200 ಯೂನಿಟ್ ಕರೆಂಟ್ ಫ್ರೀ.. ಅರ್ಜಿ ಹಾಕಲು ಮೊಬೈಲ್ ಸಾಕು..

ರಾಜ್ಯ ಸರ್ಕಾರ 200 ಯೂನಿಟ್ ಒಳಗಿನ ಕರೆಂಟ್ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ ಎನ್ನುವ ಆದೇಶ ಮಾಡಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಸರ್ಕಾರ ಫ್ರೀ ಯೋಜನೆ ಘೋಷಣೆ ಮಾಡಿದೆ. ಆದರೆ ಸರ್ಕಾರದ ಕಚೇರಿಗಳಿಗೆ ಹೋಗಿ ಅರ್ಜಿ ಹಾಕುವುದು ಹೇಗೆ..? ಸರತಿ ಸಾಲಿನಲ್ಲಿ ನಿಂತು ಅರ್ಜಿ ಹಾಕೋಣ ಎಂದರೂ ಸರ್ವರ್ ಡೌನ್ ಅನ್ನೋ ಮಾತುಗಳೇ ಕೇಳಿ ಬರುತ್ತಿವೆ. ಆದರೆ ನಿಮ್ಮ The Public Spot ಸರಳ ಉಪಾಯವನ್ನು ನಿಮ್ಮ ಮುಂದಿಡುತ್ತಿದೆ.

ಸ್ವಯಂ ಅರ್ಜಿ ಸಲ್ಲಿಕೆ ಮಾಡೋದು ಹೇಗೆ..?

ಸರ್ಕಾರ ಈ ಮೊದಲೇ ಹೇಳಿದಂತೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಹಾಕುವುದಕ್ಕೆ ಅವಕಾಶ ಕೊಡಲಾಗಿದೆ. https://sevasindhugs.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಕರ್ನಾಟಕ ಸರ್ಕಾರ ಖಾತರಿ ಯೋಜನೆಗಳು ಎನ್ನುವ ಪೇಜ್ ಓಪನ್ ಆಗುತ್ತದೆ. ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಹೊರತುಪಡಿಸಿ ನಾಲ್ಕು ಯೋಜನೆಗಳ ಹೆಸರು ಕಾಣಿಸುತ್ತದೆ. ಅದರಲ್ಲಿ ಸದ್ಯಕ್ಕೆ ಬಿಡುಗಡೆ ಆಗಿರುವುದು ಗೃಹ ಜ್ಯೋತಿ ಯೋಜನೆ. ಅಂದರೆ 200 ಯೂನಿಟ್ ತನಕ ವಿದ್ಯುತ್ ಬಳಸುವ ಗ್ರಾಹಕರು ಮುಂದಿನ ತಿಂಗಳಿಂದ ಬಿಲ್ ಪಾವತಿ ಮಾಡುವಂತಿಲ್ಲ. ಗೃಹಜ್ಯೋತಿ ಲೇಬಲ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

ಅರ್ಜಿಯಲ್ಲಿ ಏನೆಲ್ಲಾ ಮಾಹಿತಿ ಕೇಳ್ತಾರೆ..?

