ಹೆಣದ ಜೊತೆಗೆ ಠಾಣೆಗೆ ಬಂದ ಸ್ನೇಹಿತರು..! ಅಕ್ಕ ಮಾಡಿದ್ದ ಅಡ್ನಾಡಿ ಕೆಲಸ..

ಬೆಂಗಳೂರಿನಲ್ಲಿ ಹಲ್ಲೆ ನಡೆಸಿ ವ್ಯಕ್ತಿಯೊಬ್ಬನ ಕೊಲೆ ಮಾಡಿ ಪೊಲೀಸ್​ ಠಾಣೆಗೆ ಹೆಣ ಹೊತ್ತು ಬಂದಿರುವ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ. ಗಾರ್ಮೆಂಟ್ಸ್​ನಲ್ಲಿ ಸೂಪರ್ ವೈಸರ್ ಆಗಿದ್ದ ಭಾಸ್ಕರ್ ಎಂಬಾತನ ಕೊಲೆ ಮಾಡಲಾಗಿದೆ. ಅನ್ನಪೂರ್ಣೇಶ್ವನಗರದ ಕೆಬ್ಬೆಹಳ್ಳ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನ ಅನ್ನಪೂರ್ಣೇಶ್ವನಗರ ಪೊಲೀಸರು ಬಂಧಿಸಿದ್ದಾರೆ. ಮುನಿರಾಜು, ಮಾರುತಿ, ನಾಗೇಶ್ ಹಾಗೂ ಪ್ರಶಾಂತ್ ಎಂಬುವರನ್ನು ಅರೆಸ್ಟ್​ ಮಾಡಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷ ವಶಕ್ಕೆ ಪಡೆಯಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.

ಆಟೋ ರಿಕ್ಷಾದಲ್ಲೇ ಹೆಣ ತಂದ ಆರೋಪಿಗಳು..!

ಆರೋಪಿಗಳು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಆಟೋ ರಿಕ್ಷಾದಲ್ಲಿ ಠಾಣೆಗೆ ತಂದಿದ್ದರು. ಮೃತದೇಹದ ಸಮೇತ ಪೊಲೀಸ್ ಠಾಣೆಗೆ ಬಂದ ಆರೋಪಿ ಮುನಿರಾಜು ಮತ್ತು ಸ್ನೇಹಿತರು, ಕೊಲೆ ಮಾಡಿದ್ದೀವಿ ಸಾರ್, ಡೆಡ್​ ಬಾಡಿ ಆಟೋದಲ್ಲಿದೆ ಎಂದಿದ್ದರು ಆರೋಪಿಗಳು. ಆಟೋದಲ್ಲಿ ಮೃತದೇಹ ಹಾಕಿಕೊಂಡು ಠಾಣೆಗೆ ಬಂದಿದ್ದ ಆರೋಪಿಗಳು. ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ನಾಲ್ವರನ್ನ ಬಂಧಿಸಿದ ಪೊಲೀಸರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡುವ ಕೆಲಸ ಮಾಡಿದ್ದಾರೆ.

ಕೊಲೆಯಾದ ಭಾಸ್ಕರ್

Read this

ಅಕ್ಕನ ಜೊತೆ ಸಂಬಂಧ, ಕೊಲೆಯಲ್ಲಿ ಅಂತ್ಯ..!

ಭಾಸ್ಕರ್​​ ಎಂಬಾತನ ಕೊಲೆ ಮಾಡಿದ ಬಳಿಕ ಆಟೋದಲ್ಲಿ ಮೃತದೇಹ ತಂದಿದ್ದ ನಾಲ್ವರು ಆರೋಪಿಗಳಲ್ಲಿ ಮುನಿರಾಜು ಎಂಬಾತನ ಆಕ್ಕನ ಜೊತೆಗೆ ಭಾಸ್ಕರ್ ಸಲುಗೆ ಹೊಂದಿದ್ದ. ಇದೇ ವಿಚಾರವಾಗಿ ಮಹಿಳೆ ಮತ್ತು ಗಂಡನ ನಡುವೆ ಗಲಾಟೆ ನಡೆದಿತ್ತು. ಶನಿವಾರ ಸಂಜೆ ಮೃತ ಭಾಸ್ಕರ್ ಮಹಿಳೆ ಮನೆಗೆ ಬಂದಿದ್ದ. ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಆಟೋದಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದ. ಇಬ್ಬರು ಮಕ್ಕಳು ಹಾಗೂ ಮಹಿಳೆಯನ್ನ ಕರೆದುಕೊಂಡು ಹೋಗಲು ಬಂದಿದ್ದ ವೇಳೆ ಮಹಿಳೆಯ ಹಿರಿಯ ಮಗ ತಾಯಿಯೊಂದಿಗೆ ತೆರಳಲು ಒಪ್ಪದೆ ಸೋದರ ಮಾವನಿಗೆ ವಿಚಾರ ತಿಳಿಸಿದ್ದನು. ಆ ಬಳಿಕ ಸುಂಕದಕಟ್ಟೆ ಬಳಿ ಆಟೋ ಅಡ್ಡಗಟ್ಟಿದ ಆರೋಪಿ ಮುನಿರಾಜು, ತನ್ನ ಆಟೋದಲ್ಲಿ ಮಹಿಳೆ ಮತ್ತು ಭಾಸ್ಕರ್​ನನ್ನ ಕೂರಿಸಿಕೊಂಡು ವಾಪಸ್​ ಹೋಗಿದ್ದ. ಅಕ್ಕನನ್ನು ಮನೆಯಲ್ಲಿ ಬಿಟ್ಟು ಭಾಸ್ಕರ್​ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದ.

