Apartment ಸಿಲಿಂಡರ್​ ಸ್ಫೋಟ ಆಗಿಲ್ಲ; ಬೆಂಕಿ ಹೊತ್ತಿದ್ದು ಹೇಗೆ..? 2 ಸಾವಿನ ಗುಟ್ಟು..!!

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಅಪಾರ್ಟ್​ನಲ್ಲಿ ಸಿಲಿಂಡರ್​ ಸ್ಫೋಟವಾಗಿದೆ ಎನ್ನುವ ಸುದ್ದಿ ಎಲ್ಲಾ ಮಾಧ್ಯಗಳಲ್ಲೂ ಬಂದಿತ್ತು. ಧಗಧಗನೆ ಹೊತ್ತಿ ಉರಿಯುವ ಕಟ್ಟಡದ ದೃಶ್ಯ ಕೂಡ ಕಾಣಿಸಿತ್ತು. ಅದರಲ್ಲಿ ಓರ್ವ ಮಹಿಳೆ ಬೆಂಕಿಯಿಂದ ರಕ್ಷಣೆ ಮಾಡುವಂತೆ ಅಂಗಲಾಚಿ ಕೊನೆಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪು ಕರುಣಾಜನಕ ದೃಶ್ಯ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಯ್ತು. ಆದರೆ ಅಂತಿಮವಾಗಿ ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಎಫ್​ಎಸ್​ಎಲ್​ ಟೀಂ ಜೊತೆಗೆ ಮನೆಯನ್ನು ಪರಿಶೀಲಿಸಿದಾಗ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿತ್ತು. ಅದೇನೆಂದರೆ ಮನೆಯಲ್ಲಿದ್ದ ಎರಡೂ ಸಿಲಿಂಡರ್​​ ಯಾವುದೇ ಹಾನಿಯಿಲ್ಲದೆ ಇದ್ದವು.

ಎರಡು ಫ್ಲಾಟ್​ ಮಾತ್ರ ಹೊತ್ತಿ ಉರಿದಿದ್ದು ಹೇಗೆ..?

ಸಿಲಿಂಡರ್​ ಭ್ಲಾಸ್ಟ್​ ಆಗಿದ್ದರೂ ಈ ಪ್ರಮಾಣದಲ್ಲಿ ದಟ್ಟ ಹೊಗೆ, ಬೆಂಕಿಯ ಜ್ವಾಲೆ ಹರಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಪೊಲೀಸರಿಗೆ ಮನವರಿಕೆ ಆಗಿದೆ. ಸಿಲಿಂಡರ್​ ಬ್ಲಾಸ್ಟ್​ ಆಗದ ಹೊರತು ಈ ಪ್ರಮಾಣದಲ್ಲಿ ಬೆಂಕಿ ಆವರಿಸಿದೆ ಎಂದರೆ ಪ್ರಕರಣದ ಹಿಂದೆ ಬೇರೆ ಏನೋ ನಿಗೂಢ ವಾಸನೆ ಇರುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 318 ಫ್ಲಾಟ್​ ಹೊಂದಿದ್ದ ‘ಆಶ್ರಿತ್​ ಆಸ್ಪೈರ್’ ಅಪಾರ್ಟ್​ಮೆಂಟ್​ 210 ಹಾಗೂ 211ನೇ ಫ್ಲಾಟ್​ಗೆ ಮಾತ್ರ ಬೆಂಕಿ ತಗುಲಿದೆ. ಈ ಎರಡು ಫ್ಲಾಟ್​​ನಲ್ಲೂ ಒಂದೊಂದು ಸಾವು ಸಂಭವಿಸಿದೆ. ತಾಯಿ 82 ವರ್ಷದ ಲಕ್ಷ್ಮೀ ದೇವಿ ಹಾಗೂ 59 ವರ್ಷದ ಭಾಗ್ಯರೇಖಾ ಎಂಬುವವರು ಅಸುನೀಗಿದ್ದಾರೆ. ಎರಡೂ ಕಟ್ಟಡಗಳಿಗೂ ಬೆಂಕಿ ಬಿದ್ದಿದ್ದು ಹೇಗೆ ಎನ್ನುವುದೇ ಪ್ರಶ್ನಾರ್ಥಕ ವಿಷಯವಾಗಿದೆ. ಜೊತೆಗೆ ಮತ್ತೊಂದು ಡೌಟ್​ ಕೂಡ ಇದೆ.

