3 ವರ್ಷಕ್ಕೊಮ್ಮೆ ಮಾತ್ರ ಕಳವು..! ಬೆಂಗಳೂರಲ್ಲಿ ಈ ವರ್ಷ ಬ್ಲಾಕ್​ ಪಲ್ಸರ್​ ಬೇಟೆ..!

ಒಂಟಿ ಮನೆಯನ್ನು ಟಾರ್ಗೆಟ್​ ಮಾಡಿ ಕಳ್ಳತನ ಮಾಡೋದು ದಂಡುಪಾಳ್ಯ ಗ್ಯಾಂಗ್​. ಕಳ್ಳತನ ಮಾಡಿದ ಬಳಿಕ ಮನೆಯಲ್ಲಿ ಇದ್ದವರನ್ನು ಕೊಲೆ ಮಾಡಿ ಹೋಗ್ತಿತ್ತು. ಇರಾನಿ ಗ್ಯಾಂಗ್​ ಸರಗಳ್ಳತನದಲ್ಲಿ ಎತ್ತಿದ ಕೈ, ಹೀಗೆ ಹಲವಾರು ಕಳ್ಳತನ ಮಾಡುವ ಗ್ಯಾಂಗ್​​ಗಳು ರಾಜಧಾನಿ ಜನರನ್ನು ಕಾಡುವುದು ಸರ್ವೇ ಸಾಮಾನ್ಯ. ಆದರೆ ಇದೀಗ ಬೆಂಗಳೂರು ಪೊಲೀಸರಿಗೆ ತಲೆ ನೋವು ತರಿಸಿದ್ದ ಶಾಮ್ಲಿ ಗ್ಯಾಂಗ್​. ಒಂದೇ ದಿನ 19 ಕಡೆ ಚಿನ್ನದ ಸರ ಕಳವು ಮಾಡಿ ಎಸ್ಕೇಪ್​ ಆಗಿದ್ರು. ಈ ಕೃತ್ಯದ ಹಿಂದೆ ಇರುವ ಟೀಂ ಯಾವುದು ಎಂಬುದನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿ ಆಗಿದ್ದಾರೆ. ಉತ್ತರ ಪ್ರದೇಶದಿಂದ ಇಬ್ಬರು ಖದೀಮರನ್ನು ಅರೆಸ್ಟ್​ ಮಾಡಿ ಕರೆ ತಂದಿದ್ದಾರೆ. ಇವರು ಕೊಟ್ಟಿರುವ ಮಾಹಿತಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.

ಬೆಂಗಳೂರು ಈ ಬಾರಿ ಖದೀಮರ ಟಾರ್ಗೆಟ್​..!

ಉತ್ತರ ಪ್ರದೇಶದ ಪುಟ್ಟ ಹಳ್ಳಿಯ ಕಳ್ಳರ ಗುಂಪು ಶಾಮ್ಲಿ ಗ್ಯಾಂಗ್​. ಈ ಊರಿನಲ್ಲಿ ಪ್ರತಿಯೊಬ್ಬರು ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಆದ್ರೆ ವಿಶೇಷ ಅಂದ್ರೆ ಮೂರು ವರ್ಷಕ್ಕೆ ಒಮ್ಮೆ ರಾಜಧಾನಿಗೆ ಎಂಟ್ರಿ ಕೊಡ್ತಾರೆ. ಪ್ರತಿ ಭಾರಿ ಬಂದಾಗಲೂ ಸಾಕಷ್ಟು ಕಳ್ಳತನ ಮಾಡಿಕೊಂಡು ಹೋಗ್ತಾರೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಟೀಂ ಚೆನ್ನೈನಲ್ಲಿ ಚಿನ್ನದ ಸರ ಕಳವು ಮಾಡಿತ್ತು. ಕಳೆದ ಆರು ವರ್ಷದ ಹಿಂದೆ ಇದೇ ಟೀಂ ಬೆಂಗಳೂರಿನ ರಾಜಾಜಿನಗರದಲ್ಲಿ ಕಳ್ಳತನ ಮಾಡಿತ್ತು ಎನ್ನುವುದು ಈಗ ಬಯಲಾಗಿದೆ. ಅಂದರೆ ಮೂರು ವರ್ಷಕ್ಕೆ ಒಮ್ಮೆ ದೇಶದ ರಾಜಧಾನಿ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಕಳವು ಮಾಡುವುದು ಇವರ ವೈಶಿಷ್ಟ್ಯ. ಈ ಬಾರಿ ಬೆಂಗಳೂರಿನಲ್ಲಿ ಕಳ್ಳತನಕ್ಕೆ ಬಂದಿದ್ದು, ಇಬ್ಬರ ಬಂಧನ ಆಗಿದೆ. ಇನ್ನೂ ಸಾಕಷ್ಟು ಜನರು ಬಂದಿದ್ದಾರಾ..? ಎಲ್ಲಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ವಿಮಾನದಲ್ಲಿ ಬರ್ತರೆ, ರೈಲಿನಲ್ಲಿ ವಾಪಸ್​ ಹೋಗ್ತಾರೆ..!

