ಗ್ಯಾಸ್​ ಗೀಸರ್​ ಬಳಸುತ್ತೀರಾ..? ಹಾಗಿದ್ರೆ ಅಪಾಯಕ್ಕೆ ಆಹ್ವಾನ..!

ಈ ಫೋಟೋದಲ್ಲಿ ಕಾಣ್ತಿರೋ ಈಕೆಯ ಹೆಸರು ಸಂಪದ. 23 ವರ್ಷ ವಯಸ್ಸು. ಅಂತಿಮ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿನಿ. ಗ್ಯಾಸ್ ಗೀಸರ್ ಬಳಸುತ್ತಿದ್ದಾಗ ಉಸಿರುಗಟ್ಟಿ ಸಾವು ಸಂಭವಿಸಿದೆ. ಸೆಪ್ಟೆಂಬರ್​ 4ರಂದು ಮಧ್ಯಾಹ್ನ ಸುಮಾರು 12 ಗಂಟೆ ಆಸುಪಾಸಿನಲ್ಲಿ ಸ್ನಾನಕ್ಕೆ ತೆರಳಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಂಪದ, ಸುಮಾರು ಒಂದು ಗಂಟೆ ಕಳೆದರೂ ಸ್ನಾನದ ಕೊಠಡಿಯಿಂದ ಹೊರಕ್ಕೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಮುರಿದು ನೋಡಿದಾಗ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿ.

ಮಹಾಲಕ್ಷ್ಮೀ ಲೇಔಟ್​​ನ ಮನೆಯ ಸ್ನಾನದ ಮನೆಯಲ್ಲಿ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದ ಸಂಪದಳನ್ನು ಕುಟುಂಬಸ್ಥರು ಹತ್ತಿರದ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಸಂಪದ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಸ್ಪತ್ರೆಗೆ ಬರುವ ಮೊದಲೇ ಪ್ರಾಣ ಹೊರಟು ಹೋಗಿದೆ ಎಂದು ವೈದ್ಯರು ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮೀ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆದರೆ ಸಾವಿಗೆ ಯಾವುದೇ ನಿಖರ ಕಾರಣ ಪತ್ತೆಯಾಗಿಲ್ಲ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಅಂತಿಮವಾಗಿ ಎಫ್​ಎಸ್​​ಎಲ್​​ ವರದಿ ಪಡೆಯಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ವೈದ್ಯರು ಗಮನಿಸದಂತೆ ಮೋನಾಕ್ಷೈಡ್​ ವಿಷ ಗಾಳಿಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Read this also;

ಗ್ಯಾಸ್​ ಗೀಸರ್​ನಿಂದ ವಿಷಾನಿಲ ಬಿಡುಗಡೆ..!

ಲಿಕ್ವಿಡ್​ ಪೆಟ್ರೋಲಿಯಂ ಗ್ಯಾಸ್​ (LPG) ಬಳಸಿ ಗೀಸರ್​ ಉರಿಸಿದಾಗ ಅದರಿಂದ ಟಾಕ್ಸಿಕ್​ ಆಮ್ಲ ಬಿಡುಗಡೆ ಆಗುತ್ತದೆ. ಅದರಲ್ಲೂ ಪ್ರಮುಖವಾಗಿ ಕಾರ್ಬನ್​ ಮೋನಾಕ್ಸೈಡ್​ ಬಿಡುಗಡೆ ಆಗುತ್ತದೆ. ಈ ವಿಷ ಗಾಳಿಗೆ ವಾಸನೆ ಇಲ್ಲ, ಟೇಸ್ಟ್​​ ಇಲ್ಲ, ಬಣ್ಣವೂ ಇರುವುದಿಲ್ಲ. ಮನುಷ್ಯ ಉಸಿರಾಡುವ ಪ್ರಕ್ರಿಯೆಯಲ್ಲಿ ತನಗೆ ಅರಿವಿಲ್ಲದಂತೆ ವಿಷ ಗಾಳಿಯನ್ನು ಸೇವಿಸಿದಾಗ ತಲೆ ಸುತ್ತುತ್ತದೆ. ಅಗಾಧವಾದ ತಲೆ ನೋವು, ಬಳಲಿಕೆ ಉಂಟಾಗುತ್ತದೆ. ಉದರ ಬಾಧೆ ಉಂಟಾಗಿ ವಾಂತಿ ಆಗುತ್ತದೆ. ಎದೆ ನೋವು ಕಾಣಿಸಿಕೊಂಡು ಪ್ರಜ್ಞೆ ಇಲ್ಲದ ಸ್ಥಿತಿ ತಲುಪಿ ಸಾವು ಸಂಭವಿಸಬಹುದು. ಆದರೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದರೆ ಪ್ರಾಣ ಉಳಿಸುವ ಸಾಧ್ಯತೆಗಳೂ ಇವೆ. ರಕ್ತ ಪರೀಕ್ಷೆ ಮೂಲಕ ಕೆಂಪು ರಕ್ತ ಕಣ ಸೇರಿರುವ ಕಾರ್ಬನ್​ ಮೋನಾಕ್ಷೈಡ್​ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿದು ಆಕ್ಸಿಜನ್​ ಪೂರೈಕೆ ಮಾಡಿದ್ರೆ ಪ್ರಾಣ ಉಳಿಸುವ ಸಾಧ್ಯಗಳಿವೆ. ಆದರೆ ಇದು ಸ್ನಾನದ ಕೊಠಡಿಯಲ್ಲಿ ಸಂಭವಿಸುವ ಕಾರಣ ಆಸ್ಪತ್ರೆಗೆ ಸೇರಿಸುವ ಮೊದಲೇ ಪ್ರಾಣ ಹಾನಿ ಹೆಚ್ಚು.

