ದಸರಾ ಉದ್ಘಾಟಕರಾಗಿ ಕೃಷ್ಣ ಆಯ್ಕೆ, ಸಂಪ್ರದಾಯಕ್ಕೆ ಸರ್ಕಾರದ ಬ್ರೇಕ್..!

ಮೈಸೂರು ದಸರಾ ಉದ್ಘಾಟನೆ ಮಾಡಲು ಪ್ರತಿವರ್ಷ ಸರ್ಕಾರ ಓರ್ವ ಗಣ್ಯರನ್ನು ಆಯ್ಕೆ ಮಾಡುತ್ತದೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲದ ನಾಡಹಬ್ಬ ದಸರಾಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಈ ಬಾರಿ ರಾಜ್ಯ ಸರ್ಕಾರ ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಸರನ್ನು ಅಂತಿಮ ಮಾಡಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗಿದೆ.

ಕೃಷ್ಣ ರಾಜಕಾರಣಿ ಮಾತ್ರವಲ್ಲ ಯೋಗದಾನ ದೊಡ್ಡದಿದೆ..!

ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರನ್ನು ಆಯ್ಕೆ ಮಾಡಿದ ವಿಚಾರವಾಗಿ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದಸರಾ ಮಹೋತ್ಸವಕ್ಕೆ ಪೂಜೆ ನೆರವೇರಿಸಲು ಎಸ್​.ಎಂ ಕೃಷ್ಣ ಅವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ. ಎಸ್​.ಎಂ ಕೃಷ್ಣ ಕೇವಲ ಮುಖ್ಯಮಂತ್ರಿ ಆಗಿದ್ದವರಲ್ಲ, ಅವರ ಯೋಗದಾನ ಬಹಳ ಇದೆ. ಅವರು ಹಲವು ಉತ್ತಮ ಸೇವೆಗಳನ್ನು ಮಾಡಿದ್ದಾರೆ. ಎಸ್​.ಎಂ ಕೃಷ್ಣ ಮುತ್ಸದ್ದಿ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ರಾಜಕಾರಣಿ ಒಬ್ಬರನ್ನು ಆಯ್ಕೆ ಮಾಡುವ ಮೂಲಕ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ರಾಜ್ಯ ಬಿಜೆಪಿ ಸರ್ಕಾರ ಮುರಿದು ಹಾಕಿದೆ.

Read this also;

ಸಾಲು ಮರದ ತಿಮ್ಮಕ್ಕನ ಆಯ್ಕೆ ಎನ್ನಲಾಗಿತ್ತು..!

ನಾಡಹಬ್ಬ ದಸರಾ ಉದ್ಘಾಟನೆ ಮಾಡುವುದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನರನ್ನು ಆಯ್ಕೆ ಮಾಡಲಾಗ್ತಿತ್ತು. ಕವಿಗಳು, ಲೇಖಕರು ಸೇರಿದಂತೆ ಸಾಧಕರನ್ನು ಗುರುತಿಸುವ ಕೆಲಸ ಆಗ್ತಿತ್ತು. ಈ ಬಾರಿ ಸಾಲು ಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗ್ತಿತ್ತು. ನಿಸ್ವಾರ್ಥ ಸೇವೆಯ ಹಾಗೆ ಮರಗಳನ್ನು ಸಾಕಿ ಸಲಹಿದ ತಿಮ್ಮಕ್ಕ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡುವ ಮೂಲಕ ತಿಮ್ಮಕ್ಕ ಅವರಿಗೆ ಗೌರವ ನೀಡಲಾಗುತ್ತೆ ಎನ್ನಲಾಗಿತ್ತು. ಆದರೆ ಸರ್ಕಾರ ಮಾತ್ರ ದಸರಾ ಉದ್ಘಾಟಕರನ್ನಾಗಿ ರಾಜಕಾರಣಿ ಒಬ್ಬರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲೂ ತಮ್ಮದೇ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಾಡಹಬ್ಬ ದಸರಾವನ್ನು ಬಿಜೆಪಿಮಯ ಮಾಡಲಾಗಿದೆ.

Read this also;

ದಸರಾ ಆಚರಣೆಗೆ ರಾಜಕಾರಣಿಗಳು ಬೇಕಿತ್ತಾ..?

ನವರಾತ್ರಿ ಸಂಭ್ರಮದ ಬಳಿಕ ನಡೆಯುವ ನಾಡಹಬ್ಬ ದಸರಾ ಆಚರಣೆಯಲ್ಲಿ ಪಕ್ಷಾತೀತವಾಗಿ ನಡೆಯಬೇಕು ಎನ್ನುವುದು ಇಲ್ಲೀವರೆಗೂ ಪಾಲಿಸಿಕೊಂಡು ಬಂದ ಸಂಪ್ರದಾಯ. ಇನ್ಮೇಲೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿಜೆಪಿ ಮುನ್ನುಡಿ ಬರೆದಂತಾಗಿದೆ. ಎಸ್​.ಎಂ ಕೃಷ್ಣ ಕೇವಲ ರಾಜಕಾರಣಿ ಮಾತ್ರವಲ್ಲ, ಮಹಾನ್​ ಯೋಗದಾನ ಮಾಡಿದ್ದಾರೆ ಎಂದಿದ್ದಾರೆ. ಆದರೆ ಎಸ್​.ಎಂ ಕೃಷ್ಣ ಮಾಡಿರುವ ಸಾಧನೆಗಳು ಯಾವುದು ಎನ್ನುವುದನ್ನು ಮಾತ್ರ ಸಿಎಂ ಬಸವರಾಜ ಬೊಮ್ಮಾಯಿ ಬಹಿರಂಗ ಮಾಡಿಲ್ಲ. ರಾಜಕಾರಣಿಯಾಗಿ ಎಸ್​.ಎಂ ಕೃಷ್ಣ ಅವರನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆರ ಎನ್ನುವುದೂ ಸತ್ಯ. ಆದರೆ ನಾಡಹಬ್ಬ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ್ದು ಸರೀನಾ ಎನ್ನುವ ಪ್ರಶ್ನೆಯೂ ಮೂಡದೆ ಇರದು.

Related Posts

Don't Miss it !