ಗಣೇಶೋತ್ಸವ ವಿಚಾರದಲ್ಲಿ ಬಾಣಲೆಯಿಂದ ಮೇಲೇಳುತ್ತಾ ರಾಜ್ಯ ಸರ್ಕಾರ..!?

ಗಣೇಶೋತ್ಸವ ಆಚರಣೆಗೆ ಅನುಮತಿ ಕೊಡುವ ವಿಚಾರವಾಗಿ ರಾಜ್ಯ ಸರ್ಕಾರ ಇಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಧ್ಯಾಹ್ನ 1 ಗಂಟೆಗೆ ಮಹತ್ವದ ಸಭೆ ಕರೆದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರ ಸಲಹೆ ಪಡೆದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಆದರೆ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಇಕ್ಕಟ್ಟಿಗೆ ಸಿಲುಕಿದ್ದು, ಯಾವ ನಿರ್ಧಾರದಿಂದ ಏನು ಅನಾಹುತ ಆಗುತ್ತದೆಯೋ ಎನ್ನುವ ಆತಂಕ ಸರ್ಕಾರ ಮಟ್ಟದಲ್ಲಿ ಕಾಡುತ್ತಿದೆ. ಇನ್ನೂ ಗಣೇಶೋತ್ಸವ ವಿಚಾರವಾಗಿ ಈಗಾಗಲೇ ಹಿಂದೂಪರ ಸಂಘಟನೆಗಳು ಸರ್ಕಾರದ ವಿರುದ್ಧ ವಾಕ್ಸಮರ ನಡೆಸಿದ್ದು, ಇವತ್ತಿನ ನಿರ್ಧಾರದ ಮೇಲೆ ಜನಾಕ್ರೋಶ ತಣಿಸುವ ಹಾಗೂ ಜನಾಕ್ರೋಶ ಹುಟ್ಟು ಹಾಕುವ ಎಲ್ಲಾ ಸಾಧ್ಯತೆಗಳೂ ಇವೆ.

ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಬಂದ್​..!

ಗಣೇಶೋತ್ಸವ ಅಂದರೆ ಮೊದಲಿಗೆ ನೆನಪಾಗುವುದು ಮಹಾರಾಷ್ಟ್ರ. ಗಣೇಶೋತ್ವಸ ಶುರುವಾಗಿದ್ದೇ ಮಹಾರಾಷ್ಟ್ರದಲ್ಲಿ. ಬಾಲಗಂಗಾಧರ ತಿಲಕ್​ ಅವರು ಬ್ರಿಟೀಷರ ವಿರುದ್ಧ ಜನರನ್ನು ಸಂಘಟನೆ ಮಾಡುವ ಉದ್ದೇಶದಿಂದ ಶುರುವಾಗಿದ್ದೇ ಗಣೇಶೋತ್ಸವ. ಅದೇ ಕಾರಣದಿಂದ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಎಂದರೆ ಎಲ್ಲಿಲ್ಲದ ಸಂಭ್ರಮ. ಆದರೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಕಾರಣದಿಂದ ಗಣೇಶೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಪುಣೆಯಲ್ಲಿ ನಡೆಯುವ ಬೃಹತ್​ ಗಣೇಶೋತ್ಸವ ಕಾರ್ಯಕ್ರಮ ಸತತ 2 ವರ್ಷವೂ ರದ್ದು ಮಾಡಲಾಗಿದೆ ಎಂದು ಆಯೋಜಕ ಮಂಡಳಿ ಘೋಷಣೆ ಮಾಡಿದೆ.

Read this also;

ಗಣೇಶೋತ್ಸವಕ್ಕೆ ಅವಕಾಶ ಕೊಟ್ಟರೂ ಕಷ್ಟ..!

ಹಿಂದೂ ಧರ್ಮವನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇರುವ ಕಾರಣಕ್ಕೆ ಗಣೇಶೋತ್ವಸಕ್ಕೆ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸವಿದೆ. ಆದರೆ ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ಬಳಿಕ ಕೊರೊನಾ ಸೋಂಕು ತೀವ್ರವಾಗಿ ಹಬ್ಬಿದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಲಿದೆ ಎನ್ನುವುದು ರಾಜ್ಯ ಸರ್ಕಾರದ ಆತಂಕ. ಗಣೇಶೋತ್ಸವಕ್ಕೂ ಅನುಮತಿ ಕೊಡಬೇಕು. ಆದರೆ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಎರಡನ್ನೂ ಸಮತೋಲನ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ.

