ಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ ಫೈನಲ್​, ಡಿಕೆಶಿ ದಾರಿ ಯಾವುದು..?

ಕಾಂಗ್ರೆಸ್​ನಲ್ಲಿ ಕರ್ನಾಟಕ ವಿಧಾನಪರಿಷತ್​ ಚುನಾವಣೆಗೆ ಹೈಕಮಾಂಡ್​ ಟಿಕೆಟ್​ ಅಂತಿಮಗೊಳಿಸಿದೆ. ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಜಟಾಪಟಿ ನಡುವೆ ಎಂ . ನಾಗರಾಜು ಯಾದವ್​ ಹಾಗೂ ಅಬ್ದುಲ್​ ಜಬ್ಬಾರ್​ ಅವರನ್ನು ಆಯ್ಕೆ ಮಾಡಿದೆ. ಆದರೆ ಈ ಇಬ್ಬರು ನಾಯಕರು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪಾಳದ ಆಯ್ಕೆ, ಡಿಕೆ ಶಿವಕುಮಾರ್​ ಆಯ್ಕೆಯಾಗಿದ್ದ ಎಸ್​.ಆರ್​ ಪಾಟೀಲ್​ಗೆ ಕಾಂಗ್ರೆಸ್​ ಹೈಕಮಾಂಡ್​ ಮಣೆ ಹಾಕಿಲ್ಲ ಎನ್ನಲಾಗ್ತಿದೆ. ಇದೀಗ ಪಂಜಾಬ್​ ರೀತಿಯಲ್ಲೇ ಕರ್ನಾಟಕದಲ್ಲೂ ಕಾಂಗ್ರೆಸ್​ ಪಕ್ಷ ಹಳ್ಳ ಹಿಡಿಯುತ್ತಾ ಎನ್ನವ ಅನುಮಾನ ಕಾರ್ಯಕರ್ತರಲ್ಲಿ ಶುರುವಾಗಿದೆ. ಮುಂದಿನ ವರ್ಷದ ಚುನಾವಣೆಗೆ ಹಣಿಯಾಗುತ್ತಿರುವ ಕಾಂಗ್ರೆಸ್​ ಚುನಾವಣಾ ಹೊಸ್ತಿಲಲ್ಲಿ ಎಡವುತ್ತಿದೆ ಎನ್ನುವುದು ಮಾತ್ರ ಸತ್ಯ.

ಪಂಜಾಬ್​ನಲ್ಲಿ ಕಾಂಗ್ರೆಸ್​ ಮಾಡಿಕೊಂಡಿದ್ದ ಎಡವಟ್ಟೇನು..?

ಪಂಜಾಬ್​ನಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ನವಜೋತ್​ ಸಿಂಗ್​ ಸಿಧು ಹಾಗೂ ಅಂದಿನ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಆ ಬಳಿಕ ಕ್ಯಾಪ್ಟನ್​ ಬದಲಿಸಿ ಚರಣ್​ಜಿತ್​ ಸಿಂಗ್​ ಚೆನ್ನಿ ಅವರನ್ನು ನೇಮಕ ಮಾಡಲಾಯ್ತು. ಆ ಬಳಿಕ ಸಿಧು ಹಾಗೂ ಚರಣ್​ಜಿತ್​ ಸಿಂಗ್​ ಚೆನ್ನಿ ನಡುವೆಯೂ ಭಿನ್ನಾಭಿಪ್ರಾಯ ಮೂಡಿತ್ತು. ಚುನಾವಣೆ ಘೋಷಣೆ ಆಗ್ತಿದ್ದ ಹಾಗೆ ಚರಣ್​ಜಿತ್​ ಸಿಂಗ್​ ಚೆನ್ನಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಯ್ತು. ಆ ಬಳಿಕ ಕಾಂಗ್ರೆಸ್​ ಗೆಲುವು ಸಾಧಿಸಿದ್ದು, ಕೆಲವೇ ಕೆಲವು ಸ್ಥಾನಗಳನ್ನು ಮಾತ್ರ. ಆ ಬಳಿಕ ಅಧ್ಯಕ್ಷರಾಗಿದ್ದ ನವಜೋತ್​ ಸಿಂಗ್​ ಸಿಧು, 23 ವರ್ಷಗಳ hಳೆಯ ಕೇಸ್​ನಲ್ಲಿ ಜೈಲು ಪಾಲಾಗಿದ್ದಾರೆ. ಸದ್ಯಕ್ಕೆ ಆರೋಗ್ಯದ ನೆಪದಲ್ಲಿ ಪಟಿಯಾಲದ ರಾಜೇಂದ್ರ ಆಸ್ಪತ್ರೆ ಸೇರಿದ್ದಾರೆ. ಕರ್ನಾಟಕದಲ್ಲೂ ಇದೇ ವರಸೆ ಮರಳಿ ಬರುತ್ತಾ ಎನ್ನುವುದೇ ಕಾಂಗ್ರೆಸ್ಸಿಗರ ಮನಸ್ಸಿನ ಪ್ರಶ್ನೆ..!

ಸಿದ್ದರಾಮಯ್ಯ – ಡಿ.ಕೆ ಶಿವಕುಮಾರ್​ ನಡುವೆ ಗೆಲ್ಲೋದ್ಯಾರು..?

