ಪ್ರತಿಭಟನೆ ವೇಳೆ ಕಾರು ಹತ್ತಿಸಿ 4 ರೈತರ ಹತ್ಯೆ, ಹಿಂಸಾಚಾರದಲ್ಲಿ ಮತ್ತೆ 4 ಸಾವು..

ದೆಹಲಿಯಲ್ಲಿ ಕೃಷಿ ಕಾಯ್ದೆಯನ್ನು ವಿರೋಧಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ರೂ ಕೇಂದ್ರ ಸರ್ಕಾರ ಮಣಿದಿಲ್ಲ. ಆದರೆ ಉತ್ತರ ಪ್ರದೇಶದ ಲಖಿಮ್ ಪುರದಲ್ಲಿ ಭಾರತೀಯ ಕಿಸಾನ್ ಸಂಘಟನೆ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ಪಡೆ ರೈತರ ಮೇಲೆ ಹತ್ತಿದ ಪರಿಣಾಮ ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ರು. ಇದ್ರಿಂದ ರೊಚ್ಚಿಗೆದ್ದ ಅನ್ನದಾತರು ಎರಡು ಎಸ್​ಯುವಿ ಕಾರುಗಳಿಗೆ ಬೆಂಕಿ ಹಚ್ಚಿದ್ರು. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಮತ್ತೆ ನಾಲ್ವರು ಅಸುನೀಗಿದ್ದಾರೆ. ಈ ಘಟನೆಯಲ್ಲಿ ಒಟ್ಟು 8 ಮಂದಿ ದುರ್ಮರಣ ಹೊಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಎದುರಾಗಿದೆ.

ಕಾರು ಹತ್ತಿಸಿ ಪ್ರತಿಭಟನೆ ಮಾಡ್ತಿದ್ದ ರೈತರ ಹತ್ಯೆ..!

ರೈತರು ಹೇಳುವ ಪ್ರಕಾರ ಕೇಂದ್ರ ಸಚಿವರ ಬೆಂಗಾವಲು ವಾಹನ ಹತ್ತಿದ ಕೂಡಲೇ ಮೂವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದರು. ಆ ಕಾರು ಚಾಲನೆಯನ್ನು ಸ್ವತಃ ಕೇಂದ್ರ ಸಚಿವ ಅಜೇಯ್​ ಮಿಶ್ರಾ ಅವರ ಪುತ್ರ ಮಾಡ್ತಿದ್ರು. ಉತ್ತರ ಪ್ರದೇಶದ ಡಿಸಿಎಂ ಕೇಶವ್​ ಮೌರ್ಯ ಅವರ ಜೊತೆಯಲ್ಲಿದ್ದರು ಎಂದಿದ್ದಾರೆ. ಇನ್ನೂ ಸಚಿವ ಅಜೇಯ್​ ಮಿಶ್ರಾ ಈ ಬಗ್ಗೆ ಮಾತನಾಡಿದ್ದು, ರೈತರು ಏಕಿಏಕಿ ಕಲ್ಲು ತೂರಾಟ ಮಾಡಿದ್ದರಿಂದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ದುರ್ಘಟನೆ ನಡೆದಿದೆ. ಚಾಲಕ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದಿದ್ದಾರೆ. ಆದರೆ ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ನಾಲ್ವರು ರೈತರ ಜೊತೆಗೆ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಖಚಿತ ಮಾಡಿದ್ದಾರೆ.

Read this also;

ಈ ದುರ್ಘನೆಗೆ ಕಾರಣ ಏನು ಗೊತ್ತಾ..?

