‘ಮೀನು ತಿನ್ನುವವರು ಹಿಂದೂ ಆಗಲು ಸಾಧ್ಯವೇ ಇಲ್ಲ’ ವಿವಾದಕ್ಕೆ ಅಣ್ಣಾಮಲೈ ಸ್ಪಷ್ಟನೆ ಯತ್ನ..

ಕರ್ನಾಟಕದಲ್ಲಿ ಐಪಿಎಸ್​ ಅಧಿಕಾರಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಐಪಿಎಸ್​ ಅಧಿಕಾರಿ ಅಣ್ಣಾಮಲೈ ರಾಜಕೀಯಕ್ಕೆ ಧುಮುಕಿದ್ದಾರೆ. ಆದ್ರೆ ರಾಜಕೀಯಕ್ಕೆ ಬಂದ ಬಳಿಕ ಸಾಕಷ್ಟು ವಿವಾದಿತ ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ, ಬಿಜೆಪಿ ನಾಯಕರನ್ನು ಮೆಚ್ಚಿಸಲು ಹವಣಿಸುತ್ತಿದ್ದಾರೆಯೇ..? ಎನ್ನುವ ಶಂಕೆ ವ್ಯಕ್ತವಾಗುವಂತೆ ನಡೆದುಕೊಳ್ತಿದ್ದಾರೆ. ಇತ್ತೀಚಿಗೆ ಸನಾತನ ಧರ್ಮ, ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಕಡೆಗಳಲ್ಲಿ ಭಾಷಣ ಮಾಡುತ್ತಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮೀನು ತಿನ್ನುವ ಜನರ ಬಗ್ಗೆ ಮಾತನಾಡುವ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ವಿಚಾರ ವಿವಾದ ಸೃಷ್ಟಿಸುವುದನ್ನು ಅರಿತ ಅಣ್ಣಾಮಲೈ ಸ್ಪಷ್ಟನೆ ನೀಡುವ ಪ್ರಯತ್ನ ಕೂಡ ಮಾಡಿದ್ದಾರೆ.

ಮೀನು ಸೇವಿಸುವ ಜನ ಹಿಂದೂಗಳೇ ಅಲ್ಲ..!

ತಮಿಳುನಾಡಿನ ತೂತುಕುಡಿಯ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಣ್ಣಾ ಮಲೈ, ಮೀನು ತಿನ್ನುವ ಜನರು ಯಾವುದೇ ಕಾರಣಕ್ಕೂ ಹಿಂದೂಗಳು ಎನ್ನುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ನಾವು ಹುಟ್ಟಿದಾಗ ಏನನ್ನೂ ತರುವುದಿಲ್ಲ, ಏನನ್ನೂ ತರುವುದಿಲ್ಲ. ಸತ್ತಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಯಾರಿಗೂ ತೊಂದರೆ ಕೊಡದೆ ಬದುಕುವ ಸಂಸ್ಕೃತಿ ನಮ್ಮದು. ಮೀನು ತಿನ್ನುವವರಲ್ಲಿ ಯಾರೂ ಹಿಂದೂಗಳಲ್ಲ. ನಮ್ಮ ಸಂಸ್ಕೃತಿ ಸ್ವಲ್ಪಮಟ್ಟಿಗೆ ನಮ್ಮ ಕಣ್ಣ ಮುಂದೆಯೇ ಇದೆ. ಏನಾದರೂ ತರುವುದಿಲ್ಲ, ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ವಿನಾಶವನ್ನು ನಾವು ನೋಡುತ್ತಿದ್ದೇವೆ. ಮೀನು ತಿನ್ನುವವರು ಯಾರೂ ಹಿಂದೂಗಳಲ್ಲ ಎನ್ನುವ ಮೂಲಕ ಪ್ರಾಣ ಹಾನಿ ಬಗ್ಗೆ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಏಷ್ಯಾನೆಟ್ ನ್ಯೂಸ್​.ಕಾಂ ಹಾಗೂ ಇಂಡಿಯಾ ಹೆರಾಲ್ಡ್​.ಕಾಂ ವರದಿ ಮಾಡಿದೆ.

Read This;

ವಿವಾದದ ಮುನ್ಸೂಚನೆ ಅರಿತು ಸ್ಪಷ್ಟನೆ ಯತ್ನ..!

ಬಿಜೆಪಿ ಪಕ್ಷಕ್ಕೆ ದೇವಸ್ಥಾನಗಳು ಪ್ರಮುಖ, ಹಾಗೆಯೇ ಚರ್ಚ್​ಗಳು ಮುಖ್ಯ, ಮಸೀದಿಗಳೂ ಮುಖ್ಯ. ಆದರೆ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಡಿಎಂಕೆ ಪಕ್ಷ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇನ್ನೂ ಕಾಂಗ್ರೆಸ್​​ ಪಕ್ಷ ತಮಿಳುನಾಡಿನಲ್ಲಿ ಡಿಎಂಕೆ ಬಿ ಟೀಂ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಟುನುಡಿಗಳಲ್ಲಿ ಟೀಕಿಸಿದ್ದಾರೆ. ಇನ್ನೂ ಮೀನು ತಿನ್ನುವ ಜನರು ಹಿಂದೂಗಳು ಆಗಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ದೊಡ್ಡ ಸಮುದಾಯವನ್ನು ಕೆಣಕಿದ್ದ ಅಣ್ಣಾಮಲೈ, ತಪ್ಪಿನ ಅರಿವಾದ ಕೂಡಲೇ ಪರೋಕ್ಷವಾಗಿ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ದಾರೆ. ಜ್ಯೂನಿಯರ್​ ವಿಕ್ರಾಂತ್​ ಎಂಬ ಟ್ವಿಟರ್​ನಲ್ಲಿ ಈ ಬಗ್ಗೆ ಪೋಸ್ಟರ್​ ಒಂದನ್ನು ಹಾಕಿದ್ದು, ಅಣ್ಣಾಮಲೈ ಆ ಟ್ವೀಟ್​​ ಅನ್ನು ರೀ ಟ್ವೀಟ್ ಮಾಡಿದ್ದಾರೆ. ಈ ಮೂಲಕ ತನ್ನ ಹೇಳಿಕೆಯಿಂದ ಹಿಂದೆ ಸರಿಯುವ ಯತ್ನ ಮಾಡಿದ್ದಾರೆ.

