ಒಂದೇ ಕುಟುಂಬದ ಐವರ ಸಾವು, ಮೂವರಿಗೆ ಜೈಲು, ಪ್ರಚೋದನೆಗೆ ಶಿಕ್ಷೆ ಆಗುತ್ತಾ..?

ಬೆಂಗಳೂರಿನ ತಿಗಳರಪಾಳ್ಯದಲ್ಲಿ ಕಳೆದ ತಿಂಗಳು ಘೋರ ದುರಂತವೊಂದು ನಡೆದು ಹೋಗಿತ್ತು. ತಾಯಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ನೇಣಿಗೆ ಶರಣಾಗಿದ್ದರು.ಈ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಾಕೆ ತನ್ನ 9 ತಿಂಗಳ ಮಗುವನ್ನು ಕೊಲೆ ಮಾಡಿ ನೇಣಿಗೆ ಕೊರಳೊಡ್ಡಿದ್ರೆ, ಮತ್ತೋರ್ವ ಮಗಳು ತಾನು ಮಾತ್ರ ಆತ್ಮಹತ್ಯೆ ಮಾಡಿಕೊಂಡು ಮೂರು ವರ್ಷದ ಕಂದಮ್ಮನನ್ನು ಬದುಕಿಸಿ ಹೋಗಿದ್ಲು. ಈ ಘಟನೆ ಇಡೀ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಗಮನ ಸೆಳೆದಿತ್ತು. ಈ ಪ್ರಕರಣದಲ್ಲಿ ಇದೀಗ ಪೊಲೀಸರು ಮನೆ ಮಾಲೀಕ ಹಲ್ಲೆಗೆರೆ ಶಂಕರ್​ ಹಾಗೂ ಆತನ ಇಬ್ಬರು ಅಳಿಯಂದರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದೆ.

ಡೆತ್​ನೋಟ್​ ಆಧಾರದಲ್ಲೇ ಮೂವರಿಗೆ ಜೈಲು..!!

ನಾಲ್ವರಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಧೀರ್ಘ ಮರಣ ಪತ್ರ ಬರೆದಿದ್ದರು. ಅದರಲ್ಲಿ ಮೂವರೂ ಮಕ್ಕಳು ತಂದೆಯ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖ ಮಾಡಿದ್ದರು. ಅದಕ್ಕೆ ಸಂಬಂಧ ಪಟ್ಟ ಸಾಕ್ಷ್ಯವನ್ನು ಲ್ಯಾಪ್​ಟಾಪ್​, ಮೊಬೈಲ್​ಗಳಲ್ಲಿ ಸಂಗ್ರಹಿಸಿದ್ದರು. ಇನ್ನೂ ಇಬ್ಬರು ಅಳಿಯಂದಿರ ವಿರುದ್ಧವೂ ಡೆತ್​ನೋಟ್​ನಲ್ಲಿ ಪ್ರಸ್ತಾಪ ಮಾಡಿದ್ದರು. ತಮ್ಮ ಗಂಡಂದಿರ ನಿರ್ಲಕ್ಷ್ಯದ ಬಗ್ಗೆಯೂ ಮರಣ ಪತ್ರದಲ್ಲಿ ಉಲ್ಲೇಖ ಮಾಡಿದ್ದರಿಂದ ಬ್ಯಾಡರಹಳ್ಳಿ ಪೊಲೀಸರು, ಐಪಿಸಿ ಸೆಕ್ಷೆನ್ 306ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಮನೆ ಮಾಲೀಕ ಶಂಕರ್, ಅಳಿಯಂದಿರಾದ ಶ್ರೀಕಾಂತ್, ಪ್ರವೀಣ್ ಎಂಬುವರನ್ನು ಅರೆಸ್ಟ್​ ಮಾಡಲಾಗಿದೆ. ಅಕ್ಟೋಬರ್​ 4ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Read this also;

ಬಂಧನ ಮಾಡ್ತಿದ್ದ ಹಾಗೆ ಶಂಕರ್​ ಹೈಡ್ರಾಮಾ..!

