ಆ ದಿನಗಳು ನಟ ಚೇತನ್​ ನಾಪತ್ತೆ​..! ಪೊಲೀಸ್​ ವೇಷದಲ್ಲಿ ಬಂದು ಕಿಡ್ನ್ಯಾಪ್​ ಮಾಡಿದ್ರಾ..?

ಆ ದಿನಗಳು ಖ್ಯಾತಿಯ ನಟ ಚೇತನ್​​ ನಾಪತ್ತೆ ಆಗಿದ್ದಾರೆ. ಆದರೆ ಪೊಲೀಸರೇ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ಮಾಹಿತಿ ಕೇಳಿದರೂ ನೀಡ್ತಿಲ್ಲ ಎಂದು ನಟ ಚೇತನ್​ ಪತ್ನಿ ಮೇಘಾ ಆರೋಪ ಮಾಡಿದ್ದಾರೆ. ಒಂದು ವೇಳೆ ಪೊಲೀಸರ ಅರೆಸ್ಟ್​ ಮಾಡಿದರೆ ನಟ ಚೇತನ್​ಗೆ ಕಾನೂನು ಸಲಹೆ ಸಿಗಬೇಕಿದೆ. ಇಲ್ಲೀವರೆಗೂ ನಮಗೆ ಗೊತ್ತಿಲ್ಲ ಎನ್ನುವ ಮೂಲಕ ಮಾಹಿತಿಯನ್ನು ಮುಚ್ಚಿಡ್ತಿದ್ದಾರೆ. ನಾನು ಮನೆಯಲ್ಲೇ ಇದ್ದರೂ ನನಗೆ ಯಾವುದೇ ಮಾಹಿತಿ ನೀಡದೆ ಕರೆದುಕೊಂಡು ಹೋಗಿದ್ದಾರೆ. ಅಕ್ಕಪಕ್ಕದ ಮನೆಯ ನಿವಾಸಿಗಳನ್ನು ಕೇಳಿದಾಗ ಯಾವುದೋ ಪೊಲೀಸ್​ ಜೀಪ್​ ಬಂದಿತ್ತು. ಅದರಲ್ಲಿ ನಟ ಚೇತನ್​ ಅವರನ್ನು ಕರೆದುಕೊಂಡು ಹೋದರು ಎಂದು ಉತ್ತರ ನೀಡಿದ್ದಾರೆ. ಆದರೆ ಪೊಲೀಸರಿಗೆ ಈ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ಕೊಡ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ನಟ ಚೇತನ್​ ಗನ್​ ಮ್ಯಾನ್​​ ಕೂಡ ನಾಪತ್ತೆ ದೂರು ದಾಖಲು..!

ನಟ ಚೇತನ್​ ಮಾತ್ರ ನಾಪತ್ತೆಯಾಗಿಲ್ಲ. ಅವರ ಗನ್​ಮ್ಯಾನ್​ ಕೂಡ ನಾಪತ್ತೆ ಆಗಿದ್ದಾರೆ. ಈ ಬಗ್ಗೆ ನಟ ಚೇತನ್​ ಪತ್ನಿ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ವಿಚಾರಿಸಿದಾಗ ನಮಗೆ ಯಾವುದೇ ಮಾಹಿತಿ ಇಲ್ಲ ಎನ್ನುವ ಉತ್ತರ ಸಿಕ್ಕಿದೆ. ಹಾಗಾಗಿ ಬೆಂಗಳೂರು ಪೊಲೀಸ್​ ಕಮಿಷನರ್​ ಕಚೇರಿಗೆ ತೆರಳಿದ ಚೇತನ್​ ಪತ್ನಿ ಮೇಘಾ, ನಟ ಚೇತನ್​​ ನಾಪತ್ತೆ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಪೊಲೀಸ್​ ಜೀಪ್​ ಬಂದ ಬಗ್ಗೆ ಮಾಹಿತಿ ಇದೆ. ಆದರೆ ನಮ್ಮ ಮನೆ ಶೇಷಾದ್ರಿಪುರಂ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿದೆ. ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡದೆ ಅರೆಸ್ಟ್​ ಮಾಡಿದ್ದು ಯಾವ ಠಾಣೆಯ ಪೊಲೀಸರು ಎಂದು ಪ್ರಶ್ನಿಸಿದ್ದಾರೆ. ನಟ ಚೇತನ್​ ಬಂಧನ ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶೇಷಾದ್ರಿಪುರಂ ಪೊಲೀಸ್​ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಕೂಡ ಮಾಡಿದ್ದು, ನಟ ಚೇತನ್​​ಗೆ ಯಾವುದೇ ನೋಟಿಸ್​ ಕೂಡ ನೀಡದೆ ಬಂಧನ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್​ ವೇಷದಲ್ಲಿ ಬಂದು ಕಿಡ್ನ್ಯಾಪ್ ಮಾಡಿದ್ರಾ..?

