ಉಡುಪಿಯಲ್ಲಿ ಹೀಗೂ ಆಗುತ್ತಾ..? ಸೂಟ್​ಕೇಸ್​ನಲ್ಲಿ ಪ್ರೇಮಿ..!! ವೈರಲ್​ ವಿಡಿಯೋ ಅಸಲಿಯತ್ತು..

ಉಡುಪಿಯಲ್ಲಿ ಹೀಗೂ ನಡೆಯುತ್ತಾ..? ಎನ್ನುವ ಪ್ರಶ್ನೆಯಲ್ಲೇ ಆಗಬಾರದ್ದು ಏನೋ ಆಗಿದೆ ಎನ್ನುವ ಸಂಗತಿ ನಿಮ್ಮ ಮನಸ್ಸಿನಲ್ಲಿ ಬಂದಿರುತ್ತದೆ. ಅದು ಸತ್ಯ ಕೂಡ. ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಎಂಐಟಿ ಹಾಸ್ಟೆಲ್​ನ 15ನೇ ಬ್ಲಾಕ್​ನಲ್ಲಿ ಅಚ್ಚರಿಯ ಘಟನೆವೊಂದು ನಡೆದಿದೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್​ ಆಗಿತ್ತು. ಯುವಕನೊಬ್ಬ ತನ್ನ ಗೆಳತಿಯನ್ನು ಹಾಸ್ಟೆಲ್​ ರೂಮಿಗೆ ಕರೆದುಕೊಮಡು ಹೋಗುವ ಯತ್ನ ಮಾಡಿದ್ದಾನೆ. ಆದರೆ ಹುಡುಗರ ಹಾಸ್ಟೆಲ್​ ಒಳಗೆ ಹುಡುಗಿಯರಿಗೆ ಪ್ರವೇಶ ಇಲ್ಲ ಎನ್ನುವ ಕಾರಣದಿಂದ ಟ್ರಾವೆಲರ್​ ಬ್ಯಾಗ್​ನಲ್ಲಿ ಯುವತಿಯನ್ನು ತುಂಬಿಕೊಂಡು ಹಾಸ್ಟೆಲ್ ಒಳಕ್ಕೆ ಕರೆದೊಯ್ಯುವ ಯತ್ನ ಮಾಡಿದ್ದಾನೆ. ಗೇಟ್​ನಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದ್ದು, ಯುವತಿ ಇರುವ ಸೂಟ್​ಕೇಸ್​ ಓಪನ್​ ಮಾಡಿಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯ ಕೈಚಳಕದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಘಟನೆ ಬಗ್ಗೆ ಮಣಿಪಾಲ ವಿಶ್ವವಿದ್ಯಾನಿಲಯ ಅಧಿಕಾರಿಗಳು ಸ್ಪಷ್ಟನೆಯನ್ನೂ ನೀಡಿದರು.

ವೀಡಿಯೋದಲ್ಲಿ ಇರುವುದು ನಮ್ಮ ವಿವಿ ಹಾಸ್ಟೆಲ್ ಅಲ್ಲ..!

