ಕಾಂಗ್ರೆಸ್​ನ 30 ಜನರ ವಿರುದ್ಧ FIR, ರಾಜ್ಯ ಸರ್ಕಾರಕ್ಕೆ ಮುಖಭಂಗ ಕಟ್ಟಿಟ್ಟ ಬುತ್ತಿ..!

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್​ ಬೃಹತ್​ ಪಾದಯಾತ್ರೆ ನಡೆಸುತ್ತಿದೆ. ಕೊರೊನಾ ಕರ್ಫ್ಯೂ ಹಾಗೂ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಆರೋಪವನ್ನು ರಾಜ್ಯ ಸರ್ಕಾರ ಮಾಡಿದೆ. ಇದೇ ಕಾರಣದಿಂದ 30 ಕಾಂಗ್ರೆಸ್​ ನಾಯಕರ ವಿರುದ್ಧ FIR ದಾಖಲು ಮಾಡಿದೆ. ಪಾದಯಾತ್ರೆ ತಡೆಯುವಲ್ಲಿ ಸರ್ಕಾರದ ವಿಫಲವಾದ ಬಳಿಕ ಕಾನೂನು ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡಿದೆ. ಆದರೆ ಆಡಳಿತ ಪಕ್ಷವಾದ ಬಿಜೆಪಿ ಕಾಂಗ್ರೆಸ್​​ ವಿರುದ್ಧ ಮುಜುಗರ ಅನುಭವಿಸುವ ಎಲ್ಲಾ ಸಾಧ್ಯಗಳು ಇವೆ ಎನ್ನುತ್ತಾರೆ ಕಾನೂನು ತಜ್ಞರು. ಇದಕ್ಕೆ ಕಾರಣ ಬಿಜೆಪಿ ನಾಯಕರು ತೆಗೆದುಕೊಂಡಿರುವ ನಿರ್ಧಾರಗಳು. ಬಿಜೆಪಿ ಸರ್ಕಾರಕ್ಕೆ ಬಿಜೆಪಿ ನಾಯಕರೇ ಮುಳುವಾಗಲಿದ್ದಾರೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಪಾದಯಾತ್ರೆ ವೇಳೆ ಕಾಂಗ್ರೆಸ್​ ನಾಯಕರು ತಪ್ಪು ಮಾಡಿಲ್ಲವೇ..?

ರಾಜಕೀಯ ಉದ್ದೆಶದ ಪಾದಯಾತ್ರೆ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್​ ಕಾರ್ಯಕರ್ತರ ಜೊತೆಗೆ ಡಿ.ಕೆ ಶಿವಕುಮಾರ್​ ಜಾತ್ರೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್​ಗೆ ಬ್ರೇಕ್​ ಹಾಕಲಾಗಿದೆ. ರಾತ್ರಿ 10 ಗಂಟೆ ಆದರೂ ಕಾರ್ಯಕ್ರಮ ನಡೆಯುತ್ತಲೇ ಇದೆ. ರಾಮನಗರ ಜಿಲ್ಲಾಡಳಿತ ಎಲ್ಲವನ್ನೂ ಮೌನವಾಗಿ ನೋಡುತ್ತಿದ್ದು, ಕೇವಲ 30 ಗಣ್ಯರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದೆ. ಕಾನೂನು ಪ್ರಕಾರ ರಾಮನಗರ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ಅದಕ್ಕೆ ಕಾಂಗ್ರೆಸ್​​ ನಾಯಕರು ಕೋರ್ಟ್​ನಲ್ಲಿ ಕೈಕಟ್ಟಿ ನಿಲ್ಲಲೂ ಬಹುದು. ಆದರೆ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗುವುದೂ ಅಷ್ಟೇ ಸತ್ಯ. ಇದಕ್ಕೆ ಕಾರಣ ಸರ್ಕಾರದ ತಾರತಮ್ಯದ ನಡಾವಳಿಕೆ.

Read This;

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೇಣುಕಾಚಾರ್ಯ

ಬಿಜೆಪಿ ನಾಯಕರು ಮಾತ್ರ ಜಾತ್ರೆ ಮಾಡಬಹುದಾ..?