Read this also;

ಅಡುಗೆ ಮನೆಯಲ್ಲೂ ವಿಷಾನಿಲ ಬಿಡುಗಡೆ ಆಗುತ್ತೆ..!

ಗ್ಯಾಸ್​ ಗೀಸರ್​ನಿಂದ ಮಾತ್ರ ವಿಷಾನಿಲ ಬಿಡುಗಡೆ ಆಗುವುದಿಲ್ಲ. ಲಿಕ್ವಿಡ್​ ಪೆಟ್ರೋಲಿಯಂ ಗ್ಯಾಸ್​ (LPG) ಬಳಸಿ ಉರಿಸಿದಾಗ ಅದರಲ್ಲಿ ಕಾರ್ಬನ್​ ಮೋನಾಕ್ಸೈಡ್​ ಬಿಡುಗಡೆ ಆಗುವುದು ಸಹಜ. ಆದರೆ ಅಡುಗೆ ಮನೆಯ ಬಾಗಿಲು, ಕಿಟಗಿಗಳನ್ನು ಮುಚ್ಚಿಕೊಂಡು ಒಬ್ಬರೇ ಅಡುಗೆ ಮಾಡುತ್ತಿದ್ದರೂ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ನಾನದ ಕೊಠಡಿ ಅಥವಾ ಅಡುಗೆ ಯಾವುದೇ ಇರಲಿ, ಹೊರಗಿನ ಗಾಳಿ ಕೊಠಡಿ ಒಳಕ್ಕೆ ಬರುವಂತೆ ಹಾಗೂ ಒಳಗಿನ ವಿಷಾನಿಲ ಹೊರಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿರಬೇಕು. ಕನಿಷ್ಟ ಪಕ್ಷ ಒಂದು ಕಿಟಕಿಯನ್ನಾದರೂ ತೆರೆದಿದ್ದರೆ ಎಂಬಿಬಿಎಸ್ ವಿದ್ಯಾರ್ಥಿನಿ ಸಂಪದ ಸಾವು ಸಂಭವಿಸುತ್ತಿರಲಿಲ್ಲ ಎನ್ನುತ್ತಾರೆ ವೈದ್ಯರು. ಅಡುಗೆಗೆ ಗ್ಯಾಸ್​ ಬಳಸುವಾಗ ತೆರೆದ ಪ್ರದೇಶ ಇರುವ ವಿಷಾನಿಲ ಗಾಳಿಯಲ್ಲಿ ಸೇರಿಕೊಳ್ಳುವ ಕಾರಣಕ್ಕೆ ಸಾವಿನ ಪ್ರಮಾಣ ಕಡಿಮೆ ಎನ್ನಬಹುದು. ಬೆಂಗಳೂರಿನಂತರ ನಗರ ಪ್ರದೇಶದಲ್ಲಿ ಗ್ಯಾಸ್​ ಗೀಸರ್​ ಬಳಕೆದಾರರು ಹೆತೆಚ್ಚವಾಗಿ ಇರುತ್ತಾರೆ. ಮುಂದಾದರೂ ಗಾಳಿ ಸರಾಗವಾಗಿ ಅದಲು ಬದಲಾಗುವಂತಹ ಪ್ರದೇಶದಲ್ಲಿ ಮಾತ್ರ ಗ್ಯಾಸ್​ ಗೀಸರ್​ ಬಳಸಿದರೆ ಸೂಕ್ತ.

Related Posts

Don't Miss it !