ರಾಜಕೀಯಕ್ಕೆ ಸ್ವಾಮೀಜಿಗಳ ಅಧಿಕೃತ ಎಂಟ್ರಿ..! ಸಮಾವೇಶಕ್ಕೆ ಸಕಲ ಸಿದ್ಧತೆ..

ರಾಜ್ಯ ರಾಜಕೀಯದಲ್ಲಿ ಕಳೆದೊಂದು ವಾರದಿಂದ ಬಿಸಿಬಿಸಿ ಚರ್ಚೆ ಶುರುವಾಗಿದೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಅಖಾಡಕ್ಕೆ ಇಳಿದಿದ್ದ ಸ್ವಾಮೀಜಿಗಳು, ಸಿಎಂ ಯಡಿಯೂರಪ್ಪ ಅವರಿಗೆ ಜೈಕಾರವನ್ನೂ ಕೂಡಗಿದ್ರು. ಇದೀಗ ಇನ್ನೂ ಒಂದು ಹೆಚ್ಚೆ ಮುಂದೆ ಹೋಗಿ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಅರಮನೆ ಮೈದಾನದಲ್ಲಿ ಸ್ವಾಮೀಜಿಗಳ ಸಮಾವೇಶಕ್ಕೆ ಸಕಲ ತಯಾರಿಗಳೂ ನಡೆದಿದ್ದು, ಸಮಾವೇಶದ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ಸಮಾವೇಶ ಉದ್ದೆಶವೇನು..?

ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುತ್ತಿರುವ ಬಗ್ಗೆ ಷಡಕ್ಷರಿ ರುದ್ರಮುನಿ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಸಮಾವೇಶದ ಬಗ್ಗೆ ಮಾಹಿತಿ ನೀಡಿದ ಷಡಕ್ಷರಿ ಸ್ವಾಮೀಜಿ, ಬೆಳಗ್ಗೆ 10.30 ಕ್ಕೆ ಸಮಾವೇಶದಲ್ಲಿ ಎಲ್ಲಾ ಮಠಾಧೀಶರು ಪಾಲ್ಗೊಳ್ಳುತ್ತಾರೆ. 1000 ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುತ್ತಾರೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಠಗಳ ಪಾತ್ರ, ದೇಶಕ್ಕೆ ಮಠಗಳ ಕೊಡುಗೆ ಏನು ಅನ್ನೋ ಸ್ಪಷ್ಟೀಕರಣ ಕೊಡುತ್ತೇವೆ. ಯಡಿಯೂರಪ್ಪ ಅವರನ್ನು ಮಠಾಧೀಶರು ಆಶೀರ್ವದಿಸಿದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಾವೇಶದಲ್ಲಿ ರಾಜ್ಯದ ಎಲ್ಲಾ ವರ್ಗದ ಸ್ವಾಮೀಜಿ ಭಾಗವಹಿಸಿ, ರಾಜ್ಯದ ವರ್ತಮಾನ ಮತ್ತು ಪರಿಹಾರ ಕುರಿತು ಚರ್ಚೆ ನಡೆಯಲಿದೆ ಎಂದಿದ್ದಾರೆ

ಯಡಿಯೂರಪ್ದ ನಿವಾಸದಲ್ಲಿ ಶ್ರೀಗಳ ಗುಂಪು

ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಸಿಎಂ ನೀಡುವ ವಿಚಾರದ ಬಗ್ಗೆ ಪಂಚಮಸಾಲಿ‌ ಶ್ರೀಗಳು ಅವರ ವಿಚಾರ ಹೇಳಬಹುದು. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ನಾವು ಯಡಿಯೂರಪ್ಪನವರ ಪರವಾಗಿ ಮಾತನಾಡ್ತಿಲ್ಲ. ಸೂಕ್ತ ಉತ್ತರವನ್ನ ನಾಳೆ ನೀಡ್ತೇವೆ ಎಂದಿದ್ದಾರೆ. ಜಾತಿಗೆ, ಪಕ್ಷಕ್ಕೆ ಮೀಸಲಾದ ಕಾರ್ಯಕ್ರಮ ಇದಲ್ಲ, ಕೆಲವು ಸಂಶಯಗಳನ್ನು ನಿವಾರಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ. ಚುನಾಯಿತ ಜನಪ್ರತಿನಿಧಿಗಳನ್ನು ಯಾರೂ ಬರುವಂತಿಲ್ಲ. ಸಾರ್ವಜನಿಕರು ನಮ್ಮ ಸಮಾವೇಶಕ್ಕೆ ಬರಬಾರದು ಎಂದು ಸೂಚಿಸಿದ್ದಾರೆ. ಯಡಿಯೂರಪ್ಪ ಮನೆಗೆ ಹೋಗಿ ಮಠಾಧೀಶರು ಆಶೀರ್ವದಿಸಿ ಬಂದರು. ಅದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇದಕ್ಕೆ ನಾವು ಸ್ಪಷ್ಟನೆ ಕೊಡಬೇಕಾಗುತ್ತದೆ. ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ಅದನ್ನು ಬಗೆಹರಿಸುವುದಕ್ಕೆ ನಾವು ಸಮಾವೇಶ ನಡೆಸ್ತಿದ್ದೇವೆ.

ಸುತ್ತೂರು ಶ್ರೀಗಳ ಜೊತೆಗೆ ಜಯಮೃತ್ಯುಂಜಯ ಸ್ವಾಮೀಜಿ

ಸ್ವಾಮೀಜಿಗಳಲ್ಲೂ ಬಣ ರಾಜಕೀಯ ಶುರು..!

ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿಗಳಿಗೆ ಸಿಎಂ ಸ್ಥಾನ ಕೊಡಬೇಕು. 17 ಜನ ನಮ್ಮ ಪಂಚಮಸಾಲಿ ಶಾಸಕರು ಇದ್ದಾರೆ. ಅದರಲ್ಲಿ ಮೂವರು ಸಿಎಂ ರೇಸ್​ನಲ್ಲಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಹಾಗೂ ಮುರುಗೇಶ್ ನಿರಾಣಿ, ಈ ಮೂವರಲ್ಲಿ ಒಬ್ಬರನ್ನು ಸಿಎಂ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜುಲೈ 26 ನಂತರ ನಾನು ದೆಹಲಿಗೆ ಹೋಗ್ತೀನಿ. ನನ್ನ ಅಭಿಪ್ರಾಯವನ್ನ ವರಿಷ್ಠರು ಕೇಳಿದ್ರೆ ನಾನು ಹೇಳುತ್ತೇನೆ. ಮಠಾಧೀಶರಿಗೆ ಸಿಎಂ ಬದಲು ಮಾಡೋ ಶಕ್ತಿ ಇಲ್ಲ, ಅದನ್ನ ಪ್ರಧಾನಿ ನಿರ್ಣಯಿಸ್ತಾರೆ. ನಾವೆಲ್ಲರು ಸ್ವಾಗತಿಸಬೇಕು ಎಂದಿದ್ದಾರೆ.

ಬಿಎಸ್​ವೈ ಪರ ಬ್ಯಾಟ್​ ಬೀಸಿದ್ದಕ್ಕೆ ಚಾಟಿ..!

ಒಬ್ಬರ ಪರವಾಗಿ ಸ್ವಾಮೀಜಿಗಳು ಬ್ಯಾಟ್ ಬೀಸಿದ್ದು ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಯ ಮೃತ್ಯುಂಜಯ ಸ್ವಾಮೀಜಿಗಳು, ನಾವೂ ಸೇರಿದಂತೆ ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸಿರಿಗೆರೆ ಶ್ರೀಗಳು ಮಠಕ್ಕೆ ಕರೆದು ಸಲಹೆ ಸೂಚನೆಗಳನ್ನು ಕೊಡ್ತಿದ್ದೆವು. ಆ ರೀತಿ ನಮ್ಮಲ್ಲಿಗೆ ಬಂದರೇ ಸಲಹೆ ಕೊಡುತ್ತೇನೆ. ಆದರೇ ನಾನು ಒಬ್ಬರ ಪರವಾಗಿ ಈ ರೀತಿ ಹೋಗೋದಿಲ್ಲ ಎಂದು ಇತರೆ ಸ್ವಾಮೀಜಿಗಳ ನಡೆಗೆ ಚಾಟಿ ಬೀಸಿದ್ದಾರೆ. ಬಿಜೆಪಿ ಪಕ್ಷದ ಆಂತರಿಕ ವಿಚಾರವನ್ನ ನಾವೂ ಪ್ರಶ್ನೆ ಮಾಡೋದಿಲ್ಲ. ಯಾರನ್ನೇ ಸಿಎಂ ಮಾಡಿದ್ರು ನಾವು ಸ್ವಾಗತಿಸುತ್ತೇವೆ. ಆದರೆ ನಾವು ಸಲಹೆ ಕೊಡುತ್ತೇವೆ ಎಂದಿದ್ದಾರೆ

ಸುತ್ತೂರು ಮಠದ ವಿರುದ್ಧ ಸಮಾವೇಶದಲ್ಲಿ ಗುಡುಗು..!

ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ಮಾಡುವಲ್ಲಿ ಸುತ್ತೂರು ಮಠ ಪ್ರಮುಖ ಪಾತ್ರವಹಿಸಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಬೆಳಗಾವಿಯಲ್ಲಿ ಮಾತನಾಡಿದ್ದ ಪಂಚಾಕ್ಷರಿ ಸ್ವಾಮೀಜಿ, ಇಡೀ ಸರ್ಕಾರ ಸುತ್ತೂರು ಮಠದ ಕೈಯ್ಯಲ್ಲಿದೆ ಎಂದು ನೇರ ಆರೋಪ ಮಾಡಿದ್ದರು. ಬಿ.ಎಸ್​ ಯಡಿಯೂರಪ್ಪ ಬಣದ ನಾಯಕರು ಕೂಡ ಸುತ್ತೂರು ಮಠಕ್ಕೆ ಭೇಟಿ ನೀಡಿ ರಾಜಕೀಯ ಶಕ್ತಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದರೂ ಎನ್ನುವುದು ಅಷ್ಟೇ ಸತ್ಯ ಕೂಡ. ಇದೀಗ ಬಿಎಸ್​ ಯಡಿಯೂರಪ್ಪ ಪರವಾಗಿ ಹಾಗೂ ವಿರುದ್ಧವಾಗಿ ಎರಡು ಗುಂಪುಗಳಾಗಿದ್ದು, ನಾಳಿನ ಸಮಾವೇಶಕ್ಕೆ ಉತ್ತರವಾಗಿ ಇನ್ನೊಂದು ಸಮಾವೇಶ ನಡೆಯುವ ಸಾಧ್ಯತೆಯಿದೆ. ರಾಜಕಾರಣವನ್ನು ಕದ್ದು ಮುಚ್ಚಿ ಮಾಡ್ತಿದ್ದ ಸ್ವಾಮೀಜಿಗಳು ಬಹಿರಂಗ ಅಖಾಡಕ್ಕೆ ಧುಮುಕಿದ್ದಾರೆ.

Related Posts

Don't Miss it !