ಉತ್ತರ ಪ್ರದೇಶದಿಂದ ಬರುವಾಗ ವಿಮಾನದಲ್ಲಿ ಬರುವ ಈ ಶಾಮ್ಲಿ ಗ್ಯಾಂಗ್​ನ ಕಳ್ಳರು, ಕಳ್ಳತನ ಮಾಡಿದ ಬಳಿಕ ರೈಲು ಮೂಲಕ ಊರು ತಲುಪುತ್ತಾರೆ. ಇದಕ್ಕೆ ಕಾರಣ, ಪೊಲೀಸರ ಭಯ. ವಿಮಾನದಲ್ಲಿ ಬರುವಾಗ ಹೈಫೈ ಜನರಂತೆ ಬಂದು ಕಳ್ಳತನ ಮಾಡಿದ ಮತ್ತೆ ಫ್ಲೈಟ್​ನಲ್ಲಿ ಹೋಗಲು ಸಾಧ್ಯವಿಲ್ಲ. ಏರ್​ಪೋರ್ಟ್​ನಲ್ಲಿ ಚಿನ್ನದ ಸರ ಕಂಡ ಕೂಡಲೇ ಅರೆಸ್ಟ್​ ಮಾಡಲಾಗುತ್ತದೆ. ರೈಲಿನಲ್ಲಿ ಭದ್ರತೆ ಇರೋದಿಲ್ಲ ಎನ್ನುವ ಕಾರಣಕ್ಕೆ ಚಿನ್ನದ ಸರ ತುಂಬಿಕೊಂಡು ಊರಿನ ರೈಲು ಹತ್ತುತ್ತಾರೆ. ಈ ಬಾರಿ ಕೂಡ ಜೂನ್​ 30ರಂದು ಕಳ್ಳತನ ಮಾಡಿದ ಬಳಿಕ ರೈಲು ಮೂಲಕ ಊರು ತಲುಪಿದ್ರು. ಚಿನ್ನದ ಸರಗಳನ್ನು ಮಾರಾಟ ಮಾಡಿ, ಮನೆಗೆ ಬೇಕಾದ ವಾಷಿಂಗ್​ ಮೆಷಿನ್​, ಫ್ರಿಡ್ಜ್​ ಸೇರಿದಂತೆ ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಿದ್ರು. ಆದರೂ ಬೆನ್ನು ಹತ್ತಿದ ಪೊಲೀಸ್​ ಟೀಂ ಕೋಳ ತೊಡಿಸಿ ಕರೆದುಕೊಂಡು ಬಂದಿದೆ.

ಕಳ್ಳತನ ಮಾಡಲು ಪ್ಲ್ಯಾನ್ ಹೇಗಿತ್ತು ಗೊತ್ತಾ..?