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿ ಇದೆ ಎನ್ನುವ ಕಾರಣಕ್ಕೆ ಬಿಜೆಪಿ ನಾಯಕರು ಏನು ಮಾಡಿದರೂ ನಡೆಯುತ್ತಾ..? ಇಲ್ಲ. ದೇಶದ ಕಾನೂನು ಎಲ್ಲರಿಗೂ ಒಂದೇ. ಆದರೆ ಬಿಜೆಪಿ ನಾಯಕರು ಕೊರೊನಾ ನಿಯಮಗಳನ್ನು ಗಾಳೀಗೆ ತೂರಿ, ತಮ್ಮಿಷ್ಟದ ಎಲ್ಲಾ ಕಾರ್ಯಕ್ರಮಗಳನ್ನೂ ಮಾಡುತ್ತಿದೆ. ಹೊನ್ನಾಳಿಯ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಸಾವಿರಾರು ಮಂದಿ ಸೇರಿಸಿಕೊಂಡು ಸಿಎಂ ರಾಜಕೀಯ ಕಾರ್ಯದರ್ಶಿಯಿಂದಲೇ ಕೋವಿಡ್ ರೂಲ್ಸ್ ಬ್ರೇಕ್ ಮಾಡಲಾಯ್ತು. ದುರ್ಗಾಂಬಿಕ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮಾಸ್ಕ್, ಸಾಮಾಜಿಕ ಅಂತರ ಮಾಯವಾಗಿತ್ತು. ದಾವಣಗೆರೆ ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆ ಕೂಡ ಕಣ್ಮುಚ್ಚಿ ಕುಳಿತಿತ್ತು. ಅತ್ತ ಕಲಬುರಗಿಯ ಆಳಂದ ಪಟ್ಟಣದಲ್ಲಿ ಶಾಸಕ ಸುಭಾಷ್ ಗುತ್ತೇದಾರ್ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದರು. ಶಾಸಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರಿಂದ, ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯ್ತು.

ಜನಜಾತ್ರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

Also Read;

ಆರೋಗ್ಯ ಸಚಿವ ಡಾ ಸುಧಾಕರ್​ ಬಾಮೈದನಿಂದಲೂ ಉಲ್ಲಂಘನೆ..!

ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಬಾಮೈದ ಓಂ ಶಕ್ತಿ ಯಾತ್ರೆ ನಡೆಸಿದ್ದಾರೆ. ಐನೂರಕ್ಕೂ ಹೆಚ್ಚು ಮಹಿಳೆಯರನ್ನು ಒಂದೆಡೆ ಸೇರಿಸಿ ಚಿಂತಾಮಣಿ ನಗರದಲ್ಲಿ ಯಾತ್ರೆ ಮಾಡಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿರುವ ಸತ್ಯನಾರಾಯಣರೆಡ್ಡಿ ಯಾತ್ರೆ ಆಯೋಜನೆ ಮಾಡುವ ಮೂಲಕ ಜನರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಆದರೆ ಕೊರೊನಾ ನಿಯಮಗಳ ಉಲ್ಲಂಘನೆ ಮಾಡಲು ಅವಕಾಶ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. 8 ಬಸ್​ಗಳ ಮೂಲಕ ಐನೂರಕ್ಕೂ ಹೆಚ್ಚು ಜನರನ್ನು ಪ್ರವಾಸಕ್ಕೆ ಕಳುಹಿಸಲು ಅವಕಾಶ ಇದೆಯಾ ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಕಾಂಗ್ರೆಸ್​ ನಾಯಕರು ಕೇಳುತ್ತಿರುವುದು ಇದನ್ನೇ. ನಾವು ಪಾದಯಾತ್ರೆ ಮಾಡುತ್ತಿರುವುದು ತಪ್ಪು ಎಂದು ದೂರು ದಾಖಲಾಗಿದೆ. ಆದರೆ ಬಿಜೆಪಿ ನಾತಯಕರು ಮಾಡಿರುವುದಕ್ಕೆ ಯಾವುದೇ ದೂರು ದಾಖಲು ಮಾಡಿಲ್ಲ ಯಾಕೆ..? ಸ್ವತಃ ವಿಧಾನಸೌಧದ ಬಾಂಕ್ವೆಟ್​​ ಹಾಲ್​ನಲ್ಲಿ ಪರಿಷತ್​ ಸದಸ್ಯರ ಪ್ರಮಾಣ ಸ್ವೀಕಾರ ಕಾರ್ಯಕ್ರಮದಲ್ಲಿ ಜನಜಾತ್ರೆ ನಡೆಸಿದ್ದು ತಪ್ಪಲ್ಲವೇ ಎನ್ನುವ ಪ್ರಶ್ನೆ ಕೇಳಿದ್ದಾರೆ. ಸರ್ಕಾರ ಮೌನವಾಗಿ ಸುಮ್ಮನಿರಬಹುದು. ಆದರೆ ಕೋರ್ಟ್​ ಸುಮ್ಮನಿರಲಾರದು ಅಲ್ಲವೇ..?

ಓಶಕ್ತಿ ಯಾತ್ರೆಗೆ 500ಕ್ಕೂ ಹೆಚ್ಚು ಮಹಿಳೆಯರು

Related Posts

Don't Miss it !