಗೆ ಸಂತಸ ತಂದಿಲ್ಲ. ಬದಲಿಗೆ ರಾಜೀನಾಮೆ ಕೊಡುವಂತೆ ನಾವು ಕೇಳಿಲ್ಲ ಎಂದಿದ್ದಾರೆ.

ಈಶ್ವರಪ್ಪ ಬಂಧನ ಆಗಬೇಕು ಎನ್ನುವುದು ನಮ್ಮ ಆಗ್ರಹ..!

ಈಶ್ವರಪ್ಪ ರಾಜೀನಾಮೆ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಅತ್ತ ಬೆಳಗಾವಿಯಲ್ಲಿ ಮಾತನಾಡಿರುವ ಗುತ್ತಿಗೆದಾರ ಸಂತೋಷ್​ ಪಾಟೀಲ ಸಹೋದರ ಪ್ರಶಾಂತ್​ ಪಾಟೀಲ್​, ನಾವು ಈಶ್ವರಪ್ಪ ರಾಜೀನಾಮೆ ಕೇಳಿಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಸಂತೋಷ್​ ಪಾಟೀಲ್​ ಸಾವಿನ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯಾಗಿರುವ ಕೆ.ಎಸ್ ಈಶ್ವರಪ್ಪ ಕೂಡ ಬಂಧನ ಆಗಬೇಕು ಎಂದಿದ್ದಾರೆ. ನನ್ನ ತಮ್ಮ ಮಾಡಿರುವ 108 ಕಾಮಗಾರಿಯ ಬಿಲ್ ಮೊತ್ತ 4 ಕೋಟಿ 12 ಲಕ್ಷ ರೂಪಾಯಿ ಹಣ ಪಾವತಿ ಮಾಡಬೇಕು. ನನ್ನ ತಮ್ಮನ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು, ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಆದರೆ ಈ ಸಾವಿನ ಕೇಸ್​ನಲ್ಲಿ ನನ್ನ ಪಾತ್ರ ಒಂದೇ ಒಂದು ಪರ್ಸೆಂಟ್ ಇದ್ದರೂ, ದೇವರೇ ನನಗೆ ಶಿಕ್ಷೆ ಕೊಡಲಿ ಎಂದು ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ. ಆದರೆ ಅನುಮಾನಗಳು ಮಾತ್ರ ಈಶ್ವರಪ್ಪ ಕಡೆಗೆ ಬೊಟ್ಟು ಮಾಡುತ್ತಿವೆ.

ಸಂತೋಷ್​ ಪಾಟೀಲ್​ ಸಾವಿನ ಕೇಸ್​ನಲ್ಲಿ ಅನುಮಾನಗಳು..!

ಸಚಿವ ಈಶ್ವರಪ್ಪ ಇಲ್ಲೀವರೆಗೂ ಸಂತೋಷ್​ ಪಾಟೀಲ್​ ನನಗೆ ಗೊತ್ತು ಎಂದಾಗಲಿ, ನನ್ನ ಕೊತೆಗೆ ಜೊತೆಗೆ ಮಾತನಾಡಿದ್ದರು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಈಶ್ವರಪ್ಪ ಅವರನ್ನು ಸಂತೋಷ್​ ಪಾಟೀಲ್​ ಜೊತೆಗೆ ಎರಡು ಬಾರಿ ಭೇಟಿ ಮಾಡಿದ್ದೇನೆ. 108 ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದ್ದೆವು. ಕೆಲಸ ಆರಂಭಿಸಿ, ಉತ್ತಮವಾಗಿ ಕೆಲಸ ಮಾಡಿ ಎಂದು ಸಚಿವರು ಭರವಸೆ ನೀಡಿದ್ದರು ಎಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್​ ಮುನ್ನೋಳ್ಕರ್​ ಹೇಳಿದ್ದಾರೆ. ಇನ್ನೂ ಹಣ ಬಿಡುಗಡೆ ಮಾಡಿಸುವಂತೆ ಒತ್ತಾಯ ಮಾಡಲು 80 ರಿಂದ 90 ಈಶ್ವರಪ್ಪ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಸಂತೋಷ್​ ಪಾಟೀಲ್​ ಸಹೋದರ ಮಾಹಿತಿ ನೀಡಿದ್ದಾರೆ. ತಾಂತ್ರಿ ಕ ಸಾಕ್ಷಿಗಳನ್ನು ಸಂಗ್ರಹ ಮಾಡಿದರೆ ಈಶ್ವರಪ್ಪ ಬಂಧನ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಿವೆ ಮೂಲಗಳು.

Related Posts

Don't Miss it !