ಕೊಲೆಗಾರ

ಗಂಡನನ್ನು ಬಿಟ್ಟು ಬಂದಿದ್ದಳು ಅಕ್ಕ..!

ಅಕ್ಕನನ್ನು ಬಿಟ್ಟ ಬಳಿಕ ಸ್ನೇಹಿತರ ಜೊತೆ ಕೆಬ್ಬೆಹಳ್ಳ ಬಳಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದನು. ಹಲ್ಲೆ ಬಳಿಕ ಹೊಟ್ಟೆ ಹಸಿವು ಎಂದಿದ್ದ ಮೃತ ಭಾಸ್ಕರ್​ಗೆ ಎಗ್ ರೈಸ್ ತಂದು ಕೊಡಿಸಿದ್ದ. ಈ ವೇಳೆ ಹಣೆ ಮತ್ತು ತಲೆಗೆ ಹೊಡೆದಿದ್ದರಿಂದ ಭಾಸ್ಕರ್ ತೀವ್ರವಾಗಿ ಸುಸ್ತಾಗಿ ಸಾವನ್ನಪ್ಪಿದ್ದ. ಭಾಸ್ಕರ್ ಸಾವಿನ ಬಳಿಕ ತನ್ನ ತಾಯಿಗೆ ಕರೆ ಮಾಡಿದ್ದ ಆರೋಪಿ ಮುನಿರಾಜು ಸಾವಿನ ವಿಷಯ ತಿಳಿಸಿದ್ದನು. ನನ್ನ ಅಕ್ಕ ಸುಧಾರಾಣಿ ಸಂಸಾರ ಹಾಳು ಮಾಡಿದ್ದ. ಅದಕ್ಕೆ ಅವನ ಕಥೆ ಮುಗಿಸಿದ್ವಿ ಸರ್ ಎಂದು ಪೊಲೀಸರ ಬಳಿ ನೇರವಾಗಿ ತಪ್ಪೊಪ್ಪಿಕೊಂಡಿದ್ದಾರೆ ಆರೋಪಿಗಳು. ಮೃತ ಭಾಸ್ಕರ್ ಹೊಸೂರು ಮೂಲದ ನಿವಾಸಿಯಾಗಿದ್ದು, ಗಾರ್ಮೆಂಟ್ಸ್​ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಭಾಸ್ಕರ್​ ಸ್ನೇಹದ ಬಳಿಕ ಗಂಡನ ಜೊತೆಗೆ ಜಗಳ ಮಾಡಿಕೊಂಡು 15 ದಿನಗಳ ಹಿಂದೆ ಮಾಲೂರಿನಿಂದ ಬೆಂಗಳೂರಿನ ತಾಯಿ ಮನೆಗೆ ಸುಧಾರಾಣಿ ವಾಪಸ್ ಆಗಿದ್ದಳು. ಕರೆದುಕೊಂಡು ಹೋಗಲು ಬಂದ ಭಾಸ್ಕರ್​ ಕೊಲೆಯಾಗಿದ್ದಾನೆ.

ಕೊಲೆಗಾರ

ಕೊಲೆ ಬಗ್ಗೆ ಪೊಲೀಸರ ಸ್ಪಷ್ಟನೆ..!

ಕೊಲೆ ನಡೆದಿರುವ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದು, ನಿನ್ನೆ ಮಧ್ಯರಾತ್ರಿ ನಂತರ ಎಪಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಹೊಸೂರು ಬಳಿಯ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಒಬ್ಬ ಮಹಿಳೆ ಜೊತೆಗೆ ಪರಿಚಯ ಆಗಿತ್ತು. ಅಲ್ಲಿ ಆಕೆಯ ಜೊತೆಗೆ ಸ್ನೇಹ ಬೆಳೆಯುತ್ತದೆ. ನಂತರ ಮಹಿಳೆ ತನ್ನ ಗಂಡನ ಮನೆ ಬಿಟ್ಟು ತಾಯಿ ಮನೆ ಸೇರಿಕೊಂಡಿದ್ದಳು. ಈ ವೇಳೆ ಭಾಸ್ಕರ್ ಮಹಿಳೆಯನ್ನ ಬೇರೆ ಮನೆ ಮಾಡಿಕೊಡ್ತೇನೆ ಎಂದು ಕರೆದುಕೊಂಡು ಹೋಗುತ್ತಿದ್ದನು. ಆಟೋದಲ್ಲಿ ಕರೆದುಕೊಂಡು ಹೋಗ್ತಿದ್ದ ಮಾಹಿತಿ ಕಲೆ ಹಾಕಿದ್ದ ಮಹಿಳೆಯ ತಮ್ಮ ಮುನಿರಾಜು. ಅಕ್ಕನನ್ನ ಮನೆಗೆ ತಂದು ಬಿಟ್ಟು, ಕೆಬ್ಬೆಹಾಳ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಭಾಸ್ಕರ್​ನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕೊಲೆಗಾರ

Related Posts

Don't Miss it !