ಹಲ್ಲೆಗೆರೆ ಶಂಕರ್​ ಹಾಗೂ ಇಬ್ಬರು ಅಳಿಯಂದಿರನ್ನು ಅರೆಸ್ಟ್​ ಮಾಡಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಶಂಕರ್​ ಹೈಡ್ರಾಮಾ ಮಾಡಿದ್ದಾರೆ. ಮೃತರ ಲ್ಯಾಪ್‌ಟಾಪ್, ಮೊಬೈಲ್, ಡೈರಿಗಳಲ್ಲಿ ಲಭ್ಯವಾದ ಸಾಕ್ಷ್ಯಗಳ ಮೇಲೆಯೇ ಪೊಲೀಸರು ಬಂಧನ ಮಾಡಿದ್ದಾರೆ. ಆದರೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವ ವೇಳೆ ಶಂಕರ್ ಹೈಡ್ರಾಮಾ ನಡೆಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು‌ ಅವಕಾಶ ನೀಡಿ‌ ಎಂದು ಪೊಲೀಸರ ಜೊತೆಗೆ ತಗಾದೆ ತೆಗೆದಿದ್ದಾರೆ. ಪೊಲೀಸರು ಅವಕಾಶ ಕೊಡದಿದ್ದರೂ ಮಾಧ್ಯಮ ಸ್ನೇಹಿತರೆ ನಾನು ಬ್ಯಾಡರಹಳ್ಳಿ ಪೊಲೀಸರ ವಶದಲ್ಲಿದ್ದೇನೆ. ಆದರೆ ನಾನು ತಪ್ಪು ಮಾಡಿಲ್ಲ, ಸತ್ಯಾಸತ್ಯತೆಯನ್ನ ನ್ಯಾಯಾಲಯ ತೀರ್ಮಾನ ಮಾಡಲಿದೆ. ನನ್ನ ಮಗನಿಂದ ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಮಾಡಲಾಗಿದೆ ನಾನು ನಿರಪರಾಧಿ ಎಂದ ಶಂಕರ್ ತಿಳಿಸಿದ್ದಾರೆ.

Read this also;

ಪ್ರಚೋದನೆಗೆ ಕೋರ್ಟ್​ನಲ್ಲಿ ಶಿಕ್ಷೆ ಆಗುತ್ತಾ..?

ಆತ್ಮಹತ್ಯೆ ಮಾಡಿಕೊಳ್ಳುವ ಕೋಪದಲ್ಲಿ ಯಾರದ್ದೋ ಮೇಲೆ ಆರೋಪ ಮಾಡಿ ಸತ್ತುಬಿಟ್ಟರೆ, ಮನೆಯಲ್ಲಿ ಇದ್ದವರಿಗೆ ಶಿಕ್ಷೆ ಆಗುತ್ತಾ..? ಎಂದರೆ ಕಾನೂನು ಹೌದು ಎನ್ನುತ್ತದೆ. ಆದರೆ ಕೋರ್ಟ್​ನಲ್ಲಿ ಸರ್ಕಾರಿ ವಕೀಲರು ಸಾಕ್ಷ್ಯಗಳನ್ನು ಸಾಬೀತು ಮಾಡುವುದರ ಮೇಲೆ ಕೇಸ್​ಗ ಪರಿಣಾಮ ನಿಂತಿರುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಸತ್ತವರ ಪರವಾಗಿ ತೀರ್ಪು ಬರುವುದು ತುಂಬಾ ಕಡಿಮೆ. ಈ ಪ್ರಕರಣದಲ್ಲಿ ಅರೆಸ್ಟ್​ ಆದರೂ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಆರೋಪಿಗಳು ಹೊರಕ್ಕೆ ಬರುತ್ತಾರೆ. ಹೀಗಾಗಿ ಆರೋಪಿಗಳ ಪರ ವಕೀಲರು ತಪ್ಪಿಲ್ಲ ಎನ್ನುವ ಬಗ್ಗೆ ಸಾಕಷ್ಟು ಸಾಕ್ಷಿಗಳನ್ನು ಕೋರ್ಟ್​ ಎದುರು ತಂದು ನಿಲ್ಲಿಸುತ್ತಾರೆ. ಒಂದೆರಡು ವರ್ಷಗಳ ಕಾಲ ಕಾನೂನು ಸಂಘರ್ಷ ನಡೆಯುತ್ತದೆ. ಆ ಬಳಿಕ ತೀರ್ಪು ಬರಲಿದೆ ಎನ್ನುತ್ತಾರೆ ವಕೀಲರು.

Related Posts

Don't Miss it !