ಕಟ್ಟಡದಿಂದ ಹಾರಿದ ಯುವತಿ ಸಾವು, ಯುವಕ ಸೇಫ್​..! ಇವರು ಪ್ರೇಮಿಗಳಾ..?

ಇವತ್ತು ಬೆಂಗಳೂರು ಬಿಕಾಂ ಎರಡನೇ ವರ್ಷದ ಕೊನೆಯ ಪರೀಕ್ಷೆ ನಡೆದಿತ್ತು. ಪರೀಕ್ಷೆ ಮುಗಿಸಿದ ಯುವಕ, ಯುವತಿಯರು ಒಟ್ಟಿಗೆ ಶಾಪಿಂಗ್​ ಕಾಂಪ್ಲೆಕ್ಸ್​ಗೆ ಹೋಗಿದ್ದರು. ಪೊಲೀಸರು ನೀಡಿರುವ ಮಾಹಿತಿ ಅಂದ್ರೆ ಸ್ನೇಹಿತರು ಒಟ್ಟಿಗೆ ಜ್ಯೂಸ್​ ಕುಡಿಯುವ ಉದ್ದೇಶದಿಂದ 5 ಅವೆನ್ಯೂ ಶಾಪಿಂಗ್​ ಕಾಂಪ್ಲೆಕ್ಸ್​ಗೆ ಬಂದಿದ್ದರು. ಆದರೆ ಜ್ಯೂಸ್​ ಕುಡಿದು ಬರುವ ಸಮಯದಲ್ಲಿ ಆಕಸ್ಮಿಕವಾಗಿ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ವಿಭಾಗ‌ ಪ್ರಭಾರ ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದರು. ಆದರೆ ಅಲ್ಲಿನ ನಡೆದಿರುವ ಘಟನೆ ಬೇರೆಯದೇ ಕಥೆಯನ್ನು ಮಾಧ್ಯಮಗಳ ಎದುರು ಬಿಚ್ಚಿಟ್ಟಿತ್ತು. ಕೇವಲ ಎರಡು ಅಡಿ ಕಿಟಕಿ ಒಳಗೆ ವ್ಯಕ್ತಿಗಳು ಆಕಸ್ಮಿಕವಾಗಿ ಹೊರಕ್ಕೆ ಬೀಳುವುದಕ್ಕೆ ಸಾಧ್ಯವಾ..? ಪೊಲೀಸರೇ ಪ್ರಕರಣವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರಾ..? ಅಥವಾ ಉದ್ದೇಶ ಪೂರ್ವಕ ಕೊಲೆ ನಡೆದಿದೆಯಾ..? ಎನ್ನುವ ಅನುಮಾನ ಸಾರ್ವಜನಿಕ ವಲಯವನ್ನು ಕಾಡುತ್ತಿದೆ.

ಯುವತಿ ಬಿದ್ದಿದ್ದಾಳೆ ಪಕ್ಕದಲ್ಲೇ ಕಿಟಕಿ ಗಾಜು ಇದೆ

ಬ್ರಿಗೇಡ್​ ರೋಡ್​ ಬಡವರ ಸಮಾಗಮದ ಅಡ್ಡೆಯಲ್ಲ..!