Read this also;

ಅಮೆರಿಕದಿಂದ ನಿನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದರು..!

ಭೀಮ ಸೇನಾ ರಾವ್​ ಹಾಗೂ ಅವರ ಪತ್ನಿ ಭಾಗ್ಯರೇಖಾ ಸೋಮವಾರ ಅಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದೇ ದಿನದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸಿಲಿಂಡರ್​ ಸ್ಫೋಟ ಸಂಭವಿಸಿಲ್ಲ, ದೀಪದ ಬೆಂಕಿಯಿಂದ ದುರ್ಘಟನೆ ಸಂಭವಿಸಿದೆ ಎನ್ನಲು ಇದೇನು ಗುಡಿಸಲು ಅಲ್ಲ. ಆಗಿದ್ದರೂ ಈ ಪ್ರಮಾಣದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಲು ಕಾರಣವೇನು ಎನ್ನುವುದು ಪೊಲೀಸರ ತಲೆಯನ್ನು ಹೊಕ್ಕಿದೆ. ಅದೂ ಅಲ್ಲದೆ ಮನೆಗೆ ಬೆಂಕಿ ಬಿದ್ದಾಗ ಮನೆಯಿಂದ ಆಚೆ ಹೋಗದೆ ಹಿಂಬಾಗಿಲ ಮೂಲಕ ಬಾಲ್ಕಾನಿಗೆ ಬಂದಿದ್ದು ಯಾಕೆ..? ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಅಮೆರಿಕದಿಂದ ಬಂದಿದ್ದ ಭೀಮಸೇನಾ ರಾವ್​ ಹಾಗೂ ಅವರ ಮೊಮ್ಮಗ ಎಲ್ಲಿದ್ದರು..? ಅವರಿಬ್ಬರು ಘಟನೆ ನಡೆದಾಗ ಮನೆಯಲ್ಲೇ ಇದ್ದರೂ ಬದುಕಿದ್ದು ಹೇಗೆ..? ಎನ್ನುವ ಅನುಮಾನವೂ ಮೂಡುತ್ತಿದೆ.

ಅಗ್ನಿ ಅವಘಡವೋ..? ಪೂರ್ವ ನಿಯೋಜಿತ ಕೃತ್ಯವೋ..!?