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ನಡುವೆ ಮುಸುಕಿನ ಪೈಪೋಟಿ ಜೋರಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ನಡುವೆ ಜಟಾಪಟಿ ನಡುವೆ ಸಮರವೇ ಏರ್ಪಡುತ್ತಿದೆ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎನ್ನುವ ಹೇಳಿಕೆಗಳು ಡಿ.ಕೆ ಶಿವಕುಮಾರ್​ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಕಾಂಗ್ರೆಸ್​ ನಾಯಕರಿಗೆ ಚುನಾವಣೆ ಗೆಲ್ಲುವುದು ಸುಲಭದ ಮಾತಲ್ಲ ಎನ್ನುವ ಗಾಸಿಪ್​ಗಳು ಕಾಂಗ್ರೆಸ್​ ಪಾರ್ಟಿಯಲ್ಲೇ ಕೇಳಿಬರುತ್ತಿದೆ. ಇದರ ನಡುವೆ ಸಿದ್ದರಾಮಯ್ಯ ಹೈಕಮಾಂಡ್​ ಮಟ್ಟದಲ್ಲಿ ಪ್ರಭಾವ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಇತ್ತೀಚಿಗೆ ಗೊತ್ತಾಗುತ್ತಿದೆ. ಆದ್ರೆ ಮುಂದಿನ ಚುನಾವಣೆಯಲ್ಲಿ ಯಾರು ತಂತ್ರಗಾರಿಕೆಯಲ್ಲಿ ಬಲೆ ಹೆಣೆಯುತ್ತಾರೆ ಎನ್ನುವುದರ ಮೇಲೆ ಕಾಂಗ್ರೆಸ್​ ಭವಿಷ್ಯ ನಿಂತಿದೆ.

ಈಗ ಪರಿಷತ್ ವಿಚಾರದಲ್ಲಿ ಟಿಕೆಟ್ ಮುಖಭಂಗ ‌S.R ಪಾಟೀಲ್‌ಗೆ ಅಲ್ಲ..!

ಎಸ್​.ಆರ್ ಪಾಟೀಲ್​ಗೆ ಪರಿಷತ್​ ಸ್ಥಾನ ಕೊಡಿಸಲು ಡಿಕೆ ಶಿವಕುಮಾರ್​ ವಿಫಲವಾಗಿದ್ದಾರೆ. ಹೈಕಮಾಂಡ್​ ಮಟ್ಟದಲ್ಲಿ ಎಸ್​.ಆರ್​ ಪಾಟೀಲ್​ಗೆ ಪರಿಷತ್​ ಸ್ಥಾನ ಕೊಡಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅಡ್ಡಗಾಲು ಹಾಕ್ತಿದ್ದಾರೆ ಎನ್ನುವುದು ಗೊತ್ತಾಗ್ತಿದ್ದ ಹಾಗೆ ಎಸ್​.ಆರ್​ ಪಾಟೀಲ್​ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೂ ಕಳುಹಿಸಿ ರಾಜಿ ಮಾಡಿಸಲು ಯತ್ನಿಸಿದ್ರು. ಆದರೆ ಡಿ.ಕೆ ಶಿವಕುಮಾರ್​ಗೆ ಮುಖಭಂಗ ಮಾಡಲೇ ಬೇಕು ಎಂದು ನಿರ್ಧಾರ ಮಾಡಿದ್ದ ಸಿದ್ದರಾಮಯ್ಯ, ಎಸ್​.ಆರ್​ ಪಾಟೀಲ್​ ಮುಖಕ್ಕೆ ಹೊಡೆದಂತೆ ಆಗಲ್ಲ, ನಾನು ನಿಮ್ಮ ಪರವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ನಿಮ್ಮ ಬಗ್ಗೆ ಯಾವುದೇ ಉತ್ತಮ ಅಭಿಪ್ರಾಯ ಇಲ್ಲ ಎಂದು ಹೇಳಿ ಕಳುಹಿಸಿದ್ದರು. ಕಾಂಗ್ರೆಸ್​ ಪಕ್ಷದ ವಿರುದ್ಧವೇ ನೀವು ಟ್ರ್ಯಾಕ್ಟರ್​ ಱಲಿ ಮಾಡಿದ್ದಿರಿ. ಹೀಗಾಗಿ ನಿಮಗೆ ಪರಿಷತ್​ ಸ್ಥಾನ ಸಿಗಲ್ಲ ಎಂದಿದ್ದರು. ಅತ್ತ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಡಿ.ಕೆ ಶಿವಕುಮಾರ್​ ಟಿಕೆಟ್​ ಕೊಡಿಸಲು ಸಾಧ್ಯವಾಗದೆ ಪೆಚ್ಚುಮೋರೆ ಹಾಕಿಕೊಂಡು ಬಂದು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆಯ ನಾಗರಾಜು ಯಾದವ್​ ಹಾಗೂ ಅಬ್ದುಲ್​ ಜಬ್ಬಾರ್​ಗೆ ಬಿಫಾರಂ ಕೊಟ್ಟಿದ್ದಾರೆ. ಮುಂದಿನ ತಂತ್ರ – ರಣತಂತ್ರ ಏನು ಎನ್ನುವುದೇ ಈಗಿರುವ ಅಚ್ಚರಿ.

Related Posts

Don't Miss it !