ನಟ ಚೇತನ್​​ನನ್ನು ಪೊಲೀಸ್​​ ಜೀಪ್​​ನಲ್ಲಿ ಬಂದು ಕರೆದುಕೊಂಡು ಹೋದರು ಎನ್ನುವ ಮಾಹಿತಿಯನ್ನು ಅಕ್ಕಪಕ್ಕದ ಮನೆಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಆದರೆ ಇಲ್ಲೀವರೆಗೂ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧನದ ಮಾಹಿತಿಯನ್ನು ಖಚಿತ ಮಾಡಿಲ್ಲ. ಇನ್ನೂ ಒಂದು ವೇಳೆ ಬೆಂಗಳೂರು ಅಥವಾ ಬೇರೆ ನಗರದ ಪೊಲೀಸರು ಬಂಧನ ಮಾಡಿದ್ದರೂ ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿಯೇ ಕಾರ್ಯಾಚರಣೆ ನಡೆಸಬೇಕಿದೆ. ಹಾಗೂ ನಟ ಚೇತನ್​ ವಿರುದ್ಧ ಯಾವುದೇ ಅರೆಸ್ಟ್​ ವಾರೆಂಟ್​ ಕೂಡ ಇರಲಿಲ್ಲ ಎನ್ನುವುದು ನಟ ಚೇತನ್​ ಆಪ್ತರ ಮಾತಾಗಿದೆ. ಆದರೂ ಪೊಲೀಸ್​ ಜೀಪ್​ನಲ್ಲಿ ಬಂದು ಕರೆದುಕೊಂಡು ಹೋದವರು ಪೊಲೀಸರಾ..? ಅಥವಾ ಪೊಲೀಸ್​ ವೇಷದಲ್ಲಿ ಬೇರೆ ಯಾರಾದರೂ ಬಂದು ಹಣಕ್ಕಾಗಿಯೋ ಅಥವಾ ಬೇರೆ ಉದ್ದೇಶಕ್ಕಾಗಿ ಕಿಡ್ನ್ಯಾಪ್​ ಮಾಡಿದ್ರಾ..? ಎನ್ನುವ ಅನುಮಾನ ದಟ್ಟವಾಗುವಂತೆ ಮಾಡಿದೆ.

ನ್ಯಾಯಾಧೀಶರ ವಿರುದ್ಧ ಟ್ವೀಟ್​ ಮಾಡಿದ್ದ ನಟ ಚೇತನ್​..!

ಆ ದಿನಗಳು ಖ್ಯಾತಿಯ ನಟ ಚೇತನ್​ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ರಾಜಕೀಯ ಪಕ್ಷಗಳ ಮುಲಾಜಿಗೂ ಒಳಗಾಗದ ನಟ ಚೇತನ್​ ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಸೇರಿದಂತೆ ಎಲ್ಲರ ವಿರುದ್ಧವೂ ಕಟು ಮಾತುಗಳಲ್ಲಿ ಟೀಕಿಸುವ ಪ್ರವೃತ್ತಿ ಹೊಂದಿದ್ದರು. ಇತ್ತೀಚಿಗೆ ಬ್ರಾಹ್ಮಣತ್ವದ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಬಸವನಗುಡಿ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಫೆಬ್ರವರಿ 12ರಂದು ಬೆಂಗಳೂರು ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಪ್ರಚೋದನಕಾರಿ ಭಾಷಣ ಅಥವಾ ಹೇಳಿಕೆ ನೀಡಿದ್ದಂತೆ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗ್ತಿದೆ. ಆದರೂ ನಟ ಚೇತನ್​, ಫೆಬ್ರವರಿ 16ರಂದು ಟ್ವೀಟ್​ ಮಾಡಿ ಹಿಜಬ್​​ ವಿಚಾರದಲ್ಲಿ ನ್ಯಾಯ ಸಿಗುತ್ತಾ..? ಎಂದು ಪ್ರಶ್ನಿಸಿ ಟ್ವೀಟ್​ ಮಾಡಿದ್ದರು. ಇದೇ ವೇಳೆ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳ ಹೆಸರನ್ನೂ ಉಲ್ಲೇಖ ಮಾಡಿದ್ದರು. ಇದೇ ಪ್ರಕರಣದಲ್ಲಿ ಬಂಧನ ಆಗಿರಬಹುದು ಎನ್ನುವ ಅನುಮಾನವೂ ಇದೆ. ಈ ಎಲ್ಲಾ ಅನುಮಾನಗಳಿಗೂ ಪೊಲೀಸ್​ ಇಲಾಖೆ ಮಾತ್ರ ಉತ್ತರದಾಯಿತ್ವ ಹೊಂದಿದೆ.

Related Posts

Don't Miss it !