ದೈನಿಕ ಭಾಸ್ಕರ್​ ಪತ್ರಿ ವರದಿ ಪ್ರಕಾರ. ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಅಜೇಯ್​ ಮಿಶ್ರಾ ಹಾಗೂ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್​ ಮೌರ್ಯ ಲಖಿಮ್​ಪುರ್ ಖೇರಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್​ನಲ್ಲಿ ತೆರಳಬೇಕಿತ್ತು. ಆದರೆ ರೈತರು ಹೆಲಿಕಾಪ್ಟರ್​ ಇಳಿಯಬೇಕಿದ್ದ ಸ್ಥಳದಲ್ಲಿ ಜಮಾಯಿಸಿ ಅಡ್ಡಿ ಉಂಟು ಮಾಡಿದ್ದರು. ಇದರಿಂದ ಬೇಸತ್ತ ಕೇಂದ್ರ ಸಚಿವ ಹಾಗೂ ಉತ್ತರ ಪ್ರದೇಶ ಡಿಸಿಎಂ ರಸ್ತೆ ಮಾರ್ಗವಾಗಿ ತೆರಳಲು ಮುಂದಾದರು. ಜಿಲ್ಲಾ ಕೇಂದ್ರದಲ್ಲಿ ಕೆಲವೊಂದು ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಅಜೇಯ್​ ಮಿಶ್ರಾ ಹುಟ್ಟೂರು ಬನ್ವಾರಿಗೆ ಭೇಟಿ ನೀಡಿದ್ದರು. ಮಧ್ಯಾಹ್ನ 2.45ರ ಸುಮಾರಿಗೆ ರೈತರು ಬೆಂಗಾವಲು ಪಡೆಯನ್ನು ಸುತ್ತುವರಿದರು. ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ಈ ವೇಳೆ ಸಚಿವರ ಮಗನೇ ರೈತರ ಮೇಲೆ ಕಾರು ಹತ್ತಿಸಿದ ಎನ್ನುವುದು ರೈತರ ಆರೋಪ. ಸಚಿವರು ಮಾತ್ರ ಈ ಬಗ್ಗೆ ಮಾತನಾಡಿಲ್ಲ.

Read this also;

ಪ್ರಧಾನಿ ಮೋದಿ ಮೌನ, ಯೋಗಿ ತನಿಖೆ ಭರವಸೆ..!

ರೈತರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದಾರೆ. ಗೃಹ ಖಾತೆ ರಾಜ್ಯ ಸಚಿವರ ಮೇಲೆಯೇ ಆರೋಪ ಕೇಳಿ ಬಂದಿದ್ದರು ಭಾರತದ ಸರ್ಕಾರದ ಗೃಹ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಈ ಘಟನೆಗೆ ಕಾರಣ ಏನು ಎನ್ನುವ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆಗಿದ್ದರೂ ಖಂಡಿತ ಶಿಕ್ಷೆಗೆ ಒಳಪಡಿಸಲಾಗುವುದು. ಎಲ್ಲರೂ ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ನಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ರೆ, ಅದರ ಪರಿಣಾಮ ಗಂಭೀರವಾಗಿ ಇರಲಿದೆ ಎಂದು ಸಚಿವರು ಮೊದಲೇ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ರೈತರ ರಕ್ತಕ್ಕಾಗಿ ಕೇಂದ್ರ ಸರ್ಕಾರ ಕಾತರಿಸುತ್ತಿದೆ..!

ಕಾರು ಹತ್ತಿಸಿ ರೈತರ ಸಾವಿಗೆ ಕಾರಣವಾಗಿರುವುದನ್ನು ಕಾಂಗ್ರೆಸ್​ ಖಂಡಿಸಿದೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದು, ಇದೊಂದು ಅಮಾನವೀಯ ಘಟನೆ, ರೈತರ ತ್ಯಾಗವೂ ವ್ಯಾರ್ಥವಾಗದಿರಲಿ, ರೈತರ ಹೋರಾಟ ಚಿರಾಯುವಾಗಲಿ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಮಾರಣಹೋಮವನ್ನು ಕಂಡು ಕಾಣದಂತೆ ಮೌನ ವಹಿಸಿರುವುವರು ಈಗಾಗಲೇ ಸತ್ತಿದ್ದಾರೆ ಎಂದೇ ಭಾವಿಸಬೇಕು ಎಂದು ಖಾರವಾಗಿ ಟ್ವೀಟ್​ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ರಕ್ತಕ್ಕಾಗಿ ಕಾತರಿಸುತ್ತದೆ ಎಂದು ಟೀಕಿಸಿದ್ದಾರೆ.

Related Posts

Don't Miss it !