Face Book Death: ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಪೋಸ್ಟ್​ ಮಾರ್ಟಮ್..

ಸಾಮಾಜಿಕ ಜಾಲ ತಾಣ ಎಲ್ಲರನ್ನು ಆವರಿಸಿಕೊಂಡಿದೆ. ಹುಟ್ಟಿನಿಂದ ಹಿಡಿದು ಸಾವಿನ ತನಕವು ಸಾಮಾಜಿಕ ಜಾಲತಾಣ ಸಂಗಾತಿ ಆಗುತ್ತೆ ಎಂದರೆ ಎಲ್ಲರೂ ಒಪ್ಪಲೇಬೇಕು. ಒಬ್ಬಂಟಿತನವನ್ನು ದೂರ ಮಾಡುವ ಸಾಧನ, ಸಂಗಾತಿ ಇಲ್ಲದವರ ನೆಚ್ಚಿನ ಸಂಗಾತಿ, ಸಂಸಾರ ಸಾಗರದಲ್ಲಿ ಈಜಲು ಆಗದೆ ತೊಳಲಾಡುವ ಜನರಿಗೆ ಕ್ಷಣಕಾಲವಾದರೂ ಸುಖ ನೀಡುವ ವೇದಿಕೆಯೇ ಸಾಮಾಜಿಕ ಜಾಲ ತಾಣ ಆಗಿದೆ. ಆದರೆ ಸಾಯುವ ವ್ಯಕ್ತಿಯೊಬ್ಬರು ಸಾಯುವ ನಿರ್ಧಾರ ಪ್ರಕಟ ಮಾಡಿ ಕೆಲವೇ ಕ್ಷಣಗಳಲ್ಲಿ ಅಮ್ಮನ ಮಡಿಲಲ್ಲಿ ಮಲಗಿ ಸಾವು ಕಂಡಿರುವ ಘಟನೆ ನೆಲಮಂಗಲ ಸಮೀಪ ನಡೆದಿದೆ. ಕೇವಲ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿ ಹೆಂಡತಿ ಕೊಟ್ಟ ಟಾರ್ಚರ್​ ತಾಳಲಾರದೆ ಬದುಕಿನ ಜಂಜಾಟಕ್ಕೆ ಇತಿಶ್ರೀ ಹಾಡಿದ್ದಾರೆ. ಕಾನೂನು ಮೂಲಕವೇ ಪತ್ನಿಯನ್ನು ದೂರ ಮಾಡಿಕೊಳ್ಳುವ ಅವಕಾಶ ಇದ್ದಾಗಲೂ ಕಾನೂನು ತಿಳುವಳಿಕೆ ಇಲ್ಲದ ಗೋವಿಂದರಾಜು ಬಾಳ ಪಯಣ ಮುಗಿಸಿದ್ದಾನೆ.

ಪತ್ನಿ ರಾಧಾ

ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಗೋವಿಂದರಾಜು..!

33 ವರ್ಷ ವಯಸ್ಸಿನ ಗೋವಿಂದರಾಜು, ನೆಲಮಂಗಲ ಬಳಿಯ ಅರಿಶಿನಕುಂಟೆ ಗ್ರಾಮದ ನಿವಾಸಿ. ಚಾಲಕನಾಗಿ ಕೆಲಸ ಮಾಡ್ತಿದ್ದ ಗೋವಿಂದರಾಜು ಕಳೆದ ಒಂದೂವರೆ ವರ್ಷದ ಹಿಂದೆ ಎಲ್ಲಾ ಖರ್ಚು ವೆಚ್ಚವನ್ನು ತಾನೇ ಭರಿಸಿಕೊಂಡು ಕುಣಿಗಲ್‌ನ ರಾಧ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಸಂಸಾದರಲ್ಲಿ ಸೃಷ್ಟಿಯಾಗಿದ್ದ ಬಿರುಗಾಳಿ ನಿಲ್ಲುವ ಲಕ್ಷಣ ಕಾಣಿಸಲಿಲ್ಲ. ಹೇಗಾದರೂ ಮಾಡಿ ಸಂಸಾರವನ್ನು ಸರಿದಾರಿಗೆ ತರಬೇಕು ಎನ್ನುವ ಹಠದಿಂದ ಕುಟುಂಬವನ್ನು ನೆಲಮಂಗಲದ ಬೇಗೂರಿಗೆ ವರ್ಗಾಯಿಸಿದ್ದ. ಅಲ್ಲೂ ನೆಮ್ಮದಿ ಸಿಗದಿದ್ದಾಗ ಹೆಂಡತಿ ತವರು ಕುಣಿಗಲ್​ಗೆ ಸ್ಥಳಾಂತರ ಮಾಡಿದ್ದ. ಇದೆಲ್ಲವನ್ನೂ ನೋಡುತ್ತಿದ್ದ ಹೆಂಡತಿ, ಅಂತಿಮವಾಗಿ ಕುಣಿಗಲ್​ ಪೊಲೀಸ್​ ಠಾಣೆಗೆ ಹೋಗಿ ಗಂಡನಿಂದ ಕಿರುಕುಳ ಎನ್ನುವ ದೂರು ದಾಖಲು ಮಾಡಿದ್ದಳು. ಪೊಲೀಸ್​ ಠಾಣೆಯಲ್ಲಿ ಹೆಣ್ಣು ಮಕ್ಕಳ ದೂರಿಗೆ ಹೆಚ್ಚಿನ ಪ್ರಾಶಸ್ತ್ಯ ಎಂದು ಭಾವಿಸಿಯೋ ಏನೋ ತನ್ನ ಜೀವನವನ್ನೇ ಕೊನೆಯಾಗಿಸಿದ್ದಾನೆ. ಕಿರುಕುಳ ಕೊಟ್ಟಿದ್ದರೂ ಕಾನೂನು ರಕ್ಷಣೆ ಪಡೆಯಬಹುದಿತ್ತು. ಅಥವಾ ಶಿಕ್ಷೆ ಅನುಭವಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದಿತ್ತು. ಆದರೆ ಈತ ಕಿರುಕುಳ ಕೊಟ್ಟಿಲ್ಲ ಎನ್ನುವುದನ್ನು ಕೊನೆ ಕ್ಷಣದ ಸಾಲುಗಳು ಸಾರಿ ಹೇಳುತ್ತಿವೆ.

ಎಲ್ಲೇ ಇರಿ, ಹೇಗೇ ಇರಿ, ನೀವು ಸಂತೋಷವಾಗಿರಿ..!

ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವುದು ಕುವೆಂಪು ಅವರು ಬರೆದ ಸಾಲುಗಳು ಥಟ್ಟನೆ ನೆನಪಿಗೆ ಬರುತ್ತವೆ. ಅದೇ ರೀತಿ ಗೋವಿಂದರಾಜು ಸಾಯುವ ನಿರ್ಧಾರ ಮಾಡಿದ ಕೂಡಲೇ ಇದೇ ರೀತಿಯ ಸಾಲುಗಳನ್ನು ಬರೆದಿದ್ದು, ಎಲ್ಲಾದರೂ ಇರಿ, ಹೇಗಾದರೂ ಇರಿ, ಸಂತಸವಾಗಿರಿ ಎಂದು ಕವಿ ಸಾಲುಗಳಲ್ಲಿ ಮಾತು ನಿಲ್ಲಿಸಿದ್ದಾರೆ. ನನ್ನ ಜೊತೆ ಮಾತಾನಾಡಲು ಇಷ್ಟವಿಲ್ಲ ಎಂದರೂ ಪರವಾಗಿಲ್ಲ. ನಾನು ನಿಮಗೆ ತೊಂದರೆ ಕೊಡುವುದಿಲ್ಲ. ಎಲ್ಲೇ ಇರೀ, ಹೇಗೆ ಇರೀ ಸಂತೋಷವಾಗಿರಿ ನನಗೆ ಅಷ್ಟೆ ಸಾಕು ಎಂದಿದ್ದಾರೆ. ಬಳಿಕ ವಿಷ ಸೇವನೆ ಮಾಡಿ ಅಮ್ಮನಿಗೆ ನಡೆದ ವಿಚಾರಗಳನ್ನು ಎಳೆಎಳೆಯಾಗಿ ಹೇಳಿಕೊಂಡಿದ್ದಾರೆ. ಅವಳು ನನ್ನನ್ನು ಪೊಲೀಸ್‌ ಠಾಣೆಗೆ ಕರೆಸುತ್ತಿದ್ದಾಳೆ. ನಾನೇ ಅವಳನ್ನು ಇಲ್ಲಿಗೆ ಕರೆಸುತ್ತೇನೆ ಎಂದಿದ್ದ ಗೋವಿಂದರಾಜು, ತಾಯಿ ಕೈಗೆ Death note ಕೊಟ್ಟಿದ್ದಾನೆ. ಮಗ ವಿಷ ಸೇವಿಸಿದ್ದಾನೆ ಎನ್ನುವುದನ್ನು ಅರಿಯದ ಮುಗ್ದ ತಾಯಿ ಮಗನನ್ನು ಕಳೆದುಕೊಂಡು ಗೋಳಾಡುವ ದೃಶ್ಯ ಕರುಳು ಚುರ್ ಎನ್ನುವಂತಿದೆ.