ಜೂನ್ ಮೊದಲ ವಾರದಲ್ಲೇ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದ ಶಾಮ್ಲಿ ಗ್ಯಾಂಗ್, ಸರ್ಜಾಪುರದ ಬಳಿ ಸ್ನೇಹಿತನ ರೂಮ್​ನಲ್ಲಿ ಉಳಿದುಕೊಂಡಿತ್ತು. ಅಲ್ಲೇ 220 ಸಿಸಿ ಬ್ಲಾಕ್​ ಪಲ್ಸರ್ ಬೈಕ್ ಕಳವು ಮಾಡಿ ಬೆಂಗಳೂರು ಹೊರಹೊಲಯದಲ್ಲಿ ಸುತ್ತಾಡಿದ್ರು. ಬೆಂಗಳೂರಿನಲ್ಲಿ ಸಿಎಂ ಕಾರ್ಯಕ್ರಮದ ಇರುವ ಮಾಹಿತಿ ಕಳ್ಳರಿಗೆ ಸಿಕ್ಕಿತ್ತು. ಜೂನ್ 30ರ ಸಿಎಂ ಭದ್ರತೆಗಾಗಿ ಪೊಲೀಸ್ ಬ್ಯುಸಿ ಆಗ್ತಾರೆ ಎನ್ನುವುದನ್ನು ಮನಗಂಡ ಖದೀಮರು ಮುಂಜಾನೆ ವಾಕಿಂಗ್​ ಮಾಡುವ ಮಹಿಳೆಯರನ್ನು ಟಾರ್ಗೆಟ್​ ಮಾಡಿ 19 ಕಡೆ ಸರಗಳ್ಳತನ ಮಾಡಿದ್ರು. ಸಂಜೆ ವೇಳೆಗೆ ಸರ್ಜಾಪುರದ ಸ್ನೇಹಿತನ ರೂಂಗೆ ವಾಪಸ್​ ಆಗಿದೆ. ಅವತ್ತು ರಾತ್ರಿ ರೈಲಿನ ಮೂಲಕ ಊರಿಗೆ ವಾಪಸ್​ ಆದ್ರು. ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಕದ್ದಿದ್ದ ಬೈಕ್​ ಕೂಡ ಬಿಟ್ಟು ಹೋಗಿದ್ರು.

ಎಲ್ಲೆಲ್ಲಿ ಕಳವು..? ಬಂಧನ ಆಗಿದ್ದು ಹೇಗೆ..?

ಅರ್ಜುನ್ ಕುಮಾರ್ ಹಾಗೂ ರಾಥೋಡ್ ಎಂಬುವರು ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ರು. ಬ್ಲಾಕ್ ಫಲ್ಸರ್​ಗಳಲ್ಲಿ ಬಂದಿದ್ದ ಖದೀಮರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರ ತಂಡ, ಬೆಂಗಳೂರಿನ ಹಲವಾರು ರಸ್ತೆಗಳ ಸಿಸಿಟಿವಿ ಪರಿಶೀಲಿಸಿ ಸರ್ಜಾಪುರದ ಸ್ನೇಹಿತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಸ್ನೇಹಿತನನ್ನು ಕರೆತಂದು ವಿಚಾರಣೆ ಮಾಡಿದಾಗ ಊರಿನಿಂದ ಬಂದಿದ್ದ ಇಬ್ಬರು ಖದೀಮರ ಬಗ್ಗೆ ಮಾಹಿತಿ ಸಿಕ್ಕಿತ್ತು. ನೇರವಾಗಿ ಉತ್ತರ ಪ್ರದೇಶದ ಹಳ್ಳಿಗೆ ತೆರಳಿದ ಖಾಕಿ ಪಡೆ ಕೆಜಿಗಟ್ಟಲೆ ಚಿನ್ನ ಕದ್ದೊಯ್ದಿದ್ದ ಕಳ್ಳರನ್ನು ಬಂಧಿಸಿ ಕರೆತಂದಿದೆ. ಬೆಂಗಳೂರಲ್ಲಿ ಶಾಮ್ಲಿ ಟೀಂ ಈ ವರ್ಷ ಕಳವು ಮಾಡಲು ಮುಂದಾಗಿದೆ. ಕಳ್ಳರ ಬಗ್ಗೆ ಬೀ ಕೇರ್​ ಫುಲ್​

Related Posts

Don't Miss it !