ಪ್ರಿಯತಮೆಯನ್ನು ತನ್ನ ಹಾಸ್ಟೆಲ್​ ರೂಮ್​ಗೆ ಕರೆದುಕೊಂಡು ಹೋಗಲು ಯತ್ನಿಸಿರುವ ವಿಡಿಯೋ ಉಡುಪಿಯ ಮಣಿಪಾಲ್​ ವಿವಿಯ ಹಾಸ್ಟೆಲ್​ನದ್ದು ಎಂದು ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿ ಬಿತ್ತರ ಆಗಿತ್ತು. ಕೂಡಲೇ ಮಣಿಪಾಲ ವಿಶ್ವ ವಿದ್ಯಾನಿಲಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್​ನಲ್ಲಿ ನಡೆದಿರುವ ವಿಡಿಯೋ ಎಂದು ವೈರಲ್ ಮಾಡಿರುವ ವಿಡಿಯೋ ನಮ್ಮ ಕ್ಯಾಂಪಸ್​​ನಲ್ಲಿ ನಡೆದಿರೋದು ಅಲ್ಲ ಎಂದು ಮಣಿಪಾಲ ವಿಶ್ವ ವಿದ್ಯಾಲಯದ ಮಾಧ್ಯಮ ವಕ್ತಾರ ಎಸ್. ಪಿ ಕರ್ ಸ್ಪಷ್ಟನೆ ನೀಡಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗೇಟ್ ಹಾಗೂ ವಿಡಿಯೋದಲ್ಲಿರುವ ಹಾಸ್ಟೆಲ್​ ಗೇಟ್​ಗೆ ಹೋಲಿಕೆ ಆಗುತ್ತಿದ್ದ ಕಾರಣ ಮಣಿಪಾಲ್​ ಕ್ಯಾಂಪಸ್​ನಲ್ಲೇ ನಡೆದಿರುವ ಘಟನೆ ಎಂದು ಟ್ವೀಟ್​​ ಮಾಡಿದ್ದಾರೆ ಅಷ್ಟೆ ಎಂದಿದ್ದಾರೆ. ಘಟನೆ ನಡೆದಿರೋದು ಮಾತ್ರ ಸತ್ಯ. ಯಾಕೆಂದರೆ ಸಿಸಿಟಿವಿ ದೃಶ್ಯವನ್ನೇ ಟ್ವೀಟ್​ ಮಾಡಲಾಗಿದೆ. ಜಾಲತಾಣದಲ್ಲಿ ರೂಮ್​ ಒಳಕ್ಕೆ ಕರೆದೊಯ್ಯಲು ಯುವಕ ಮಾಡಿರುವ ಪ್ಲ್ಯಾನ್​ ಬಗ್ಗೆ ಬಗೆಬಗೆಯ ಹಸಿಬಿಸಿ ಚರ್ಚೆ ಹುಟ್ಟು ಹಾಕಿದೆ.

2019ರಲ್ಲಿ ನಡೆದಿರುವ ಘಟನೆ, ನಮ್ಮ ದೇಶದಲ್ಲಿ ಅಲ್ಲ..!!

ಯುವಕ ತನ್ನ ಪ್ರಿಯತಮೆಯನ್ನು ಹಾಸ್ಟೆಲ್​ ಒಳಕ್ಕೆ ಕರೆದೊಯ್ಯಲು ಯತ್ನಿಸಿರುವುದು ಸತ್ಯ. ಆದರೆ ನಮ್ಮ ಭಾರತದಲ್ಲಿ ಅಲ್ಲ. ಈ ವಿಡಿಯೋ ಬಗ್ಗೆ The Public Spot ಹುಡುಕಾಟ ನಡೆಸಿದ್ದು, 2019 ಮಾರ್ಚ್​ 20ರಂದು ಡೆಹ್ರಾಡೂನ್​ನಲ್ಲಿ ನಡೆದಿರುವ ಘಟನೆ. ಮಾರ್ಚ್​ 20 ರಂದು Intrigin MAG ಎನ್ನುವ ಫೇಸ್​ಬುಕ್​ ಅಕೌಂಟ್​ ಮೂಲಕ ವಿಡಿಯೋ ಅಪ್​ಲೋಡ್​ ಮಾಡಲಾಗಿದೆ. ಈ ಬಗ್ಗೆ ಅಸಲಿ ವೀಡಿಯೋ ಇರುವುದು ಗೊತ್ತಾಗಿದೆ. ಅದೇ ವಿಡಿಯೋ ತೆಗೆದು ಮಣಿಪಾಲದ ಹಾಸ್ಟೆಲ್​ನಲ್ಲಿ ನಡೆದಿರುವ ಘಟನೆ ಎಂದು ಟ್ವೀಟ್​ ಮಾಡುವ ಮೂಲಕ ಲೈಕ್​ ಮತ್ತು ಶೇರ್​​ ಪಡೆದು ಹಿಂಬಾಲಕರನ್ನು ಹೆಚ್ಚಳ ಮಾಡಿಕೊಳ್ಳುವ ತಂತ್ರಗಾರಿಕೆ ಮಾಡಿದ್ದಾರೆ ಎಂದೆನಿಸುತ್ತದೆ. ಈಗ ವೈರಲ್​ ಆಗಿರುವ ವಿಡಿಯೋಗೂ ಮಣಿಪಾಲ ವಿಶ್ವವಿದ್ಯಾನಿಲಯದ ಕ್ಯಾಂಪಸ್​ಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಮಾತ್ರ ಸತ್ಯ. ಆದರೂ ಈ ರೀತಿಯ ಒಂದು ಯೋಜನೆ ರೂಪಿಸಿದ ಯುವಕನ ತಂತ್ರಗಾರಿಯನ್ನು ಎಲ್ಲರೂ ಮೆಚ್ಚಲೇ ಬೇಕಿದೆ.

Related Posts

Don't Miss it !