ಹೆಂಡತಿಯ ಸೌಂದರ್ಯವೇ ಗಂಡನಿಗೆ ಮುಳುವಾಯ್ತಾ..?

ನೆಲಮಂಗಲ ಸಮೀಪದಲ್ಲೇ ಇರುವ ಗ್ರಾಮ ಬಿಟ್ಟು ಎರಡ್ಮೂರು ಕಡೆಗೆ ಮನೆಯನ್ನು ಬದಲಾಯಿಸಿದ ಗೋವಿಂದರಾಜು ಕುಟುಂಬದಲ್ಲಿ ಶಾಂತಿ ನೆಲೆಸುವ ಬಗ್ಗೆ ಕನಸು ಕಂಡಿದ್ದ. ಆದರೆ ಪಾಪಿ ಸಮುದ್ರಕ್ಕೆ ಇಳಿದರೂ ಮೊಣಕಾಲು ಉದ್ದ ನೀರು ಎನ್ನುವ ಗಾಧೆ ಮಾತಿನಂತೆ ಪತ್ನಿ ರಾಧಾಳ ವರಸೆ ಸ್ವಲ್ಪವೂ ಕಡಿಮೆಯಾಗಲಿಲ್ಲ. ತವರಿಗೆ ಸೇರಿದ ಬಳಿಕ ಗಂಡನನ್ನು ತನ್ನಿಂದ ದೂರ ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದ ರಾಧಾ, ಗಂಡನ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಗಂಡ ಹೆಂಡತಿ ನಡುವೆ ಸಂಬಂಧ ಸರಿ ಬಾರದಿದ್ದರೆ ನ್ಯಾಯಾಲಯದ ಮೂಲಕ ವಿಚ್ಛೇದನಕ್ಕೆ ಅರ್ಜಿ ಹಾಕಿ, ಕಾನೂನು ಮೂಲಕ ಬೇರೆ ಬೇರೆ ಆಗುವ ಎಲ್ಲಾ ಅವಕಾಶಗಳು ಇದ್ದರೂ ಚಿಂತಿಸಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿರುವ ಗೋವಿಂದರಾಜು, ಆತ್ಮಹತ್ಯೆ ಮುನ್ನ ನನ್ನ ಸಾವಿಗೆ ಪತ್ನಿ ರಾಧಾ, ರಂಗಸ್ವಾಮಿ, ಭಾಗ್ಯ, ಸುಮಾ, ಕೊದ್ದಯ್ಯ ಕಾರಣ ಎಂದು ಬರೆದು ಸಹಿ ಹಾಕಿದ್ದಾರೆ. ಜೊತೆಗೆ ಫೇಸ್​ಬುಕ್​ ಪೋಸ್ಟ್​ನಲ್ಲಿ ನನ್ನ ಜೊತೆಗೆ ಮಾತನಾಡಲು ಇಷ್ಟವಿಲ್ಲ ಎಂದರೆ ಪರವಾಗಿಲ್ಲ, ಎಲ್ಲೇ ಇರಿ, ಹೇಗೇ ಇರೀ ಸಂತೋಷವಾಗಿ ಇರಿ ಎಂದು ಸಂಭೋಧಿಸಿರುವುದು ಯಾರಿಗೆ..? ಪತ್ನಿ ಜೊತೆಗೆ ಯಾರಿಗಾದರೂ ಸ್ನೇಹ ಇದ್ದಿರಬಹುದೇ..? ಮಾನಕ್ಕೆ ಅಂಜಿ ಆತ್ಮಹತ್ಯೆ ಮಾರ್ಗ ಹಿಡಿದನಾ..? ಎನ್ನುವ ಬಗ್ಗೆಯೂ ತನಿಖೆ ನಡೆಯಬೇಕಿದೆ.

Related Posts

Don't Miss it !