5 ಅವೆನ್ಯೂ ಶಾಪಿಂಗ್​ ಮಾಲ್​ ಇರುವುದು ಬ್ರಿಗೇಡ್​​ ರೋಡ್​ನಲ್ಲಿ. ಅಲ್ಲಿ ಕೇವಲ ಶ್ರೀಮಂತರು ಅಡ್ಡಾಡುವೆ ಬೆಂಗಳೂರಿನ ಹಾಟ್​ ಫೇವರಿಟ್​ ಜಾಗ. ಪರೀಕ್ಷೆ ಮುಗಿಸಿದ್ದ ಗೆಳಯ ಗೆಳತಿಯರು ಮೋಜು ಮಸ್ತಿ ಮೂಡ್​ನಲ್ಲಿದ್ರು ಎನ್ನುವುದು ಸ್ಥಳದಲ್ಲಿದ್ದವರು ನೀಡುವ ಮಾಹಿತಿ. ಮಾಲ್​ನಲ್ಲಿ ಎಲ್ಲಾ ವಿಧಧ ಪಾನೀಯಗಳು ಸಿಗುವುದರಿಂದ ಈ ಗೆಳಯರು ಯಾವ ಜ್ಯೂಸ್​ ಕುಡಿಸಿದ್ದರು..? ಮತ್ತೇರುವ ಜ್ಯೂಸ್​ ಏನಾದರೂ ಸೇವಿಸಿದ್ದರ ಎನ್ನುವ ಬಗ್ಗೆ ಪೊಲೀಸರು ಇನ್ನಷ್ಟೇ ತನಿಖೆ ಮಾಡಿ ಮಾಹಿತಿ ನೀಡಬೇಕಿದೆ. ಆದರೆ ಮತ್ತೇರಿಸುವ ಪಾನಿಯ ಕುಡಿದಿದ್ದರು ಎರಡೂವರೆ ಅಡಿ ಅಗಲ, ನಾಲ್ಕು ಅಡಿ ಉದ್ದದ ಕಿಟಿಕಿ ಒಳಗೆ ಇಬ್ಬರು ಬಿದ್ದಿದ್ದು ಹೇಗೆ..? ಎನ್ನುವ ಅನುಮಾನ ಮತ್ತೊಂದು ಕಡೆ ಕಾಡುತ್ತಿದೆ. ಅದಕ್ಕೆ ಸಿಗುವ ಉತ್ತರ ಪೋಲಿಗಳ ಅಡ್ಡ.

ಯುವತಿ, ಯುವಕ ಹಾರಿದ ಕಿಟಕಿ (ಕಿಂಡಿ)

ಆತ್ಮಹತ್ಯೆ ಎನ್ನುವುದಕ್ಕೆ ಅಡ್ಡಿಯಾಗಿದೆ ಕಿಟಕಿ ಅಳತೆ..!

ಯುವಕ ಕ್ರಿಸ್ ಮತ್ತು ಯುವತಿ ಲಿಯಾ ಇಬ್ಬರು ಪಾನೀಯ ಕುಡಿದು ಎರಡನೇ ಫ್ಲೋರ್​​ಗೆ ಬಂದಿದ್ದರು. ಅವರಿಬ್ಬರು ಪ್ರೇಮಿಗಳು ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಹುಡುಗಿ ಬೆಂಗಳೂರು ಮೂಲದವಳಾಗಿದ್ದು, ಯುವಕ ಕ್ರಿಸ್​ ಆಂಧ್ರಪ್ರದೇಶ ಮೂಲದವನು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಶಾಪಿಂಗ್​ ಕಾಂಪ್ಲೆಕ್ಸ್​ಗೆ ಬರುವಾಗ ಎಲ್ಲರೂ ನಗುನಗುತ್ತಲೇ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕುಡಿದ ಮತ್ತಿನಲ್ಲಿ ಇಬ್ಬರು ಮುತ್ತಿನಾಟ ಶುರು ಮಾಡಿದ್ದರು ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಕುಡಿದ ಮತ್ತು. ಇನ್ನೊಂದು ಕಡೆ ಯೌವ್ವನ ಅಮಲು. ಎರಡೂ ಒಟ್ಟಿಗೆ ಸೇರಿದಾಗ ಈ ಅನಾಹುತ ನಡೆದಿದೆ ಎನ್ನುತ್ತಾರೆ ಸ್ಥಳದಲ್ಲಿ ಜನರು. ಆದರೆ ಇದಕ್ಕೆ ಯಾವುದೇ ಸಾಕ್ಷಿ ಲಭ್ಯವಿಲ್ಲ. ಎರಡನೇ ಮಹಡಿಯ ಮೆಟ್ಟಿಲುಗಳ ಬಳಿ ಯಾವುದೇ ಸಿಸಿಟಿವಿ ಇಲ್ಲ. ಆದರೆ 4 ಅಡಿ ಎತ್ತರದ ಕಿಟಿಕಿಯಲ್ಲಿ ಯಾರಾದರೂ ನುಗ್ಗುವುದಕ್ಕೆ ಸಾಧ್ಯವೇ ಎನ್ನುವುದನ್ನು ಅರ್ಥ ಮಾಡಿಕೊಂಡಾಗ ಮೇಲಿನ ಹೇಳಿಕೆ ಸತ್ಯ ಎನಿಸುತ್ತದೆ.