ಮಹಾರಾಷ್ಟ್ರವನ್ನೇ ಹಿಂಬಾಲಿಸಲಿದ್ಯಾ ಕರ್ನಾಟಕ..!?

ಮಹಾರಾಷ್ಟ್ರದ ಮುಂಬೈನಲ್ಲಿ ಗಣೇಶೋತ್ಸವ ನೋಡುವುದಕ್ಕೆ ಸಾಕಷ್ಟು ಜನರು ತೆರಳುತ್ತಾರೆ. ಆದರೆ ಈ ಬಾರಿ ಕೊರೊನಾ ಹರಡುವ ಉದ್ದೇಶದಿಂದ ಗಣೇಶೋತ್ಸವಕ್ಕೆ ಕಡಿವಾಣ ಹಾಕಿದೆ. ಗಣೇಶ ಮೂರ್ತಿ ಮೆರವಣಿಗೆ ಇಲ್ಲ. ಮೂರ್ತಿಯ ಎತ್ತರಕ್ಕೆ ಕಡಿವಾಣ ಹಾಕಲಾಗಿದೆ. ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ 4 ಅಡಿ ಅಂತರದಲ್ಲೇ ಗಣೇಶ ಮೂರ್ತಿಯ ಎತ್ತವಿರಬೇಕು ಎಂದು ಷರತ್ತು ವಿಧಿಸಿದೆ. ಸ್ಥಳೀಯ ಆಡಳಿತ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಭಜನ್​, ಕೀರ್ತನ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡದೆ ಕೇವಲ ರಕ್ತದಾನ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಆರತಿ ಕಾರ್ಯಕ್ರಮಕ್ಕೆ ಜನ ಸೇರುವಂತಿಲ್ಲ, ಭಜನೆ ಮಾಡುವಂತಿಲ್ಲ. ಶಬ್ಧ ಮಾಲಿನ್ಯವನ್ನೂ ಮಾಡುವಂತಿಲ್ಲ. ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಳ್ಳಬೇಕು.

Read this also;

ಅವಕಾಶ ಕೊಟ್ಟರೂ ಕೊಡದಿದ್ದರೂ ಹಬ್ಬ..!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣಕ್ಕೆ ನಾಮಕಾವಸ್ತೆಗೆ ಮಾರ್ಗಸೂಚಿಗಳು ಹೊರಡಿಸಲಾಗುತ್ತದೆ. ಆದರೆ ಕಾನೂನು ಪಾಲನೆ ಮಾಡುವುದು ಕಷ್ಟಸಾಧ್ಯ ಎಂದರೆ ತಪ್ಪಲ್ಲ. ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇರುವ ಕಾರಣ ಪೊಲೀಸ್​ ಫೋರ್ಸ್​ ಬಳಸಿ ನಿಯಂತ್ರಣಕ್ಕೆ ಕಷ್ಟಸಾಧ್ಯ. ಒಂದು ವೇಳೆ ಸರ್ಕಾರ ಸೂಕ್ತ ರೀತಿಯಲ್ಲಿ ಮಾರ್ಗಸೂಚಿ ಹೊರಡಿಸದೆ ಇದ್ದರೆ ನಿಯಮಗಳ ಉಲ್ಲಂಘನೆ ಆಗುವ ಸಾಧ್ಯತೆ ಹೆಚ್ಚಿದೆ. ಮಾರ್ಗಸೂಚಿ ಉಲ್ಲಂಘನೆ ಆದ ಬಳಿಕ ದೂರು ದಾಖಲು ಮಾಡುವ ಪರಿಸ್ಥಿತಿಯಲ್ಲೂ ಸರ್ಕಾರವಿಲ್ಲ. ಒಂದು ವೇಳೆ ಅನುಮತಿ ನೀಡಿದ್ದರೆ ಜನಾರ್ಶೀವಾದ ಯಾತ್ರೆಯನ್ನೇ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹುರಿದು ತಿನ್ನುವ ಎಲ್ಲಾ ಸಾಧ್ಯತೆಗಳೂ ಇವೆ.

Related Posts

Don't Miss it !