Good News: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ಇಲ್ಲಿದೆ ಗುಡ್ ನ್ಯೂಸ್.. ! ಸುಪ್ರೀಂಕೋರ್ಟ್ ಕೊಟ್ಟ ಸಿಹಿ..

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರು ಪ್ರತಿವರ್ಷ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡ್ತಾರೆ. ಪ್ರತಿಯೊಂದನ್ನೂ ಹೋರಾಟದ ಮೂಲಕವೇ ಪಡೆಯಬೇಕಾದ ಸ್ಥಿತಿಯನ್ನು ಸರ್ಕಾರಗಳು ನಿರ್ಮಾಣ ಮಾಡಿವೆ. ಇದೀಗ ಹಲವು ವರ್ಷಗಳ ಹೋರಾಟಕ್ಕೆ ಸುಪ್ರೀಂಕೋರ್ಟ್ ಸಿಹಿ ಸುದ್ದಿ ನೀಡಿದೆ. ಅಂಗನವಾಡಿ ಕಾರ್ಯಕರ್ತರನ್ನು ಕೇವಲವಾಗಿ ನೋಡಬಾರದು ಎಂದು ಸರ್ಕಾರಕ್ಕೆ ಛಾಟಿ ಬೀಸಿದೆ. ಅದರ ಜೊತೆಗೆ ಮತ್ತೊಂದು ಪ್ರಮುಖ ವಿಚಾರವನ್ನೂ ಸರ್ಕಾರದ ಗಮನಕ್ಕೆ ತಂದಿದೆ.


10% ಬಡ್ಡಿ ಜೊತೆಗೆ ಗ್ರಾಜ್ಯುವಿಟಿ ಪಡೆಯಲು ಅರ್ಹರು..!!

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ 16 ವರ್ಷಗಳ ಕಾನೂನು ಹೋರಾಟಕ್ಕೆ ಸುಪ್ರೀಂಕೋರ್ಟ್ ‌ನಲ್ಲಿ ಜಯ ಸಿಕ್ಕಿದೆ. ಗುಜರಾತ್‌ನ ಐವರು ಅಂಗನವಾಡಿ ಕಾರ್ಯಕರ್ತೆಯರು ಕಾನೂನೂ ಹೋರಾಟ ನಡೆಸಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್ ತನಕ ಸಮರ ನಡೆಸಿದ್ದರು. ಇದೀಗ ಕಾನೂನು ಹೋರಾಟಕ್ಕೆ ಸಾರ್ಥಕತೆ ಸಿಕ್ಕಿದೆ. ಕೇಂದ್ರ   ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಗ್ರಾಜ್ಯುವಿಟಿ ಪಡೆಯಲು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಅರ್ಹರು ಎಂದು ತಿಳಿಸಿದೆ. ಗುಜರಾತ್ ಪರ ವಕೀಲರು ಸರ್ಕಾರಕ್ಕೆ ಸಾಕಷ್ಟು ಆರ್ಥಿಕ ಹೊರೆ ಆಗಲಿದೆ ಎನ್ನುವನ್ನು ಕೋರ್ಟ್ ತಳ್ಳಿ ಹಾಕಿದೆ.


ಅರೆಕಾಲಿಕ ನೌಕರರು ಎನ್ನುವುದನ್ನೇ ಕೈಬಿಟ್ಟ ಸುಪ್ರೀಂಕೋರ್ಟ್..!!


ನ್ಯಾ. ಅಜಯ್ ರಸ್ತೋಗಿ ಮತ್ತು ನ್ಯಾ. ಅಭಯ್ ಎಸ್ ಓಕಾ ಪೀಠ ಆದೇಶ ಹೊರಡಿಸಿದ್ದು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಪೂರ್ಣಾವಧಿ ನೌಕರರಲ್ಲ ಎಂಬ ಸರ್ಕಾರಗಳ ವಾದವನ್ನು ಅಲ್ಲಗಳೆದ ಸುಪ್ರೀಂಕೋರ್ಟ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಸಮಾಜಕ್ಕೆ ಸಾಕಷ್ಟು ಅನುಕೂಲಗಳಿವೆ. ಗ್ರಾಜ್ಯುವಿಟ್ ಅಡಿಯಲ್ಲಿ ಅವರನ್ನು ಪರಿಗಣಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಮುಂದಿನ ಮೂರು ತಿಂಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗುಜರಾತ್ ಸರ್ಕಾರಕ್ಕೆ ಖಡಕ್ ಸೂಚನೆಯನ್ನೂ ನೀಡಿದ್ದಾರೆ.

ಕರ್ನಾಟಕಕ್ಕೂ ಇದೇ ಆದೇಶ ಅನ್ವಯ ಆಗುತ್ತಾ..?

ಗುಜರಾತ್ ಮೂಲದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿರು ಕೋರ್ಟ್ ಮೆಟ್ಟಲೇರಿದ್ದರು. ಗುಜರಾತ್ ಹೈಕೋರ್ಟ್ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಪೂರ್ಣಾವಧಿ‌ ನೌಕರರು ಅಲ್ಲ ಎನ್ನುವ ಸರ್ಕಾರದ ವಾದವನ್ನು ಒಪ್ಪಿಕೊಂಡಿತ್ತು. ಆದರೇ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದ್ದು, ಪೂರ್ಣಾವಧಿ ನೌಕರರು, ಅವರೂ ಕೂಡ 1972 ರ ಗ್ರಾಜ್ಯುವಿಟಿ ಆಕ್ಟ್ ಅಡಿಯಲ್ಲಿ‌ ನೇಮಕವಾಗಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಗುಜರಾತ್ ಸರ್ಕಾರಕ್ಕೆ ಕೊಟ್ಟಿರುವ ಆದೇಶ ಆದರೂ ಇದು ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ಎಲ್ಲಾ ರಾಜ್ಯ ಸರ್ಕಾರಗಳೂ ಕೇಂದ್ರದ ಯೋಜನೆ ಜಾರಿ ಮಾಡುತ್ತಿರುವುದರಿಂದ ಇಡೀ ದೇಶಕ್ಕೇ ಈ ಆದೇಶ ಅನ್ವಯ ಆಗಲಿದೆ.

ಕೇಸ್:  Maniben Maganbhai Bhariya versus District Development Officer Dahod and others

Related Posts

Don't Miss it !