‘ನಾವ್​ ಸರಿ ಇದ್ದಿದ್ರೆ ನಮ್ ಬಾಳ್ ಯಾಕ್​ ಹಿಂಗ್​ ಆಗ್ತಿತ್ತು..!?’ ಕ್ಷಮಿಸಿ ಹೇಳಿಕೆಯನ್ನು ತಿರುಚಲಾಗಿದೆ..

ರಾಜಕಾರಣಿಗಳು ಉಮ್ಮಸ್ಸಿನಲ್ಲಿ ನೀಡುವ ಹೇಳಿಕೆಗಳು ಸಾಕಷ್ಟು ಬಾರಿ ಕೆಟ್ಟದಾಗಿ ಬಿಂಬಿತವಾಗುವುದು ಸರ್ವೇ ಸಾಮಾನ್ಯ. ಅವರ ಹೇಳಿಕೆಯಲ್ಲಿ ಸಾಕಷ್ಟು ಅರ್ಥವನ್ನು ಹುಡುಕಿ ಸುದ್ದಿ ಮಾಡುವುದು ಮಾಧ್ಯಮದವರ ಕೆಲಸ ಕೂಡ ಹೌದು. ಆ ವೇಳೆ ಸ್ಪಷ್ಟನೆ ನೀಡುವ ರಾಜಕಾರಣಿಗಳು ಅಥವಾ ಅವರ ಹಿಂಬಾಲಕರು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ, ಹೇಳಿಕೆಯನ್ನು ತಿರುಚಲಾಗಿದೆ ಎನ್ನುವುದು ಸದಾ ಕಾಲ ನಡೆದುಕೊಂಡು ಬಂದಿದೆ. ಆದರೆ ಹೆಡ್​​ಲೈನ್​ನಲ್ಲಿ ನಾವೇ ಉದ್ದೇಶಪೂರ್ವಕವಾಗಿ ಹೇಳಿಕೆಯನ್ನು ತಿರುಚಿದ್ದೇವೆ. ಅದಕ್ಕಾಗಿ ಕ್ಷಮೆಯನ್ನೂ ಕೇಳಿದ್ದೇವೆ. ಆದರೆ ಈ ತಿರುಚಿರುವ ಉದ್ದೇಶ ಮಾತ್ರ ಸರಿಯಾಗಿದೆ ಎನ್ನುವುದು The Public spot ಅಭಿಮತ.

ಮಾಧ್ಯಮ ಪ್ರತಿನಿಧಿಗಳ ಮೇಲೆ ಸಾಹುಕಾರ್​ ಕೋಪ..!

ಲೈಂಗಿಕ ಸಿ.ಡಿ ಬಿಡುಗಡೆ ಆದ ಬಳಿಕ ಸಚಿವ ಸ್ಥಾನ ಕಳೆದುಕೊಂಡಿದ್ದ ಗೋಕಾಕ್​ನ ಸಾಹುಕಾರ್​ ಖ್ಯಾತಿಯ ರಮೇಶ್​ ಜಾರಕಿಹೊಳಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್​.ಟಿ ನಗರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ರು. ಯಡಿಯೂರಪ್ಪ ಸರ್ಕಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದ ಎನ್​.ಆರ್​ ಸಂತೋಷ್​​ ಜೊತೆ ಸಿಎಂ ಭೇಟಿಗೆ ತೆರಳುತ್ತಿದ್ದ ರಮೇಶ್​​ ಜಾರಕಿಹೊಳಿ ಅವರನ್ನು ಮಾತನಾಡುವಂತೆ ಕೆಣಕಿದಾಗ ರಮೇಶ್​​ ಜಾರಕಿಹೊಳಿ ಈ ರೀತಿ ಉತ್ತರ ಕೊಟ್ಟಿದ್ದಾರೆ. ‘ ನೀವ್​ ಕರೆಕ್ಟ್​ ಇದ್ದಿದ್ರೆ ನಮ್​ ಬಾಳ್​ ಯಾಕೆ ಹಿಂಗೆ ಆಗ್ತಿತ್ತು..? ’ ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ಕೋಪತಾಪ ಪ್ರದರ್ಶನ ಮಾಡಿದ್ದಾರೆ. ನಾನು ಏನು ಮಾತನಾಡಿದ್ರು, ಅದನ್ನು ಉಲ್ಟಾ ಹಾಕ್ತೀರಿ. ಆಮೇಲೆ ಅದನ್ನೇ ಉಲ್ಟಾ ಬರಿತೀರಿ. ನಿಮ್​ ಜೊತೆ ನಾನೇನು ಮಾತನಾಡಲ್ಲ ಎಂದು ಮುಖ ತಿರುಗಿಸಿದ್ದಾರೆ.

Read this;

ನೀವ್​ ಕರೆಕ್ಟ್​​ ಇದ್ದಿದ್ರೆ ಅಲ್ಲ, ನಾವ್​ ಕರೆಕ್ಟ್​ ಇದ್ದಿದ್ರೆ..!

