ಮಾಜಿ ವಿಶ್ವಸುಂದರಿ ಜೊತೆ ಲಲಿತ್​ ಮೋದಿ ಮದುವೆ..! ಸ್ಪಷ್ಟನೆ ಏನು ಗೊತ್ತಾ..!?

ಮಾಜಿ ವಿಶ್ವ ಸುಂದರಿ ಹಾಗು ಬಾಲಿವುಡ್​ ನಟಿ ಸುಷ್ಮಿತಾ ಸೇನ್​ ಜೊತೆಗೆ ಐಪಿಎಲ್​ ಸಂಸ್ಥಾಪಕ ಲಲಿತ್​​ ಮೋದಿ ಮದುವೆ ಆಗ್ತಿದ್ದಾರೆ ಅನ್ನೋದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಂತಹ ವಿಚಾರ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಲು ಕಾರಣ ಲಲಿತ್​ ಮೋದಿ ಅವರು ಮಾಡಿದ್ದ ಟ್ವೀಟ್​ ಹಾಗೂ ಅದರಲ್ಲಿ ಹಾಕಿದ್ದ ಆತ್ಮೀಯ ಕ್ಷಣಗಳ ಫೋಟೋಗಳು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ವೀಟ್​ ಒಂದನ್ನು ಮಾಡಿದ್ದ ಲಲಿತ್​ ಕುಮಾರ್​ ಮೋದಿ @LalitKModi ಈಗಷ್ಟೇ ಲಂಡನ್​ಗೆ ವಾಪಸ್​ ಆದೆವು. ಅಂತಿಮವಾಗಿ ಹೊಸ ಜೀವನ ಆರಂಭವಾಗಿದೆ. ಕುಟುಂಬದೊಂದಿಗೆ ಜಾಗತಿಕ ಪ್ರವಾಸ ಮುಗಿಸಿ ಬಂದಿದ್ದೇವೆ ಎಂದು ಬರೆದುಕೊಂಡಿದ್ದರು.

ಕಿಚ್ಚು ಹೊತ್ತಿಸಿದ್ದು ಮಾಲ್ಡೀವ್ಸ್​, ಸಾರ್ಡಿನಿಯಾ ಪ್ರವಾಸದ ಫೋಟೋಗಳು..!

ಹೊಸ ಜೀವನ, ಮೂನ್, ಬೆಟರ್​ಹಾಫ್​ ಎಂದಿದ್ದ ಪದಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದವು. ಆ ಬಳಿಕ ಮತ್ತಷ್ಟು ಫೋಟೋ ಶೇರ್​ ಮಾಡಿ ಇನ್ನೊಂದು ಟ್ವೀಟ್​ ಮಾಡಿದ ಲಲಿತ್​ ಮೋದಿ, ನಾನು ಮದುವೆ ಆಗಿಲ್ಲ, ಆದರೆ ಇಬ್ಬರೂ ಡೇಟಿಂಗ್​ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಟಿ ಸುಷ್ಮಿತಾ ಸೇನ್​ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಅಧಿಕೃತ ಟ್ವಿಟ್ಟರ್​ ಅಕೌಂಟ್​ ಡಿಲೀಟ್​ ಮಾಡಿದ್ದು, ಲಲಿತ್​ ಮೋದಿ ಫೋಟೋಗಳು ಹಾಗು ಅವರ ಡೇಟಿಂಗ್​ ಮಾಹಿತಿ ಬಗ್ಗೆ ಏನು ಹೇಳಲಿದ್ದಾರೆ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ.

ಇದನ್ನು ಓದಿ: ಗುರುವಾರ ನಡೆದ ಪ್ರಮುಖ ಕ್ರೈಂ ಸುದ್ದಿಗಳ ಚುಟುಕು ನೋಟ..!

ಸುಷ್ಮಿತಾ ಸೇನ್​ ಯಾರು..? ಲಲಿತ್​ ಮೋದಿ ಯಾರು..?

ಮಾಜಿ ವಿಶ್ವಸುಂದರಿ ಆಗಿರುವ 46 ವರ್ಷದ ನಟಿ ಸುಷ್ಮಿತಾ ಸೇನ್​, ಮಾಡೆಲ್​ ಜೊತೆಗೆ ರಿಲೇಷನ್​ಶಿಪ್​​ ಇರಿಸಿಕೊಂಡಿದ್ದನ್ನು ಬಹಿರಂಗ ಮಾಡಿದ್ದರು. ಆ ಬಳಿಕ ಕಳೆದ ವರ್ಷ ಡಿಸೆಂಬರ್​ನಲ್ಲಿ ರಿಲೇಷನ್​ಶಿಪ್​ ಕಡಿತ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದರು. ಆದರೆ ಲಲಿತ್​ ಮೋದಿ ಜೊತೆಗೆ ಹೊಸ ಪಯಣ ಆರಂಭಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಫೋಟೋಗಳು ಲಲಿತ್​ ಮೋದಿ ಹೇಳಿರುವುದನ್ನು ಮಾತನಾಡುತ್ತಿವೆ ಅಷ್ಟೆ. ಐಪಿಎಲ್​ ಎನ್ನುವ ಹೊಸ ಕ್ರಿಕೆಟ್​ ಆವಿಷ್ಕಾರವನ್ನು ಜಗತ್ತಿಗೆ ಪರಿಚಯಿಸಿದ ಬಳಿಕ, ಐಪಿಎಲ್​ನಲ್ಲಿ ಗೋಲ್ಮಾಲ್​ ಮಾಡಿದ ಆರೋಪದ ಮೇಲೆ ದೇಶದಿಂದ ಕದ್ದೋಡಿರುವ ಲಲಿತ್​ ಮೋದಿ, ಭಾರತಕ್ಕೆ ಅಪರಾಧಿ ಎನ್ನಬಹುದು. ಆದರೆ ಹೊಸ ಬಾಳ ಪಯಣ ಆರಂಭ ಮಾಡಿರುವ ಬಗ್ಗೆ ಘೋಷಿಸಿಕೊಂಡಿರುವ ಲಲಿತ್​ ಮೋದಿ ಹಾಗು ಸುಷ್ಮಿತಾ ಸೇನ್​ ಅವರಿಗೆ ಅಭಿನಂದನೆ ಹೇಳೋಣ.

Related Posts

Don't Miss it !