ಸಿಲಿಂಡರ್​ ಸ್ಫೋಟ ಸಂಭವಿಸಿದ್ದಲ್ಲ ಎಂದ ಮೇಲೆ ಬೇರೆ ಶಾರ್ಟ್​ ಸರ್ಕ್ಯೂಟ್​ ಸೇರಿದಂತೆ ಬೇರೆ ಮೂಲಗಳಿಂದ ಬೆಂಕಿ ಹೊತ್ತುಕೊಂಡಿದೆ ಎನ್ನಬಹುದು. ಆದರೆ ಇಷ್ಟೊಂದು ಅಪಾರ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಆವರಿಸಿಕೊಳ್ಳಲು ಕಾರಣವೇನು ಎನ್ನುವ ಅಂಶವು ಗಮನ ಸೆಳೆಯುತ್ತದೆ. ಮನೆಯಲ್ಲಿರೋ ಪೀಟೋಪಕರಣ ಅಥವಾ ಸ್ಕ್ರೀನ್​, ಸೋಫಾ ಸೇರಿದಂತೆ ಯಾವುದೇ ವಸ್ತುಗಳು ಹೊತ್ತಿಕೊಂಡರೂ ಗರಿಷ್ಟ ಅರ್ಧ ಗಂಟೆ ಉರಿಯಬಹುದು. ಆದರೆ ಇಲ್ಲಿ ಒಂದೂವರೆ ಗಂಟೆಗಳ ಕಾಲ ಬೆಂಕಿ ಧಗಧಗನೆ ಹೊತ್ತಿ ಉರಿದಿದೆ. ಒಂದು ವೇಳೆ ಮನೆಯಲ್ಲಿ ಅಗ್ನಿ ವಾಹಕ ವಸ್ತುಗಳನ್ನು ಸಂಗ್ರಹ ಮಾಡಿದ್ದರೆ ಬೆಂಕಿ ಈ ಪರಿ ವ್ಯಾಪಿಸಬಹುದು ಎನ್ನುತ್ತಾರೆ ಪೊಲೀಸ್​ ಮೂಲಗಳು. ಬೆಂಕಿ ಅವಘಡ ಸಂಭವಿಸಿದ ವೇಳೆ ಅಳಿಯ ಹಾಗೂ ಮಗಳು ಫ್ಲಾಟ್​ ಇರಲಿಲ್ಲ ಎನ್ನಲಾಗಿದೆ. ಒಟ್ಟಾರೆ, ಇಬ್ಬರು ವಯೋವೃದ್ಧರ ಸಾವಿನ ಪ್ರಕರಣ ಗೋಜಲುಮಯವಾಗಿದೆ. ಆಸ್ತಿ ಯಾರ ಹೆಸರಿನಲ್ಲಿತ್ತು..? ಆಸ್ತಿ ಲಪಟಾಯಿಸಲು ನಡೆದ ಪೂರ್ವ ನಿಯೋಜಿತ ಕೃತ್ಯವೇ ಎಂಬುದನ್ನೂ ಪರಿಶೀಲಿಸಬೇಕಿದೆ.

Read this also;

ಅಗ್ನಿ ಅವಘಡ ತಡೆಯುವ ವ್ಯವಸ್ಥೆ ಇರಲಿಲ್ಲ ಯಾಕೆ..?

ಅಪಾರ್ಟ್​ಮೆಂಟ್​ ಸೇರಿದಂತೆ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿಯನ್ನು ನಂದಿಸುವ ವ್ಯವಸ್ಥೆ ಇರಬೇಕು ಎನ್ನುವುದು ನಿಯಮ. ಆದರೆ ಈ ಕಟ್ಟಡದ ಬಳಿ ಅಗ್ನಿ ಶಾಮಕ ದಳದವರು ಪರದಾಡುವಂತಾಗಿತ್ತು. ಬೆಂಕಿ ನಂದಿಸಲು ಸುಮಾರು ಒಂದೂವರೆ ಗಂಟೆಗಳ ಕಾಲ ಒದ್ದಾಡುವಂತಾಯ್ತು. ಕೆಲವೊಂದಿಷ್ಟು ಸಮಯ ದಟ್ಟ ಹೊಗೆ ಕಾರಣದಿಂದಾಗಿ ಯಾವುದೇ ಕಾರ್ಯಾಚರಣೆ ಮಾಡಲು ಸಾಧ್ಯವಾಗದೆ ನಿಲ್ಲಿಸಬೇಕಾದ ಸಂದರ್ಭವೂ ಎದುರಾಗಿತ್ತು. ಇದು ಜಿ+3 ಆಗಿರುವ ಕಾರಣ ಬೆಂಕಿ ನಂದಿಸುವ ವ್ಯವಸ್ಥೆ ಇರಲಿಲ್ಲ ಎಂದು ಶಾಸಕ ಸತೀಶ್​ ರೆಡ್ಡಿ ಹೇಳಿದ್ದಾರೆ. ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಮಾಡುವ ಮೂಲಕ ಸಾವಿಗೆ ನಿಖರ ಕಾರಣವನ್ನು ಪತ್ತೆ ಮಾಡಬೇಕಿದೆ.

Related Posts

Don't Miss it !