ಹೌದು, ರಮೇಶ್​ ಜಾರಕಿಹೊಳಿ ಹೇಳಿರುವ ಮಾತು ಸರಿಯಿದೆ. ರಮೇಶ್​ ಜಾರಕಿಹೊಳಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಮಾಧ್ಯಮದವರು ಬರೆಯುತ್ತಿಲ್ಲ. ಇದಕ್ಕೆ ಕಾರಣ ಮಾಧ್ಯಮದ ಪ್ರತಿನಿಧಿಗಳು ಅಲ್ಲ. ಸ್ವತಃ ತಾವೇ ಎನ್ನುವುದನ್ನು ರಮೇಶ್​​ ಜಾರಕಿಹೊಳಿ ಅರ್ಥ ಮಾಡಿಕೊಳ್ಳಬೇಕು. ನೀವ್​ ಕರೆಕ್ಟ್​ ಆಗಿದ್ರೆ ಎನ್ನುವ ಬದಲು ನಾನು ಕರೆಕ್ಟ್​ ಆಗಿ ಇದ್ದಿದ್ರೆ ಎಂದು ಉತ್ತಮ ಆಗಿರುತ್ತಿತ್ತು. ತನ್ನ ರಾಸಲೀಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ವಲಸು ಬಾಯಿಯಲ್ಲಿ ಬೇಕಾಬಿಟ್ಟಿ ಮಾತನಾಡಿ, ಈಗ ಮಾಧ್ಯಮಗಳನ್ನು ದೂರುವುದು ಎಷ್ಟು ಸರಿ..? ಏನೇ ಮಾಡಿದರೂ ಹಿಂದೆ ಗಂಟೆ ಬಾರಿಸೋಕೆ ಮಾಧ್ಯಮಗಳು ಅಷ್ಟೊಂದು ಪ್ರಮಾಣದಲ್ಲಿ ಹಳ್ಳ ಹಿಡಿದಿಲ್ಲ ಎನ್ನುವುದನ್ನು ರಮೇಶ್​ ಜಾರಕಿಹೊಳಿ ಅರ್ಥ ಮಾಡಿಕೊಳ್ಳಬೇಕಿದೆ.

Read this;

ತಪ್ಪು ಮಾಡದೆ ಇರುವವರು ಯಾರು..?

ಮಾನವನಾಗಿ ಹುಟ್ಟಿದ ಮೇಲೆ ನಾನು ತಪ್ಪನ್ನೇ ಮಾಡಿಲ್ಲ ಎಂದು ಎದೆ ಮುಟ್ಟಿ ಹೇಳಿಕೊಳ್ಳುವ ಧೈರ್ಯ ಯಾರಿಗೂ ಇರಲಾರದು. ಒಮ್ಮೆಯಾದರು ಒಂದು ಗಳಿಗೆಯಾದರೂ ತಪ್ಪು ಹಾದಿಯನ್ನು ತುಳಿದಿರುತ್ತಾರೆ. ಆದರೆ ಆ ತಪ್ಪು ಸಮಾಜದ ಮುಂದೆ ತೆರೆದುಕೊಳ್ಳದಂತೆ ಕಾಪಾಡುವ ಕೆಲಸವನ್ನ ಅವರೇ ಮಾಡುತ್ತಾರೆ. ಒಂದು ವೇಳೆ ಸಮಾಜದ ಎದುರು ಬಹಿರಂಗ ಆಗಿಬಿಟ್ಟರೆ, ಹೌದು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡು ಕ್ಷಮೆ ಕೇಳಿದ್ದರೆ ಇಷ್ಟೆಲ್ಲಾ ರದ್ದಾಂತ ಆಗುತ್ತಿತ್ತೆ..? ವಿಡಿಯೋದಲ್ಲಿ ಇರುವುದು ನಾನಾಲ್ಲ, ಗ್ರಾಫಿಕ್ಸ್​ ಎನ್ನುವುದು, ಆ ಬಳಿಕ ನನ್ನನ್ನ ಹನಿಟ್ರ್ಯಾಪ್​ನಲ್ಲಿ ಸಿಲುಕಿಸಿದ್ದಾರೆ ಎನ್ನುವುದು, ಪ್ರಕರಣದಲ್ಲಿ ಎಫ್​ಐಆರ್​ ಆದರೂ ಪೊಲೀಸರು ಅರೆಸ್ಟ್​ ಮಾಡದಂತೆ ಒತ್ತಡ ತಂತ್ರ ಅನುಸರಿಸುವುದು. ಏನು ಆಗಿಯೇ ಇಲ್ಲವೇನೋ..! ಮಾಧ್ಯಮಗಳೇ ಎಲ್ಲವನ್ನೂ ಸೃಷ್ಟಿ ಮಾಡಿದ್ದಾರೆ ಎನ್ನುವ ರೀತಿ ಪೋಸು ಕೊಡುವುದು ನಡೆಯುತ್ತಲೇ ಇದೆ. ನಾನು ಸರಿ ಇದ್ದಿದ್ರೆ ಇಷ್ಟೆಲ್ಲಾ ಆಗ್ತಿತ್ತಾ ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳಿ ಉತ್ತರ ಅಲ್ಲೇ ಇದೆ.

Related Posts

Don't Miss it !