Also Read;

ಟ್ವಿಟರ್​ ಪೋಸ್ಟ್​​ನಲ್ಲಿ ಸ್ಪಷ್ಟನೆ ಹೇಗಿದೆ..?

ಸ್ವತಃ ಅಣ್ಣಾಮಲೈ ಈ ಪೋಸ್ಟ್​ ಹಾಕಿಲ್ಲ. ಬದಲಿಗೆ ಯಾರೋ ಹಾಕಿದ್ದ ಅಥವಾ ತಾವೇ ಹಾಕಿಸಿರುವ ಈ ಪೋಸ್ಟ್​​ನಲ್ಲಿ. ಮೀನು ತಿನ್ನುವವರು ಹಿಂದೂಗಳಲ್ಲ ಎಂದು ಅಣ್ಣಾ ಮಲೈ ಹೇಳಿಕೆ ನೀಡಲಿಲ್ಲ, ಬದಲಿಗೆ ಮೀನು ಮಾರುಕಟ್ಟೆಯನ್ನು ದೇವಸ್ಥಾನ ಆಡಳಿತ ಮಂಡಳಿ ನಿರ್ಮಾಣ ಮಾಡಲು ಮುಂದಾಗಿರುವುದನ್ನು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಅಷ್ಟೆ. ಅದನ್ನು ತಪ್ಪಾಗಿ ಬಿಂಬಿಸಲಾಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಆ ಟ್ವೀಟ್​ ಪೋಸ್ಟ್​​ ಅನ್ನು ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ರೀ ಪೋಸ್ಟ್​ ಮಾಡುವ ಮೂಲಕ ಸಮ್ಮತಿ ಸೂಚಿಸಿದಂತೆ ವರ್ತಿಸಿದ್ದಾರೆ.̣ ಆದರೆ ಮೀನುಗಾರಿಕಾ ಸಮುದಾಯ ತುಂಬಾ ಶ್ರಮಜೀವಿಗಳೇ ತುಂಬಿರುವ ಸಮುದಾಯ. ಆ ಸಮುದಾಯಕ್ಕೆ ದೇವಸ್ಥಾನ ಆಡಳಿತ ಮಂಡಳಿಯೊಂದು ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟರೆ ಅದರಿಂದ ಆಗುವ ಅನಾಹುತ ಏನು..? ಅಣ್ಣಾಮಲೈ ಅದಕ್ಕೆ ಯಾಕೆ ವಿರೋಧ ವ್ಯಕ್ತಪಡಿಸಬೇಕು ಎನ್ನುವ ಪ್ರಶ್ನೆ ಉದ್ಬವ ಆಗಿದೆ.

ಮೀನು ತಿನ್ನುವವರು ಹಿಂದೂಗಳಾಗಲು ಸಾಧ್ಯವಿಲ್ಲ ಎನ್ನುವುದಕ್ಕಿಂತ, ಮೀನುಗಾರಿಕಾ ಸಮುದಾಯದ ನೆರವಿಗೆ ನಿಂತಿದ್ದ ದೇವಸ್ಥಾನ ಆಡಳಿತ ಮಂಡಳಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೂ ಅಕ್ಷಮ್ಯ ಎನ್ನಬಹುದು. ಯಾಕೆಂದರೆ ಕರ್ನಾಟಕದ ಕರಾವಳಿ ಭಾಗದ ಉಡುಪಿಯಲ್ಲಿ ಕೆಲಸ ಮಾಡಿದ್ದ ಅನುಭವ ಇರುವ ಅಣ್ಣಾಮಲೈಗೆ ಮೀನುಗಾರಿಕಾ ಸಮುದಾಯದ ಕಷ್ಟ ಕಾರ್ಪಣ್ಯಗಳು ಗೊತ್ತಿರಬೇಕಿತ್ತು. ಅವರ ನೆರವಿಗೆ ನಿಲ್ಲುವಂತೆ ಸ್ವತಃ ಅಣ್ಣಾಮಲೈ ಒತ್ತಾಯ ಮಾಡಬೇಕಿತ್ತು. ಯಾರಾದರೂ ಮೀನುಗಾರಿಕಾ ಸಮುದಾಯದ ನೆರವಿಗೆ ನಿಲ್ಲುತ್ತಾರೆ ಎಂದಾಗ ಬೆಂಬಲಿಸಬೇಕಿತ್ತು. ಆದರೆ ಸಮುದಾಯದ ನೆರವಿಗೆ ನಿಂತ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿರುವುದು ಮೀನುಗಾರಿಕಾ ಸಮುದಾಯದ ಮೇಲೆ ಅಣ್ಣಾಮಲೈ ಹೊಂದಿರುವ ನಿಲುವು ಬಟಾಬಯಲಾಗಿದೆ ಎನ್ನಬಹುದು.

Related Posts

Don't Miss it !