ಗೃಹಜ್ಯೋತಿ ಎನ್ನುವ ಲೇಬಲ್ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲಿಗೆ ಇಂಗ್ಲಿಷ್ ಅಥವಾ ಕನ್ನಡ ಭಾಷೆ ಆಯ್ಕೆ ಇರುತ್ತದೆ. ಆ ಬಳಿಕ ನಿಮ್ಮ ಕರೆಂಟ್ ಬಿಲ್ನಲ್ಲಿ ಇರುವ ಖಾತೆ ಸಂಖ್ಯೆ (Account ID/Connection ID) ನಮೂದು ಮಾಡಬೇಕು. ಇಷ್ಟನ್ನು ಹಾಕಿದ ಕೂಡಲೇ ನಿಮ್ಮ ಹೆಸರು ಹಾಗು ವಿಳಾಸ ತನ್ನಷ್ಟಕ್ಕೆ ತಾನೇ ಭರ್ತಿ ಆಗುತ್ತದೆ. ಆ ಬಳಿಕ ಮನೆ ಮಾಲೀಕರೋ ಅಥವಾ ಬಾಡಿಗೆದಾರರೋ ಅನ್ನೋದನ್ನು ಆಯ್ಕೆ ಮಾಡಬೇಕು. ಇಷ್ಟಾದ ಬಳಿಕ ಆಧಾರ್ ನಂಬರ್ ಹಾಕಬೇಕು. ಆಧಾರ್ ನಂಬರ್ ಹಾಕುತ್ತಿದ್ದ ಹಾಗೆ ನಿಮ್ಮ ಹೆಸರು ತನ್ನಷ್ಟಕ್ಕೆ ತಾನೇ ಬರುತ್ತದೆ. ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿದ ಕೂಡಲೇ ಓಟಿಪಿ ಬರುತ್ತದೆ. ಓಟಿಪಿ ನಂಬರ್ ಹಾಕಿದ ಬಳಿಕ ವರ್ರ್ಡ್ ವೇರಿಫಿಕೇಷನ್ ಕಾಣಿಸುತ್ತದೆ. ಅಲ್ಲಿ ಕಾಣಿಸುವ ನಂಬರ್ ಎಂಟ್ರಿ ಮಾಡಿ ಸಬ್ಮಿಟ್ ಕೊಟ್ರೆ ಒಮ್ಮೆ ಪರಿಶೀಲನೆಗೆ ಅವಕಾಶವಿದೆ. ಅಂತಿಮವಾಗಿ ಫೈನಲ್ ಸಬ್ಮಿಷನ್ ಕೊಟ್ಟರೆ ನಿಮ್ಮ ಕರೆಂಟ್ ಮೀಟರ್ ನಂಬರ್ ಉಚಿತ ಯೋಜನೆಗೆ ಲಿಂಕ್ ಆಗುತ್ತದೆ.

ಬಾಡಿಗೆದಾರರು ಅರ್ಜಿ ಹಾಕೋದ್ಹೇಗೆ..?

ಮಾಲೀಕ ಹಾಗು ಬಾಡಿಗೆದಾರರು ಹೆಚ್ಚು ತಲೆ ಕೆಡಿಸಿಕೊಲ್ಳುವಂತಿಲ್ಲ. ಅರ್ಜಿ ಹಾಕುವ ಪ್ರಕ್ರಿಯೆ ಎರಡಕ್ಕೂ ಒಂದೇ ರೀತಿ ಇರುತ್ತದೆ. ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಕೆಪಿಟಿಸಿಎಲ್ ಸಿಬ್ಬಂದಿಗಲು ಬಂದು ಪರಿಶೀಲನೆ ಮಾಡಿ ವೇರಿಫೈ ಮಾಡಿದ ಬಳಿಕ ಉಚಿತ ಬಿಲ್ ಪ್ರಯೋಜನ ನಿಮ್ಮದಾಗುತ್ತದೆ. ಈಗ ಬಾಕಿ ಪಾವತಿ ಉಳಿಸಿಕೊಂಡಿದ್ದರೆ ಮುಂದಿನ ಮೂರು ತಿಂಗಳ ಒಳಗಾಗಿ ಬಿಲ್ ಪಾವತಿ ಮಾಡಬೇಕು ಎಂದು ಸರ್ಕಾರ ಹೇಳಿದ್ದು, ಬಾಕಿ ಉಳಿಸಿಕೊಮಡಿವರೂ ಅರ್ಜಿ ಹಾಕಲು ಯಾವುದೇ ಸಮಸ್ಯೆ ಇಲ್ಲ.

Related Posts

Don't Miss it !