ಯುವಕನಿಗೆ ಯಾವುದೇ ಪೆಟ್ಟು ಆಗಿಲ್ಲ ಹೇಗೆ..?

ಸಂಜೆ ಬರ್ತ್​​ ಡೇ ಪಾರ್ಟಿ ಆಚರಣೆ ಮಾಡಬೇಕಿತ್ತು. ಎಂಜಿ ರೋಡ್​ನ ಪಬ್​ ಒಂದರಲ್ಲಿ ಪಾರ್ಟಿ ಮಾಡುವ ಯೋಜನೆ ಇತ್ತು. ಅದಕ್ಕೂ ಮೊದಲು 5 ಅವೆನ್ಯೂ ಶಾಪಿಂಗ್​ ಕಾಂಪ್ಲೆಕ್ಸ್​ಗೆ ಬಂದಿದ್ದರು ಎನ್ನಲಾಗಿದೆ. ಇನ್ನೊಂದು ಮಾಹಿತಿಯಂತೆ ಯುವತಿ ಮೊದಲು ಬಿದ್ದಿದ್ದಾಳೆ. ಆ ಬಳಿಕ ಯುವಕ ಕೂಡ ಬಿದ್ದಿದ್ದಾನೆ. ಯುವಕ ಯುವತಿ ಮೇಲೆ ಬಿದ್ದಿರುವ ಕಾರಣ ಯುವತಿ ಪ್ರಾಣ ಬಿಟ್ಟಿದ್ದಾಳೆ. ಯುವಕನ ಮಂಡಿಗೆ ಕೇವಲ ತರಚಿದ ಗಾಯ ಮಾತ್ರ ಆಗಿದೆ. ಇದೀಗ ಕಬ್ಬನ್​ ಪಾರ್ಕ್​ ಪೊಲೀಸರು ಆಪಘಾತ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳ ಸಾವಿನಿಂದ ಆಘಾತಕ್ಕೆ ಒಳಗಾಗಿರುವ ಪೋಷಕರೂ ಕೂಡ ದೂರು ನೀಡಿದ್ದಾರೆ. ಯುವಕ ಸದ್ಯಕ್ಕೆ ಪೊಲೀಸರಿಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಹುಡುಗ ಶಾಕ್​ನಲ್ಲಿ ಇರಬಹುದು ಎನ್ನುವ ಕಾರಣಕ್ಕೆ ಪೊಲೀಸರು ಸುಮ್ಮನಿದ್ದಾರೆ. ಎಲ್ಲವೂ ಸರಿಯಾದ ಕೂಡಲೇ ಯುವಕನಿಗೆ ಪೊಲೀಸ್​ ಟ್ರೀಟ್​ಮೆಂಟ್​ ಕೊಟ್ಟರೆ ಎಲ್ಲಾ ಸತ್ಯಸಂಗತಿಗಳು ಬಯಲಾಗಲಿವೆ.

ಆಸ್ಪತ್ರೆಯಲ್ಲಿ ತಂದೆ ಜೊತೆ ಯುವಕ

ಶಾಪಿಂಗ್ ಕಾಂಪ್ಲಿಕ್ಸ್ ಬರುವಾಗ CCTV ದೃಶ್ಯ

ನೀತಿ: ‘ಅಪ್ಪನ ದುಡ್ಡಲ್ಲಿ ಮಸ್ತಿ ಮಾಡುವಾಗ ಆಪತ್ತಿನ ಅರಿವು ಇರುವುದಿಲ್ಲ’

Related Posts

Don't Miss it !